Seetha Rama ; ಅಶೋಕ್ ಸ್ಥಿತಿ ಕಂಡು ಆತಂಕಗೊಂಡ ಪ್ರಿಯಾ, ಲಾಯರ್ ಮಾತನ್ನು ಮುಚ್ಚಿಟ್ಟ ರಾಮ..!

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಸೀತಾ ಮತ್ತು ರಾಮನ ಮದುವೆ ಕಾರ್ಯಗಳು ಶುರುವಾಗಿವೆ. ಆದರೆ, ಇಂತಹ ಸಂದರ್ಭದಲ್ಲೂ ಅಶೋಕ್ ಬಹಳ ಬ್ಯುಸಿಯಾಗಿದ್ದಾನೆ. ರಾಮ್ ಜೊತೆಗೆ ಇದ್ದು, ಖುಷಿಯನ್ನು ಅನುಭವಿಸುವ ಸಂದರ್ಭದಲ್ಲಿ ಅಶೋಕ್ ಬೀದಿ ಬೀದಿ ತಿರುಗುತ್ತಿದ್ದಾನೆ. ರಾಮ್ ಒಳಿತಿಗಾಗಿ ಒದ್ದಾಟ ನಡೆಸುತ್ತಿದ್ದಾನೆ. ಎಲ್ಲಿ ಹುಡುಕಿದರೂ ಅಶೋಕನಿಗೆ ಚಾಂದಿನಿ ಸಿಗುತ್ತಿಲ್ಲ. ಎಲ್ಲಿ ಮಾಯವಾಗಿದ್ದಾಳೆ. ಭಾರ್ಗವಿಯ ಮುಂದಿನ ಪ್ಲಾನ್ ಏನು ಎಂಬುದು ಯಾರಿಗೂ ಗೊತ್ತಾಗುತ್ತಿಲ್ಲ.

ಅಶೋಕನ ಸ್ಥಿತಿ ಕಂಡು ದಂಗಾದ ಪ್ರಿಯಾ

ಹೀಗಿರುವಾಗ ಮಲೇಷಿಯಾಗೆ ಹೋಗುವುದಾಗಿ ಸುಳ್ಳು ಹೇಳಿದ್ದಾನೆ. ರಾತ್ರಿಯೆಲ್ಲಾ ಅಶೋಕ್ ಮನೆಗೆ ಬಾರದಿರುವುದಕ್ಕೆ ಪ್ರಿಯಾ ತಾಯಿ ಪ್ರೇಮಾ ಹೆದರಿಕೊಂಡಿದ್ದಾರೆ. ಅಶೋಕ್ ನಡೆದುಕೊಳ್ಳುವ ರೀತಿಯನ್ನು ಮೊದಲೇ ಅನುಮಾನಿಸುವ ಪ್ರೇಮಾ, ಪ್ರಿಯಾಳಿಗೆ ಬುದ್ಧಿ ಹೇಳಲು ಯತ್ನಿಸುತ್ತಾಳೆ. ಆದರೆ, ಪ್ರಿಯಾ ಅವರ ತಾಯಿಯ ಮಾತನ್ನು ಕೇಳುವುದಕ್ಕೆ ರೆಡಿ ಇರುವುದೇ ಇಲ್ಲ. ಇನ್ನು ಅಶೋಕ್ ಮಲೇಷಿಯಾದಲ್ಲಿದ್ದಾನೆ ಎಂದುಕೊಂಡು ಆಫೀಸಿಗೆ ಹೊರಡುತ್ತಾಳೆ. ಆಗ ಮನೆ ಗೇಟ್ ಬಳಿ ಅಶೋಕ್ ಪ್ರಜ್ಞೆ ಇಲ್ಲದೇ ಬಿದ್ದಿರುವುದನ್ನು ನೋಡಿ ಶಾಕ್ ಆಗುತ್ತಾಳೆ. ಅಶೋಕ್ ನನ್ನು ಮನೆಗೆ ಕರೆದುಕೊಂಡು ಹೋಗಿ ಪ್ರಿಯಾ ಗಾಬರಿಯಲ್ಲಿ ಏನಾಯ್ತು ಎಂದು ವಿಚಾರಿಸಿದಾಗ, ಅಶೋಕ ತನ್ನ ಮೇಲೆ ಅಟ್ಯಾಕ್ ಆದ ವಿಚಾರವನ್ನು ಹೇಳುತ್ತಾನೆ. ಇದರಿಂದ ಪ್ರಿಯಾಳ ಆತಂಕ ಇನ್ನಷ್ಟು ಹೆಚ್ಚಾಗುತ್ತದೆ.

Seetharama Serial 20 May episode written update

ಅಣ್ಣ-ಅತ್ತಿಗೆಗೆ ಬೇಸರ ಮಾಡಿದ ಸೀತಾ

ಇತ್ತ ಸೀತಾ ಆಫೀಸ್‌ಗೆ ರೆಡಿಯಾಗುತ್ತಿರುತ್ತಾಳೆ. ಇದೇ ಸಂದರ್ಭದಲ್ಲಿ ಅವರ ಅಣ್ಣ ಮತ್ತು ಅತ್ತಿಗೆ ಸೀತಾಳ ಬಳಿ ಈ ಮನೆಯನ್ನು ತಮ್ಮ ಹೆಸರಿಗೆ ಬರೆದು ಕೊಡುವಂತೆ ಕೇಳುತ್ತಾರೆ. ಆದರೆ, ಸೀತಾ ನೇರವಾಗಿ ಈ ಮನೆಯನ್ನು ಯಾರ ಹೆಸರಿಗೂ ಬರೆಯುವುದಿಲ್ಲ. ಇದು ನನ್ನ ತವರು ಮನೆ. ಈ ಮನೆಯಲ್ಲಿ ಸಾಕಷ್ಟು ನೆನಪುಗಳಿವೆ. ನೀವು ಮತ್ತೆ ಅತ್ತಿಗೆ ನಾನು ಸಿಹಿಗೆ ಜನ್ಮ ಕೊಟ್ಟಾಗ ನನ್ನನ್ನು ಹೇಗೆ ನಡೆಸುಕೊಂಡಿದ್ದೀರಿ ಎಂಬುದನ್ನು ನಾನಿನ್ನು ಮರೆತಿಲ್ಲ. ನೀವು ನನ್ನ ಮತ್ತು ಸಿಹಿನಾ ಮನೆಯಿಂದ ಹೊರಗೆ ಹಾಕಿದಾಗ ನನಗೆ ಆಶ್ರಯ ಕೊಟ್ಟಿದ್ದು ಈ ಮನೆಯೇ ಎಂದು ಹೇಳುತ್ತಾಳೆ. ಇದರಿಂದ ಸೀತಾಳ ಅಣ್ಣ ಮತ್ತು ಅತ್ತಿಗೆಗೆ ಬೇಸರವಾಗುತ್ತದೆ.

ಲಾಯರ್ ಮಾತನ್ನು ಮುಚ್ಚಿಟ್ಟ ರಾಮ್

ಮುಂದಿನ ವಾರ ಸೀತಾ ಮತ್ತು ರಾಮ್ ನಿಶ್ಚಿತಾರ್ಥವನ್ನು ಇಟ್ಟುಕೊಳ್ಳೋಣ ಎಂದು ಹೇಳಿದ್ದಕ್ಕೆ ರಾಮ್ ಸರಿ ಎನ್ನುತ್ತಾನೆ. ಇದೇ ಸಂದರ್ಭದಲ್ಲಿ ರಾಮ್ ಗೆ ಲಾಯರ್ ಫೊನ್ ಮಾಡುತ್ತಾರೆ. ಫೋನ್ ನಲ್ಲಿ ರಾಮ್ ಗೆ ನಿನ್ನ ತಾಯಿ ಬರೆದ ವಿಲ್ ಪ್ರಕಾರ ನಿನಗೆ ಆಸ್ತಿ ಮೇಲೆ ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ನಿನ್ನ ಹೆಂಡತಿಗೂ ಇದೆ. ಈ ವಿಚಾರವನ್ನು ನೀನು ಮದುವೆಯಾದ ಬಳಿಕ ನಿನ್ನ ಹೆಂಡತಿಗೆ ತಿಳಿಸಬಹುದು. ಆದರೆ, ಬೇರೆ ಯಾರಿಗೂ ಯಾವುದೇ ಕಾರಣಕ್ಕೂ ಹೇಳಬೇಡ. ನಿನ್ನ ತಾಯಿ ನಿನ್ನ ಹಿತದೃಷ್ಠಿಗೆ ಹೀಗೆ ವಿಲ್ ಬರೆದಿದ್ದಾರೆ ಎಂದು ಹೇಳುತ್ತಾರೆ.

Seetharama Serial 20 May episode written update

ಸತ್ಯ ಚಿಕ್ಕಪ್ಪನಿಗೆ ರಾಮ್ ಬುದ್ಧಿ ಮಾತು

ರಾಮ್ ಫೋನ್ ಇಟ್ಟ ಬಳಿಕ ಭಾರ್ಗವಿ ಏನ್ ಹೇಳಿದರು ಎಂದು ಕೇಳಿದ್ದಕ್ಕೆ, ರಾಮ್ ಸತ್ಯವನ್ನು ಮುಚ್ಚಿಡುತ್ತಾನೆ. ಮದುವೆಗೆ ವಿಶ್ ಮಾಡಲು ಫೋನ್ ಮಾಡಿದ್ದರು ಎಂದು ಹೇಳುತ್ತಾನೆ. ಇನ್ನು ಸತ್ಯ ಚಿಕ್ಕಪ್ಪ ರಾಮ್ ಬಳಿ ಸೀತಾ ಬಗ್ಗೆ ಮಾತನಾಡುತ್ತಾರೆ. ಅವಳು ತುಂಬಾ ಒಳ್ಳೆಯ ಹುಡುಗಿ, ವಾಣಿ ಅತ್ತಿಗೆಯಂತೆ ಎಂದು ಹೇಳುತ್ತಾನೆ. ರಾಮ್ ಆಗ ಸತ್ಯ ಚಿಕ್ಕಪ್ಪನಿಗೆ ಕುಡಿಯದಂತೆ ಬುದ್ಧಿ ಮಾತನ್ನು ಹೇಳುತ್ತಾನೆ.

More from Filmibeat

English summary
After lawyer calls and talks to ram about will. He hides truth from chikki
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X