Seetharama ; ಸೀತಾ ಮನೆಗೆ ಬಂದ ಡ್ಯೂಪ್ಲಿಕೇಟ್ ಸಿಹಿ, ಇನ್ನೇನು ಎಲ್ಲವೂ ಸರಿ ಹೋಯ್ತಾ ?
ಸೀತಾರಾಮ ಧಾರಾವಾಹಿಯಲ್ಲಿ ಭಾರ್ಗವಿ ಸಿಹಿಯಂತಹ ಮಗುವನ್ನು ಮನೆಗೆ ಕರೆದುಕೊಂಡು ಬಂದಿದ್ದಾಳೆ. ಮನೆಗೆ ಕರೆ ತರುವ ಮುನ್ನವೇ ಮಗುವಿಗೆ ಸಿಹಿಯಂತೆ ಮಾತನಾಡಲು ಹೇಳಿಕೊಟ್ಟಿದ್ದಾಳೆ. ಈಗ ಮನೆಗೆ ಬಂದ ಮಗುವನ್ನು ಸೀತಾ ಒಪ್ಪಿಕೊಂಡರೆ, ಮುಂದೆ ನಡೆಯುವುದೆಲ್ಲಾ ತನ್ನ ಲೆಕ್ಕಾಚಾರದ ಪ್ರಕಾರವೇ ಎಂದು ಭಾರ್ಗವಿ ಈ ಪ್ಲಾನ್ ಮಾಡಿದ್ದಾಳೆ. ಕ್ಯಾಂಡಲ್ ಲೈಟ್ ಡಿನ್ನರ್ ಮಾಡಿದ ರಾಮ್, ಸೀತಾಳಿಗೆ ನಿನಗೂ ನಾನೊಂದು ಸರ್ಪ್ರೈಸ್ ಕೊಡುತ್ತೀನಿ ಎಂದು ಹೇಳಿದ್ದಾನೆ. ಆದರೆ, ಆ ಸರ್ಪ್ರೈಸ್ ಮಗು ಎಂಬ ಊಹೆಯೂ ಸೀತಾಳಿಗಿಲ್ಲ.
ಮನೆಗೆ ಬಂದ ಮಗುವನ್ನು ಒಪ್ಪುತ್ತಾಳಾ ಸೀತಾ
ಬೆಳಗ್ಗೆ ಆಗುತ್ತಿದ್ದಂತೆಯೇ ಮನೆಗೆ ಮಗು ಬಂದಿದೆ. ಸಿಹಿ ಎಂಬ ಹೆಸರಿನಲ್ಲೇ ಮಾತನಾಡುತ್ತಿದ್ದು, ಮನೆಯವರಿಗಂತೂ ಖುಷಿ ತಂದಿದೆ. ಸೀತಾ ಮಗುವನ್ನು ನೋಡಿ ಖುಷಿಯಿಂದ ಮಾತನಾಡಿಸಿದ್ದಾಳೆ. ಭಾರ್ಗವಿ ಮಗುವನ್ನು ಸಿಹಿ ಮಾತನಾಡುವ ಮಾತುಗಳನ್ನೇ ಹೇಳಿಕೊಟ್ಟು ತಯಾರು ಮಾಡಿದ್ದಾಳೆ. ಅಶೋಕ್ ಸಿಹಿಯನ್ನು ಅನುಮಾನದಿಂದಲೇ ಕೆಲ ಪ್ರಶ್ನೆಗಳನ್ನು ಕೇಳಿದ್ದು, ಮಗು ಅಶೋಕ್, ಸತ್ಯ, ಸೂರಿ ಎಲ್ಲರನ್ನೂ ಗುರುತು ಹಿಡಿದಿದೆ. ಇದೆಲ್ಲಾ ಭಾರ್ಗವಿ ಬೇಕಂತಲೇ ತಯಾರು ಮಾಡಿದ್ದಾಳೆ ಎಂಬುದು ಅಶೋಕನಿಗೆ ಸ್ಪಷ್ಟವಾಗಿದೆ. ಆದರೆ, ಈ ಸತ್ಯವನ್ನು ಯಾರ ಬಳಿಯೂ ಹೇಳಲಾಗದೇ ಸುಮ್ಮನಾಗಿದ್ದಾನೆ. ಮಗುವಿನ ಜೊತೆಗೆ ಖುಷಿಯಾಗಿ ಆಟವಾಡಿದ್ದಾಳೆ. ಇದರಿಂದ ಭಾರ್ಗವಿ ಸೀತಾ ಮಗುವನ್ನು ಒಪ್ಪಿದ್ದಾಳೆ ಎಂದು ಮನದಲ್ಲೇ ಸಂತಸಗೊಂಡಿದ್ದಾಳೆ.

ಇವಳಲ್ಲ ನನ್ನ ಮಗಳು ಎಂದ ಸೀತಾ
ಆದರೆ, ಸೀತಮ್ಮ ಎಂದು ಕರೆದರೂ ಮಗು ತನ್ನದಲ್ಲ ಎಂದು ಸೀತಾ ಹೇಳಿದ್ದಾಳೆ. ನಿನ್ನ ಮಗುವೇ ಎಂದು ಭಾರ್ಗವಿ ತಿಳಿ ಹೇಳಲು ಯತ್ನಿಸಿದ್ದು, ಸೀತಾ ಮಗುವನ್ನು ಐಸ್ ಕ್ರೀಮ್ ತಂದು ಕೊಡುತ್ತೇನೆ ಎಂದು ಕೇಳಿ ಪರೀಕ್ಷೆ ಮಾಡಿದ್ದಾಳೆ. ಮಗು ಐಸ್ ಕ್ರೀಮ್ ತಿನ್ನುವುದಾಗಿ ಹೇಳಿದ್ದು, ನೋಡಿ, ನಮ್ಮ ಸಿಹಿ ಆಗಿದ್ದರೆ, ಐಸ್ ಕ್ರೀಮ್ ಬೇಡ ನನಗೆ ಶುಗರ್ ಇದೆ ಎನ್ನುತ್ತಿದ್ದಳು ಎಂದು ಹೇಳಿದ್ದಾಳೆ. ಇವಳು ನನ್ನ ಮಗಳಲ್ಲ ಎಂದು ಸೀತಾ ಹೇಳಿದ್ದು ಎಲ್ಲರಿಗೂ ಒಂದು ಕ್ಷಣ ನೋವು ತಂದಿದೆ. ಈ ಮನೆಯಲ್ಲಿ ಏನಾಗುತ್ತಿದೆ. ಎಲ್ಲರೂ ಏಕೆ ಹೀಗೆ ಆಡುತ್ತಿದ್ದೀರಾ ಎಂದು ಸೀತಾ ಪ್ರಶ್ನಿಸಿದ್ದಾಳೆ. ಆದರೆ, ಎಲ್ಲರೂ ಮೌನಕ್ಕೆ ಜಾರಿದ್ದಾರೆ.
ಸುಬ್ಬಿಯನ್ನು ಹೇಗೆ ಒಪ್ಪಲು ಸಾಧ್ಯಾ..?
ಈ ಮಗುವನ್ನು ಸೀತಾ ರಿಜೆಕ್ಟ್ ಮಾಡಲು ಮುಖ್ಯ ಕಾರಣ ಮಗು ನೋಡಲು ಸಿಹಿಯಂತೆ ಇಲ್ಲ ಎಂಬುದು. ಆದರೆ, ಅದರ ಜೊತೆಗೆ ಸಿಹಿ ಈಗ ಮಗುವನ್ನು ಪರೀಕ್ಷೆಯೂ ಮಾಡಿದ್ದಾಳೆ. ಇತ್ತ ಸಿಹಿಯ ಆತ್ಮ ಸುಬ್ಬಿಯನ್ನು ಮನೆಗೆ ಕರೆತರಲು ಯೋಚಿಸುತ್ತಿದ್ದು, ಸುಬ್ಬಿಯ ಭಾಷೆಯ ಶೈಲಿ ಹಾಗೂ ಅವಳ ನಡವಳಿಕೆಗಳು ಸೀತಾಳನ್ನು ಹೇಗೆ ಒಪ್ಪಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ, ಅಶೋಕ್, ಸತ್ಯ ಮತ್ತು ಸಿಹಿಯ ಆತ್ಮ ಸೀತಾ ಆ ಮಗುವನ್ನು ಒಪ್ಪದ ಕಾರಣಕ್ಕೆ ಖುಷಿಪಟ್ಟಿದ್ದಾರೆ. ಇನ್ನು ರಾಮ್ ನೊಂದುಕೊಂಡು ಭಾರ್ಗವಿ ಮಡಿಲಲ್ಲಿ ಮಲಗಿದ್ದಾನೆ. ಇದೆಲ್ಲಾ ನನಗೇ ಏಕೆ ಆಗುತ್ತಿದೆ ಎಂದು ಕೊರಗಿದ್ದಾನೆ.
ಸಮಯ ಬದಲಾಗಿದ್ದಕ್ಕೆ ವೀಕ್ಷಕರಲ್ಲಿ ಬೇಸರ
ಸೀತಾರಾಮ ಧಾರಾವಾಹಿಯೂ ಇದೇ ಸೋಮವಾರದಿಂದ ಬದಲಾದ ಸಮಯದಲ್ಲಿ ಪ್ರಸಾರಗೊಳ್ಳಲಿದೆ. ಇಷ್ಟು ದಿನ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿತ್ತು. ಆದರೆ, ಇನ್ಮುಂದೆ ಸಂಜೆ 5.30ಕ್ಕೆ ಪ್ರಸಾರವಾಗಲಿದೆ. ಈ ವಿಚಾರ ತಿಳಿದ ವೀಕ್ಷಕರು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಈಗಾಗಲೇ ನಟ ಅಶೋಕ್ ಅವರು ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಪೋಸ್ಟ್ ಹಾಕಿದ್ದು, ವೀಕ್ಷಕರಿಗೆ ಸಮಾಧಾನ ಮಾಡಿದ್ದಾರೆ.


Click it and Unblock the Notifications











