Seetha Rama ;ರುದ್ರತಾಪ್ ಗೆ ಥಳಿಸಿದ ರಾಮ್-ಅಶೋಕ್; ಸೀತಾರಾಮರ ಮದುವೆಗೆ ಇನ್ನಿಲ್ಲ ಅಡ್ಡಿ ಆತಂಕ..!
ಸೀತಾರಾಮ ಧಾರಾವಾಹಿಯಲ್ಲಿ ರುದ್ರಪ್ರತಾಪ್ ಬಗ್ಗೆ ಸಿಹಿ ಎಲ್ಲಾ ಮಾಹಿತಿಯನ್ನು ರಾಮ್ ಗೆ ಫೋನ್ ಮಾಡಿ ತಿಳಿಸುತ್ತಾಳೆ. ರಾಮ್ ಕೊಂಚವೂ ತಡ ಮಾಡದೇ ಅಶೋಕ್ ಜೊತೆಗೆ ಹೊರಡುತ್ತಾನೆ.ರುದ್ರಪ್ರತಾಪ್ ನನ್ನು ಹಿಡಿಯಲೇಬೇಕು. ಅವನನ್ನು ಯಾವುದೇ ಕಾರಣಕ್ಕೂ ಬಿಡಬಾರದು, ಇನ್ನೂ ಎಷ್ಟು ಹೆಣ್ಣು ಮಕ್ಕಳ ಜೀವನದಲ್ಲಿ ಆಟವಾಡುತ್ತಾನೋ ಎಂದು ಮಾತನಾಡಿಕೊಂಡಿದ್ದಾರೆ.ರುದ್ರಪ್ರತಾಪ್‌ನನ್ನು ಭೇಟಿ ಮಾಡುವ ಮುನ್ನವೇ ರಾಮ್ ಅಂಬುಲೆನ್ಸ್ ಗೆ ಫೋನ್ ಮಾಡಿ ದೇವಸ್ಥಾನದ ಬಳಿ ಬರಲು ಹೇಳುತ್ತಾನೆ. ಈ ಮಾತು ಅಶೋಕ್ ಗೆ ಅರ್ಥವಾಗುವುದಿಲ್ಲ.
ರುದ್ರಪ್ರತಾಪ್ ನನ್ನು ಹಿಡಿದ ಗೆಳೆಯರು
ದೇವಸ್ಥಾನದಲ್ಲಿ ಅಂಜಲಿ ಇನ್ನೇನು ಬರಬಹುದು ಎಂದು ಕಾಯುತ್ತಿರುವ ರುದ್ರಪ್ರತಾಪ್ ಹೆಗಲ ಮೇಲೆ ರಾಮ್ ಮತ್ತು ಅಶೋಕ್ ಕೈ ಹಾಕಿ ಹಿಡಿಯುತ್ತಾರೆ. ರುದ್ರಪ್ರತಾಪ್ ಗೆ ಇವರನ್ನು ನೋಡಿ ಶಾಕ್ ಆಗುತ್ತಾನೆ. ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸುತ್ತಾನೆ. ಆದರೆ ಇಬ್ಬರೂ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ರುದ್ರಪ್ರತಾಪ್ ಗೆ ಹಿಗ್ಗಾಮುಗ್ಗಾ ಥಳಿಸುತ್ತಾರೆ. ಬಳಿಕ ನಿನಗೆ ಇನ್ನೂ ಎಷ್ಟು ಹುಡುಗಿಯರು ಬೇಕು. ಜೈಲಿಗೆ ಕಳಿಸಿದರೂ ಬುದ್ಧಿ ಬರವಲಿಲ್ವಾ ಎಂದು ಬೈಯುತ್ತಾರೆ. ಆದರೆ, ರುದ್ರಪ್ರತಾಪ್ ಏನೂ ಆಗೇ ಇಲ್ಲ ಎಂಬಂತೆ ನಗುತ್ತಾನೆ. ನಿಮ್ಮ ಮನೆಯಲ್ಲೇ ನಿಮ್ಮ ದಾರಿಯನ್ನು ತಪ್ಪಿಸುವವರು ಇರುವಾಗ ನನ್ನ ಏನು ಕೇಳುತ್ತೀರಾ. ಮೊದಲು ನಿಮ್ಮ ಮನೆಯಲ್ಲಿರುವ ಸಮಸ್ಯೆ ಅನ್ನು ಬಗೆಹರಿಸಿಕೊಳ್ಳಿ ಎಂದು ಹೇಳುತ್ತಾನೆ.

ರುದ್ರಪ್ರತಾಪ್ ಮಾತು ಕೇಳದ ರಾಮ್
ಆದರೆ ರುದ್ರಪ್ರತಾಪ್ ಮಾತನ್ನು ರಾಮ್ ಕೇಳಲು ತಯಾರಿರುವುದಿಲ್ಲ. ಅಶೋಕ್ ಅವನು ಹೇಳುವುದನ್ನು ಪೂರ್ತಿ ಕೇಳು ಎಂದು ರಾಮ್ ಗೆ ಒತ್ತಾಯ ಮಾಡುತ್ತಾನೆ. ಆದರೆ, ರಾಮ್ ಇವನ ಮಾತನ್ನು ಕೇಳುವುದೇನು. ಇವನಿಗೆ ಬೆಲೆ ಯಾಕೆ ಕೊಡಬೇಕು ಎಂದುಕೊಂಡು ಅಂಬುಲೆನ್ಸ್ ನಲ್ಲಿ ಕಳಿಸಿಕೊಡುತ್ತಾನೆ. ಅಶೋಕ್ ಗೆ ರಾಮ್ ಆತನ ಮಾತನ್ನು ಕೇಳಿದ್ದರೆ, ಭಾರ್ಗವಿ ಬಗ್ಗೆ ಹೇಳುತ್ತಿದ್ದ ಎನಿಸಿದ್ದು, ಈ ಮಾತನ್ನು ರಾಮ್ ಕೇಳದೇ ಇದ್ದಿದ್ದಕ್ಕೆ ಬೇಸರ ಮಾಡಿಕೊಂಡಿದ್ದಾನೆ. ಆದರೆ, ರಾಮ್ ಅವನ ಮಾತನ್ನೆಲ್ಲಾ ನಂಬುವುದಕ್ಕೆ ಆಗುತ್ತಾ ನೀನು ಸುಮ್ಮನಿರು ಎಂದು ಹೇಳುತ್ತಾನೆ.
ಅಂಜಲಿಗೆ ಕೊನೆಯ ವಾಯ್ಸ್ ನೋಟ್
ಇನ್ನು ರಾಮ್ ಮತ್ತು ಅಶೋಕ್ ರುದ್ರಪ್ರತಾಪ್ ಮೊಬೈಲ್ ನಿಂದ ಕೊನೆಯ ಸಂದೇಶವನ್ನು ಕಳಿಸಿರುತ್ತಾರೆ. ಗುಡ್ ಬೈ, ನನ್ನನ್ನು ಕ್ಷಮಿಸಿ ಬಿಡು ಇನ್ಯಾವತ್ತು ಸಿಗುವುದಿಲ್ಲ ಎಂದು ವಾಯ್ಸ್ ನೋಟ್ ಕಳಿಸಿರುತ್ತಾರೆ. ಅಂಜಲಿ ರುದ್ರಪ್ರತಾಪ್ ನನ್ನು ಭೇಟಿ ಮಾಡಿ ಆತನಿಗೆ ಸಂದರ್ಭವನ್ನು ಅರ್ಥ ಮಾಡಿಸಬೇಕು ಎಂದುಕೊಂಡಿರುತ್ತಾಳೆ. ಅದಕ್ಕೆ ದೇವಸ್ಥಾನಕ್ಕೆ ಹೊರಟಿರುತ್ತಾಳೆ. ಆದರೆ ದುರಾದೃಷ್ಟ, ಅಷ್ಟರಲ್ಲಿ ಈ ವಾಯ್ಸ್ ನೋಟ್ ಬಂದಿರುತ್ತದೆ. ಇದನ್ನು ಕೇಳಿದ ಅಂಜಲಿ ಮನಸ್ಸಿಗೆ ಘಾಸಿಯಾಗಿರುತ್ತದೆ. ದೇವಸ್ಥಾನಕ್ಕೆ ಹೋಗುವುದು ಬೇಡ ಎಂದು ಸುಮ್ಮನಾಗಿ ಬಿಡುತ್ತಾಳೆ.

ರಾಮ್ ಗೆ ಕಂಕಣ ಶಾಸ್ತ್ರ ನಡೆದಾಯ್ತು
ರಾಮ್ ಮನೆಯಲ್ಲಿ ಕಂಕಣ ಶಾಸ್ತ್ರ ನಡೆಯುತ್ತದೆ. ಆದರೆ, ಭಾರ್ಗವಿಗೆ ರಾಮ್ ಮತ್ತು ಅಶೋಕ್ ಹೊರಗಡೆ ಹೋಗಿ ಬಂದಿದ್ದಕ್ಕೆ ಕೋಪ ಇರುತ್ತದೆ. ಇನ್ನು ಸಿಹಿ ಅಂಜಲಿ ದೇವಸ್ಥಾನಕ್ಕೆ ಹೋಗದೇ ಇದ್ದಿದ್ದೇ ಒಳ್ಳೆಯದಾಯ್ತು ಎಂದು ಖುಷಿಯಾಗಿ ಹೇಳುತ್ತಾಳೆ. ಎಲ್ಲರೂ ಹೊರಟ ಮೇಲೆ ಸೀತಾ ಸಿಹಿಯನ್ನು ಯಾಕೆ ಹಾಗೆ ಹೇಳಿದೆ ಎಂದಾಗ ನಡೆದ ಘಟನೆಗಳನ್ನೆಲ್ಲಾ ಸಿಹಿ ವಿವರವಾಗಿ ಬಿಡಿಸಿ ಹೇಳುತ್ತಾಳೆ. ಸೀತಾಳಿಗೆ ತನ್ನ ಹಿಂದೆ ಇಷ್ಟೆಲ್ಲಾ ಆಗಿರುವುದು ತಿಳಿದು ಶಾಕ್ ಆಗುತ್ತದೆ. ಇನ್ನು ಸೀತಾ-ರಾಮನ ಮದುವೆ ಯಾವುದೇ ಅಡೆತಡೆ ಇಲ್ಲದೇ ಅದ್ಧೂರಿಯಾಗಿ ನಡೆಯುವುದರಲ್ಲಿ ಅನುಮಾನವಿಲ್ಲ.


Click it and Unblock the Notifications











