Seetha Rama ; ಕಳ್ಳನಾಗಿ ಬಂದ ರಾಮ್ : ಜನರ ಕೈಯಲ್ಲಿ ಗೂಸ ತಿಂದ ರುದ್ರಪ್ರತಾಪ್ ..!
ಸೀತಾರಾಮ ಧಾರಾವಾಹಿಯಲ್ಲಿ ರಾಮ್ ಹಾಗೂ ಸೀತಾ ಮನೆಯಲ್ಲಿ ಮದುವೆ ತಯಾರಿಯೇನೋ ಜೋರಾಗಿಯೇ ನಡೆಯುತ್ತಿದೆ. ಆದರೆ, ಸೀತಾಳಿಗೆ ಮನೆ ಬಿಟ್ಟು ಹೋಗುವ ಚಿಂತೆ ಕಾಡುತ್ತಿದೆ. ಮದುವೆ ದಿನ ಹತ್ತಿರ ಬರುತ್ತಿದ್ದಂತೆಯೇ ಸೀತಾಳಿಗೆ ಬಟ್ಟೆಗಳನ್ನು ಪ್ಯಾಕ್ ಮಾಡಿಕೊಳ್ಳಬೇಕಿದೆ. ಆದರೆ, ಯಾವುದು ತೆಗೆದುಕೊಳ್ಳಬೇಕು. ಏನನ್ನು ಬಿಡಬೇಕು ಎಂಬುದು ಅರ್ಥವಾಗುತ್ತಿಲ್ಲ. ಮನೆಯನ್ನೇ ಬಿಟ್ಟು ಹೋಗಬೇಕಿದ್ದು, ಸೀತಾಳಿಗೆ ಸಿಹಿ ಈ ಮನೆಯಲ್ಲಿ ಆಡಿ ಬೆಳೆದಿದ್ದೆಲ್ಲವೂ ನೆನಪಾಗುತ್ತಿದೆ. ಹಳೆಯ ನೆನಪುಗಳು ಸೀತಾ ಕಣ್ಣಿನಲ್ಲಿ ಬೇಡ ಎಂದರೂ ಕಣ್ಣೀರು ತರಿಸಿದೆ.
ಮನೆಗೆ ಬಂದ ಕಳ್ಳ ರಾಮ
ಕಂಕಣ ಶಾಸ್ತ್ರ ಶುರುವಾದರೆ, ಸೀತಾ ಮತ್ತು ರಾಮ್ ಇಬ್ಬರಲ್ಲಿ ಒಬ್ಬರೂ ಕೂಡ ಆಚೆ ಹೋಗುವಂತಿಲ್ಲ. ಅದರಲ್ಲೂ ಒಬ್ಬರ ಮುಖವನ್ನು ಒಬ್ಬರು ನೋಡುವಂತಿಲ್ಲ. ಹೀಗಿರುವಾಗ ಸೀತಾಳನ್ನು ನೋಡದೇ ಹೇಗೆ ಎರುವುದು ಎಂದು ರಾಮ್ ತಲೆ ಕೆಕಡಿಸಿಕೊಂಡಿದ್ದಾನೆ. ಅಷ್ಟೇ ಅಲ್ಲದೇ, ಸೀತಾಳಿಗೆ ಮುತ್ತು ಕೊಟ್ಟಿದ್ದು, ಅದನ್ನು ವಾಪಸ್ ಪಡೆಯುವ ಕಾತುರ ಕೂಡ ಹೆಚ್ಚಾಗಿದೆ. ಸೀತಾ ಮನೆಯ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾಳೆ. ರಾಮ್ ಗೆ ಇಡೀ ದಿನವೂ ಸೀತಾಳ ಬಗ್ಗೆಯೇ ಆಲೋಚನೆಯಾಗಿದೆ. ಹೀಗಾಗಿ ಸೀತಾಳನ್ನು ಭೇಟಿ ಮಾಡಲು ವಠಾರಕ್ಕೆ ಕಳ್ಳನಾಗಿ ಬಂದಿದ್ದಾನೆ.

ವಠಾರದವರಿಗೆ ನಿದ್ದೆ ಕೆಡಿಸಿದ ಶ್ರೀರಾಮ್
ಭಾರ್ಗವಿ ಕೊಟ್ಟು ಬೆಳ್ಳಿ, ಚಿನ್ನ, ಸೀರೆಯನ್ನು ಹಿಡಿದುಕೊಂಡಿರುವ ಸುಲೋಚನಾ ಬಿಡೋ ಮಾತೇ ಇಲ್ಲ. ಎಲ್ಲಿ ಕಳ್ಳರು ಬಂದು ಎಲ್ಲವನ್ನು ತೆಗೆದುಕೊಂಡು ಹೋಗುತ್ತಾರೋ ಎಂದು ಜೊತೆಗೇ ಇಟ್ಟುಕೊಂಡು ಮಲಗಿದ್ದಾಳೆ. ಇದೇ ಸಂದರ್ಭದಲ್ಲಿ ಸುಲೋಚನಾ ಎಚ್ಚರವಾಗಿದ್ದು ಕಳ್ಳ ಬಂದಿದ್ದಾನೆ ಎಂದು ಕಿರುಚಾಡಿದ್ದಾಳೆ. ಎಲ್ಲರ ಮನೆ ಬಾಗಿಲನ್ನು ತಟ್ಟಿದ್ದು, ಕಳ್ಳನನ್ನು ಹಿಡಿಯುವಂತೆ ಹೇಳಿದ್ದಾಳೆ. ಎಲ್ಲರೂ ಗಾಬರಿಯಾಗಿ ಕೈಯಲ್ಲಿ ಪೊರಕೆ, ಕೋಲು ಹಿಡಿದುಕೊಂಡು ಕಳ್ಳನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ಕಳ್ಳ ಕೈಗೆ ಸಿಗದ ಕಾರಣ ಎಲ್ಲರೂ ಗಾಬರಿಯಾಗಿದ್ದಾರೆ. ರಾಮ್ ವಠಾರದವರ ನಿದ್ದೆ ಕೆಡಿಸಿದ್ದು, ಸೀತಾ ಜೊತೆಗೆ ಬೆಚ್ಚಗೆ ಕುಳಿತಿದ್ದಾನೆ. ತನ್ನ ಬಾಕಿ ಕೊಡುವಂತೆ ಸೀತಾಳನ್ನು ಕೇಳಿದ್ದಾನೆ. ಸೀತಾ ಮುಜುಗರ ಪಟ್ಟಿದ್ದಕ್ಕೆ, ಮನಸ್ಸಾದಾಗಲೇ ಕೊಡಿ ಎಂದು ಹೇಳಿ ಅಲ್ಲಿಂದ ರಾಮ್ ಹೊರಟಿದ್ದಾನೆ.
ಸೀತಾಳನ್ನು ಹೆದರಿಸಲು ಆರ್ ಪಿ ಮಾಡಿದ್ದೇನು..?
ಇತ್ತ ರುದ್ರಪ್ರತಾಪ್ ಬೇಕಂತಲೇ ವಠಾರಕ್ಕೆ ಮಧ್ಯರಾತ್ರಿಗೆ ಆಗಮಿಸಿದ್ದಾನೆ. ಸೀತಾ ಮನೆ ಬಾಗಿಲ ಗೋಡೆ ಬಳಿ ಸೀತಾಳನ್ನು ಹೆದರಿಸಲು ಏನೇನೋ ಗೋಡೆ ಮೇಲೆ ಬರೆದಿದ್ದಾನೆ. ನಿಂಗೆ ಹಳೆ ಶಾಪ ತಟ್ಟುತ್ತೆ. ನೀನು ಹೋದ ಮನೆ ನಾಶವಾಗುತ್ತೆ. ಈ ಮದುವೆ ಆದರೆ ಹುಷಾರು ಸೀತಾ ನಿನ್ನಹಳೆಯ ಪುರಾಣವೆಲ್ಲಾ ಬಯಲಾಗುತ್ತೆ ಎಂದು ಬರೆದಿರುತ್ತಾನೆ. ಈ ಬರಹವನ್ನು ನೋಡಿ ಸೀತಾ ಆತಂಕಗೊಂಡು ಮದುವೆಯನ್ನು ನಿಲ್ಲಿಸಲಿ ಜೊತೆಗೆ ಜನರೆಲ್ಲಾ ನೋಡಿ ಸೀತಾ ಬಗ್ಗೆ ಮಾತನಾಡಿಕೊಳ್ಳಲಿ ಎಂದು ಹೀಗೆ ಮಾಡಿರುತ್ತಾನೆ.

ಶ್ರೀರಾಮನ ಮೇಲೆ ಭಾರ ಹಾಕಿದ ಸೀತಾ
ಇನ್ನು ರುದ್ರಪ್ರತಾಪ್ ವಠಾರದವರ ಕೈಗೆ ಸಿಕ್ಕಿ ಬೀಳುತ್ತಾನೆ. ಇವನೇ ಕಳ್ಳ ಎಂದು ವಠಾರದವರು ಚೆನ್ನಾಗಿ ಒದೆ ಕೊಟ್ಟು ಓಡಿಸುತ್ತಾರೆ. ನಂತರ ಸೀತಾ ಗೋಡೆ ಬರಹವನ್ನು ನೋಡಿ ಗಾಬರಿಯಾಗಿದ್ದಾಳೆ. ಬಂದದ್ದು ಕಳ್ಳನಲ್ಲ ಯಾರೋ ಬೇರೆ ವ್ಯಕ್ತಿ ಎಂದುಕೊಳ್ಳುತ್ತಾಳೆ. ಬಟ್ಟೆ ತೆಗೆದುಕೊಂಡು ಬರವನ್ಜು ಅಳಿಸಲು ಯತ್ನಿಸುತ್ತಾಳೆ. ಆದರೆ, ಬರಹ ಅಳಿಸುವುದಿಲ್ಲ. ಹೀಗಾಗಿ ಸೀತಾ ಅದರ ಮೇಲೆ ಶ್ರೀರಾಮನ ಫೋಟೋವನ್ನು ಹಾಕುತ್ತಾಳೆ. ಶ್ರೀರಾಮಚಂದ್ರ ನೀನೇ ಎಲ್ಲವನ್ನೂ ನೋಡಿಕೋ ಎಂದು ಹೇಳಿ ಕೈ ಮುಗಿಯುತ್ತಾಳೆ. ದೇವರ ಮೇಲೆ ಭಾರ ಹಾಕಿ ಮದುವೆಯಾಗಲು ಮುಂದಾಗಿದ್ದಾಳೆ.


Click it and Unblock the Notifications











