Seetha Rama; ರಾಮ್-ಸೀತಾ ಹನಿಮೂನ್ ಪ್ಲಾನ್ ಮಾಡುತ್ತಿರುವ ಸೂರಿ ತಾತ,ಸಿಹಿ ಕಥೆ ಏನು..?

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಪ್ರಿಯಾ ಗರ್ಭಿಣಿ ಆಗಿದ್ದಾಳೆ ಎಂದು ಪ್ರೇಮಾ ಗಾಢವಾಗಿ ನಂಬಿದ್ದಾಳೆ. ಆದರೆ, ಅಂಜಲಿ ಸಾಕಷ್ಟು ಬಾರಿ ಆಸ್ಪತ್ರೆಗೆ ಹೋಗಿ ಖಚಿತಪಡಿಸಿಕೊಳ್ಳುವುದು ಉತ್ತಮ ಎಂದಿದ್ದಾಳೆ.ಆದರೂ ಪ್ರೇಮಾ ಅಂಜಲಿ ಮಾತಿಗೆ ಸೊಪ್ಪು ಹಾಕುವುದಿಲ್ಲ. ಪ್ರಿಯಾ ಯಾವುದಕ್ಕೂ ಇರಲಿ ಎಂದು ಆಸ್ಪತ್ರೆಗೆ ಹೋಗಬೇಕು ಎಂದು ಭಾವಿಸುತ್ತಾಳೆ. ಇದರಿಂದ ಕೋಪಗೊಂಡ ಪ್ರೇಮಾ, ಪ್ರಿಯಾ ಆಫೀಸಿಗೆ ಹೋದ ಮೇಲೆ ಅಂಜಲಿಗೆ ಬೈಯುತ್ತಾಳೆ. ನಿನ್ನ ಅಣ್ಣ-ಅತ್ತಿಗೆಗೆ ನಿನ್ನದೇ ಚಿಂತೆ. ನಿನ್ನಿಂದ ಅವರ ಸಂಸಾರ ಮುಂದುವರೆದಿಲ್ಲ ಎಂದು ಹೇಳುತ್ತಾಳೆ.

ಮನೆಯಿಂದ ದೂರ ಸರಿದ ಅಂಜಲಿ

ಅಲ್ಲದೇ, ನೀನು ಮದುವೆಯಾಗಿ ಹೋಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಬೈಯುತ್ತಾಳೆ. ಈ ಮಾತುಗಳನ್ನು ಕೇಳಿಸಿಕೊಂಡ ಅಂಜಲಿಗೆ ಸರಿ ಎನಿಸುತ್ತದೆ. ಜೊತೆಗೆ ಬೇಸರವಾಗುತ್ತದೆ. ತಾನು ಮನೆ ಬಿಟ್ಟು ಹೋಗಲು ತೀರ್ಮಾನಿಸುತ್ತಾಳೆ. ಬಟ್ಟೆಗಳನ್ನು ಪ್ಯಾಕ್ ಮಾಡಿಕೊಂಡು ಆಶ್ರಮದ ಗುರುಗಳಿಗೆ ಆರೋಗ್ಯದಲ್ಲಿ ಏರುಪೇರಾಗಿದೆ. ಅವರಿಗಾಗಿ ಹೋಗುತ್ತಿದ್ದು, ಕೆಲ ದಿನಗಳ ಕಾಲ ಅಲ್ಲೇ ಇದ್ದು ಬರುವುದಾಗಿ ಹೇಳಿ ಹೋಗುತ್ತಾಳೆ. ಮನೆಗೆ ಬರುವ ಪ್ರಿಯಾ ತಾನು ಗರ್ಭಿಣಿ ಅಲ್ಲ ಎಂಬ ಸತ್ಯವನ್ನು ಹೇಳಿ, ಅಂಜಲಿ ಮನೆಯಿಂದ ಹೋಗಿದ್ದಕ್ಕೆ ಬೇಸರ ಮಾಡಿಕೊಳ್ಳುತ್ತಾಳೆ. ಫಾರಿನ್ ಟ್ರಿಪ್ ಮುಗಿಸಿಕೊಂಡು ಬಂದ ಅಶೋಕ್ ತಂಗಿ ಮನೆಯಿಂದ ಹೊರಗೆ ಹೋಗಿದ್ದಕ್ಕೆ ಬೇಸರವನ್ನು ವ್ಯಕ್ತಪಡಿಸುತ್ತಾನೆ. ಆದರೆ, ಅಂಜಲಿ ಮತ್ಯಾವತ್ತು ವಾಪಸ್ ಬರಬಾರದು ಎಂದು ತೀರ್ಮಾನಿಸಿದ್ದಾಳೆ.

seetharama-serial-25-july-episode-written-update

ಹೊಸ ಮನೆಗೆ ಹೋಗಲು ಸಜ್ಜು

ಸಿಹಿಗೆ ಪದೇ ಪದೇ ಈ ಮನೆಯಲ್ಲಿ ತೊಂದರೆ ಆಗುತ್ತಿರುವುದಕ್ಕೆ ರಾಮ್ ಮನೆ ಬದಲಾಯಿಸುವ ಯೋಚನೆ ಮಾಡಿದ್ದಾನೆ. ಸಿಹಿ ಒಬ್ಬಳಿಗೆ ತೊಂದರೆ ಇರುವುದಕ್ಕೆ ನಾವೆಲ್ಲರೂ ಬೇರೆ ಹೋಗುವುದು ಸರಿಯಲ್ಲ. ನೀವು ಮಾತ್ರ ಹೋಗಿ ಎಂದು ಭಾರ್ಗವಿ ಸಲಹೆ ಕೊಟ್ಟಿದ್ದಾಳೆ. ಅದೂ ಅಲ್ಲದೇ, ಇದು ವಾಣಿ ಇದ್ದ ಮನೆ , ಖಾಲಿ ಬಿಡುವುದು ಬೇಡ ಎನ್ನುತ್ತಾಳೆ. ಹೀಗಾಗಿ ರಾಮ್ ಸಿಹಿಗೆ ಬೇರೆ ಮನೆಯನ್ನು ನೋಡಿದ್ದು, ಅಲ್ಲಿಗೆ ಶಿಫ್ಟ್ ಆಗಬೇಕು ಎಂದುಕೊಂಡಿದ್ದಾನೆ. ಇನ್ನು ಸತ್ಯಜಿತ್ ಮನೆಯಲ್ಲಿ ಕಾಣಿಸದೇ ಇರುವುದಕ್ಕೆ ಸೀತಾ ಮತ್ತು ಸಿಹಿ ಪ್ರಶ್ನೆ ಮಾಡುತ್ತಾರೆ. ಆಗ ಸೂರಿ ತಾತ ಕೆಲವರ ಬಗ್ಗೆ ಯೋಚಿಸುವ ಅಗತ್ಯವಿಲ್ಲ ಎಂದು ಹೇಳುತ್ತಾರೆ.

ಗೊಜ್ಜವಲಕ್ಕಿ ಬೇಕು ಎಂದ ಸಿಹಿ

ಸಿಹಿ ಮತ್ತು ಅನಿಕೇತನ್ ತಿಂಡಿ ತಿನ್ನುತ್ತಿರುತ್ತಾರೆ. ಆಗ ಅನಿಕೇತನ್ ಟ್ಯಾಬ್ ನೋಡಿಕೊಂಡು ತಿಂಡಿ ತಿನ್ನುತ್ತಿರುವುದಕ್ಕೆ ವಿಶ್ವ ಬೈಯುತ್ತಾನೆ. ಸಿಹಿ ನೋಡು ಒಬ್ಬಳೆ ನೀಟ್ ಆಗಿ ತಿಂಡಿ ತಿನ್ನುತ್ತಿದ್ದಾಳೆ ಎನ್ನುತ್ತಾನೆ. ಆಗ ಅನಿಕೇತನ್ ಗೆ ಕೋಪ ಬರುತ್ತದೆ. ಈ ಮನೆಯವರಲ್ಲದವರ ಜೊತೆಗೆ ನನ್ನನ್ನು ಹೋಲಿಸಬೇಡಿ. ನನ್ನ ಬಗ್ಗೆ ಯಾರೂ ಮಾತನಾಡುವುದು ಬೇಡ ಎಂದು ಕೂಗಾಡಿ ಹೋಗುತ್ತಾನೆ. ಇದರಿಂದ ಬೇಸರ ಮಾಡಿಕೊಂಡ ಸಿಹಿ ಅಳುತ್ತಿರುತ್ತಾಳೆ. ಏನಾಯ್ತು ಎಂದು ವಿಚಾರಿಸಿದ್ದಕ್ಕೆ ಸಿಹಿ ಅಜ್ಜಿ ಮಾಡುವ ಗೊಜ್ಜವಲಕ್ಕಿ ನೆನಪಾಯ್ತು ಎಂದು ಹೇಳುತ್ತಾಳೆ. ಆಗ ಸೀತಾ ಸಿಹಿಗೆ ಗೊಜ್ಜವಲಕ್ಕಿ ಮಾಡಿಕೊಡುತ್ತಾಳೆ.

seetharama-serial-25-july-episode-written-update

ಹನಿಮೂನ್ ಕಳಿಸಲು ಪ್ಲಾನ್

ಪೂಜೆ ಮಾಡುವ ಕೆಲಸವನ್ನೂ ಸೀತಾ ಮಾಡಿದ್ದು, ಈಗ ಅಡುಗೆ ಮನೆಗೂ ಕಾಲಿಟ್ಟಿರುವುದಕ್ಕೆ ಭಾರ್ಗವಿ ಮನದೊಳಗೆ ಕೋಪ ಮಾಡಿಕೊಳ್ಳುತ್ತಾಳೆ. ಇನ್ನು ರಾಮ್ ಮತ್ತು ಸೀತಾ ಆಫೀಸ್‌ಗೆ ಹೊರಟಿದ್ದಕ್ಕೆ, ಬೇಡ ಇಬ್ಬರೂ ಹನಿಮೂನ್ ಗೆ ಹೋಗಿ ಎಂದು ಸೂರಿ ತಾತ ಹೇಳುತ್ತಾರೆ. ಈಗ ಭಾರ್ಗವಿ ಬೇಕಂತಲೇ ಇಬ್ಬರನ್ನೂ ಹನಿಮೂನ್ ಗೆ ಕಳಿಸಲು ಪ್ಲಾನ್ ಮಾಡಿಕೊಂಡಿದ್ದಾಳೆ. ಆದರೆ, ಸಿಹಿ ಸ್ಥಿತಿ ಏನು ಎಂಬುದು ಮುಂದೆ ತಿಳಿಯಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X