Seetharama ; ಅಪ್ಪನಿಗೆ ಫೋನ್ ಮಾಡಿ ಕಣ್ಣೀರಿಟ್ಟ ಮಗಳು : ಸಿಹಿಗೆ ಸಿಕ್ಕ ಹೊಸ ಫ್ರೆಂಡ್ ಯಾರು..?

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ವಿಶ್ವ ಈಗ ಭಾರ್ಗವಿ ಪಾತ್ರವನ್ನು ನಿಭಾಯಿಸುತ್ತಿರುವಂತಿದೆ. ಭಾರ್ಗವಿ ಮಾಡುವ ಕೆಲಸವನ್ನೆಲ್ಲಾ ವಿಶ್ವನೇ ನೋಡಿಕೊಳ್ಳುತ್ತಿದ್ದಾನೆ.ಸೀತಾಳ ಬಳಿ ಡಾ.ಅನಂತಲಕ್ಷ್ಮೀ ವೈದ್ಯರ ಹೆಸರೇಳಿ, ಅವಳ ಮನದಲ್ಲಿ ಗುಟ್ಟಿದೆ ಎಂಬುದನ್ನು ಕನ್ಫರ್ಮ್ ಮಾಡಿಕೊಂಡಿದ್ದಾನೆ. ಪ್ರತಿಯೊಂದನ್ನು ಭಾರ್ಗವಿಗೆ ಅಪ್ ಡೇಟ್ ಮಾಡಿದ್ದಾನೆ. ಭಾರ್ಗವಿ ಎಲ್ಲಿಗೆ ಹೋಗಿದ್ದಾಳೆ ಎಂಬುದು ಗೊತ್ತಿಲ್ಲ. ಆದರೆ, ಕಳೆದ ನಾಲ್ಕೈದು ಎಪಿಸೋಡ್ ಗಳಿಂದ ದೂರಾಗಿದ್ದಾಳೆ. ಸೀತಾ ಮತ್ತು ಸಾಧನಾ ಮನೆಯನ್ನು ನಡೆಸುತ್ತಿದ್ದಾರೆ.

ದೂರದಿಂದಲೇ ಮನೆಯನ್ನು ನಡೆಸುತ್ತಿರುವ ಭಾರ್ಗವಿ

ಭಾರ್ಗವಿ ಪ್ರತಿಯೊಂದಕ್ಕೂ ವಿಶ್ವನಿಗೆ ಫೋನ್ ಮಾಡುತ್ತಿದ್ದಾಳೆ. ಮನೆಯನ್ನು ಹೇಗೆ ನೋಡಿಕೊಳ್ಳಬೇಕು ಎಂದು ಹೇಳಿಕೊಡುತ್ತಿದ್ದಾಳೆ. ಭಾರ್ಗವಿ ಮನೆಯಲ್ಲಿ ಇಲ್ಲದಿದ್ದರೂ ಕೂಡ ತನ್ನ ಪ್ಲಾನ್ ನಂತೆಯೇ ಮನೆ ನಡೆಯುವ ಹಾಗೆ ಮಾಡಿದ್ದಾಳೆ. ಸೀತಾ ಮತ್ತು ರಾಮ್ ಏನು ಮಾಡುತ್ತಿದ್ದಾರೆ. ಸಿಹಿ ಬೋರ್ಡಿಂಗ್ ಸ್ಕೂಲ್ ಸೇರಿದ್ದಾಯ್ತಾ ಎಂಬುದನ್ನು ತಿಳಿದುಕೊಂಡಿದ್ದಾಳೆ. ಅಲ್ಲದೇ, ಸೀತಾ ಮತ್ತು ರಾಮ್ ಹನಿಮೂನ್ ಗೆ ಹೋಗುವಂತೆ ಪ್ಲಾನ್ ಮಾಡಿದ್ದು, ಅದಕ್ಕೂ ಮುನ್ನ ಸೀತಾಳಿಂದ ಅಗ್ರಿಮೆಂಟ್ ಹಾಳೆಗಳಿಗೆ ಸಹಿ ಪಡೆಯಲು ವಿಶ್ವನಿಗೆ ಹೇಳಿದ್ದಾಳೆ. ಹನಿಮೂನ್ ನಿಂದ ಸೀತಾ ವಾಪಸ್ ಬರಬಾರದು ಎಂದು ಭಾರ್ಗವಿ ಪ್ಲಾನ್ ಮಾಡಿದ್ದಾಳೆ.

Seetharama Serial 22 August episode written update

ಸೀತಾಳಿಗೆ ಬುದ್ಧಿ ಹೇಳಿದ ಅಶೋಕ್

ಇತ್ತ ಅಶೋಕ್, ಪ್ರಿಯಾ ಹಾಗೂ ಅಂಜಲಿ ರಾಮ್ ಮನೆಗೆ ಬಂದು ರಾಖಿ ಹಬ್ಬವನ್ನು ಆಚರಿಸುತ್ತಾರೆ. ಸೀತಾ ಅಶೋಕ್ ಗೆ ರಾಖಿ ಕಟ್ಟಿ, ಅಣ್ಣ ಎಂದು ಸ್ವೀಕರಿಸಿದ್ದಾಳೆ. ಅಶೋಕ್ ಕೂಡ ಸೀತಾಳಿಗೆ ಬುದ್ಧಿ ಮಾತನ್ನು ಹೇಳಿದ್ದಾನೆ. ಈ ಮನೆಯಲ್ಲಿ ನಿಮ್ಮಿಬ್ಬರ ಸಂಸಾರದ ಬಗ್ಗೆ ಹೆಚ್ಚು ಗಮನ ಕೊಡಿ. ಯಾವುದೇ ಕಾರಣಕ್ಕೂ ನಿಮ್ಮ ಜೀವನವನ್ನು ಬೇರೆಯವರು ನಿರ್ಧಾರ ಮಾಡಲು ಅವಕಾಶ ಮಾಡಿಕೊಡಬೇಡಿ. ನೀವು ರಾಮ್ ಒಳ್ಳೆಯವರು ಎಂದು ಏಲ್ಲರೂ ಒಳ್ಳೆಯವರು ಎಂದುಕೊಂಡು ಮೋಸ ಹೋಗಬೇಡಿ. ದಿನ ಕಳೆದಂತೆ ನಿಮಗೇ ಎಲ್ಲವೂ ಗೊತ್ತಾಗುತ್ತೆ ಎಂದು ಸೂಕ್ಷ್ಮವಾಗಿ ಹೇಳುತ್ತಾನೆ.

ಅಪ್ಪನ ಬಳಿ ಕಷ್ಟ ಹೇಳಿಕೊಂಡ ಸಿಹಿ

ಸಿಹಿಗೆ ಬೋರ್ಡಿಂಗ್ ಸ್ಕೂಲ್ ನಲ್ಲಿ ಅಡ್ಜಸ್ಟ್ ಆಗುವುದು ಕಷ್ಟವಾಗುತ್ತಿದೆ. ಒಬ್ಬಳೇ ಊಟ ಮಾಡುವುದು, ಮಗುವುದು, ತನ್ನ ಕೆಲಸಗಳನ್ನು ತಾನೊಬ್ಬಳೇ ಮಾಡಿಕೊಳ್ಳಬೇಕಿದೆ. ಇದರಿಂದ ಸಿಹಿಗೆ ಕಷ್ಟವಾಗುತ್ತಿದೆ. ಅಲ್ಲದೇ, ಬೇರೆ ಮಕ್ಕಳು ಸಿಹಿ ಜೊತೆಗೆ ಬೆರೆಯುತ್ತಿಲ್ಲ. ಸ್ನೇಹಿತರು ಯಾರೂ ಇಲ್ಲದ ಕಾರಣ ಸಿಹಿಗೆ ಬಹಳ ಕಷ್ಟವಾಗುತ್ತಿದೆ. ಇದನ್ನೆಲ್ಲಾ ಸಿಹಿ ಮನೆಗೆ ಫೋನ್ ಮಾಡಿದಾಗ ಹೇಳಿದ್ದಾಳೆ. ಶ್ರೀರಾಮ್ ಮಗಳು ಕಣ್ಣೀರು ಹಾಕಿದ್ದಕ್ಕೆ ನೊಂದುಕೊಂಡಿದ್ದು, ಇದು ಸಾಧ್ಯವಿಲ್ಲ ನನ್ನ ಮಗಳನ್ನು ನಾನು ವಾಪಸ್ ಕರೆದುಕೊಂಡು ಬರುತ್ತೇನೆ ಎಂದು ಗಲಾಟೆ ಮಾಡಿದ್ದಾನೆ. ರಾಮನ ನಡವಳಿಕೆ ಕಂಡು ಸೂರಿ ಆರೋಗ್ಯದಲ್ಲಿ ಸಣ್ಣದಾಗಿ ಏರುಪೇರಾಗಿದೆ.

Seetharama Serial 22 August episode written update


ಸಿಹಿ ಒಂಟಿತನಕ್ಕೆ ಜೊತೆಯಾದ ಮೇಘಶ್ಯಾಮ್

ಇನ್ನು ಸಿಹಿಗೆ ಸದ್ಯಕ್ಕೆ ಬೋರ್ಡಿಂಗ್ ಸ್ಕೂಲ್ ನಲ್ಲಿ ಫ್ರೆಂಡ್ ಎಂದರೆ ಅದು ಡಾ.ಮೇಘಶ್ಯಾಮ್ ಮಾತ್ರ. ಸಿಹಿಗೆ ನಿತ್ಯ ಇನ್ಸುಲಿನ್ ಕೊಡುವ ಮೇಘಶ್ಯಾಮ್ ಅವಳು ಊಟ ಮಾಡದೇ ತಲೆ ಸುತ್ತಿ ಬಿದ್ದಾಗ ಬಂದು ನೋಡಿಕೊಂಡಿದ್ದಾನೆ. ಮನೆಯವರನ್ನು ನೆನೆದು ಕಣ್ಣಿರಿಟ್ಟ ಸಿಹಿಯನ್ನು ಸಮಾಧಾನ ಮಾಡಿದ್ದಾನೆ. ನಿನಗೆ ನಾನು ಫ್ರೆಂಡ್ ಆಗಿರುತ್ತೇನೆ ಎಂದು ಹೇಳಿದ್ದಾನೆ. ಸಿಹಿಗೆ ಸದ್ಯ ಮೇಘಶ್ಯಾಮ್ ಜೊತೆಯಾಗಿದ್ದಾನೆ. ಇನ್ನು ಧಾರಾವಾಹಿ ಪ್ರಕಾರ ಮೇಘಶ್ಯಾಮ್ ಮತ್ತು ಸಿಹಿಗೆ ಹಾಗೂ ರಾಮ್, ಅನಂತಲಕ್ಷ್ಮೀ ಡಾಕ್ಟರ್ ಎಲ್ಲರಿಗೂ ಸಂಬಂಧವಿರಬಹುದು ಎಂದು ವೀಕ್ಷಕರು ಗೆಸ್ ಮಾಡಿದ್ದಾರೆ. ಧಾರಾವಾಹಿಯಲ್ಲಿ ಹೊಸ ಕಥೆ ಶುರುವಾಗುತ್ತಿದ್ದು, ಎಲ್ಲರೂ ಕುತೂಹಲಗೊಂಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X