Seetharama ; ರುದ್ರಪ್ರತಾಪ್ ಬಗ್ಗೆ ತಿಳಿದ ರಾಮ್ : ಅಂಜಲಿಯನ್ನು ಉಳಿಸಿಕೊಳ್ಳುತ್ತಾನಾ..?

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಮದುವೆಗೆ ಎಲ್ಲಾ ತಯಾರಿಯೂ ಆಗಿದೆ. ಈಗಾಗಲೇ ಮದುವೆ ಕೆಲಸಗಳು ಮುಗಿದಿದ್ದು, ಶಾಸ್ತ್ರಗಳು ಶುರುವಾಗುತ್ತಿವೆ.ರಾಮ್ ಸೀತಾಳಿಗೆ ಫೋನ್ ಮಾಡಿದ್ದು, ಭಾರ್ಗವಿ ಮದುವೆ ಆಗುವವರೆಗೂ ಸೀತಾಳನ್ನು ನೋಡಬಾರದು, ಅವಳ ಜೊತೆಗೆ ಮಾತನಾಡಬಾರದು ಎಂದು ಕಂಡೀಷನ್ ಹಾಕಿರುವುದಾಗಿ ಹೇಳಿ, ರಾಮ್ ಪೂಜೆಗೆ ಕುಳಿತಿದ್ದಾನೆ. ಅಶೋಕ್ ಕೂಡ ಆಗಮಿಸಿದ್ದು. ರಾಮ್ ಬೈಯುತ್ತಾನೆ. ನೆಂಟರು ಬಂದಂತೆ ಬರುತ್ತಿದ್ದೀಯಾ ಎಂದು ಬೇಸರ ಮಾಡಿಕೊಳ್ಳುತ್ತಾನೆ.


ಸೀತಾ ಮನೆಯಲ್ಲಿ ಕಂಕಣ ಶಾಸ್ತ್ರ ಆರಂಭ

ಸೀತಾ ಮನೆಗೆ ಪ್ರಿಯಾ, ಪ್ರೇಮಾ, ಅಂಜಲಿ ಎಲ್ಲರೂ ಬರುತ್ತಾರೆ. ಇವರನ್ನೆಲ್ಲಾ ನೋಡಿದ ಶಾಂತಜ್ಜಿ ಫುಲ್ ಖುಷಿಪಡುತ್ತಾರೆ. ಸೀತಾ ರೆಡಿ ಆಗಿರುತ್ತಾಳೆ. ಸಿಹಿ ಕೂಡ ಮನೆಗೆ ಬಂದವರನ್ನು ವೆಲ್ಕಂ ಮಾಡುತ್ತಾರೆ. ಸೀತಾಳಿಗೆ ವಠಾರದವರೆಲ್ಲಾ ಸೇರಿ ಅರಿಶಿನದ ಸ್ನಾನ ಮಾಡಿಸುತ್ತಾರೆ. ಸಿಹಿಯೂ ಕೂಡ ದೊಡ್ಡ ಮುತ್ತೈದೆಯಂತೆ ತನ್ನ ತಾಯಿಗೆ ಸ್ನಾನ ಮಾಡಿಸುತ್ತಾಳೆ. ನಂತರ ಶಾಂತಜ್ಜಿ ಸೀತಾಳಿಗೆ ಕಂಕಣ ಕಟ್ಟುತ್ತಾರೆ. ಈ ವೇಳೆ ಅಂಜಲಿಯನ್ನು ಸಿಹಿ ಗಮನಿಸುತ್ತಿರುತ್ತಾಳೆ.

seetharama-serial-21-june-episode-written-update

ರುದ್ರಪ್ರತಾಪ್ ಪ್ಲಾನ್ ತಿಳಿದ ಸಿಹಿ

ರುದ್ರಪ್ರತಾಪ್ ಇಂದೇ ಅಂಜಲಿಯನ್ನು ದೇವಸ್ಥಾನಕ್ಕೆ ಕರೆದಿದ್ದಾನೆ. ಅವಳನ್ನು ಕಿಡ್ನ್ಯಾಪ್ ಮಾಡಿದಾಗ ರಾಮ್ ಮತ್ತು ಅಶೋಕ್ ತಂಗಿಯ ಹುಡುಕಾಟದಲ್ಲಿ ಬ್ಯುಸಿಯಾಗುತ್ತಾರೆ. ರಾಮ್ ತನ್ನ ಮದುವೆಯನ್ನು ಕ್ಯಾನ್ಸಲ್ ಮಾಡಿಕೊಳ್ಳುತ್ತಾನೆ. ಆಗ ಸೀತಾ ತನಗೆ ಸಿಗುತ್ತಾಳೆ. ಅಂಜಲಿ ಕೇವಲ ನೆಪವಷ್ಟೇ ತನ್ನ ಆಟಕ್ಕೆ ಬಲಿಯಾಗುತ್ತಿರುವ ಕುರಿಯಂತೆ. ನನ್ನ ಗುರಿ ಏನಿದ್ದರೂ ಸೀತಾ ಕಡೆಗೆ ಎಂದು ದೇವಸ್ಥಾನದಲ್ಲಿ ಒಬ್ಬನೇ ಕಾಯುತ್ತಿರುತ್ತಾನೆ. ಅಂಜಲಿಗೆ ಫೋನ್ ಮಾಡುತ್ತಾನೆ. ಬೇಗ ಬಾ ಅಂಜಲಿ, ನಾನು ನೀನು ಓಡಿ ಹೋಗಿ ನಮ್ಮದೇ ಜೀವನ ಕಟ್ಟಿಕೊಳ್ಳೋಣ ಎಂದು ಹೇಳುತ್ತಾನೆ. ಆದರೆ, ಅಂಜಲಿ ಫೋನ್ ನ ಸಿಹಿ ರಿಸೀವ್‌ ಮಾಡಿರುತ್ತಾಳೆ. ವಾಯ್ಸ್ ಕೇಳಿ ಇದು ಬ್ಯಾಡ್ ಅಂಕಲ್ ಎಂದು ಗುರುತಿಸುತ್ತಾಳೆ.

ಅಂಜಲಿ ಬಗ್ಗೆ ಸತ್ಯ ತಿಳಿದ ರಾಮ್

ಅಷ್ಟೇ ಅಲ್ಲದೇ, ಖಚಿತ ಮಾಹಿತಿ ಪಡೆಯಲು ಸಿಹಿ ವೀಡಿಯೋ ಕಾಲ್ ಮಾಡುತ್ತಾಳೆ. ಅಂಜಲಿ ತನ್ನನ್ನು ಪರೀಕ್ಷೆ ಮಾಡಲು ಹೀಗೆ ಮಾಡಿರಬೇಕು ಎಂದುಕೊಂಡು ರಿಸೀವ್ ಮಾಡುತ್ತಾನೆ. ರುದ್ರಪ್ರತಾಪ್ ಮುಖ ನೋಡಿ ಸಿಹಿ ಗಾಬರಿಯಾಗುತ್ತಾಳೆ. ತಕ್ಷಣವೇ ಸಿಹಿ ರಾಮ್ ಗೆ ಫೋನ್ ಮಾಡುತ್ತಾಳೆ. ಫ್ರೆಂಡ್ ಗೆ ಬ್ಯಾಡ್ ಅಂಕಲ್ ಅಂಜಲಿ ಅಕ್ಕನಿಗೆ ಫೋನ್ ಮಾಡಿದ್ದ. ನಾವಿಬ್ಬರೇ ಬೇರೆ ಜೀವನ ಕಟ್ಟಿಕೊಳ್ಳೋಣ. ಈಗಲೇ ದೇವಸ್ಥಾನಕ್ಕೆ ಬಾ ಎಂದು ಹೇಳುತ್ತಿದ್ದ. ಬ್ಯಾಡ್ ಅಂಕಲ್ ಅಂಜಲಿ ಅಕ್ಕನಿಗೆ ಪ್ರಾಬ್ಲಮ್ ಮಾಡುತ್ತಾನಾ ಎಂದು ಪ್ರಶ್ನಿಸುತ್ತಾಳೆ. ರಾಮ್ ಸತ್ಯ ತಿಳಿದು ಗಾಬರಿಯಾಗುತ್ತಾನೆ. ಸಿಹಿಗೆ ಯಾರಿಗೂ ಈ ವಿಚಾರವನ್ನು ಹೇಳಬೇಡ. ಬ್ಯಾಡ್ ಅಂಕಲ್ ಯಾರಿಗೂ ಏನೂ ಮಾಡಲು ಬಿಡುವುದಿಲ್ಲ ಎಂದು ಹೇಳುತ್ತಾನೆ.

seetharama-serial-21-june-episode-written-update

ದೇವಸ್ಥಾನಕ್ಕೆ ಹೋಗುತ್ತಾಳಾ ಅಂಜಲಿ..?

ಈ ವಿಚಾರವನ್ನು ರಾಮ್ ಅಶೋಕ್ ಗೆ ಹೇಳುತ್ತಾನೆ. ಆಗ ಅಶೋಕ್ ಅಂಜಲಿ ಪ್ರೀತಿ ಬಗ್ಗೆ ಹೇಳುತ್ತಾನೆ. ಸದ್ಯ ರುದ್ರಪ್ರತಾಪ್ ನನ್ನು ಹಿಡಿಯಬೇಕು. ಮುಂದೆ ಆಗುವ ಅಪಾಯವನ್ನು ತಡೆಯಬೇಕು ಎಂದು ಹೊರಟಿದ್ದಾರೆ. ರಾಮ್ ನನ್ನು ಭಾರ್ಗವಿ ತಡೆಯಲು ಯತ್ನಿಸಿದರೂ ರಾಮ್ ಹೋಗುತ್ತಾನೆ. ಇನ್ನು ಅಂಜಲಿ ತಾನು ದೇವಸ್ಥಾನಕ್ಕೆ ಹೋಗುವುದೇ ಸರಿ. ಅಲ್ಲಿಗೆ ಹೋಗಿ ಮದುವೆ ಬೇಡ ಎಂದು ರಾಮು ಬಳಿ ಮಾತನಾಡಿ ಅರ್ಥ ಮಾಡಿಸಬೇಕು. ಇಲ್ಲದಿದ್ದರೆ ತನ್ನ ಪ್ರೀತಿಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಯೋಚಿಸುತ್ತಿರುತ್ತಾಳೆ. ಇದನ್ನೆಲ್ಲಾ ಸಿಹಿ ಗಮನಿಸುತ್ತಿರುತ್ತಾಳೆ.

More from Filmibeat

English summary
Rudraprathap and anjali love learnt by ram
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X