Seetharama; ಭಾರ್ಗವಿ ಪ್ಲಾನ್ ಗಳು ಫ್ಲಾಪ್ : ಪತಿಗಾಗಿ ಸರ್ಪ್ರೈಸ್ ಕೊಟ್ಟ ಸೀತಾ..!
ಸೀತಾರಾಮ ಧಾರಾವಾಹಿಯಲ್ಲಿ ಅಶೋಕ್ ರಾಮ್ ನನ್ನು ಕರೆದು ಸಿಹಿಯ ಅಪಘಾತದ ವೀಡಿಯೋವನ್ನು ತೋರಿಸಿದ್ದಾನೆ. ರಾಮ್ ಗೆ ಇದರಿಂದ ಹೊಸ ಅನುಮಾನ ಹುಟ್ಟಿಕೊಂಡಿದೆ. ಸಿಸಿಟಿವಿ ಫುಟೇಜ್ ನಲ್ಲಿ ಕಾರೊಂದು ಬಂದು ಸಿಹಿಯನ್ನು ಗುದ್ದಿಕೊಂಡು ಹೋಗಿದೆ. ಇದರಲ್ಲಿ ಕಾರ್ ನ ನಂಬರ್ ಕಾಣಿಸಿದೆ. ಪಕ್ಕದಲ್ಲೇ ಮತ್ತೊಂದು ಕಾರ್ ನಿಂತಿದೆ. ಆ ಕಾರಿನಲ್ಲಿ ರುದ್ರಪ್ರತಾಪ್ ಕಾಣಿಸಿಕೊಂಡಿದ್ದಾನೆ. ಇದನ್ನು ನೋಡಿದ ಅಶೋಕ್ ಮತ್ತು ರಾಮ್ ಶಾಖ್ ಆಗಿದ್ದಾರೆ. ಈ ಅಪಘಾತದ ಹಿಂದೆ ಯಾರಿದ್ದಾರೋ ಗೊತ್ತಿಲ್ಲ. ರುದ್ರಪ್ರತಾಪ್ ಮುಖ್ಯ ಸಾಕ್ಷಿಯಾಗಿದ್ದಾನೆ ಎಂದು ಆಲೋಚಿಸಿದ್ದಾರೆ.
ಶ್ರೀರಾಮ್ ಮನೆ ಮುಂದೆ ಸುಬ್ಬಿ ಗಲಾಟೆ
ಆದರೆ ಈ ಅಪಘಾತಕ್ಕೆ ರುದ್ರಪ್ರತಾಪ್ ಕಾರಣ ಎಂಬುದು ಗೊತ್ತಾದರೆ, ರಾಮ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾನೋ ಗೊತ್ತಿಲ್ಲ. ಇದರ ಬೆನ್ನಲ್ಲೇ ಸುಬ್ಬಿ ತಾತನನ್ನು ಪೊಲೀಸರು ಹಿಡಿದುಕೊಂಡು ಹೋಗಿದ್ದಾರೆ. ಹೀಗಾಗಿ ಸುಬ್ಬಿ ರಾಮ್ ಮನೆ ಎದುರು ಬಂದು ಗಲಾಟೆ ಮಾಡಿದ್ದಾಳೆ. ಸ್ಲಮ್ ಅನ್ನು ಉಳಿಸಿಕೊಳ್ಳಲು ಕೊಟ್ಟ ಮೂರು ಲಕ್ಷ ಹಣ ಕದ್ದಿರಬಹುದು ಎಂದು ಪೊಲೀಸರು ದೂರಿದ್ದು, ಸದ್ಯ ದೇಸಾಯಿ ಕುಟುಂಬ ದೂರ ನೀಡಿದ ಆಧಾರದ ಮೇಲೆ ಅವರನ್ನು ಅರೆಸ್ಟ್ ಮಾಡಲಾಗಿದೆ. ಆದರೆ, ಸುಬ್ಬಿ ಇದು ರಾಮ್ ಕೆಲಸ ಎಂದು ಭಾವಿಸಿದ್ದಾಳೆ. ಸುಬ್ಬಿ ಎಷ್ಟೇ ಕೂಗಿದರೂ ರಾಮ್ ನನ್ನು ಭೇಟಿ ಮಾಡಲು ಸಾಧ್ಯವಾಗುವುದಿಲ್ಲ.

ತಾತನನ್ನು ಕಂಡು ಖುಷಿಪಟ್ಟ ಸುಬ್ಬಿ
ಅಲ್ಲದೇ ಮನೆ ಕೆಲಸದವರು ಸುಬ್ಬಿಯನ್ನು ಬೈದು ಹೊರಗೆ ಕಳಿಸುತ್ತಾರೆ. ಇದರಿಂದ ಸುಬ್ಬಿ ಬೇಸರ ಮಾಡಿಕೊಂಡು ಮನೆಗೆ ಹೊರಡುತ್ತಾಳೆ. ಆದರೆ, ರಾಮ್ ಮನೆಗೆ ಪೊಲೀಸರು ಫೋನ್ ಮಾಡಿ ಅರೆಸ್ಟ್ ಆಗಿರುವ ವಿಚಾರವನ್ನು ಹೇಳುತ್ತಾರೆ. ಫೋನ್ ರಿಸೀವ್ ಮಾಡಿ ಮಾಹಿತಿ ಪಡೆದ ಸತ್ಯಜಿತ್ ರಾಮ್ ನೀನ್ಯಾಕೆ ಸ್ಲಮ್ ನಲ್ಲಿರುವವರ ಮೇಲೆ ದೂರು ಕೊಟ್ಟಿದ್ದೀಯಾ ಎಂದು ಕೇಳಿದಾಗ ರಾಮ್ ತನ್ನಿಂದ ಯಾರಿಗೂ ಸಮಸ್ಯೆ ಆಗಬಾರದು ಎಂದು ಪೊಲೀಸ್ ಠಾಣೆಗೆ ಹೋಗಿ ಅವರನ್ನು ಬಿಡಿಸಿ ಮನೆಗೆ ಬಂದಿದ್ದಾನೆ. ಸುಬ್ಬಿ ತಾತ ಮನೆಗೆ ಬಂದಿದ್ದನ್ನು ನೋಡಿ ಸುಬ್ಬಿ ಹ್ಯಾಪಿ ಆಗಿದ್ದಾಳೆ. ಆದರೆ, ಬಿಡಿಸಿದ್ದು ರಾಮ್ ಎಂಬುದು ಗೊತ್ತಾಗದೇ ಬಿಡಿಸಿದವರಿಗೆ ಒಳ್ಳೆಯದಾಗಲಿ ಎಂದು ದೀಪ ಹಚ್ಚಿ ದೇವರಲ್ಲಿ ಪ್ರಾರ್ಥನೆ ಮಾಡಿದ್ದಾಳೆ.
ಶಾರ್ವರಿಯ ದಾರಿಗೆ ಅಡ್ಡ ಬಂದ ಸೂರಿ
ಶಾರ್ವರಿ ಸ್ಲಮ್ ಅನ್ನು ಡೆಮಾಲಿಷ್ ಮಾಡಲು ಹೇಳಿದ್ದರೆ, ಇತ್ತ ರಾಮ್ ಆ ಸ್ಲಮ್ ಅನ್ನು ಸಂಪೂರ್ಣವಾಗಿ ಅಲ್ಲಿನ ಜನರಿಗೇ ಬಿಟ್ಟು ಕೊಟ್ಟು ಬಂದಿದ್ದಾನೆ. ಈ ವಿಚಾರ ಕೇಳಿದ ಶಾರ್ವರಿಗೆ ಕೋಪ ಬಂದಿದೆ. ಸೀತಾಳ ಆರೋಗ್ಯ ಸರಿ ಹೋಗಲು ಸಿಹಿ ವಯಸ್ಸಿನ ಮಗುವನ್ನು ಕರೆದುಕೊಂಡು ಬರು ತಾನು ನಿರ್ಧರಿಸಿದ್ದು, ಸೂರಿಗೆ ಹೇಳಿ ಒಪ್ಪಿಸಿದ್ದಾಳೆ. ತನ್ನ ಮಾತು ಕೇಳುವ ಹುಡುಗಿಯನ್ನು ಕರೆದುಕೊಂಡು ಬಂದು ಸೀತಾಳಿಗೆ ಇನ್ನಷ್ಟು ಹುಚ್ಚು ಹಿಡಿಸಲು ಭಾರ್ಗವಿ ಪ್ಲಾನ್ ಮಾಡಿಕೊಂಡಿದ್ದಾಳೆ. ಆದರೆ, ಪದೇ ಪದೇ ಭಾರ್ಗವಿ ಪ್ಲಾನ್ ಗೆ ಸೂರಿ ಅಡ್ಡ ಬರುತ್ತಲೇ ಇದ್ದಾನೆ.
ಪತಿಗಾಗಿ ಸರ್ಪ್ರೈಸ್ ಕೊಟ್ಟ ಸೀತಾ
ಇತ್ತ ಸೀತಾ ರಾಮ್ ಇತ್ತೀಚೆಗೆ ಬಹಳ ಡಲ್ ಆಗಿರುತ್ತಾರೆ. ಯಾವಾಗಲೂ ಯಾವುದೋ ಯೋಚನೆಯಲ್ಲಿ ಮುಳುಗಿರುತ್ತಾರೆ ಎಂದು ರೂಮ್ ಅನ್ನು ಡೆಕೋರೇಟ್ ಮಾಡಿದ್ದಾಳೆ. ಸರ್ಪ್ರೈಸ್ ಆಗಿ ರಾಮ್ ಗೆ ಕ್ಯಾಂಡಲ್ ಲೈಟ್ ಡಿನ್ನರ್ ಅನ್ನು ಅರೇಂಜ್ ಮಾಡಿದ್ದಾಳೆ. ಸೀತಾ ಕೊಟ್ಟ ಸರ್ಪ್ರೈಸ್ ರಾಮ್ ಗೆ ಖುಷಿಯೇನೋ ಕೊಟ್ಟಿದೆ. ಆದರೆ ಅವನ ಮನದಲ್ಲಿ ಚಿಂತೆಗಳು ಇನ್ನೂ ಕಾಡುತ್ತಲೇ ಇವೆ.


Click it and Unblock the Notifications











