Seetharama; ಮನೆಯಿಂದ ಕಾಣೆಯಾದ ಸೀತಾ-ರಾಮ್ : ಪರಿಸ್ಥಿತಿಯ ಲಾಭ ಪಡೆದ ಭಾರ್ಗವಿ
ಸೀತಾರಾಮ ಧಾರಾವಾಹಿಯಲ್ಲಿ ಈಗಿನ ಸಂದರ್ಭವನ್ನು ಕಂಪ್ಲೀಟ್ ಆಗಿ ತನ ನ ಕೈವಶ ಮಾಡಿಕೊಳ್ಳಲು ಭಾರ್ಗವಿ ನಿರ್ಧರಿಸಿದ್ದಾಳೆ. ಈ ಮೂಲಕ ಎಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಳ್ಳುವುದೇ ಭಾರ್ಗವಿ ಉದ್ದೇಶವಾಗಿದೆ. ಸೂರಿ ತಾತ ಸೀತಾಳನ್ನು ಶ್ಯಾಮ್ ಹೇಳಿದ್ದರ ಬಗ್ಗೆ ಸ್ಪಷ್ಟನೆ ಕೇಳಿದ್ದು, ರಾಮ್ ಸೀತಾಳನ್ನು ರೂಮಿಗೆ ಕಳಿಸಿದ್ದಾನೆ. ಇದರಿಂದ ಸೂರಿಗೆ ನೇರವಾಗಿ ಸ್ಪಷ್ಟನೆ ಸಿಗದಂತಾಗಿದೆ. ಇಷ್ಟೆಲ್ಲಾ ಆದರೂ ಸೀತಾಳ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡಿರುವ ರಾಮ್, ಅವಳ ಪರ ನಿಂತಿದ್ದಾನೆ. ಸಿಹಿಯನ್ನು ನಮ್ಮ ಬಳಿಯೇ ಉಳಿಸಕೊಳ್ಳಲು ಹೋರಾಡೋಣ ಎಂದು ಹೇಳಿದ್ದಾನೆ.
ಪರಿಸ್ಥಿತಿಯ ಹಿಡಿತ ಸಾಧಿಸಿದ ಭಾರ್ಗವಿ
ಆದರೆ, ಸೂರಿಗೆ ಸ್ಪಷ್ಟನೆ ಸಿಗದ ಕಾರಣ ಪರಿಸ್ಥಿತಿಯನ್ನು ಭಾರ್ಗವಿ ತನ್ನ ಕೈವಶ ಮಾಡಿಕೊಂಡಿದ್ದಾಳೆ. ಸೂರಿ ಮಾವನ ಬಳಿ ಹೋಗಿ ತಾನು ಆರಿಸಿ, ರಾಮ್ ಗೆ ಮದುವೆ ಮಾಡಿಕೊಟ್ಟ ಹುಡುಗಿಗೆ ಇಂತಹದ್ದೊಂದು ಬ್ಯಾಗ್ರೌಂಡ್ ಇದೆ ಅಂತ ನಾನು ಖಂಡಿತವಾಗಿಯೂ ಊಹಿಸಿರಲಿಲ್ಲ. ಶ್ಯಾಮ್ ಮತ್ತು ಶಾಲಿನ೯ಇ ಬಂದ ಇವತ್ತು ಸಿಹಿ ಬೇಕು ಎಂದು ಕೇಳಿದಾಗಲೇ ನನಗೂ ಗೊತ್ತಾಗಿದ್ದು. ರಾಮ್ ಇಷ್ಟಪಟ್ಟ ಅನ್ನೋ ಒಂದೇ ಕಾರಣಕ್ಕೆ ನಅನು ಸೀತಾಳನ್ನು ಈ ಮನೆಗೆ ತಂದುಕೊಂಡೆ. ಆದರೆ, ನಾನು ಮಾಡಿದ ಇದೊಂದು ನಿರ್ಧಾರ ದೇಸಾಯಿ ಕುಟುಂಬದ ಮರಿಯಾದೆಗೆ ಸಮಸ್ಯೆಯನ್ನು ತಂದೊಡ್ಡಿದೆ. ನನ್ನನ್ನು ದಯವಿಟ್ಟು ಕ್ಷಮಿಸಿ ಮಾವ ಎಂದು ಮೊಸಳೆ ಕಣ್ಣೀರು ಹಾಕಿದ್ದಾಳೆ. ಭಾರ್ಗವಿ ಮಾತನ್ನು ನಂಬಿದ ಸೂರಿ ಈಗ ಸೀತಾಳನ್ನು ತಪ್ಪಾಗಿ ತಿಳಿದುಕೊಂಡಿದ್ದಾರೆ.

ಮನೆಯಿಂದ ಕಾಣೆಯಾಗಿರುವ ಸೀತಾ-ರಾಮ
ಸೀತಾಳಿಗೆ ಧೈರ್ಯ ತುಂಬಿರುವ ರಾಮ್, ತನ್ನ ಕುಟುಂಬದ ಜೊತೆಗೆ ನಿಲ್ಲುವುದಾಗಿ ಭರವಸೆ ನೀಡಿದ್ದಾನೆ. ಬೆಳಗ್ಗೆ ಎದ್ದ ಕೂಡಲೇ ಸೀತಾ, ರಾಮ ಮತ್ತು ಸಿಹಿ ಮೂವರು ಕೂಡ ಕಾಣೆಯಾಗಿದ್ದಾರೆ. ಸಾಧನಾ ಮನೆಯೆಲ್ಲಾ ಹುಡುಕಾಡಿದ್ದು, ತಿಂಡಿಗೂ ಬಂದಿಲ್ಲ ಎಂದು ಗಾಬರಿಯಾಗಿ ಭಾರ್ಗವಿ ಬಳಿ ಹೇಳಿದ್ದಾಳೆ. ಆದರೆ, ಭಾರ್ಗವಿ ರಾಮ್ ನನ್ನು ಕರೆದುಕೊಂಡು ಸೀತಾಳೇ ಎಲ್ಲಿಗೋ ಹೋಗಿದ್ದಾಳೆ. ಮನೆಯಲ್ಲಿ ಯಾರಿಗೂ ಹೇಳದೇ ಹೋಗಿರುವುದು ತಪ್ಪು ಎಂಬಂತೆ ಸೂರಿ ಮಾವನ ಬಳಿ ಹೇಳಿದ್ದು, ಭಾರ್ಗವಿಯ ಮಾತುಗಳೆಲ್ಲಾ ಸೂರಿ ಮನದಲ್ಲಿ ಸೀತಾ ತಪ್ಪು ಎಂದು ತೋರಿಸುವಂತೆ ಮಾಡಿದೆ.
ಲೀಗಲ್ ನೋಟಿಸ್ ಕಳಿಸಿರುವ ಶ್ಯಾಮ್
ಇದೇ ಸಂದರ್ಭದಲ್ಲೇ ಶ್ಯಾಮ್ ಲೀಗಲ್ ನೋಟಿಸ್ ಅನ್ನು ಕಳಿಸಿದ್ದಾನೆ. ಸಿಹಿ ತಮಗೆ ಸೇರಿದ್ದಾಳೆ. ಆಕೆಯನ್ನು ಆದಷ್ಟು ಬೇಗನೆ ತಮಗೆ ಹಿಂದಿರುಗಿಸಬೇಕು. ಇಲ್ಲದೇ ಹೋದಲ್ಲಿ ಕೋರ್ಟ್ ಗೆ ಆಗಮಿಸುವಂತೆ ತಿಳಿಸಲಾಗಿದೆ. ಇದನ್ನು ನೋಡಿದ ಭಾರ್ಗವಿ ಫುಲ್ ಖುಷಿಯಾಗಿದ್ದಾಳೆ. ಸೂರಿ ಮಾವನಿಗೆ ನೋಟಿಸ್ ಬಗ್ಗೆ ಹೇಳಿದ ಸೂರಿ ಅಶೋಕನಿಗೆ ಫೋನ್ ಮಾಡಿ, ಏನಾದರೂ ಮಾಡು ನನ್ನ ಮೊಮ್ಮಗ ರಾಮನನ್ನು ನನ್ನ ಮುಂದೆ ಕರೆದುಕೊಂಡು ಬಂದು ನಿಲ್ಲಿಸು ಎಂದು ಹೇಳಿದ್ದಾನೆ. ಈ ಮಾತನ್ನು ಕೇಳಿದ ಅಶೋಕ್ ಗೆ ಏನಾಗಿರಬಹುದು ಎಂಬ ಅನುಮಾನ ಶುರುವಾಗಿದೆ.
ಬೇಕಂತಲೇ ಚಾಂದಿನಿ ತಲೆಕೆಡಿಸಿದ ಭಾರ್ಗವಿ
ಇನ್ನು ಭಾರ್ಗವಿ ಈ ಸಂದರ್ಭವನ್ನು ಬಳಸಿಕೊಳ್ಳಲೇಬೇಕು. ಆಸ್ತಿಯನ್ನು ತನ್ನ ಪಾಲಿಗೆ ಮಾಡಿಕೊಳ್ಳಬೇಕು ಎಂದು ಚಾಂದಿನಿಗೆ ಫೋನ್ ಮಾಡಿದ್ದಾಳೆ. ನೀನು ಈ ಮನೆಯ ಸೊಸೆಯಾಗಲು ಇದೇ ಸರಿಯಾದ ಸಮಯ. ಸಿಹಿ ನಿಮ್ಮ ಮನೆಗೆ ಬಂದ ಮೇಲೆ ರಾಮ್ ನಿಮ್ಮ ಮನೆಗೆ ಬಂದೇ ಬರುತ್ತಾನೆ. ಆಗ ಅವನನ್ನು ಒಲಿಸಿಕೊಂಡು ಮದುವೆಯಾಗು ಎಂದು ಹೇಳಿಕೊಟ್ಟಿದ್ದಾಳೆ. ಈಗ ಚಾಂದಿನಿ ಶಾಲಿನಿ ಮತ್ತು ಶ್ಯಾಮ್ ಗೆ ಸಿಹಿಯನ್ನು ಮನೆಗೆ ಹೋಗಿ ಕರೆದುಕೊಂಡು ಬನ್ನಿ ಎಂದು ಬಲವಂತ ಮಾಡಿದ್ದಾಳೆ.


Click it and Unblock the Notifications











