Seetharama; ಅಮ್ಮನಿಗೆ ಲಾಲಿ ಹಾಡಿದ ಸಿಹಿ ಮತ್ತು ಸುಬ್ಬಿ : ತಿಥಿ ಕಾರ್ಯದಲ್ಲಿ ಸೀತಾಳಿಗೆ ಸತ್ಯ ತಿಳಿಯುತ್ತಾ..?

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಪ್ರಿಯಾಳಿಗೆ ತನ್ನ ಸ್ನೇಹಿತೆಯ ಪರಿಸ್ಥಿಯನ್ನು ಕಂಡು ಸಂಕಟವಾಗುತ್ತಿದೆ. ಸದಾ ಮಗಳಿಗಾಗಿ ಖುಷಿಯಿಂದ ಇರುತ್ತಿದ್ದ ಸೀತಾ ಇಂದು ತನ್ನ ಮಗಳ ಸಾವನ್ನು ಅರಗಿಸಿಕೊಳ್ಳಲಾಗದೇ ಹುಚ್ಚಿಯಾಗಿದ್ದಾಳೆ.ಈ ಸ್ಥಿತಿಯನ್ನು ಕಂಡು ಪ್ರಿಯಾ ಮಾತು ಮಾತಿಗೂ ಕಣ್ಣೀರು ಹಾಕುತ್ತಿದ್ದಾಳೆ. ಪ್ರಿಯಾ ಯಾಕೆ ಹೀಗೆ ಆಡುತ್ತಿದ್ದಾಳೆ ಎಂಬುದು ಸೀತಾಳಿಗೆ ಅರ್ಥವಾಗುತ್ತಿಲ್ಲ. ಅಶೋಕ್ ಗೆ ಭಾರ್ಗವಿಯೇ ಸಿಹಿಯನ್ನು ಕೊಂದಿದ್ದು, ಅವಳ ಮೋಟೀವ್ ಏನಿರಬಹುದು ಎಂಬುದು ಅರ್ಥವಾಗುತ್ತಿಲ್ಲ. ಈ ಸತ್ಯವನ್ನು ಗೆಳೆಯ ರಾಮ್ ಗೂ ಹೇಳಲಾಗದೇ ಒದ್ದಾಡುತ್ತಿದ್ದಾನೆ.

ಸಿಹಿಯ ಕಾರ್ಯಕ್ಕೆ ಆಲೋಚನೆ

ಸಿಹಿ ಸಾವನ್ನಪ್ಪಿದಾಗಿನಿಂದ ಯಾವ ಕಾರ್ಯವನ್ನೂ ಮಾಡಿಲ್ಲ. ಹಾಗಾಗಿ ಸದ್ಗತಿ ಕಾರ್ಯಕ್ರಮವನ್ನು ನಡೆಸಬೇಕು ಎಂದು ಭಾರ್ಗವಿ ತೀರ್ಮಾನಿಸಿದ್ದಾಳೆ. ಆದರೆ ಈ ಸಮಾರಾಧನೆ ಕಾರ್ಯಕ್ರಮವನ್ನು ನಡೆಸಲು ಯಾರಿಗೂ ಇಷ್ಟವಿರುವುದಿಲ್ಲ. ಅದರ ಜೊತೆಗೆ ಸೀತಾಳಿಗೆ ಸತ್ಯ ತಿಳಿದರೆ ಸಮಸ್ಯೆ ಹೆಚ್ಚಾಗಬಹುದು ಎಂಬ ಆತಂಕವೂ ರಾಮ್ ನಲ್ಲಿದೆ. ಇನ್ನು ಸೀತಾಳಿಗೆ ಸದ್ಯ ಸಿಹಿ ಹೆಸರಿನಲ್ಲಿ ಅವಳಿಗೆ ಒಳ್ಳೆಯದಾಗಲಿ ಎಂದು ಪೂಜೆ ಮಾಡಿಸುತ್ತಿದ್ದಾರೆ ಎಂದೇ ಭಾವಿಸಿದ್ದಾಳೆ. ಆದರೆ, ಸೀತಾ ಮನೆಯಲ್ಲಿ ಇರುವಾಗಲೇ ಇದನ್ನೆಲ್ಲಾ ಹೇಗೆ ಮಾಡುವುದು ಎಂಬುದು ಅರ್ಥವಾಗುತ್ತಿಲ್ಲ. ಭಾರ್ಗವಿ ಮತ್ತು ಸೂರಿ ಇಬ್ಬರೂ ಈ ಕಾರ್ಯವನ್ನು ಮಾಡಲೇಬೇಕು ಎಂದು ತೀರ್ಮಾನವನ್ನು ಮಾಡಿದ್ದಾರೆ. ಅಶೋಕ್ ತಡೆಯಲು ಯತ್ನಿಸಿದ್ದು, ವಿಫಲವಾಗಿದ್ದಾನೆ. ರಾಮ್ ತಾನಿರುವ ಸ್ಥಿತಿಯಲ್ಲಿ ಯಾರಿಗೂ ಏನನ್ನೂ ಹೇಳಲಾಗದೇ ಸುಮ್ಮನಾಗಿದ್ದಾನೆ.

seetharama-serial-26-december-episode-written-update

ಸೀತಾಳಿಗೆ ಮಕ್ಕಳಿಂದ ಲಾಲಿ ಹಾಡು

ಇತ್ತ ಸುಬ್ಬಿಗೆ ಅಮ್ಮ ಎಂಬ ಎರಡಕ್ಷರವೇ ಪ್ರಪಂಚವಾಗಿದೆ. ಕಣ್ಮು ಬಿಟ್ಟಾಗಿನಿಂದಲೂ ತಾಯಿಯನ್ನೇ ಕಾಣದ ಸುಬ್ಬಿ ಮಾತ್ರ ಸದಾ ಅಮ್ಮನ ಜಪ ಮಾಡುತ್ತಿರುತ್ತಾಳೆ. ಮಾತು ಮಾತಿಗೂ ಕಾಣದ ತಾಯಿ ಬಗ್ಗೆಯೇ ಹೇಳುತ್ತಿರುತ್ತಾಳೆ. ಸೀತಾಳಿಗೆ ನಿದ್ದೆ ಬರುತ್ತಿಲ್ಲ ಎಂಬುದನ್ನು ಗಮನಿಸಿದ ಸಿಹಿಯ ಆತ್ಮ ಅಮ್ಮನಿಗಾಗಿ ಲಾಲಿ ಹಾಡನ್ನು ಹಾಡಿದ್ದಾಳೆ. ಇತ್ತ ಸುಬ್ಬಿಯೂ ಸೀತಾ ಫೋಟೋ ಜೊತೆಗೆ ಮಲಗಿಕೊಂಡು ಲಾಲಿ ಹಾಡು ಹಾಡಿದ್ದಾಳೆ. ಸದಾ ಅಮ್ಮನ ಜಪ ಮಾಡುವ ಸುಬ್ಬಿಯನ್ನು ಸೀತಾ ಮಡಿಲಿಗೆ ಸೇರಿಸುತ್ತಾಳಾ ಸಿಹಿ..? ಎಂಬ ಪ್ರಶ್ನೆ ಎದ್ದಿದೆ.

ತನ್ನ ಸಾವಿನ ಬಗ್ಗೆ ಅರಿತ ಸಿಹಿ

ರಾಮ್ ಸಿಹಿಯ ಕೊರಳಿಗೆ ಸೀತಾ ಹುಟ್ಟುಹಬ್ಬದ ದಿನ ಧರಿಸಿದ ಸರವನ್ನು ತೆಗೆದು ನೋಡುತ್ತಾ ಎಮೋಷನಲ್ ಆಗಿರುತ್ತಾನೆ. ಆಗ ಸಿಹಿಯ ಆತ್ಮ ಆ ಸರ ತನ್ನ ಕೊರಳಿನಲ್ಲಿರುವುದನ್ನು ಕಂಡು ಆಶ್ಚರ್ಯಪಡುತ್ತಾಳೆ. ಜೊತೆಗೆ ಸೀತಾ ಹುಟ್ಟುಹಬ್ಬದ ದಿನ ಏನೆಲ್ಲಾ ನಡೆಯಿತು ಎಂಬುದನ್ನು ಮೆಲುಕು ಹಾಕುತ್ತಿರುತ್ತಾಳೆ. ಆಗ ಸಿಹಿಗೆ ತಾವು ಲಾಯರ್ ಆಫೀಸಿಗೆ ತೆರಳಿದ್ದು, ಬಳಿಕ ಮನೆಗೆ ಬಂದು ವಾಪಸ್ ಹೋಗಿದ್ದು, ತನಗೆ ಆಕ್ಸಿಡೆಂಟ್ ಆಗಿದ್ದು ನೆನಪಾಗುತ್ತದೆ. ಅಂದಿನಿಂದ ತಾನು ಯಾರ ಕಣ್ಣೀಗೂ ಕಾಣುತ್ತಿಲ್ಲ ಎಂಬ ಸತ್ಯ ಸಿಹಿ ಆತ್ಮಕ್ಕೆ ಅರಿವಾಗಿದೆ. ಇನ್ನು ಸೀತಾ ಮಗಳ ಹೆಸರಿನಲ್ಲಿ ಪೂಜೆ ನಡೆಯುತ್ತಿದೆ ಎಂದು ತಾನೇ ಎಲ್ಲವನ್ನೂ ಸಿದ್ಧ ಪಡಿಸಿದ್ದಾಳೆ. ಪುರೋಹಿತರು ಸಿಹಿಯ ಫೋಟೋ ಮತ್ತು ಹಾರ ಬೇಕು ಎಂಬ ಮಾತು ಕೇಳಿದ ಸೀತಾ ಶಾಕ್ ಆಗುತ್ತಾಳೆ. ಆದರೆ, ರಾಮ್ ಸಿಹಿಯನ್ನು ಕರೆದುಕೊಂಡು ಬರುವಂತೆ ಮಾತು ಬದಲಿಸುತ್ತಾನೆ.

ಹಣದ ಜೊತೆಗೆ ಗತ್ತಿನಲ್ಲಿ ಬಂದ ಸುಬ್ಬಿ

ಸೀತಾ ಅಲ್ಲಿಂದ ತೆರಳಿದ ಬಳಿಕ ಭಾರ್ಗವಿ ಪುರೋಹಿತರಿಗೆ ಸೀತಾಳ ಸ್ಥಿತಿಯನ್ನು ಅರ್ಥ ಮಾಡಿಸಿದ್ದಾಳೆ. ಹಾಗಾಗಿ ಸಿಹಿಯ ಫೋಟೋ ಮತ್ತು ಹಾರವಿಲ್ಲದೇ ಕಾರ್ಯ ಮಾಡುವಂತೆ ಹೇಳಿದ್ದಾಳೆ. ಇತ್ತ ಸುಬ್ಬಿ ಮನೆಯನ್ನು ಕೆಡವಲು ಮೂರು ದಿನ ಗಡುವು ಇತ್ತು. ಈಗ ಆ ವ್ಯಕ್ತಿ ಜೆಸಿಬಿ ಸಮೇತ ಬಂದು ಮನೆಗಳನ್ನು ಉರುಳಿಸಲು ಮುಂದಾಗಿದ್ದಾನೆ. ಇದೇ ಸಂದರ್ಭದಕ್ಕೆ ಸರಿಯಾಗಿ ಸುಬ್ಬಿ ಗತ್ತಿನಿಂದ ನಡೆದು ಬಂದಿದ್ದು, ಕೈಯಲ್ಲಿ ಹಣದ ಬ್ಯಾಗ್ ಅನ್ನು ಹಿಡಿದದಿದ್ದಾಳೆ. ತಮ್ಮ ಮನೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X