Seetharama ; ಸುಬ್ಬಿಯನ್ನು ಹುಡುಕಲು ಮುಂದಾದ ರಾಮ್ : ಸೀತಾ ಮಡಿಲು ಸೇರಲು ಬಿಡುತ್ತಾಳಾ ಭಾರ್ಗವಿ..?
ಸೀತಾರಾಮ ಧಾರಾವಾಹಿಯಲ್ಲಿ ರಾಮ್ ಮನೆಯ ಸ್ಥಿತಿಯನ್ನು ಕಂಡು ಬೇಸರ ಮಾಡಿಕೊಂಡಿದ್ದಾನೆ. ತನಗೆ ಯಾಕೆ ಇಷ್ಟೆಲ್ಲಾ ಸಮಸ್ಯೆ ಆಗುತ್ತಿದೆ ಎಂದು ನೊಂದುಕೊಂಡಿದ್ದಾನೆ. ಬಹಳ ಕಾಲದ ಬಳಿಕ ಚಿಕ್ಕಿ ಮಡಲಲ್ಲಿ ಮಲಗಿ ಕಣ್ಣೀರು ಹಾಕಿದ್ದಾನೆ. ರಾಮ್ ಮೇಲೆ ಮನದಲ್ಲೇ ಧ್ವೇಷವನ್ನು ಹೊಂದಿರುವ ಭಾರ್ಗವಿ ಸಮಾಧಾನ ಮಾಡುತ್ತಾಳೆ.ಎಲ್ಲವೂ ಸರಿ ಹೋಗುತ್ತದೆ. ಇದೆಲ್ಲಾ ಹೆಚ್ಚಿಗೆ ದಿನ ಇರುವುದಿಲ್ಲ ಎಂದು ಸಮಾಧಾನ ಮಾಡಿದ್ದಾಳೆ. ಬಳಿಕ ಸೂರಿ ಬಳಿ ಹೋಗಿ ಹೀಗೆ ಆದರೆ ರಾಮ್ ಬದುಕು ಹಾಳಾಗುತ್ತದೆ ಎಂದು ಹೇಳಿದ್ದಾಳೆ.
ಸುಬ್ಬಿ ಬಗ್ಗೆ ಆಲೋಚಿಸಿದ ರಾಮ್
ನಾವು ಸೀತಾಳನ್ನು ಆಸ್ಪತ್ರೆಗೆ ಸೇರಿಸುವುದೇ ಸರಿ. ಇಲ್ಲದೇ ಹೋದರೆ ರಾಮ್ ಬದುಕು ಹಾಳಾಗುತ್ತದೆ. ಸೀತಾ ಸರಿ ಹೋಗದೇ ಈ ಮನೆಯಲ್ಲಿ ಯಾವುದೂ ಸರಿ ಆಗುವುದಿಲ್ಲ ಎಂದು ತಲೆಗೆ ತುಂಬಿದ್ದಾಳೆ. ಇತ್ತ ರಾಮ್ ಮತ್ತು ಅಶೋಕ್ ಮಾತನಾಡಿದ್ದಾರೆ. ಮನೆಗೆ ಕರೆತಂದ ಮಗುವನ್ನು ಸೀತಾ ಒಪ್ಪುತ್ತಾಳೆ ಎಂದುಕೊಂಡಿದ್ದೆವು. ಆದರೆ ಒಪ್ಪಲಿಲ್ಲ. ಈಗ ಸೀತಾ ಹೀಗೆ ಆದರೆ ಮುಂದೇನು ಮಾಡುವುದು ಎಂದು ಇಬ್ಬರೂ ಮಾತನಾಡಿಕೊಂಡಿದ್ದಾರೆ. ಆಗ ರಾಮ್ ತಲೆಗೆ ಸುಬ್ಬಿ ಬಂದಿದ್ದಾಳೆ. ಸೀತಾ ಪದೇ ಪದೇ ಯಾವುದೋ ಬೇರೆ ಮಗುವನ್ನು ನೋಡಿ ಇದು ತನ್ನದೇ ಮಗು ಎಂದು ಹೇಳುತ್ತಿರುತ್ತಾಳೆ. ಮೊನ್ನೆ ಸಿಹಿ ಸ್ಕೂಲ್ ನಲ್ಲೂ ಮಗುವೊಂದನ್ನು ನೋಡಿ ಇವಳೇ ಸಿಹಿ ಎಂದಳು ನಾನೇ ಗಮನ ಕೊಡಲಿಲ್ಲ ಎಂದು ರಾಮ್ ಹೇಳುತ್ತಾನೆ.

ಸುಬ್ಬಿಯನ್ನು ಕರೆತರಲು ತೀರ್ಮಾನ
ರಾಮ್ ಹೇಳಿದ ಮಾತನ್ನು ಕೇಳಿದ ಅಶೋಕ್ ಆ ಮಗುವನ್ನು ಮನೆಗೆ ಕರೆದುಕೊಂಡು ಬಂದರೆ ಸೀತಾ ಸರಿ ಹೋಗಬಹುದು ಎಂದು ಹೇಳುತ್ತಾನೆ. ಆಗ ರಾಮ್ ಆ ಮಗುವನ್ನು ಯಾವುದೋ ಸ್ಲಂ ಬಳಿ ತಾನೇ ಡ್ರಾಪ್ ಮಾಡಿರುವುದಾಗಿ ಹೇಳುತ್ತಾನೆ. ಅಶೋಕ್ ಈಗಲೇ ನಾವು ಆ ಮಗುವನ್ನು ಹುಡುಕಿಕೊಂಡು ಬರೋಣ ಎಂದು ಹೇಳುತ್ತಾನೆ. ಸರಿ ಬೆಳಗ್ಗೆಯೇ ಹೋಗೋಣ ಎಂದು ರಾಮ್ ಹೇಳಿದ್ದು, ಸೀತಾಳಿಗೆ ನಿನಗೆ ನಾಳೆ ಏನೋ ಹೇಳಬೇಕು ಎಂದು ಹೇಳಿ ವಿಚಾರವನ್ನು ಸೀಕ್ರೆಟ್ ಆಗಿ ಇಟ್ಟಿದ್ದಾನೆ.
ಸುಬ್ಬಿಯನ್ನು ಮನೆಗೆ ಬಾ ಎಂದು ಕರೆದ ಸಿಹಿ
ಇತ್ತ ಸುಬ್ಬಿ ತನ್ನ ತಾಯಿಯನ್ನು ಮಿಸ್ ಮಾಡಿಕೊಂಡು ನಿಂತಿರುವಾಗ ಸಿಹಿ ಬಂದು ಮಾತನಾಡಿಸುತ್ತಾಳೆ. ನನ್ನ ಅಮ್ಮ ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಆದರೆ, ನನಗೆ ಆ ಅದೃಷ್ಟ ಇಲ್ಲ. ನೀನು ನಮ್ಮ ಮನೆಗೆ ಬಾ. ನಿನಗೆ ಸೀತಮ್ಮ ತುಂಬಾ ಪ್ರೀತಿ ಮಾಡುತ್ತಾಳೆ ಎಂದು ಕರೆಯುತ್ತಾಳೆ. ಸುಬ್ಬಿಗೆ ಸಿಹಿ ಕರೆದಾಗ ಖುಷಿಯಾಗುತ್ತದೆ. ಆದರೆ ರಾಮ್ ನನ್ನು ನೆನೆದು ಬರೋದಿಲ್ಲ ಎಂದಿದ್ದಾಳೆ. ಸೀತಮ್ಮನನ್ನೆ ನನ್ನ ಮನೆಗೆ ಕರೆದುಕೊಂಡು ಬಾ ಎಂದಿದ್ದಾಳೆ. ಆದರೆ, ಸಿಹಿ ಸುಬ್ಬಿಯನ್ನು ಕನ್ವಿನ್ಸ್ ಮಾಡಲು ಪ್ರಯತ್ನಿಸಿದ್ದಾಳೆ.
ಭಾರ್ಗವಿಯನ್ನು ಮೀರಿ ಮನೆ ಸೇರುತ್ತಾಳಾ ಸುಬ್ಬಿ..?
ಹಾಗೊಂದು ವೇಳೆ ಸುಬ್ಬಿ ಸಿಹಿ ಮಾತಿಗೆ ಒಪ್ಪಿ ಅಥವಾ ರಾಮ್ಗೆ ಕೈಗೆ ಸಿಕ್ಕಿ ಸೀತಾ ಮನೆಗೆ ಬಂದರೆ ಭಾರ್ಗವಿ ಅವಕಾಶ ಮಾಡಿಕೊಡುತ್ತಾಳಾ..? ಇಲ್ಲ ಸುಬ್ಬಿ ಕಥೆಯನ್ನೂ ಮುಗಿಸುತ್ತಾಳಾ ಎಂಬುದು ಕುತೂಹಲಕರವಾಗಿದೆ. ಹಾಗೇನಾದರೂ ಸುಬ್ಬಿ ಸೀತಾ ಮನೆಗೆ ಬಂದರೆ ತನ್ನ ಮಗಳು ಸಿಹಿಯ ಸಾವಿನ ಗುಟ್ಟು ರಟ್ಟಾಗುವುದು ಪಕ್ಕಾ. ಜೊತೆಗೆ ರಾಮ್ ಬದುಕಿನಲ್ಲಿ ಶತ್ರುವಾಗಿರುವ ಚಿಕ್ಕಿಯ ಬಣ್ಣ ಬಯಲಾಗುವುದು ನಿಶ್ಚಿತವಾಗಿದೆ. ಒಟ್ನಲ್ಲಿ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











