Seetharama ;ಐಸ್‌ಕ್ರೀಂ ಆಸೆಗೆ ಭಾರ್ಗವಿಗೆ ಸತ್ಯ ಹೇಳಿಯೇ ಬಿಟ್ಲಾ ಸುಬ್ಬಿ ? ರಾಮ್ ಮನೆಗೆ ಬರ್ತಾನಾ ಸ್ವಾಮಿ ?
ಸೀತಾರಾಮ ಧಾರಾವಾಹಿಯಲ್ಲಿ ಸುಬ್ಬಿ ನಿಧಾನವಾಗಿ ರಾಮ್ ನನ್ನು ಅರ್ಥ ಮಾಡಿಕೊಳ್ಳುತ್ತಿದ್ದಾಳೆ. ಇತ್ತ ಭಾರ್ಗವಿ ರಾಮ್ ಬಳಿ ಬಾಯಿ ಬಿಡಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಸಿಹಿಯಂತೆ ಕಾಣುವ ಹುಡುಗಿಯನ್ನು ಎಲ್ಲಿಂದ ಕರೆದುಕೊಂಡು ಬಂದೆ ಎಂದು ರಾಮ್ ಬಳಿ ಭಾರ್ಗವಿ ವಿಚಾರಿಸಿದ್ದಾಳೆ. ರಾಮ್ ಸುಳ್ಳು ಹೇಳಲಾಗದೇ ಒದ್ದಾಡುವ ಸಮಯಕ್ಕೆ ಸರಿಯಾಗಿ ಅಶೋಕ್ ಬಂದಿದ್ದು, ಅವಳು ಸಿಹಿನೇ ಎಂದು ಹೇಳಿದ್ದಾನೆ. ಇದರಿಂದ ಭಾರ್ಗವಿಗೆ ಮತ್ತೆ ಹಿನ್ನೆಡೆಯಾಗಿದ್ದು, ಈಗ ಸತ್ಯ ತಿಳಿದುಕೊಳ್ಳುವುದು ಹೇಗೆ ಎಂದು ಯೋಚಿಸುತ್ತಿದ್ದಾಳೆ. ಇದರೊಂದಿಗೆ ತಾನು ಸೀತಾಳಿಗೆ ಮಾತ್ರೆ ಬೆರೆಸಿಕೊಟ್ಟಿದ್ದು, ಸಿಹಿಗೆ ಹೇಗೆ ಗೊತ್ತಾಯ್ತು. ಅದನ್ನು ನನಗೆ ವಾಪಸ್ ಕೊಟ್ಟಿದ್ದು ಯಾಕೆ ಎಂದು ಭಾರ್ಗವಿ ಯೋಚಿಸುತ್ತಿದ್ದಾಳೆ.
ಅಜ್ಜಿ-ತಾತನ ಎದುರು ತಬ್ಬಿಬ್ಬಾದ ಸಿಹಿ
ಇನ್ನು ಸಿಹಿಯನ್ನು ನೋಡಲು ಶಾಂತಜ್ಜಿ ಮತ್ತು ಮೂರ್ತಿ ತಾತ ಬಂದಿದ್ದಾರೆ. ಆದರೆ ಸಿಹಿ ಹೆಚ್ಚು ಮಾತನಾಡಿಲ್ಲ. ಅವಳಿಗೆ ಇವರಿಬ್ಬರು ಯಾರು ಎಂಬುದೇ ಗೊತ್ತಿಲ್ಲ. ಸಿಹಿಯನ್ನು ಕಂಡು ಖುಷಿ ಪಟ್ಟ ಅಜ್ಜಿ-ತಾತ ಮೊಮ್ಮಗಳ ಮೌನವನ್ನು ಅನುಮಾನಿಸಿದ್ದಾರೆ. ಸೀತಾ ಕೂಡ ಯಾಕೆ ಮಾತನಾಡುತ್ತಿಲ್ಲ ಎಂದು ಕೇಳಿದ್ದಾಳೆ. ಇದೇ ಸಮಯಕ್ಕೆ ಬಂದ ಸಿಹಿ ಅಜ್ಜಿ-ತಾತನ ಬಗ್ಗೆ ಸುಬ್ಬಿಗೆ ಹೇಳಿ, ನನಗೆ ನಿಮ್ಮ ಮೇಲೆ ಕೋಪ ಬಂದಿದೆ. ಇಷ್ಟು ದಿನ ಆದರೂ ನನ್ನನ್ನು ಯಾಕೆ ನೋಡೋದಕ್ಕೆ ಬರಲಿಲ್ಲ ಎಂದು ಹೇಳಿಕೊಟ್ಟಿದ್ದಾಳೆ. ಆಗ ಸುಬ್ಬಿ ಅದೇ ಮಾತುಗಳನ್ನು ಆಡಿದ್ದು, ಶಾಂತಜ್ಜಿ ಮತ್ತು ಮೂರ್ತಿ ತಾತ ಸಿಹಿಯನ್ನು ಮುದ್ದಾಡಿದ್ದಾರೆ. ಇನ್ನು ಸಿಹಿಗಾಗಿ ಗೊಜ್ಜವಲಕ್ಕಿಯನ್ನು ಮಾಡಿದ್ದು, ಸುಬ್ಬಿ ಐಸ್ ಕ್ರೀಂ ತಿನ್ನಲು ಬಯಸಿದ್ದಾಳೆ. ಆದರೆ ಸಿಹಿ ಬೈದು ಗೊಜ್ಜವಲಕ್ಕಿ ತಿನ್ನಲು ಹೇಳಿದ್ದಾಳೆ. ಸುಬ್ಬಿ ಬೇರೆ ದಾರಿ ಇಲ್ಲದೇ ಗೊಜ್ಜವಲಕ್ಕಿ ತಿನ್ನುತ್ತಿರುತ್ತಾಳೆ.

ಸಿಹಿ ಮಾತುಗಳಿಗೆ ಬೆರಗಾದ ರಾಮ್-ಅಶೋಕ್
ಇದೇ ವೇಳೆ ಶಾಂತಜ್ಜಿ ಮತ್ತು ಮೂರ್ತಿ ತಾತ ಸಿಹಿ ಗೊಜ್ಜವಲಕ್ಕಿಯನ್ನು ಕದ್ದು ತಿಂದ ಘಟನೆಯನ್ನು ನೆನಪು ಮಾಡಿಕೊಳ್ಳುತ್ತಾರೆ. ಆಗ ಭಾರ್ಗವಿ ಬೇಕಂತಲೇ ಸಿಹಿ ಬಳಿ ಹೀಗೆಲ್ಲಾ ಮಾಡಿದ್ದಾ ಎಂದು ಪ್ರಶ್ನಿಸಿದ್ದು, ಸಿಹಿ ನಡೆದ ಘಟನೆಯನ್ನು ಚಾಚೂ ತಪ್ಪದೇ ಹೇಳಿದ್ದಾಳೆ. ಇದನ್ನು ಕಂಡ ರಾಮ್ ಮತ್ತು ಅಶೋಕ್ ಫುಲ್ ಶಾಕ್ ಆಗಿದ್ದಾರೆ. ಅಲ್ಲದೇ, ಸಿಹಿ ವಠಾರದಲ್ಲಿರುವ ತನ್ನ ಸ್ನೇಹಿತರ ಹೆಸರನ್ನೂ ಹೇಳಿದ್ದು, ರಾಮ್ ಇದೆಲ್ಲಾ ಸಿಹಿಗೆ ನಾವು ಹೇಳೇ ಇಲ್ಲ. ಆದರೂ ಹೇಗೆ ಹೇಳುತ್ತಿದ್ದಾಳೆ ಎಂದು ಗಾಬರಿಯಾಗಿದ್ದಾನೆ. ಅಶೋಕ್ ಹತ್ರ ಈ ವಿಚಾರವನ್ನು ಮಾತನಾಡಿದ್ದು, ಅಶೋಕ್ ನೀನೇ ಸಿಹಿಗೆ ಹೇಳಿರುತ್ತೀಯಾ ಆದರೆ ಮರೆತು ಬಿಟ್ಟಿರುತ್ತೀಯಾ ಎಂದು ಹೇಳುತ್ತಾನೆ. ರಾಮ್ ಕೂಡ ಕನ್ಫ್ಯೂಸ್ ಮಾಡಿಕೊಳ್ಳುತ್ತಾನೆ.
ಭಾರ್ಗವಿ ಎದುರು ಸುಬ್ಬಲಕ್ಷ್ಮೀ ಬಣ್ಣ ಬಯಲಾಯ್ತಾ..?
ಭಾರ್ಗವಿಗೆ ಸಿಹಿಯ ಮಾತುಗಳ ಮೇಲೆ ಅನುಮಾನವಿದೆ. ಇವಳು ಸಿಹಿ ಆಗಿರುವುದಕ್ಕೆ ಸಾಧ್ಯವೇ ಇಲ್ಲ. ಇವಳು ಬೇರೆ ಯಾರೋ ಇರಬೇಕು ಎಂದು ಹೆಜ್ಜೆ ಹೆಜ್ಜೆಗೂ ಅನುಮಾನಿಸುತ್ತಿದ್ದಾಳೆ. ಆದರೆ, ಈ ಹುಡುಗಿ ನಿಜವಾಗಿಯೂ ಯಾರು, ಎಲ್ಲಿಂದ ಬಂದವಳು ಎಂಬುದು ಗೊತ್ತಿಲ್ಲ. ಹಾಗಾಗಿ ಸಿಹಿ ಒಬ್ಬಳೇ ಇರುವಾಗ ಭಾರ್ಗವಿ ತಿನ್ನಲು ತಿಂಡಿ ಕೊಟ್ಟು ನಿನ್ನ ಹೆಸರೇನು ಎಂದು ಕೇಳಿದ್ದಾಳೆ. ಸಿಹಿ ಮೈ-ಮರೆತು ಸುಬ್ಬಲಕ್ಷ್ಮೀ ಎಂದು ಹೇಳಿದ್ದು, ಇದೇ ಸಮಯಕ್ಕೆ ಅಲ್ಲಿಗೆ ಸೀತಾ ಮತ್ತು ರಾಮ್ ಕೂಡ ಬಂದಿದ್ದು, ಭಾರ್ಗವಿ ಸುಬ್ಬಿ ಬಣ್ಣವನ್ನು ಬಯಲು ಮಾಡುತ್ತಾಳಾ ಕಾದು ನೋಡಬೇಕಿದೆ.
ಸುಬ್ಬಿ ಬಗ್ಗೆ ತಾತ ಸ್ವಾಮಿ ಸತ್ಯ ಹೇಳಿ ಬಿಡುತ್ತಾನಾ..?
ಇತ್ತ ಸುಬ್ಬಿ ಮನೆಯಲ್ಲಿಲ್ಲದೇ ಸ್ವಾಮಿ ತಲೆ ಕೆಡಿಸಿಕೊಂಡಿದ್ದಾನೆ. ಸುಬ್ಬಿಯನ್ನು ಅವರು ಯಾಕೆ ಕರೆದುಕೊಂಡು ಹೋಗಬೇಕು ಎಂದು ಕೋಪ ಮಾಡಿಕೊಂಡು ಕುಡಿದಿದ್ದಾನೆ. ಕಂಠ ಪೂರ್ತಿ ಕುಡಿದು ಪ್ರಜ್ಞೆ ತಪ್ಪಿ ಮಲಗಿರುವ ಸ್ವಾಮಿ ತಾತನನ್ನು ನೋಡಿದ ಕಾವೇರಿ ಗಾಬರಿಯಾಗಿದ್ದಾಳೆ. ಸ್ವಾಮಿ ಸುಬ್ಬಿಯನ್ನು ಕರೆದುಕೊಂಡು ಬರುತ್ತೀನಿ ಎಂದು ಹೇಳಿದ್ದು, ಕಾವೇರಿ ಬೈಯುತ್ತಾಳೆ. ಸುಬ್ಬಿ ಅಲ್ಲಿ ಸುಖವಾಗಿದ್ದಾಳೆ. ಅವಳಿಂದ ನಮ್ಮ ಬದುಕೂ ಚೆನ್ನಾಗಿದೆ. ಈಗ ಸುಮ್ಮನೆ ನೀವು ಕುಡಿದು ಹೀಗಾಡುವುದು ಸರಿಯಿಲ್ಲ ಎಂದಿದ್ದು, ರಾಮ್ ಮನೆಗೆ ಸ್ವಾಮಿ ಹೋಗಿ ಗಲಾಟೆ ಮಾಡಬಹುದು ಎಂದು ವೀಕ್ಷಕರು ಗೆಸ್ ಮಾಡಿದ್ದಾರೆ.


Click it and Unblock the Notifications











