Seetharama ; ಸಿಹಿಯಾಗಿಯೇ ಉಳಿದ ಸುಬ್ಬಿ, ಇನ್ನಾದರೂ ಭಾರ್ಗವಿ ಎಚ್ಚೆತ್ತುಕೊಳ್ಳುತ್ತಾಳಾ..?

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಸುಬ್ಬಿ ಮನೆ ಮತ್ತು ಕುಟುಂಬಕ್ಕೆ ಹೊಂದುಕೊಂಡಿದ್ದಾಳೆ. ಅಲ್ಲದೇ, ಸೀತಮ್ಮನ ಮೇಲೆ ಅಪಾರವಾದ ಪ್ರೀತಿಯನ್ನೂ ಹೊಂದಿದ್ದಾಳೆ. ಭಾರ್ಗವಿ ಮತ್ತು ವಿಶ್ವ ಇಬ್ಬರೂ ಈ ಮನೆಗೆ ಕೇಡು ಬಗೆಯುವವರು ಎಂಬ ಸೂಕ್ಷ್ಮ ವಿಚಾರ ಸುಬ್ಬಿಯ ಗಮನಕ್ಕೆ ಬಂದಿದೆ. ಹೀಗಾಗಿ ಸೀತಮ್ಮನ ತಂಟೆಗೆ ಬಂದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸುಬ್ಬಿ ವಾರ್ನಿಂಗ್ ಕೊಟ್ಟಿದ್ದಾಳೆ.ಸುಬ್ಬಿಯನ್ನು ಬೀಳಿಸಲು ಹೋಗಿ ಸೀತಾಳಿಗೆ ಪೆಟ್ಟಾಗುವಂತೆ ಮಾಡಿದ ವಿಶ್ವನ ಸೊಂಟ ಮುರಿದ ಸುಬ್ಬಿ, ಭಾರ್ಗವಿ ಮತ್ತು ವಿಶ್ವ ಇಬ್ಬರಿಗೂ ಯಾವುದೇ ಕಾರಣಕ್ಕೂ ನನ್ನ ತಾಯಿ ಸುದ್ದಿಗೆ ಬರಬೇಡಿ ಎಂದಿದ್ದಾಳೆ.

ಠುಸ್ ಆಯ್ತು ಭಾರ್ಗವಿ ಗೇಮ್

ಸುಬ್ಬಿ ಯಾರು ಎಂಬುದನ್ನು ಬಯಲು ಮಾಡಲೇಬೇಕು ಎಂದು ಪಣ ತೊಟ್ಟಿರುವ ಭಾರ್ಗವಿ ಹೊಸದೊಂದು ಪ್ಲಾನ್ ಮಾಡಿದ್ದಾಳೆ. ಸಿಹಿ ಹೆಸರಿನಲ್ಲಿ ಪೂಜೆ ಮಾಡಿಸೋಣ ಎಂದು ದೇವಸ್ಥಾನಕ್ಕೆ ಕರೆದುಕೊಂಡು ಹೊರಟಿದ್ದಾಳೆ. ದೇವಸ್ಥಾನದಲ್ಲಿ ಭಾರ್ಗವಿ ರುದ್ರಪ್ರತಾಪ್ ನ ಕರೆಸಿದ್ದು, ಸುಬ್ಬಿಯನ್ನು ಕಿಡ್ನ್ಯಾಪ್ ಮಾಡಿಸಿದ್ದಾಳೆ. ಅವಳು ಸಿಹಿ ಅಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳುವಂತೆ ಮಾಡಲು ಹೇಳಿದ್ದಾಳೆ. ದೇವಸ್ಥಾನದಂದ ಇದ್ದಕ್ಕಿದ್ದ ಹಾಗೆಯೇ ಸಿಹಿ ಕಾಣೆಯಾಗಿದ್ದು, ಮನೆಯವರೆಲ್ಲಾ ಗಾಬರಿಯಾಗಿದ್ದಾರೆ. ಇದರಲ್ಲಿ ಭಾರ್ಗವಿಯ ಕೈವಾಡವಿರಬಹುದು ಎಂದು ಪ್ರಿಯಾ ಆಲೋಚಿಸಿದ್ದು, ಸಿಹಿಯನ್ನು ಎಲ್ಲರೂ ಸೇರಿ ಇಡೀ ದೇವಸ್ಥಾನವನ್ನೆಲ್ಲಾ ಸುತ್ತಾಡಿ ಹುಡುಕಾಡಿದ್ದಾರೆ. ಆದರೆ, ಸಿಹಿ ಎಲ್ಲೂ ಕಾಣಿಸದ ಕಾರಣ ಎಲ್ಲರೂ ಚಿಂತೆ ಮಾಡುತ್ತಾ ಕುಳಿತಿದ್ದಾರೆ.

seetharama-serial-24-march-episode-written-update

ಸಿಹಿ ಆಗಿಯೇ ಉಳಿದ ಸುಬ್ಬಿ

ಸುಬ್ಬಿಯನ್ನು ಅಪಹರಿಸಿದ ಆರ್ ಪಿ ಕಟ್ಟಿ ಹಾಕಿ ಕ್ಲಾಸ್ ತೆಗೆದುಕೊಂಡಿದ್ದಾನೆ. ಯಾರು ನೀನು ಹೇಳು ಎಂದು ಹಿಂಸೆ ಕೊಟ್ಟಿದ್ದಾನೆ. ಆದರೆ, ಸುಬ್ಬಿ ತಾನೇ ಸಿಹಿ ಎಂದು ಹೇಳಿದ್ದು, ಎಲ್ಲೂ ಸತ್ಯವನ್ನು ಬಾಯಿ ಬಿಟ್ಟಿಲ್ಲ. ಅಷ್ಟರಲ್ಲಿ ಹನುಮಂತನ ಶಕ್ತಿಯೊಂದಿಗೆ ಸಿಹಿಯ ಆತ್ಮ ಎಂಟ್ರಿ ಕೊಟ್ಟಿದೆ. ಆರ್ ಪಿ ಮಾತುಗಳಿಗೆ ಸುಬ್ಬಿ ಎದುರುತ್ತರ ಕೊಟ್ಟಿದ್ದಾಳೆ. ಸಿಹಿ ಅಂತೂ ಇಷ್ಟು ದಿನಗಳಿಂದ ಇದ್ದ ಕೋಪವನ್ನೆಲ್ಲಾ ತೀರಿಸಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಆರ್ ಪಿ ಗೆ ಹೊಡೆದಿದ್ದಾಳೆ. ಸಿಹಿಯಾಗಿಯೇ ಸುಬ್ಬಿ ಉಳಿದುಕೊಂಡಿದ್ದಾಳೆ.

ಹನುಮಂತನಿಂದ ಶಕ್ತಿ ಪಡೆದ ಸಿಹಿ ಆತ್ಮ

ಹನುಮಂತನ ಶಕ್ತಿ ಸಿಹಿಯ ಆತ್ಮಕ್ಕೆ ಲಭಿಸಿದ್ದು, ಆರ್ ಪಿಗೆ ಗೂಸಗಳು ಬಿದ್ದಿದೆ. ಸಿಹಿಯ ಆತ್ಮ ಹೊಡೆದ ಹೊಡೆತಗಳು ರುದ್ರ ಪ್ರತಾಪ್ ನನ್ನು ಕೆಳಗುರುಳಿಸಿದ್ದು, ಯಾರು ಹೊಡೆಯುತ್ತಿದ್ದಾರೆ. ತನಗೆ ಏನಾಗುತ್ತಿದೆ ಎಂಬುದನ್ನೇ ಅರ್ಥ ಮಾಡಿಕೊಳ್ಳದಂತಾಗಿದೆ. ಇನ್ನು ಸೀಮೆಯಣ್ಣೆಯನ್ನು ಚೆಲ್ಲಿದ ಸಿಹಿಯ ಆತ್ಮ ಬೆಂಕಿ ಕಡ್ಡಿ ಗೀರಿದ್ದು, ರುದ್ರ ಪ್ರತಾಪ್ ನನ್ನು ಬೆಂಕಿಯ ಕೆನ್ನಾಲಿಗೆಯಲ್ಲಿ ಬಿಟ್ಟು ಸುಬ್ಬಿಯನ್ನು ಬಿಡಿಸಿಕೊಂಡು ಬಂದಿದೆ. ಇದನ್ನೆಲ್ಲಾ ಕಣ್ಣಾರೆ ಕಂಡ ರುದ್ರ ಪ್ರತಾಪ್ ನಿಜಾವಾಗಿಯೂ ಗಾಬರಿಯಾಗಿದ್ದಾನೆ.

seetharama-serial-24-march-episode-written-update

ಎಚ್ಚರಿಕೆಯ ಗಂಟೆಯನ್ನು ನಿರ್ಲಕ್ಷಿಸುತ್ತಾಳಾ ಭಾರ್ಗವಿ..?

ಮತ್ತೆ ದೇವಸ್ಥಾನಕ್ಕೆ ಬಂದ ಸುಬ್ಬಿ ಆಟವಾಡುವಾಗ ಯಾರೋ ಕರೆದುಕೊಂಡು ಹೋದರು. ಹೇಗೋ ತಪ್ಪಿಸಿಕೊಂಡು ಬಂದೆ ಎಂದು ಹೇಳಿ ಮ್ಯಾನೇಜ್ ಮಾಡಿದ್ದಾಳೆ. ತನ್ನ ಪ್ಲಾನ್ ಅನ್ನು ಹಾಳು ಮಾಡಿದ್ದಕ್ಕೆ ಭಾರ್ಗವಿಗೆ ಕೋಪ ಬಂದಿದೆ. ರುದ್ರ ಪ್ರತಾಪ್ ಗೆ ಫೋನ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾಳೆ. ಆದರೆ, ನಡೆದ ಘಟನೆಯನ್ನೆಲ್ಲಾ ವಿವರಿಸಿದ ರುದ್ರ ಪ್ರತಾಪ್ ಆ ಹುಡುಗಿಯ ತಂಟೆಗೆ ಹೀಗಲೇ ಬೇಡಿ ಎಂದು ಎಚ್ಚರಿಕೆಯನ್ನೂ ನೀಡಿದ್ದಾನೆ. ಆದರೆ, ಭಾರ್ಗವಿಗೆ ರುದ್ರ ಪ್ರತಾಪ್ ಮಾತುಗಳು ಎಷ್ಟರ ಮಟ್ಟಿಗೆ ಅರ್ಥವಾಗಿದೆ. ಮುಂದೆ ಯಾವ ರೀತಿಯಲ್ಲಿ ಪರೀಸ್ಥಿತಿಯನ್ನು ನಿಭಾಯಿಸುತ್ತಾಳೆ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X