Seetha Rama ; ಮನೆ ಬದಲಿಸಲು ಮುಂದಾದ ರಾಮ್ : ಸಿಹಿಗೆ ಅಪಾಯ ತಂದ ಅನಿಕೇತನ್..!
ಸೀತಾರಾಮ ಧಾರಾವಾಹಿಯಲ್ಲಿ ಅನಿಕೇತನ್ ತನಗೆ ಅವಕಾಶ ಸಿಕ್ಕ ಕಡೆಗಳಲ್ಲೆಲ್ಲಾ ಸಿಹಿಗೆ ನೋವು ಮಾಡಲು ಪ್ರಯತ್ನಿಸುತ್ತಿದ್ದಾನೆ. ಸ್ವೀಟ್ ತಿನ್ನುವಾಗಲೂ ಹೀಯಾಳಿಸುತ್ತಾನೆ. ನನಗೆ ಶುಗರ್ ಇಲ್ಲ. ನಾನು ಸ್ವೀಟ್ಸ್ ತಿನ್ನಬಹುದು. ಇನ್ನೂ ಜಾಮೂನ್ ಕೊಡಿ ಎನ್ನುತ್ತಾನೆ. ವಿಶ್ವ ಮತ್ತು ರಾಮ್ ಇಬ್ಬರೂ ಸಿಹಿಗೆ ಹಾಗೆಲ್ಲಾ ಮಾತನಾಡಬಾರದು ಎಂದು ಅನಿಕೇತನ್ ಗೆ ಬುದ್ಧಿ ಹೇಳುತ್ತಾರೆ. ಆದರೆ, ಅನಿಕೇತನ್ ಯಾರ ಮಾತನ್ನೂ ಕೇಳುವುದಿಲ್ಲ. ಅವನಿಗೆ ಸಿಹಿಗೆ ನೋವು ಮಾಡುವುದೇ ಇಷ್ಟ. ಭಾರ್ಗವಿ ಮನದೊಳಗೆ ಎಷ್ಟೇ ಆದರೂ ನನ್ನ ಮಗನಲ್ಲವೇ ಎಂದು ಖುಷಿ ಪಡುತ್ತಿರುತ್ತಾಳೆ.
ಶಾಸ್ತ್ರ ಕೇಳಿ ಗಾಬರಿಯಾಗಿರುವ ರಾಮ್
ಶಾಸ್ತ್ರಿಗಳನು ಕರೆಸಿದ ಭಾರ್ಗವಿ ಸಿಹಿ ಜಾತಕವನ್ನು ಬರೆಸುತ್ತಾರೆ. ಶಾಸ್ತ್ರಗಳು ಈ ಮಗುವಿಗೆ ಈ ಮನೆಯಲ್ಲಿ ದೊಡ್ಡ ಕಂಟಕವಿದೆ. ಈ ಮಗುವಿನ ಬದುಕೇ ಕಂಟಕ ಮಯವಾಗಿದೆ. ಈ ಮನೆಯಲ್ಲಿದ್ದರೆ, ಮಗುವಿಗೆ ಅಪಾಯಗಳು ತಪ್ಪಿದ್ದಲ್ಲ ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿದ ಮನೆಯವರೆಲ್ಲಾ ಗಾಬರಿಯಾಗುತ್ತಾರೆ. ಸೂರಿ ತಾತ ಪರಿಹಾರ, ಹೋಮ-ಹವನಗಳು ಇದ್ದರೆ ಹೇಳಿ ಎಂದು ಕೇಳಿದಾಗ, ಶಾಸ್ತ್ರಿಗಳು ಏನೇ ಮಾಡಿದರೂ ಕಷ್ಟ ತಪ್ಪಿದ್ದಲ್ಲ ಎಂದು ಹೇಳುತ್ತಾರೆ. ಸೀತಾ ಗಾಬರಿಯಾದರೂ ತೋರಿಸಿಕೊಳ್ಳುವುದಿಲ್ಲ. ಇದೇ ಸಂದರ್ಭದಲ್ಲಿ ಸರಿಯಾಗಿ ಸಿಹಿ ಕಿರುಚಿಕೊಳ್ಳುತ್ತಾಳೆ.

ಸಿಹಿಗೆ ಬೇಕಂತಲೇ ತೊಂದರೆ ಕೊಟ್ಟ ಅನಿಕೇತನ್
ಏನಾಯ್ತೋ ಎಂದು ರಾಮ್ ಹೋಗಿ ನೋಡಿದರೆ, ಸಿಹಿ ಒದ್ದಾಡುತ್ತಿರುತ್ತಾಳೆ. ಕಾಲು ಉಳುಕಿರಬೇಕು ಎಂದು ರಾಮ್ ಗಾಬರಿಯಾಗುತ್ತಾನೆ. ಡಾಕ್ಟರ್ ಅನ್ನು ಫೋನ್ ಮಾಡಿ ಕರೆಸುತ್ತಾನೆ. ಸೀತಾ ಇದೆಲ್ಲಾ ಬೇಡ ಸ್ವಲ್ಪ ಹೊತ್ತಿಗೆ ಎಲ್ಲಾ ಸರಿ ಹೋಗುತ್ತೆ. ಸಿಹಿಗೆ ಏನೂ ಆಗಿಲ್ಲ ಎಂದು ರಾಮ್ ಜೊತೆಗೆ ವಾದ ಮಾಡುತ್ತಾಳೆ. ಆದರೂ ಕೂಡ ರಾಮ್ ಕೇಳುವುದಿಲ್ಲ. ವೈದ್ಯರು ಬಂದು ಸಿಹಿಗೆ ಏನೂ ಆಗಿಲ್ಲ ಎಂದು ಹೇಳುತ್ತಾಳೆ. ಇನ್ನು ಸಿಹಿ ಅನಿಕೇತನ್ ನಿಂದಲೇ ಹೀಗೆಲ್ಲಾ ಆಯ್ತು ಎಂಬುದನ್ನು ಹೇಳುವುದಿಲ್ಲ. ಆಗ ಅನಿಕೇತನ್ ಅವಳ ಜೊತೆಗೆ ಆಡುವುದಾಗಿ ಸುಳ್ಳು ಹೇಳಿ ಟೆರೆಸ್ ಮೇಲೆ ಕರೆದುಕೊಂಡು ಹೋಗುತ್ತಾನೆ. ಸಿಹಿ ಮೇಲೆ ಹತ್ತಿದ ಬಳಿಕ ಅನಿಕೇತನ್ ಏಣಿಯನ್ನು ದೂರ ಸರಿಸಿ ಈಗ ಇಳಿ ಎಂದು ಚಾಲೇಂಜ್ ಮಾಡುತ್ತಾನೆ.
ಅನಿಕೇತನ್ ತಪ್ಪನ್ನು ತಿಳಿದುಕೊಂಡ ಸಾಧನಾ
ಸಾಧನಾ ಮನೆ ಕ್ಲೀನ್ ಮಾಡಿಸುವಾಗ ಗೋಲಿಗಳನ್ನು ನೋಡಿ, ಸಿಹಿ ಜಾರಿ ಬೀಳುವಂತೆ ಮಾಡಿರುವುದು ಅನಿಕೇತನ್ ಎಂಬ ಸತ್ಯವನ್ನು ಅರಿತುಕೊಳ್ಳುತ್ತಾಳೆ. ಅನಿ ಬಳಿ ಹೋಗಿ ನೀನು ಹೀಗೆಲ್ಲಾ ಮಾಡಿದ್ದು ಬಹಳ ದೊಡ್ಡ ತಪ್ಪು. ನಾನು ಯಾರಿಗೂ ಹೇಳುವುದಿಲ್ಲ. ಆದರೆ, ಮತ್ತೆ ಸಿಹಿಗೆ ಏನೂ ತೊಂದರೆ ಕೊಡಬೇಡ. ಅವಳು ಈ ಮನೆಯಲ್ಲೇ ಇರುತ್ತಾಳೆ. ಅವಳು ಈ ಮನೆಯ ಹುಡುಗಿ ಎಂದು ಹೇಳುತ್ತಾಳೆ. ಆದರೆ, ಅನಿಕೇತನ್ ಯಾರ ಮಾತನ್ನೂ ಕೇಳಲು ರೆಡಿ ಇರುವುದಿಲ್ಲ. ಅವಳು ಈ ಮನೆಯಲ್ಲಿ ಇರಬಾರದು, ಇದು ನನ್ನ ಮನೆ ಎಂದು ಕೂಗಾಡುತ್ತಾನೆ.

ಮನೆ ಬದಲಾಯಿಸುವ ಯೋಚನೆಯಲ್ಲಿ ರಾಮ್
ಇತ್ತ ಸಿಹಿ ಇಳಿಯಲು ಹೋಗಿ ಗಾಬರಿಯಾಗುತ್ತಾಳೆ. ಅಪ್ಪ-ಅಮ್ಮ ಎಂದು ಕಿರುಚುತ್ತಾಳೆ. ಆಗ ರಾಮ್ ಬಂದು ಸಿಹಿಯನ್ನು ಕಾಪಾಡುತ್ತಾನೆ. ಮನೆಯಲ್ಲಿ ಇಷ್ಟೆಲ್ಲಾ ಸಮಸ್ಯೆ ಆಗುತ್ತಿದೆ. ಶಾಸ್ತ್ರಿಗಳು ಹೇಳಿದ್ದು ಕೂಡ ಸರಿಯಾಗಿಯೇ ಇದೆ ಎಂದು ಗಾಬರಿಯಾಗುತ್ತಾನೆ. ಇದಕ್ಕೋಸ್ಕರ ಮನೆ ಬದಲಾಯಿಸಲು ಮುಂದಾಗುತ್ತಾನೆ. ಈ ಬಗ್ಗೆ ಮನೆಯವರನ್ನೆಲ್ಲಾ ಕೂರಿಸಿಕೊಂಡು ಮಾತನಾಡುತ್ತಾನೆ. ಆಗ ಭಾರ್ಗವಿ ನೀವು ಮೂರು ಜನ ಬೇರೆ ಮನೆಗೆ ಹೋಗಿ, ನಿಮಗೂ ಪ್ರೈವೆಸಿ ಇರುತ್ತೆ. ನಾವೂ ಆಗಾಗ ಬಂದು ಹೋಗುತ್ತೇವೆ ಎಂದು ಹೇಳುತ್ತಾಳೆ. ಈಗ ರಾಮ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾನೋ ಕಾದು ನೋಡಬೇಕಿದೆ.


Click it and Unblock the Notifications











