Seetharama ; ರುದ್ರಪ್ರತಾಪ್ ಬಗ್ಗೆ ಮನೆಗೆ ಬಂದ ಡಿಜಿಪಿ ಕೊಟ್ಟ ಸುಳಿವೇನು..?
ಸೀತಾರಾಮ ಧಾರಾವಾಹಿಯಲ್ಲಿ ರುದ್ರಪ್ರತಾಪ್ ಬಗ್ಗೆ ಸಿಹಿ ಎಲ್ಲಾ ಮಾಹಿತಿಯನ್ನು ಸೀತಾಳಿಗೂ ಹೇಳುತ್ತಾಳೆ.ಆಗ ಸಿಹಿಗೆ ನೀನು ತುಂಬಾ ಒಳ್ಳೆಯ ಕೆಲಸ ಮಾಡಿದೆ ಎಂದು ಸೀತಾ ಹೊಗಳುತ್ತಾಳೆ. ಜೊತೆಗೆ ಸಿಹಿಗೆ ರುದ್ರಪ್ರತಾಪ್ ಮತ್ಯಾವತ್ತೂ ಬರುವುದಿಲ್ಲ. ರುದ್ರಪ್ರತಾಪ್ ನಿಂದ ರಾಮ್ ತಮಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತಾರೆ ಎಂದು ಸಮಾಧಾನ ಮಾಡುತ್ತಾಳೆ. ರಾಮ್ ಫೋನ್ ಮಾಡಿ ಸೀತಾಳಿಗೆ ಏನೇನಾಯ್ತು ಎಂದು ವಿವರವಾಗಿ ಹೇಳುತ್ತಾನೆ. ಬಳಿಕ ಸಿಹಿ ಕೆಲಸವನ್ನು ಹೊಗಳುತ್ತಾನೆ. ಅಂಜಲಿ ಬಗ್ಗೆ ಇಬ್ಬರೂ ಬೇಸರ ಮಾಡಿಕೊಳ್ಳುತ್ತಾರೆ.
ಅಂಜಲಿಗೆ ಸಮಾಧಾನ ಮಾಡಿದ ಅಶೋಕ್
ರಾಮ್ ಮನೆಯಲ್ಲಿ ರುದ್ರಪ್ರತಾಪ್ ಕೆಟ್ಟತನವನ್ನು ಮಾತನಾಡುತ್ತಾರೆ. ಅಂಜಲಿ ಆಗ ರುದ್ರಪ್ರತಾಪ್ ನಂಬರ್ ಬ್ಲಾಕ್ ಮಾಡುತ್ತಾಳೆ.ಒಬ್ಬಳೇ ಸಂಕಟ ಅನುಭವಿಸುತ್ತಿರುತ್ತಾಳೆ.ಆಗ ಬರುವ ರಾಮ್ ಅಂಜಲಿಗೆ ಸಮಾಧಾನ ಮಾಡುತ್ತಾನೆ.ಅವನು ನಿನ್ನ ಹತ್ರಕ್ಕೆ ಬರುವುದಕ್ಕೂ ನಾವು ಬಿಡಬಾರದಿತ್ತು.ಆಗಿದ್ದನ್ನೆಲ್ಲಾ ಮರೆತು ಬಿಡು. ನಿನ್ನ ಮುಂದಿನ ಜೀವನ ತುಂಬಾ ಚೆನ್ನಾಗಿರುತ್ತೆ ಎಂದು ಹೇಳುತ್ತಾನೆ. ಅಶೋಕ್ ಕಣ್ಣೀರು ಹಾಕುತ್ತಾ ಅಂಜಲಿಯನ್ನು ಅಪ್ಪಿಕೊಳ್ಳುತ್ತಾನೆ. ಆಗ ಅಂಜಲಿ ಇದು ರಾಮ್ ಅಣ್ಣನ ಮದುವೆ.ಇಂತಹ ಸಂದರ್ಭದಲ್ಲಿ ನಾವೆಲ್ಲಾ ಖುಷಿಯಾಗಿ ಇರಬೇಕು ಎಂದು ಹೇಳುತ್ತಾ ಅಂಜಲಿ ತನ್ನನ್ನು ತಾನು ಸಮಾಧಾನ ಮಾಡಿಕೊಳ್ಳುತ್ತಾಳೆ.

ಮನೆಗೆ ಡಿಜಿಪಿ ಕರೆಸಿದ ಅಶೋಕ್
ರಾಮ್ ರುದ್ರಪ್ರತಾಪ್ ನನ್ನು ಜೈಲಿನಿಂದ ಬಿಡಿಸಿದವರು ಯಾರು ಎಂದು ತಿಳಿದುಕೊಳ್ಳಲು ಕಾತುರರಾಗಿದ್ದಾನೆ. ಹೀಗಾಗಿ ಡಿಜಿಪಿಯನ್ನು ಭೇಟಿ ಮಾಡಲು ಹೊರಟಿದ್ದಾನೆ. ಆದರೆ, ಭಾರ್ಗವಿ ಕಂಕಣ ಕಟ್ಟಿಕೊಂಡ ಬಳಿಕ ಮನೆಯಿಂದ ಹೊರಗೆ ಹೋಗಬಾರದು ಎಂದು ಬೈಯುತ್ತಾಳೆ.ಅದಕ್ಕೆ ಸೂರಿ ಜೊತೆಗೆ ಅಶೋಕ್ ಮಾತನಾಡಿ ಡಿಜಿಪಿ ಅನ್ನು ಮನೆಗೆ ಕರೆಸುವ ವ್ಯವಸ್ಥೆಯನ್ನು ಮಾಡಿರುತ್ತಾನೆ.ಸೂರಿ ಮಾತಿಗೆ ಗೌರವ ಕೊಟ್ಟು ಡಿಜಿಪಿ ಮನೆಗೆ ಬರುತ್ತಾರೆ. ಆಗ ಡಿಜಿಪಿ ಬಂದು ಮಾಹಿತಿ ನೀಡುತ್ತಾರೆ. ಇದು ಭಾರ್ಗವಿಗೆ ಸ್ವಲ್ಪವೂ ಇಷ್ಟ ಇರುವುದಿಲ್ಲ.
ರುದ್ರಪ್ರತಾಪ್ ಬಗ್ಗೆ ಹೇಳಿದ ಡಿಜಿಪಿ
ಮನೆಗೆ ಬಂದ ಡಿಜಿಪಿ ಅವರು ಶಶಿಕಲಾ ದೇಸಾಯಿ ಎಂಬುವವರು ರುದ್ರಪ್ರತಾಪ್ ನನ್ನು ಜೈಲಿನಿಂದ ಬಿಡಿಸಿದ್ದಾರೆ ಎಂದು ಹೇಳುತ್ತಾರೆ. ದೇಸಾಯಿ ಎಂಬ ಕುಟುಂಬದ ಹೆಸರಿರುವ ಶಶಿಕಲಾ ಎಂಬಾಕೆ ಬಗ್ಗೆ ತಮಗ್ಯಾರಿಗೂ ಗೊತ್ತಿಲ್ಲ ಎಂದು ಮಾತನಾಡಿಕೊಳ್ಳುತ್ತಾರೆ. ಹೆಸರು ಕೇಳಿದ ಕೂಡಲೇ ಭಾರ್ಗವಿಗೆ ಖುಷಿಯಾಗುತ್ತದೆ. ಸದ್ಯ ತಾನು ಸಿಕ್ಕಿ ಬೀಳಲ್ಲಿ ಎಂದು ನಿಟ್ಟುಸಿರು ಬಿಡುತ್ತಾಳೆ. ನಾನು ಮತ್ತು ಅಶೋಕ್ ಈ ಮದುವೆ ಆಗುವವರೆಗೂ ಒಂದೇ ಟೀಂ. ನೀನು ಯಾವುದೇ ಕಾರಣ ಕೊಡದೇ, ನಮ್ಮ ಮಾತನ್ನು ಕೇಳಬೇಕು ಎಂದು ರಾಮ್ ಗೆ ಹೇಳುತ್ತಾಳೆ. ಅಶೊಕ್ ಭಾರ್ಗವಿ ಮಾತಿನ ಅರ್ಥವನ್ನು ತಿಳಿದರೂ ಏನೂ ತಿಳಿಯದಂತೆ ಸುಮ್ಮನಿರುತ್ತಾನೆ.

ಎಲ್ಲರಿಗೂ ಮದುವೆಗೆ ಆಹ್ವಾನಿಸಿದ ಸಿಹಿ
ಸಿಹಿ ಮೊದಲ ದಿನ ಶಾಲೆಗೆ ಹೋಗಿದ್ದು, ಹತ್ತು ದಿನ ರಜೆ ಬೇಕು ಎಂದು ಲೀವ್ ಲೆಟರ್ ಬರೆದಿದ್ದಾಳೆ. ಲೀವ್ ಲೆಟರ್ ಜೊತೆಗೆ ಮದುವೆಯ ಆಹ್ವಾನ ಪತ್ರಿಕೆಯನ್ನು ನೀಡಿದ ಸಿಹಿ ಶಾಲೆಯಲ್ಲಿ ಪ್ರತಿಯೊಬ್ಬರಿಗೂ ಇನ್ವಿಟೇಷನ್ ಕೊಟ್ಟಿದ್ದಾಳೆ. ತನ್ನ ತಾಯಿಯ ಮದುವೆಗೆ ತಾನೇ ಆಹ್ವಾನ ನೀಡಿದ್ದು, ಶಾಲೆಯಲ್ಲಿ ಎಲ್ಲರೂ ಖುಷಿಪಟ್ಟಿದ್ದಾರೆ. ಶಿಕ್ಷಕರಿಗಷ್ಟೇ ಅಲ್ಲದೇ, ತನ್ನ ಗೆಳಯರನ್ನೂ ಮದುವೆಗೂ ಆಹ್ವಾನಿಸಿದ್ದಾಳೆ. ಸಿಹಿಯ ಉತ್ಸಾಹವನ್ನು ಕಂಡು ಎಲ್ಲರೂ ಒಳ್ಳೆಯದಾಗಲಿ ಎಂದು ಶುಭ ಕೋರಿದ್ದಾರೆ. ಇನ್ನು ಶಾಂತಜ್ಜಿ ಮತ್ತು ಮೂರ್ತಿ ತಾತ ಇನ್ಮುಂದೆ ಸಿಹಿ ಮತ್ತು ಸೀತಾ ಇಲ್ಲಿರುವುದಿಲ್ಲ ಎಂದು ಬೇಸರ ತೋರಿಸಿದ್ದಾರೆ.


Click it and Unblock the Notifications











