Seetha Rama ;ಭಾರ್ಗವಿಗೆ ಎಚ್ಚರಿಕೆ ಕೊಟ್ಟ ಸತ್ಯ,ರುದ್ರಪ್ರತಾಪ್ ಜೊತೆ ಅಂಜಲಿ ಮದುವೆ..?
ಸೀತಾರಾಮ ಧಾರಾವಾಹಿಯಲ್ಲಿ ಭಾರ್ಗವಿ ಸೀತಾ ಮತ್ತು ರಾಮನ ಮದುವೆಯ ತಯಾರಿಯಲ್ಲಿದ್ದಾಳೆ. ಸೀತಾಳಿಗಾಗಿ ಬಟ್ಟೆ, ಒಡವೆಗಳನ್ನು ಆಯ್ಕೆ ಮಾಡುತ್ತಿದ್ದಾಳೆ. ಈ ವೇಳೆ, ಸಾಧನಾಳಿಗೆ ನಿನಗೆ ಬೇಕಾದಂತೆ ಡಿಸೈನ್ ಒಡವೆಗಳನ್ನು ಮಾಡಿಸಿಕೋ ಸೀತಾ ಮದುವೆಯಲ್ಲಿ ಹಾಕಿಕೊಂಡು ಆಮೇಲೆ ನಿನಗೇ ಕೊಡುತ್ತಾಳೆ ಎಂದು ವಿಚಿತ್ರವಾಗಿ ಮಾತನಾಡುತ್ತಾಳೆ. ಇದೇ ವೇಳೆ ಬರುವ ಸೂರಿ ಸೀತಾಳ ಮದುವೆಗೆ ವಾಣಿಯ ಒಡವೆಗಳನ್ನು ಕೊಡುವಂತೆ ಹೇಳುತ್ತಾನೆ. ಇದು ಭಾರ್ಗವಿಗೆ ಕೋಪ ಬರುವಂತೆ ಮಾಡುತ್ತದೆ.
ಭಾರ್ಗವಿಗೆ ಎಚ್ಚರಿಕೆ ಕೊಟ್ಟ ಸತ್ಯ
ವಾಣಿಯ ಒಡವೆಗಳನ್ನು ಭಾರ್ಗವಿ ಎತ್ತಿಟ್ಟುಕೊಂಡಿದ್ದು, ಅದನ್ನು ಈಗ ಸೀತಾಳಿಗೆ ಕೊಡಬೇಕೇ ಎಂದು ಬೇಸರ ಮಾಡಿಕೊಳ್ಳುತ್ತಾಳೆ. ಸೂರಿ ಮಾತುಗಳನ್ನು ಕೇಳಿಸಿಕೊಂಡ ಸತ್ಯ ಮಾರನೇಯ ದಿನ ಮದ್ಯಪಾನ ಮಾಡದೆಯೇ ಭಾರ್ಗವಿ ಬಳಿ ಹೋಗಿ ಸೀತಾಳಿಗೆ ಅವರ ಅತ್ತೆ ವಾಣಿಯ ಒಡವೆಗಳನ್ನು ಮರ್ಯಾದೆಯಿಂದ ಕೊಟ್ಟು ಬಿಡು. ಇಲ್ಲದಿದ್ದರೆ ನಿನ್ನ ಮಾನ ಹೋಗುತ್ತದೆ. ಇನ್ನು ಸ್ವಲ್ಪವೇ ಸ್ವಲ್ಪ ದಿನ ಸೀತಾ ಬರುತ್ತಾಳೆ. ನಿನ್ನ ಗಂಟಲಿನಿಂದ ಸಣ್ಣ ಶಬ್ಧವೂ ಬಾರದಂತೆ ಮಾಡುತ್ತಾಳೆ ಎಂದು ಎಚ್ಚರಿಕೆ ಕೊಡುತ್ತಾನೆ. ಅಲ್ಲದೇ, ತಾನು ಇನ್ನು ಮುಂದೆ ಮದ್ಯಪಾನ ಮಾಡಬಾರದು ಎಂದು ತೀರ್ಮಾನ ಮಾಡಿದ್ದೇನೆ. ಇನ್ನು ಎಲ್ಲವೂ ಈ ಮನೆಯಲ್ಲಿ ಬದಲಾಗುತ್ತಾ ಹೋಗುತ್ತದೆ ಎಂದು ಹೇಳುತ್ತಾನೆ. ಈ ಮಾತುಗಳು ಭಾರ್ಗವಿಗೆ ಇಷ್ಟವಾಗುವುದಿಲ್ಲ.

ಸತ್ಯನಿಗೆ ಭಾರ್ಗವಿ ಕೊಟ್ಟ ಕಷಾಯ ಯಾವುದು..?
ಸತ್ಯ ಕುಡಿಯುವುದನ್ನೇ ಬಿಟ್ಟು ಬಿಡುತ್ತಾನೆ ಎಂಬ ಮಾತು ಭಾರ್ಗವಿ ಕೈಯಲ್ಲಿ ಅರಗಿಸಿಕೊಳ್ಳಲು ಆಗುವುದಿಲ್ಲ. ಹೀಗಾಗಿ ಕಷಾಯವನ್ನು ಮಾಡುವ ಭಾರ್ಗವಿ ಅದಕ್ಕೆ ಮದ್ಯವನ್ನು ಮಿಕ್ಸ್ ಮಾಡಿ ಕೊಡುತ್ತಾಳೆ. ಸಾಧನಾಳಿಗೆ ಕೊಟ್ಟು ಸತ್ಯನಿಗೆ ಕೊಡು ಎನ್ನುತ್ತಾಳೆ. ಸಾಧನಾ ಕಷಾಯ ಕೊಟ್ಟಾಗ ಸತ್ಯ ಪ್ರಶ್ನೆ ಮಾಡುತ್ತಾನೆ. ಇದು ಯಾರು ಮಾಡಿದ್ದು ಎಂದು ಭಾರ್ಗವಿ ಮಾಡಿದ್ದು ಎಂದರೆ, ಕುಡಿಯುವುದಿಲ್ಲ ಎಂದು ಸಾಧನಾ ತಾನೇ ಮಾಡಿದ್ದು ಎಂದು ಸುಳ್ಳು ಹೇಳುತ್ತಾಳೆ. ಮತ್ತೆ ಸತ್ಯನಿಗೆ ಅಮಲು ಏರುತ್ತದೆ.
ಆರ್-ಪಿ ಜೊತೆಗೆ ಅಂಜಲಿ ಮದುವೆ...?
ಇತ್ತ ಅಂಜಲಿ ಬಹಳ ದಿನಗಳ ಬಳಿಕ ರುದ್ರಪ್ರತಾಪ್ ನನ್ನು ಭೇಟಿ ಮಾಡುತ್ತಾಳೆ. ರುದ್ರಪ್ರತಾಪ್ ಬೇಕಂತಲೇ ಎಮೋಷನಲ್ ಆಗಿ ಮಾತನಾಡುತ್ತಾನೆ. ಅಂಜಲಿ ತನ್ನ ಅಣ್ಣ ರಾಮನ ಎಂಗೇಜ್ ಮೆಂಟ್ ಇದ್ದು, ಅದಕ್ಕೆ ತಪ್ಪದೇ ನೀವು ಬರಬೇಕು ಎಂದು ಕರೆಯುತ್ತಾಳೆ. ಆರ್ ಪಿ ಆಗುವುದಿಲ್ಲ ಎಂದು ಹೇಳಲಾಗದೇ, ಬರುತ್ತೇನೆ ಎನ್ನುತ್ತಾನೆ. ಅಣ್ಣನ ಮದುವೆಯ ಬಳಿಕ ಎಲ್ಲರೂ ನನ್ನ ಹಿಂದೆ ಬೀಳುತ್ತಾರೆ. ನನ್ನ ಮದುವೆ ಬಗ್ಗೆ ಯೋಚಿಸುತ್ತಾರೆ. ಹಾಗಾಗಿ ನಾನು ನಿಮ್ಮನ್ನು ಪರಿಚಯ ಮಾಡಿಸಬೇಕು. ಆಗ ನಮ್ಮ ಮದುವೆ ಸುಲಭವಾಗಿ ಆಗುತ್ತದೆ ಎಂದು ಹೇಳುತ್ತಾಳೆ. ಆಗ ರುದ್ರಪ್ರತಾಪ್ ಸ್ವಲ್ಪ ದಿನ ಕಾಯಬೇಕು. ನಾನು ನನಗೆ ಎಂದು ಕೆಲಸ ಹುಡುಕಿಕೊಂಡ ಮೇಲೆ ನಿಮ್ಮ ಜೊತೆಗೆ ಮದುವೆ. ಇಲ್ಲದಿದ್ದರೆ, ನಿಮ್ಮ ಮನೆಯವರು ನನ್ನ ಬಗ್ಗೆ ಅಪಾರ್ಥ್ ಮಾಡಿಕೊಳ್ಳುತ್ತಾರೆ ಎಂದು ನೆಪ ಹೇಳುತ್ತಾನೆ.

ಸೀತಾ ಹುಟ್ಟು ಹಬ್ಬ ಸಂಭ್ರಮಿಸಿದ ರಾಮ್
ಸೀತಾ ಹುಟ್ಟುಹಬ್ಬವನ್ನು ಸೆಲಬ್ರೇಟ್ ಮಾಡಲು ರಾಮ್ ಮತ್ತು ಸಿಹಿ ಬಹಳ ಪ್ಲಾನ್ ಮಾಡುತ್ತಾರೆ. ಸೀತಾಳಿಗೆ ಇಷ್ಟವಿಲ್ಲದಿದ್ದರೂ ಕೂಡ ಕೇಕ್ ಕಟ್ ಮಾಡಿಸಬೇಕು ಎಂದು ಇಬ್ಬರೂ ಮಾತನಾಡಿಕೊಂಡಿದ್ದಾರೆ. ಮಿಡ್ ನೈಟ್ ನಲ್ಲೇ ಸೆಲಬ್ರೇಟ್ ಮಾಡಲು ರಾಮ್ ಮನೆಯಲ್ಲಿ ತಾನೇ ಕಪ್ ಕೇಕ್ ಅನ್ನು ಕೂಡ ತಯಾರಿಸಿದ್ದಾನೆ. ವಠಾರದ ಬಳಿ ಹೋಗಿ ಮಧ್ಯ ರಾತ್ರಿಯಲ್ಲಿ ಸೀತಾಳಿಗೆ ಫೋನ್ ಮಾಡಿ ಹೊರಗೆ ಕರೆಯುತ್ತಾನೆ. ಕೇಕ್ ಕಟ್ ಮಾಡಿಸಿ ಖುಷಿ ಪಡುತ್ತಾನೆ.


Click it and Unblock the Notifications











