Seetharama ; ಸೀತಾಳನ್ನು ಪರೀಕ್ಷೆ ಮಾಡಿದ ವೈದ್ಯರು ಕೊಟ್ಟ ಸಲಹೆ ಏನು..?
ಸೀತಾರಾಮ ಧಾರಾವಾಹಿಯಲ್ಲಿ ಭಾರ್ಗವಿ ಸೀತಾ ಮತ್ತು ಸಿಹಿಯನ್ನು ಸಾಯಿಸಿದರೆ, ತನ್ನ ಸಮಸ್ಯೆಗಳೆಲ್ಲಾ ತೀರಿ ಹೋಗುತ್ತೆ ಎಂದು ಪ್ಲ್ಯಾನ್ ಮಾಡಿದ್ದಳು. ದುರಾದೃಷ್ಟವಶಾತ್ ಸಿಹಿ ಮಾತ್ರ ಸಾವನ್ನಪ್ಪಿದ್ದು, ಸದ್ಯ ಸೀತಾ ಹುಚ್ಚಿಯಾಗಿದ್ದಾಳೆ. ಆದರೆ, ಭಾರ್ಗವಿಗೆ ಈ ಪರಿಸ್ಥಿತಿಯನ್ನು ನಿಭಾಯಿಸುವುದು ಕೊಂಚ ಕಷ್ಟವಾಗಿದೆ. ಸೀತಾಳ ಹುಚ್ಚು ದಿನ ದಿನಕ್ಕೂ ಹೆಚ್ಚಾಗುತ್ತಿದೆ. ಗೊಂಬೆಯನ್ನು ಹಿಡಿದು ತೀರಾ ಎಮೋಷನಲ್ ಆಗುತ್ತಿದ್ದಾಳೆ. ಸೀತಾಳ ನಡವಳಿಕೆ ಮನೆಯವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ರುದ್ರಪ್ರತಾಪ್ ಜೊತೆಗೆ ಶಕುಂತಲಾ ಮಾತು
ಶಕುಂತಲಾಳಿಗೆ ರುದ್ರಪ್ರತಾಪ್ ಫೋನ್ ಮಾಡುತ್ತಾನೆ. ಸಿಹಿಯನ್ನು ಕೊಂದಿದ್ದಕ್ಕೆ ತನಗೆ ಬರಬೇಕಿದ್ದ ಹಣ ಬಂದಿಲ್ಲ. ಅಡ್ವಾನ್ಸ್ ಹಣ ಸಾಲೋದಿಲ್ಲ ಎಂದು ಕೇಳುತ್ತಾನೆ. ಅದಕ್ಕೆ ಭಾರ್ಗವಿ ಈಗ ಸಿಹಿಯ ಆಕ್ಸಿಡೆಂಟ್ ವಿಚಾರದ ಹಿಂದೆ ವ್ಯಕ್ತಿಯೊಬ್ಬ ಬಿದ್ದಿದ್ದಾನೆ ಎಂದು ಅಶೋಕ್ ಬಗ್ಗೆ ಹೇಳುತ್ತಾಳೆ. ಅದಕ್ಕೆ ರುದ್ರಪ್ರತಾಪ್ ಬೇಕಿದ್ದರೆ ಆ ವ್ಯಕ್ತಿಯನ್ನು ಕೂಡ ಕೊಲ್ಲೋಣ ಎಂದು ಹೇಳುತ್ತಾನೆ. ಅದಕ್ಕೂ ಮುನ್ನ ತನಗೆ ಸೇರಬೇಕಿರುವ ಹಣವನ್ನು ತಲುಪಿಸಿ ಎಂದು ಕೇಳುತ್ತಾನೆ. ಭಾರ್ಗವಿ ಸದ್ಯ ಅಶೋಕ್ ವಿಚಾರದಲ್ಲಿ ತಲೆಕೆಡಿಸಿಕೊಂಡಿದ್ದಾಳೆ. ಸೀತಾ ಬಳಿ ಸಿಹಿ ಸತ್ಯ ಹೇಳಿ ಸತ್ತಿದ್ದರೆ, ತನಗೆ ಅಪಾಯ ಎಂಬುದಂತೂ ಆಕೆಗೆ ಗೊತ್ತಿದೆ.

ಸ್ನೇಹಿತನ ಬದುಕಿನ ಬಗ್ಗೆ ಅಶೋಕ್ ಬೇಸರ
ಇಷ್ಟು ದಿನ ರಾಮ್ ಬದುಕಿನಿಂದ ಅಶೋಕ್ ದೂರ ಉಳಿದಿದ್ದ. ಪ್ರಿಯಾಳಿಗೆ ಬ್ರೆಸ್ಟ್ ಕ್ಯಾನ್ಸರ್ ಇದೆ. ಅದರ ಟ್ರೀಟ್ ಮೆಂಟ್ ಹೆಸರಲ್ಲಿ ರಾಮ್ ನಿಂದ ದೂರ ಉಳಿದಿದ್ದ. ಈಗ ಮತ್ತೆ ತನ್ನ ಸಮಸ್ಯೆಗಳನ್ನು ಬಗೆಹರಿಸಿಕೊಂಡು ರಾಮ್ ಜೊತೆಗೆ ಕೈ ಜೋಡಿಸಲು ಮುಂದಾಗಿದ್ದಾನೆ. ಮನೆಗೆ ಬಂದ ಮೊದಲ ದಿನವೇ ಸಿಹಿಯ ಸಾವು ಸಹಜವಲ್ಲ. ಅದು ಕೊಲೆಯಾಗಿದ್ದು, ಭಾರ್ಗವಿಯೇ ಇದಕ್ಕೆ ಕಾರಣ ಎಂಬ ಸತ್ಯವನ್ನು ಕೂಡ ಅರ್ಥ ಮಾಡಿಕೊಂಡಿದ್ದಾನೆ. ಅಲ್ಲದೇ, ಸಿಹಿಯ ಸ್ಮರಣಾರ್ಥ ಕಾರ್ಯಕ್ರಮವನ್ನು ನಡೆಸಲು ಭಾರ್ಗವಿ ಪ್ಲ್ಯಾನ್ ಮಾಡಿದ್ದು, ಇದರಿಂದ ಸೀತಾ ಮನಸ್ಸಿಗೆ ಘಾಸಿಯಾಗುತ್ತದೆ ಬೇಡ ಎಂದು ಹೇಳಿದ್ದಾನೆ. ಭಾರ್ಗವಿಗೆ ಅಶೋಕ್ ಮಧ್ಯೆ ಬಂದಿದ್ದು, ಕೊಂಚವೂ ಇಷ್ಟವಾಗುವುದಿಲ್ಲ.
ಹಣ ಸಿಕ್ಕ ಖುಷಿಯಲ್ಲಿ ಸುಬ್ಬಿ ಮನೆಯವರು
ಇತ್ತ ಸುಬ್ಬಿ ಮನೆಯವರೆಲ್ಲಾ ಹಣ ಸಿಕ್ಕ ಖುಷಿಯಲ್ಲಿದ್ದಾರೆ. ಈ ಹಣವನ್ನು ಹೇಗಾದರೂ ಮಾಡಿ ಆ ವ್ಯಕ್ತಿಗೆ ಕೊಟ್ಟು ತಮ್ಮ ಮನೆಯನ್ನು ಉಳಿಸಿಕೊಳ್ಳಬೇಕು ಎಂದು ನೆಮ್ಮದಿಯಾಗಿದ್ದಾರೆ. ಆದರೆ, ಸುಬ್ಬಿ ಮಾತ್ರ ತನ್ನದೇ ಲೋಕದಲ್ಲಿ ಮುಳುಗಿ ಹೋಗಿದ್ದಾಳೆ. ಸೀತಾಳ ಫೋಟೋವನ್ನು ನೋಡುತ್ತಾ ಕಳೆದು ಹೋಗಿದ್ದಾಳೆ. ಸುಬ್ಬಿ ಪದೇ ಪದೇ ತನ್ನ ತಾಯಿ ಬಗ್ಗೆ ಮಾತನಾಡುತ್ತಿರುವುದು ಆತಂಕ ಸೃಷ್ಟಿಸಿದ್ದರೂ, ಸತ್ಯ ತಿಳಿಯದವರು ಸುಮ್ಮನಿದ್ದರೆ, ಸುಬ್ಬಿಯನ್ನು ಕರೆದುಕೊಂಡ ಬಂದವನಿಗೆ ಚಿಂತೆ ಶುರುವಾಗಿದೆ.
ವೈದ್ಯರ ಮಾತಿಗೆ ರಾಮ್ ಶಾಕ್
ಇನ್ನು ಸೀತಾಳನ್ನು ರಾಮ್ ವೈದ್ಯರ ಬಳಿ ತೋರಿಸಿದ್ದಾನೆ. ಸೀತಾ ಗೊಂಬೆಯನ್ನು ಹಿಡಿದು ನನ್ನ ಮಗಳಿಗೆ ಏನಾಗಿದೆ ನೋಡಿ. ಅವಳ ಆರೋಗ್ಯದಲ್ಲಿ ಸಮಸ್ಯೆ ಇದೆಯಾ ಎಂದು ಆತಂಕದಲ್ಲಿ ಪ್ರಶ್ನೆ ಮಾಡುತ್ತಾಳೆ. ವೈದ್ಯರು ಸೀತಾ ನಡವಳಿಕೆಯನ್ನು ಕಂಡು ಗಾಬರಿಯಾಗುತ್ತಾರೆ. ಗೊಂಬೆಯನ್ನು ಪರೀಕ್ಷೆ ಮಾಡಿ, ನಿಮ್ಮ ಮಗಳು ಆರೋಗ್ಯವಾಗಿದ್ದಾಳೆ ಎಂದು ಹೇಳುತ್ತಾರೆ. ಸೀತಾಳ ಜೊತೆಗೆ ಮಾತನಾಡಿದ ಬಳಿಕ ರಾಮ್ ಗೆ ಸದ್ಯ ಸಿಹಿ ಸಾವನ್ನಪ್ಪಿರುವ ವಿಚಾರವನ್ನು ಸೀತಾಳಿಗೆ ತಿಳಿಸಬೇಡಿ. ಸೀತಾ ಬದುಕಿನಲ್ಲಿ ಮತ್ತೆ ಸಿಹಿ ಬಂದರೆ ಮಾತ್ರವೇ ಅವಳು ಸರಿ ಹೋಗುತ್ತಾಳೆ ಎಂಬ ಮಾತನ್ನು ಹೇಳುತ್ತಾರೆ. ಈ ಮಾತು ರಾಮ್ ಗೆ ಶಾಕ್ ಆಗುವಂತೆ ಮಾಡಿದೆ. ಮುಂದೇನು ಮಾಡುವುದು ಎಂಬುದು ತಿಳಿಯದೆಯೇ ಬ್ಲ್ಯಾಂಕ್ ಆಗಿದ್ದಾನೆ.


Click it and Unblock the Notifications











