Seetharama ; ಮಹಾಕುಂಭ ಮೇಳದಿಂದ ಸೀದಾ ವಠಾರಕ್ಕೆ ಬಂದ ಸೀತಾರಾಮ..!
ಸೀತಾರಾಮ ಧಾರಾವಾಹಿಯಲ್ಲಿ ಭಾರ್ಗವಿ ಸುಬ್ಬಿಯಿಂದ ತನ್ನ ಮೂಲ ಹೆಸರನ್ನು ಹೇಳಿದ್ದಾಳೆ. ಇದರಿಂದ ಭಾರ್ಗವಿಗೆ ಸುಬ್ಬಿ ನಿಜವಾಗಲೂ ಸಿಹಿಯಲ್ಲ ಎಂಬ ಸತ್ಯ ಗೊತ್ತಾಗಿದೆ. ಇನ್ನು ಈ ವಿಚಾರದ ಬಗ್ಗೆ ಹೇಗೆ ಮಾಹಿತಿ ಪಡೆಯುವುದು. ಸುಬ್ಬಿ ಹೇಗೆ ರಾಮ್ ಕೈಗೆ ಸಿಕ್ಕಳು. ಸುಬ್ಬಿಯ ತಂದೆ-ತಾಯಿ ಅಥವಾ ಅವಳ ಮನೆಯವರು ಯಾರು.? ಸುಬ್ಬಿ ಎಲ್ಲಿಯವಳು ಎಂಬ ಬಗ್ಗೆ ತಿಳಿದುಕೊಳ್ಳಲು ಮುಂದಾಗಿದ್ದಾಳೆ. ಈ ಬಗ್ಗೆ ವಿಶ್ವಜಿತ್ ಗೆ ಸತ್ಯ ಹೇಳಿದ ಭಾರ್ಗವಿ, ಸುಬ್ಬಿಯ ಮೂಲವನ್ನು ತಿಳಿದುಕೊಳ್ಳಲು ಹೇಳಿದ್ದಾಳೆ.
ಹಳೆಯ ದಿನಗಳನ್ನು ನೆನೆದ ಸೀತಾರಾಮ
ಇನ್ನು ಅಶೋಕ್ ಮನೆಗೆ ಬಂದಾಗ ಸುಬ್ಬಲಕ್ಷ್ಮೀ ಯಾರು ಎಂದು ಪ್ರಶ್ನೆ ಮಾಡಿದ್ದು, ಅಶೋಕ್ ಶಾಕ್ ಆಗಿದ್ದಾನೆ. ಏನು ಉತ್ತರ ಕೊಡುವುದು ಎಂಬುದು ಗೊತ್ತಾಗದೇ ಹಾಗೆ ಮ್ಯಾನೇಜ್ ಮಾಡಿದ್ದಾನೆ. ಇತ್ತ ರಾಮ್ ಸೀತಾ ಮತ್ತು ಸುಬ್ಬಿಯನ್ನು ವಠಾರಕ್ಕೆ ಕರೆದುಕೊಂಡು ಬಂದಿದ್ದಾನೆ. ಸೀತಾ ಮದುವೆಗೂ ಮುನ್ನ ಇದ್ದಂತೆ ರೆಡಿಯಾಗುತ್ತಾಳೆ. ಸುಬ್ಬಿಯೂ ಸಿಹಿಯ ಆತ್ಮದ ಸಹಾಯದಿಂದ ರೆಡಿಯಾಗಿ ಮನೆಯವರಿಗೆಲ್ಲಾ ಖುಷಿಕೊಟ್ಟಿದ್ದಾಳೆ. ರಾಮ್ ಹಳೆಯ ದಿನಗಳನ್ನು ನೆನೆದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾನೆ. ಇನ್ನು ಅಶೋಕ್ ಬೇಕಂತಲೇ ಮಳೆ ತರಿಸಿದ್ದು, ಸೀತಾ, ರಾಮ ಹಾಗೂ ಸುಬ್ಬಿ ಮಳೆಯಲ್ಲಿ ಆಡಿ ಮಿಂದೆದ್ದಿದ್ದಾರೆ.

ಅಮ್ಮನ ಪ್ರೀತಿ ಬಿಟ್ಟು ಸುಬ್ಬಿಗೆ ಏನೂ ಅರ್ಥವಾಗುತ್ತಿಲ್ಲ
ಪ್ರತಿಯೊಂದಕ್ಕೂ ಸೀತಾಳನ್ನೇ ಅವಲಂಭಿಸುವ ಸುಬ್ಬಿ, ರಾಮ್ ನನ್ನು ಕಂಡರೆ ಸಿಡಿಮಿಡಿಯಾಗುತ್ತಾಳೆ. ಸೀತಾ ಹೇಳುವ ಮಾತಿಗೆ ಬೇಗ ಪ್ರತಿಕ್ರಿಯಿಸುತ್ತಾಳೆ. ಇನ್ನು ಸಿಹಿ ವಠಾರಕ್ಕೆ ಬಂದಿದ್ದಕ್ಕೆ ಶಾಂತಜ್ಜಿ ಮತ್ತು ಮೂರ್ತಿ ತಾತ ಖುಷಿ ಪಡುತ್ತಾರೆ. ಸುಬ್ಬಿ ಸಿಹಿ ಹೇಲಿದಾಗ ಮಾತ್ರವೇ ಅಜ್ಜಿ ತಾತನ ಮಾತಿಗೆ ಪ್ರತಿಕ್ರಿಯೆ ಕೊಡುತ್ತಾಳೆ. ಇನ್ನು ಅಶೋಕ್ ಜೊತೆಗೆ ಈಗಾಗಲೇ ಜೆಲ್ ಆಗಿರುವ ಸುಬ್ಬಿ ಅರಾಮಾಗಿರುತ್ತಾಳೆ. ಆದರೆ, ರಾಮ್ ನನ್ನು ಕಂಡರೆ ಕೋಪ ಮಾಡಿಕೊಂಡು ಮುಖ ಗಂಟು ಹಾಕಿಕೊಳ್ಳುತ್ತಾಳೆ. ರಾಮ್ ಸೀತಾ ಇಲ್ಲದಾಗ ಸುಬ್ಬಿಗೆ ಬುದ್ಧಿ ಹೇಳುತ್ತಾನೆ. ನಿನಗೆ ಸ್ವೀಟ್, ಚಾಕ್ಲೇಟ್, ಐಸ್ ಕ್ರೀಂ ತಿನ್ನಬೇಕು ಎಂದರೆ ನನಗೆ ಹೇಳು ನಾನು ಕರೆದುಕೊಂಡು ಹೋಗಿ ಕೊಡಿಸುತ್ತೇನೆ. ಆದರೆ, ಸೀತಾ ಮುಂದೆ ತಿನ್ನಬೇಡ ಎನ್ನುತ್ತಾನೆ. ಆದರೂ ರಾಮ್ ಗಿಂತಲೂ ಸೀತಾ ಪ್ರೀತಿ ಮಾತ್ರವೇ ಸುಬ್ಬಿಗೆ ಅರ್ಥವಾಗುತ್ತಿದೆ.
ರಾಮ್ ಮೇಲೆ ಕಡಿಮೆಯಾಗದ ಸುಬ್ಬಿ ಕೋಪ
ಇನ್ನು ಮಳೆಯಲ್ಲಿ ಮಿಂದ ಬಳಿಕ ಎಲ್ಲರ ಹೊಟ್ಟೆ ತಾಳ ಹಾಕಿದೆ. ಸೀತಾ ತಯಾರಿಸಿದ ಸೊಪ್ಪಿನ ಸಾರು, ಕೋಸ್ ಪಲ್ಯ ತಿನ್ನಲು ರೆಡಿಯಾಗಿದ್ದಾರೆ. ಸುಬ್ಬಿ ಸೀತಾಳಿಗೆ ತಿನ್ನಿಸಲು ಹೇಳುತ್ತಾಳೆ. ಸೀತಾ, ಶಾಂತಜ್ಜಿ, ಮೂರ್ತಿ ತಾತ ಹಾಗೂ ಅಶೋಕ್ ನಿಂದ ಕೈ ತುತ್ತು ಪಡೆಯುತ್ತಾಳೆ. ಆದರೆ, ರಾಮ್ ಬಳಿ ಹೋಗಲು ಹಿಂಜರಿದಾಗ ಸಿಹಿ ಬಲವಂತ ಮಾಡುತ್ತಾಳೆ. ರಾಮ್ ತಿನ್ನಿಸಿದ ಮೇಲೂ ಸುಬ್ಬಿ ಸಣ್ಣ ಕೋಪವನ್ನು ತೋರಿಸುತ್ತಾಳೆ. ಯಾವಾಗ ಸುಬ್ಬಿಗೆ ರಾಮ್ ಬಗ್ಗೆ ಸ್ಪಷ್ಟತೆ ಅರಿಯುತ್ತದೋ ಗೊತ್ತಿಲ್ಲ.
ಅಶೋಕ್ ಮಾತು ಕೇಳಿ ರಾಮ್ ಶಾಕ್..!
ಇನ್ನು ಅಶೋಕ್ ರಾಮ್ ಬಳಿ ಭಾರ್ಗವಿ ಚಿಕ್ಕಿ ಸುಬ್ಬಲಕ್ಷ್ಮೀ ಯಾರು ಎಂದು ಕೇಳಿದರು. ಅವರಿಗೆ ಸತ್ಯ ಅನುಮಾನ ಬಂದಿದೆ ಎಂದು ಹೇಳುತ್ತಾನೆ. ಆಗ ರಾಮ್, ನನ್ನ ಬಳಿಯೂ ಚಿಕ್ಕಿ ಪದೇ ಪದೇ ಸುಬ್ಬಿ ಬಗ್ಗೆ ಅನುಮಾನ ಪಡುತ್ತಿದ್ದಾರೆ. ಅವರ ಬಳಿ ಸತ್ಯ ಹೇಲಬೇಕು ಎಂದುಕೊಂಡೆ ಎಂದಾಗ ಅಶೋಕ್ ಯಾವುದೇ ಕಾರಣಕ್ಕೂ ಆ ಕೆಲಸವನ್ನು ಮಾಡಬೇಡ. ಅಕಸ್ಮಾತ್ ಆಗಿ ಚಿಕ್ಕಿಯಿಂದ ಸುಬ್ಬಿ ಬಗ್ಗೆ ಸೀತಾಳಿಗೆ ಸತ್ಯ ಗೊತ್ತಾದರೆ ಪರೀಸ್ಥಿತಿ ಕೈ ಮೀರಿ ಹೋಗುತ್ತದೆ ಎಂದು ಹೇಳುತ್ತಾನೆ. ಇದರಿಂದ ರಾಮ್ ಗಾಬರಿಯಾಗುತ್ತಾನೆ.


Click it and Unblock the Notifications











