Seetharama ; ಅಮ್ಮನ ಕಂಡ ಸುಬ್ಬಿ : ಸಿಹಿ ಸಾವಿನ ರಹಸ್ಯ ತಿಳಿದ ಅಶೋಕ್..!
ಸೀತಾರಾಮ ಧಾರಾವಾಹಿಯಲ್ಲಿ ಭಾರ್ಗವಿಯ ಆಟಗಳನ್ನು ಅರ್ಥ ಮಾಡಿಕೊಳ್ಳುತ್ತಿರುವ ಸಿಹಿ, ಯಾರ ಬಳಿಯೂ ಸತ್ಯ ಹೇಳಲಾಗದೇ ಒದ್ದಾಡುವಂತಾಗಿದೆ. ಆತ್ಮವಾಗಿ ಅಮ್ಮನ ಹಿಂದೆ ಮುಂದೆಯೇ ಸುತ್ತಾಡುತ್ತಿರುವ ಸಿಹಿಗೆ ಭಾರ್ಗವಿ ಮಾಡುತ್ತಿರುವ ಪ್ಲಾನ್ ಗಳೆಲ್ಲವೂ ಸುಲಭವಾಗಿ ಗೊತ್ತಾಗುತ್ತಿದೆ. ಆದರೆ, ಅವಳ ಮಾತುಗಳು ಬೇರೆಯವರಿಗೆ ಯಾಕೆ ಕೇಳುತ್ತಿಲ್ಲ ಎಂಬ ಗೊಂದಲ ಇನ್ನೂ ಅವಳಲ್ಲಿದೆ.ಸೀತಾ ಮತ್ತು ರಾಮ ಮಾತನಾಡುವ ಪ್ರತೀ ಮಾತುಗಳಿಗೆ ಸಿಹಿ ಉತ್ತರಿಸುತ್ತಲೇ ಇರುತ್ತಾಳೆ. ಆದರೆ, ವಿಪರ್ಯಾಸ ಸಿಹಿ ತಮ್ಮ ಸುತ್ತಾ ಇದ್ದಾಳೆ ಎಂಬುದೇ ಯಾರಿಗೂ ಗೊತ್ತಿಲ್ಲ.
ಸಿಹಿ ಸಾವಿಗೆ ಭಾರ್ಗವಿ ಕಾರಣ
ಅಶೋಕ್ ಭಾರ್ಗವಿಯ ನಡವಳಿಕೆ ಹಾಗೂ ಅವಳ ಮಾತುಗಳನ್ನು ಕಂಡು ಶಾಕ್ ಆಗಿದ್ದಾನೆ. ಸೂರಿ ತಾತನ ಬಳಿ ರಾಮ್ ಗೆ ಸೀತಾಳಿಂದ ಸಮಸ್ಯೆ ಆಗುತ್ತಿದೆ. ಅವಳನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು ಎಂದು ಮಾತನಾಡಿದ್ದನ್ನು ಅಶೋಕ್ ಕೇಳಿಸಿಕೊಳ್ಳುತ್ತಾನೆ. ಅಲ್ಲದೇ, ಸೀತಾಳಿಗೆ ನಿನ್ನ ಮಗಳು ಸಿಹಿ ಸತ್ತಿದ್ದಾಳೆ ಎಂಬ ವಿಚಾರವನ್ನು ಹೇಳಲು ಪ್ರಯತ್ನಿಸುತ್ತಾಳೆ. ಇದನ್ನು ಅಶೋಕ್ ಪ್ರಶ್ನೆ ಮಾಡಿದ್ದಕ್ಕೆ, ಹೆಚ್ಚು ಪ್ರಶ್ನೆ ಮಾಡಬೇಡ ಕೊನೆಗೆ ನಿನ್ನ ಸ್ನೇಹಿತನೇ ಗುರಿಯಾಗುತ್ತಾನೆ ಎಂದು ಹೇಳುತ್ತಾಳೆ. ಈ ಮಾತಿನಿಂದ ಅಶೋಕ್ ಸಿಹಿ ಸಾವಿಗೆ ಭಾರ್ಗವಿಯೇ ಕಾರಣ ಎಂಬ ಸತ್ಯ ಗೊತ್ತಾಗಿದೆ.

ಸತ್ಯ ತಿಳಿದು ಶಾಕ್ ಆದ ಅಶೋಕ್
ಭಾರ್ಗವಿಯ ಮಾತಿನ ಅರ್ಥವಾಗಿ ಅಶೋಕ್ ನಿಜಕ್ಕು ಶಾಕ್ ಆಗಿದ್ದಾನೆ. ಈ ವಿಚಾರದ ಬಗ್ಗೆ ಪ್ರಿಯಾಳ ಬಳಿ ಹೇಳಿಕೊಂಡಿದ್ದು, ಸಿಹಿಯ ಸಾವಿಗೆ ಭಾರ್ಗವಿ ಕಾರಣಳಾಗಿದ್ದು, ಯಾಕೆ ಹೀಗೆ ಮಾಡಿರಬಹುದು ಎಂಬ ಪ್ರಶ್ನೆ ಮಾಡಿಕೊಂಡಿದ್ದಾನೆ. ಅಶೋಕ್ ಭಾರ್ಗವಿಯ ಬಣ್ಣವನ್ನು ಬಯಲು ಮಾಡುತ್ತಾನಾ..? ಅವನ ಜೊತೆಗೆ ಸಿಹಿ ಕೂಡ ಭಾರ್ಗವಿಯ ಆಟವನ್ನು ಬಯಲು ಮಾಡಲು ಅಶೋಕ್ ಜೊತೆಗೆ ಕೈ ಜೋಡಿಸುತ್ತಾಳಾ ಎಂಬ ಕುತೂಹಲ ಮೂಡಿದೆ.
ತಾಯಿಯನ್ನು ಕಂಡ ಸುಬ್ಬಿ
ಸುಬ್ಬಿ ಕಳ್ಳತನ ಮಾಡಿ ಬದುಕುತ್ತಿದ್ದರೂ ಕೂಡ ಅವಳಲ್ಲಿ ಬಹಳ ಒಳ್ಳೆಯ ಗುಣಗಳಿವೆ. ಕೆಟ್ಟದು, ಮೋಸ, ಸುಳ್ಳುಗಳ ಬಗ್ಗೆ ಬಹಳಷ್ಟು ಎಚ್ಚರವಾಗಿದ್ದಾಲೆ. ತಂದೆ-ತಾಯಿ ಇಲ್ಲದೇ ಇದ್ದರೂ ಕೂಡ ಸುಬ್ಬಿ ಪದೇ ಪದೇ ಅಮ್ಮ ಹೇಳುತ್ತಾಳೆ ಎಂದು ಹೇಳುತ್ತಿರುತ್ತಾಳೆ. ಸುಬ್ಬಿಗೆ ತನ್ನ ತಂದೆ-ತಾಯಿ ಬಂದು ಇಂದಲ್ಲ ನಾಳೆ ಕರೆದುಕೊಂಡು ಹೋಗುತ್ತಾರೆ ಎಂಬ ಬಲವಾದ ನಂಬಿಕೆ ಇದೆ. ತಮ್ಮ ಜಾಗವನ್ನು ಉಳಿಸಿಕೊಳ್ಳುವ ಸಲುವಾಗಿ ಹಣ ಕದಿಯಲು ಈಗ ರಾಮ್ ಕಾರನ್ನು ಆರಿಸಿಕೊಂಡಿದ್ದಾರೆ. ರಾಮ್ ಕಾರಿನಲ್ಲಿ ಎಲ್ಲರೂ ಬೆಲೆಬಾಳುವ ವಸ್ತು ಹಾಗೂ ಹಣವನ್ನು ಹುಡುಕುತ್ತಿರುತ್ತಾರೆ. ಆದರೆ, ಸುಬ್ಬಿ ಸೀತಾಳ ಫೋಟೋ ನೋಡುತ್ತಾ ಕಳೆದು ಹೋಗುತ್ತಾಳೆ. ಅಲ್ಲದೇ, ಸೀತಾ ಆಸ್ಪತ್ರೆ ಒಳಗೆ ಹೋಗುವಾಗ ಅವಳನ್ನು ಕಂಡು ತನ್ನನ್ನು ತಾನು ಮರೆತು ಬಿಟ್ಟಿರುತ್ತಾಳೆ.
ಅಮ್ಮನ ಮಡಿಲು ಸೇರುತ್ತಾಳಾ ಸುಬ್ಬಿ ?
ರಾಮ್ ಕಾರಿನಲ್ಲಿ ಕಂತೆ ಕಂತೆ ಹಣ ಸಿಕ್ಕಿದ್ದು, ಸುಬ್ಬಿ ಕಡೆಯವರೆಲ್ಲಾ ಖುಷಿ ಪಡುತ್ತಾರೆ. ಆದರೆ, ಸುಬ್ಬಿ ಸೀತಾಳ ಫೋಟೋವನ್ನು ತೆಗೆದುಕೊಂಡು ಬರುತ್ತಾಳೆ. ಈ ಫೋಟೋ ನೋಡಿದರೆ ತನಗೆ ಅಮ್ಮನ ನೆನಪಾಗುತ್ತಿದೆ ಎಂದು ಹೇಳುತ್ತಾಳೆ. ಸುಬ್ಬಿಯನ್ನು ಸಾಕುತ್ತಿರುವಾತ ಸೀತಾ ಫೋಟೋ ಕಂಡು ಶಾಕ್ ಆಗಿದ್ದಾನೆ. ಯಾಕೆಂದರೆ, ಶಾಲಿನಿಯಿಂದ ಹಣ ಪಡೆದು ಸೀತಾಳ ಮಗುವನ್ನು ಕದ್ದು ತೆಗೆದುಕೊಂಡು ಬಂದಿದ್ದ. ಅದೇ ಮಗುವೇ ಸುಬ್ಬಿ. ಹೀಗಾಗಿ ಸೀತಾಳ ಫೋಟೋವನ್ನು ಸುಬ್ಬಿ ಕೈಯಲ್ಲಿ ಕಂಡು ಶಾಕ್ ಆಗುತ್ತಾನೆ. ಸುಬ್ಬಿ ಸೀತಾ ಮಡಿಲು ಸೇರುತ್ತಾಳಾ..? ಅದು ಹೇಗೆ ಸಾಧ್ಯವಾಗುತ್ತದೆ ಎಂಬುದು ಕಾದು ನೋಡಬೇಕಿದೆ.


Click it and Unblock the Notifications











