Seetha Rama ; ಭಾರ್ಗವಿಗೆ ಸತ್ಯ ಹೇಳಿದ ಶಾಲಿನಿ : ಸಿಹಿ ಹುಟ್ಟನ್ನು ಪತ್ತೆ ಮಾಡುತ್ತಾಳಾ ಬಡ್ಡಿ ಬಂಗಾರಮ್ಮ..?
ಸೀತಾರಾಮ ಧಾರಾವಾಹಿಯಲ್ಲಿ ಶ್ಯಾಮ್ ತಮ್ಮ ಮಗಳು ಸಿಗುತ್ತಾಳೆ ಎಂಬ ಕನಸು ಕಾಣುತ್ತಾ, ಕ್ಷಣ ಕ್ಷಣವೂ ಕಾಯುತ್ತಿದ್ದಾನೆ. ರಾಮ್ ಕೂಡ ಗೆಳೆಯನಿಗೆ ಸಹಾಯ ಮಾಡಲು ಒದ್ದಾಡುತ್ತಿದ್ದಾನೆ. ಚಾಂದಿನಿಗೆ ಮನೆಯಲ್ಲಿ ಒಬ್ಬಳೇ ಇರುವುದಕ್ಕೆ ಭಯವಾಗುತ್ತಿದೆ. ಕೋಪದಲ್ಲಿ ಅಕ್ಕ-ಭಾವನನ್ನು ಮನೆಯಿಂದ ಹೊರಗೆ ಹಾಕಿದೆ. ಆದರೆ, ಈಗ ಒಬ್ಬಳೇ ಇರಲು ಕಷ್ಟ ಪಡುವಂತಾಗಿದೆ ಎಂದುಕೊಳ್ಳುತ್ತಾಳೆ. ಇದರೊಂದಿಗೆ ರುದ್ರಪ್ರತಾಪ್ ಬೇರೆ ಚಾಂದಿನಿ ಮನೆಯ ಬಳೀಯೇ ಓಡಾಡುತ್ತಿದ್ದಾನೆ. ಇತ್ತ ಶಾಲಿನಿಗೆ ಶ್ಯಾಮ್ ಮಗುವನ್ನು ಹುಡುಕುವುದೇ ಇಷ್ಟವಿಲ್ಲ.
ಇದ್ದ ಒಂದು ಸಾಕ್ಷಿಯೂ ನಾಶ
ಎಲ್ಲಿ ಮಗುವನ್ನು ಹುಡುಕುವಾಗ ತಾನು ಮಾಡಿದ ತಪ್ಪು ಬೆಳಕಿಗೆ ಬರುತ್ತದೋ ಎಂದು ಗಾಬರಿಯಾಗಿದ್ದಾಳೆ. ಹೀಗಾಗಿ ಅಗ್ರಿಮೆಂಟ್ ಅನ್ನು ತಾನೇ ಹುಡುಕಿ ತರುವುದಾಗಿ ಮತ್ತೆ ತನ್ನ ಮನೆಗೆ ಹೋಗುತ್ತಾಳೆ. ಅಗ್ರಿಮೆಂಟ್ ಸಿಕ್ಕ ಕೂಡಲೇ, ಬಾಡಿಗೆ ತಾಯಿ ಯಾರು ಎಂಬುದನ್ನೂ ನೋಡದೆಯೇ ಸುಟ್ಟು ಹಾಕಿದ್ದಾಳೆ. ತಾನು ಸಿಕ್ಕಿ ಬೀಳಬಾರದು ಎಂಬ ಗಾಬರಿಯಲ್ಲಿ ಹೀಗೆ ಮಾಡಿದ್ದಾಳೆ. ಈಗ ಶ್ಯಾಮ್ ಮತ್ತು ರಾಮ್ ಗೆ ಬಾಡಿಗೆ ತಾಯಿಯನ್ನು ಹುಡುಕಲು ಇದ್ದ ಒಂದು ದಾರಿಯೂ ಮುಚ್ಚಿ ಹೋಗಿದೆ. ಆದರೆ, ಇದು ಸೀತಾಳಿಗೆ ಸಹಾಯ ಮಾಡಿದಂತಾಗಿದೆ. ಈಗ ಶ್ಯಾಮ್ ಗೆ ಡಾ.ಅನಂತಲಕ್ಷ್ಮೀ ಅವರನ್ನು ಭೇಟಿ ಮಾಡುವುದು ಬಿಟ್ಟು ಬೇರೆಯಾವ ದಾರಿಯೂ ಇಲ್ಲ.

ಆತಂಕಗೊಂಡು ಕಣ್ಣೀರಿಟ್ಟ ಸೀತಾ
ಇತ್ತ ಸಿಹಿ ಶ್ಯಾಮ್ ಮತ್ತು ಶಾಲಿನಿ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿದ್ದಾಳೆ. ಸೀತಮ್ಮ ಬ್ಯುಸಿ ಇದ್ದಾಳೆ ಎಂದು ಶಾಲೆಯಲ್ಲಿ ಕೊಟ್ಟ ಸ್ಕಿಟ್ ಅನ್ನು ಶ್ಯಾಮ್ ಮತ್ತು ಶಾಲಿನಿ ಜೊತೆಗೆ ಪ್ರ್ಯಾಕ್ಟೀಸ್ ಮಾಡಿದ್ದಾಳೆ. ಶ್ಯಾಮ್ ಮತ್ತು ಶಾಲಿನಿಯನ್ನು ಸಿಹಿ ಅಪ್ಪ ಅಮ್ಮ ಎಂದು ಕರೆದಿದ್ದು, ಇದನ್ನು ಸೀತಾ ಅರಗಿಸಿಕೊಳ್ಳಲಾಗದೇ ಒದ್ದಾಡಿದ್ದಾಳೆ. ಅಲ್ಲದೇ, ಸಿಹಿಯನ್ನು ಕೋಪದಲ್ಲಿ ಬೈದಿದ್ದು, ರಾಮ್ ಸೀತಾಳ ಕೋಪಕ್ಕೆ ಕಾರಣವೇನು ಎಂದು ಕೇಳಿದ್ದಾನೆ. ತನ್ನ ಮಗಳು ತನ್ನನ್ನು ಬಿಟ್ಟು ಬೇರೆಯವರೊಂದಿಗೆ ಕ್ಲೋಸ್ ಆಗಿ ಇರುವುದನ್ನು ನೋಡಲು ಸಾಧ್ಯವಾಗುತ್ತಿಲ್ಲ. ಸಿಹಿ ತನಗೆ ಮಾತ್ರ ಸ್ವಂತ ಎಂಬಂತೆ ಮಾತನಾಡಿದ್ದಾಳೆ. ರಾಮ್ ಕೂಡ ಸೀತಾಳಿಗೆ ಸಮಾಧಾನ ಮಾಡಿದ್ದಾನೆ.
ಶಾಲಿನಿಯನ್ನು ಗಾಳವಾಗಿಸಿಕೊಂಡ ಭಾರ್ಗವಿ
ಸೀತಾ ನಡವಳಿಕೆ ಹಾಗೂ ಮನೆಯಲ್ಲಿ ನಡೆಯುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಭಾರ್ಗವಿ ಹೊಸ ಐಡಿಯಾವನ್ನು ಹುಡುಕಿದ್ದಾಳೆ. ಮಗುವಿಗಾಗಿ ಪರಿತಪಿಸುತ್ತಿರುವು ಶ್ಯಾಮ್ ಮತ್ತು ಶಾಲಿನಿಗೆ ಸಿಹಿ ಹೊಂದಿಕೊಂಡಿದ್ದಾಳೆ. ಸೀತಾ ಅವರಿಗೆ ಸಿಹಿಯನ್ನು ಬಿಟ್ಟುಕೊಟ್ಟು ತಾನು ಮತ್ತೊಂದು ಮಗುವನ್ನು ಮಾಡಿಕೊಳ್ಳಬಹುದು ಎಂದು ಆಲೋಚಿಸಿದ್ದಾಳೆ. ಈ ಬಗ್ಗೆ ಭಾರ್ಗವಿ ವಿಶ್ವಜಿತ್ ಜೊತೆಗೆ ಮಾತನಾಡಿದ್ದಾಳೆ. ವಿಶ್ವನಿಗೆ ಭಾರ್ಗವಿ ಆಲೋಚನೆಗಳ ತಳ-ಬುಡ ಅರ್ಥವಾಗದಿದ್ದರೂ ಹೆಂಡತಿಯ ಮಾತುಗಳಿಗೆ ತಾಳ ಹಾಕಿದ್ದಾನೆ. ಈಗ ಭಾರ್ಗವಿ ಶಾಲಿನಿಯನ್ನೇ ಗಾಳವಾಗಿಸಿಕೊಂಡು ತನ್ನ ಆಟವನ್ನು ಶುರು ಮಾಡಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದಾಳೆ.

ಭಾರ್ಗವಿಗೆ ಸತ್ಯ ಹೇಳಿದ ಶಾಲಿನಿ
ಹೀಗಾಗಿ ಶಾಲಿನಿ ಒಬ್ಬಳೇ ಇರುವಾಗ ಭಾರ್ಗವಿ ಭೇಟಿ ಮಾಡಿ ಮಾತನಾಡಿಸಿದ್ದಾಳೆ. ಮಗು ಬೇಕು ಎಂದು ಶ್ಯಾಮ್ ಬಹಳ ಪರಿತಪಿಸುತ್ತಿದ್ದಾನೆ. ಆದರೆ, ನಿನ್ನಲ್ಲಿ ಆತಂಕವೇನೋ ಕಾಡುತ್ತಿದೆ. ನಿನಗೆ ಮಗು ಬೇಡವಾ ಎಂದು ಪ್ರಶ್ನಿಸಿದ್ದಾಳೆ. ಶಾಲಿನಿಯೂ ಕೂಡ ಹೆಚ್ಚು ದಿನ ತನ್ನಲ್ಲೇ ಗುಟ್ಟನ್ನು ಇಟ್ಟುಕೊಳ್ಳಲಾಗದೇ ತಾನು ಮಾಡಿರುವ ತಪ್ಪನ್ನು ಹೇಳಿದ್ದಾಳೆ. ಈಗ ಡಾ.ಅನಂತಲಕ್ಷ್ಮೀ ಅವರನ್ನು ಭೇಟಿ ಮಾಡಿದರೆ, ಶ್ಯಾಮ್ ತನ್ನಿಂದ ದೂರ ಆಗಬಹುದು ಎಂದು ಆತಂಕವನ್ನು ತೋರ್ಪಡಿಸಿದ್ದಾಳೆ. ಬಾಡಿಗೆ ತಾಯಿಗೂ ಡಾ. ಅನಂತಲಕ್ಷ್ಮೀ ಸಂಬಂಧವಿದೆ ಎಂದು ತಿಳಿದ ಭಾರ್ಗವಿ ಈವಾಗ ಯಾವ ರೀತಿಯಲ್ಲಿ ಮಗುವಿನ ಮೂಲವನ್ನು ಹುಡುಕುತ್ತಾಳೋ ಕಾದು ನೋಡಬೇಕಿದೆ.


Click it and Unblock the Notifications











