Seetha Rama ; ಭಾರ್ಗವಿಗೆ ವಾಣಿ ಕಾಟ : ಅಂಜಲಿಗೆ ಪ್ರೀತಿಯೇ ಉರುಳಾಗುತ್ತಾ..?
ಸೀತಾರಾಮ ಧಾರಾವಾಹಿಯಲ್ಲಿ ಸೀತಾಳ ಹುಟ್ಟುಹಬ್ಬ ಎಂದು ಸಿಹಿ ಈಗ ಅಮ್ಮನಂತೆ ಆರತಿ ಮಾಡಿ ದೃಷ್ಟಿ ಬೊಟ್ಟು ಇಟ್ಟು ವಿಶ್ ಕೂಡ ಮಾಡಿದ್ದಾಳೆ.ಸೀತಾ ಕೂಡ ಇತ್ತೀಚೆಗೆ ಖುಷಿಯಾಗಿದ್ದು, ಸಿಹಿ ಏನೇ ಮಾಡಿದರೂ ಬೈಯುತ್ತಿಲ್ಲ.ಸೀತಾ ಬದುಕಲ್ಲಿ ರಾಮ ಹೆಚ್ಚಿನ ಪಾತ್ರವಹಿಸಿದ್ದು ಸಾಕಷ್ಟು ಬದಲಾಗಿದ್ದಾಳೆ. ಸದಾ ತನ್ನ ಹೊಸ ಜೀವನ ಕಟ್ಟಿಕೊಳ್ಳುವ ಕನಸಿನಲ್ಲಿ ತೇಲಾಡುತ್ತಿದ್ದಾಳೆ. ಇನ್ನು ಸಿಹಿಗೆ ಈಗಲೂ ಸಣ್ಣ ಆತಂಕವಿದೆ. ಎಲ್ಲಿ ತಾನೂ ಅಮ್ಮನ ಮದುವೆಯ ಬಳಿಕ ಎಲ್ಲರಿಂದ ದೂರಾಗುವೆನೋ ಎಂಬ ಕೊರಗಿದೆ.
ಸೀತಾರಾಮನಿಗೆ ಮದುವೆಯ ಸಂಭ್ರಮ
ಈ ಬಗ್ಗೆ ಸಿಹಿ ಸೀತಾಳ ಬಳಿ ಪ್ರಶ್ನೆ ಮಾಡುತ್ತಾಳೆ. ಫ್ರೆಂಡ್ ಜೊತೆಗೆ ನಿನ್ನ ಮದುವೆಯಾದ ಬಳಿಕ ದೊಡ್ಡ ಮನೆಯಲ್ಲಿ ಮನೆ ತುಂಬಾ ಜನರಿರುತ್ತಾರೆ. ಆಗಲೂ ನನಗೆ ನೀನು ಇಷ್ಟೇ ಟೈಂ ಕೊಡುವುದಕ್ಕೆ ಆಗುತ್ತಾ ಎಂದು ಕೇಳುತ್ತಾಳೆ. ಅದಕ್ಕೆ ಸೀತಾ ಖಂಡಿತ ನನಗೆ ಮತ್ತೆ ರಾಮ್ ಇಬ್ಬರಿಗೂ ನೀನೇ ಮೊದಲು. ಆ ಮನೆಯಲ್ಲಿ ಜನರಿರುತ್ತಾರೆ ಹೌದು, ಆದರೂ ನಿನಗೆ ಸಿಗಬೇಕಾದ ಸಮಯವನ್ನು ಕೊಟ್ಟೆ ಕೊಡುತ್ತೇನೆ ಎಂದು ಭರವಸೆಯಿಂದ ಮಾತನಾಡುತ್ತಾಳೆ. ಮದುವೆಯಾದ ಮೇಲೂ ಹೀಗೆ ಇರಬಹುದು ಎಂಬುದು ಸೀತಾಳ ಆಲೋಚನೆ. ಆದರೆ, ಭಾರ್ಗವಿ ಯಾವೆಲ್ಲಾ ಬದಲಾವಣೆಗಳನ್ನು ಮಾಡುತ್ತಾಳೋ. ಅದಕ್ಕೆ ಸೀತಾ ಒಗ್ಗಿಕೊಂಡು ಹೋಗುತ್ತಾಳೋ ಅಥವಾ ತಪ್ಪು ಸರಿಗಳನ್ನು ತಾಳೆ ಹಾಕಿ ನ್ಯಾಯಕ್ಕೆ ಬೆಲೆತೆರುವಂತೆ ಮಾಡುತ್ತಾಳೋ ಗೊತ್ತಿಲ್ಲ.

ಮನೆಯಲ್ಲೇ ಇರುವ ಅಶೋಕ್
ಇನ್ನು ಅಶೋಕ್ ಮನೆಯಲ್ಲೇ ಉಳಿದುಕೊಂಡಿದ್ದಾನೆ. ಆಫೀಸಿಗೂ ಹೋಗದೇ, ರಾಮ್ ಕೈಗೂ ಸಿಗದೆ, ತನ್ನ ತಲೆಗೆ ಹೊಡೆದವರಾರು. ರುದ್ರಪ್ರತಾಪ್ ಈ ಕೆಲಸ ಮಾಡಿರಬಹುದಾ ಇಲ್ಲ ಚರಣ್ ಬೇಕಂತಲೇ ತನಗೆ ತೊಂದರೆ ಕೊಟ್ಟಿರಬಹುದಾ, ಭಾರ್ಗವಿ ಏನು ಪ್ಲಾನ್ ಮಾಡಿದ್ದಾನೆ ಎಂದು ಯೋಚಿಸುತ್ತಾ ತಲೆ ಕೆಡಿಸಿಕೊಂಡಿದ್ದಾನೆ. ಅಶೋಕ್ ಮನೆಯಲ್ಲೇ ಇರುವುದಕ್ಕೆ ಪ್ರೇಮಾ ಕೂಡ ಆತಂಕಗೊಂಡಿದ್ದಾಳೆ. ಅಶೋಕ್ ಮಾತುಗಳನ್ನು ಕದ್ದು ಕೇಳಿಸಿಕೊಳ್ಳಲು ಯತ್ನಿಸಿದ್ದಾಳೆ.
ಅಂಜಲಿ ಬಗ್ಗೆ ಪ್ರೇಮಾಳಿಗೆ ಅನುಮಾನ
ಅಂಜಲಿ ಅಂತೂ ಪ್ರೇಮಲೋಕದಲ್ಲಿ ತೇಲಾಡುತ್ತಿದ್ದಾಳೆ. ರಾಮು ಹೆಸರೇಳಿಕೊಂಡು ಬಂದಿರುವ ರುದ್ರ ಪ್ರತಾಪ್ ನನ್ನು ಒಳ್ಳೆಯವನು ಎಂದು ನಂಬಿರುವುದಲ್ಲದೇ, ಅವನ ಮಾತುಗಳನ್ನು ಸತ್ಯ ಎಂದು ತಿಳಿದು ಪ್ರೀತಿಸಲು ಕೂಡ ಶುರು ಮಾಡಿದ್ದಾಳೆ. ಮದುವೆಯಾಗಬೇಕು ಎಂಬ ಆಸೆಯನ್ನು ಹೊತ್ತುಕೊಂಡಿದ್ದು, ನಿತ್ಯ ಗಂಟೆ ಗಟ್ಟಲೆ ಆರ್ ಪಿ ಜೊತೆಗೆ ಫೋನ್ ನಲ್ಲಿ ಮಾತನಾಡುತ್ತಿರುತ್ತಾಳೆ. ಪ್ರೇಮಾ ಮನೆಯಲ್ಲಿ ಅಂಜಲಿ ಇದ್ದಾಗೆಲ್ಲಾ ಅವಳ ಮೇಲೋಂದು ಕಣ್ಣಿಟ್ಟಿದ್ದು, ಅಂಜಲಿ ಮಾತುಗಳನ್ನು ಕದ್ದು ಕೇಳಿಸಿಕೊಂಡಿದ್ದಾಳೆ. ಅಂಜಲಿ ಯಾರನ್ನೋ ಪ್ರೀತಿಸುತ್ತಿದ್ದಾಳೆ ಎಂದು ಅನುಮಾನಗೊಂಡಿದ್ದು, ಈ ಬಗ್ಗೆ ಪ್ರಿಯಾಳಿಗೂ ಹೇಳಿದ್ದಾಳೆ. ಆದರೆ ಪ್ರಿಯಾ ತಾಯಿ ಮಾತನ್ನು ನೆಗಲೆಕ್ಟ್ ಮಾಡಿದ್ದಾಳೆ.

ಭಾರ್ಗವಿ ಕನಸಿನಲ್ಲಿ ಕಾಡಿದ ವಾಣಿ
ಭಾರ್ಗವಿ ಹಗಲಲ್ಲಿ ಸೀತಾ ರಾಮನ ಮದುವೆಗೆ ತಯಾರಿ ನಡೆಸುತ್ತಿದ್ದು, ರಾತ್ರಿ ಮಲಗಿದಾಗ ಕನಸಿನಲ್ಲಿ ತಾನು ಮಾಡಿದ ತಪ್ಪುಗಳಿಂದ ನೋವು ಅನುಭವಿಸುತ್ತಿದ್ದಾಳೆ. ಇತ್ತೀಚೆಗೆ ಭಾರ್ಗವಿಗೆ ವಾಣಿ ಕನಸಿನಲ್ಲಿ ಬಂದು ಕಾಡುತ್ತಿದ್ದಾಳೆ. ನನ್ನ ಸೊಸೆ ಬರುತ್ತಾಳೆ. ನಿನಗೆ ತಕ್ಕ ಪಾಠ ಕಲಿಸುತ್ತಾಳೆ. ನನ್ನ ಬಳಿ ಕಿತ್ತುಕೊಂಡ ನನ್ನ ಆಸ್ತಿ ಒಡವೆಗಳನ್ನು ಸೀತಾ ಎಲ್ಲವನ್ನೂ ವಾಪಸ್ ತೆಗೆದುಕೊಳ್ಳುತ್ತಾಳೆ ಎಂಬ ಮಾತುಗಳು ಭಾರ್ಗವಿ ಕಿವಿಗೆ ಬೀಳುತ್ತಿದೆ. ಭಾರ್ಗವಿ ಕೈಯಲ್ಲಿ ಸತ್ಯವನ್ನು ಅರಗಿಸಿಕೊಳ್ಳಲಾಗದೇ, ಒದ್ದಾಡುತ್ತಿದ್ದಾಳೆ. ಭಾರ್ಗವಿ ನಿತ್ಯ ಕನಸಿನಲ್ಲಿ ವಾಣಿ ಬಗ್ಗೆಯೇ ಕನವರಿಸುತ್ತಾ ಕಣ್ಣೀರು ಹಾಕುತ್ತಿದ್ದಾಳೆ. ಬಹುಷಃ ಅವಳ ಆತ್ಮಸಾಕ್ಷಿ ಹೀಗೆಲ್ಲಾ ಮಾಡಿಸುತ್ತಿರಬಹುದು.


Click it and Unblock the Notifications











