Seetharama ; ಸೀತಾಳಿಂದ ಸತ್ಯ ತಿಳಿಯಲು ಯತ್ನಿಸಿದ ಭಾರ್ಗವಿ, ಮಗಳ ಬಗ್ಗೆ ಸೀತಾಗೆ ಆತಂಕ..!
ಸೀತಾರಾಮ ಧಾರಾವಾಹಿಯಲ್ಲಿ ಡಾ.ಮೇಘಶ್ಯಾಮ್ ಮತ್ತು ಶಾಲಿನಿ ಇಬ್ಬರೂ ರಾಮ್ ಮನೆಯಲ್ಲಿ ಸಿಹಿಯೊಂದಿಗೆ ಕಾಲ ಕಳೆಯುತ್ತಾ ಅರಾಮವಾಗಿದ್ದಾರೆ.ಭಾರ್ಗವಿ ಶ್ಯಾಮ್ ಮಗುವಿನ ಬಗ್ಗೆ ಮಾಹಿತಿ ಪಡೆಯಬೇಕು ಎಂದು ಡಾ.ಅನಂತಲಕ್ಷ್ಮೀ ಅವರನ್ನು ಭೇಟಿ ಮಾಡುತ್ತಾಳೆ. ಆದರೆ, ವೈದ್ಯೆ ಭಾರ್ಗವಿ ಸ್ನೇಹಿತೆಯಾಗಿದ್ದರೂ ಗುಟ್ಟು ಬಿಟ್ಟು ಕೊಡುವುದಿಲ್ಲ. ಭಾರ್ಗವಿಗೆ ಈಗ ಸೀತಾ ಮಗಳು ಸಿಹಿ ಶ್ಯಾಮ್ ಅವರಿಗೆ ಸೇರಬೇಕಿದ್ದ ಮಗು ಎಂಬ ಅನುಮಾನ ಶುರುವಾಗಿದೆ. ಇದರ ಹಿಂದಿನ ಸತ್ಯ ತಿಳಿದುಕೊಳ್ಳಲು ಒದ್ದಾಡುತ್ತಿದ್ದಾಳೆ.
ಸೀತಾ ಬಾಯಿ ಬಿಡಿಸಲು ಭಾರ್ಗವಿ ಯತ್ನ
ಸೀತಾಳಿಂದಲೇ ಬಾಯಿ ಬಿಡಿಸಬೇಕು ಎಂದು ಭಾರ್ಗವಿ ಆಲೋಚಿಸಿದ್ದಾಳೆ. ಹೀಗಾಗಿ ನಾಟಕೀಯವಾಗಿ ತನಗೆ ಬೆನ್ನು ನೋವಿದ್ದು, ಇದು ಸರಿಯಾಗಿ ಬಾಣಂತನ ಮಾಡಿಸಿಕೊಳ್ಳದೇ ಇರುವುದಕ್ಕೆ ಬಂದದ್ದು, ನಿನ್ನ ಬಾಣಂತನ ಹೇಗೆ ಆಯ್ತು ಯಾರು ಮಾಡಿದ್ದು ಎಂದು ಸೀತಾಳನ್ನು ಪ್ರಶ್ನಿಸುತ್ತಾಳೆ. ಭಾರ್ಗವಿ ಕೇಳಿದ ಪ್ರಶ್ನೆಗೆ ದಂಗಾದ ಸೀತಾ ಸರಿಯಾಗಿ ಉತ್ತರ ಕೊಡುವುದಿಲ್ಲ. ಅಲ್ಲದೇ, ನಿನ್ನ ತಾಯಿ, ಮತ್ತು ಅತ್ತೆ ಎಂದು ಅವರ ಬಗ್ಗೆಯೂ ವಿಚಾರಿಸುತ್ತಾಳೆ. ಬಳಿಕ ನಿನ್ನ ಗಂಡನಿಗೆ ಏನಾಗಿತ್ತು ಎಂದು ಕೇಳುತ್ತಾಳೆ. ಇದನ್ನೆಲ್ಲಾ ಕೇಳಿದ ಸೀತಾ ಮೌನವಾಗುತ್ತಾಳೆ. ರಾಮ್ ಗೆ ನನ್ನ ಹಳೆಯ ಕಥೆಯ ಬಗ್ಗೆ ಮಾತನಾಡುವುದು ಇಷ್ಟವಿಲ್ಲ. ಹಾಗಾಗಿ ನಾನು ಈ ವಿಚಾರವನ್ನು ಬೇರೆಯವರ ಬಳಿ ಚರ್ಚಿಸೊಲ್ಲ ಎಂದು ಖಡಕ್ ಆಗಿ ಹೇಳಿ ಹೋಗುತ್ತಾಳೆ.

ಮಗಳ ಬಗ್ಗೆ ಸೀತಾಳಲ್ಲಿ ಆತಂಕ
ಶ್ಯಾಮ್ ಅವರು ಮನೆಯಿಂದ ಆದಷ್ಟು ಭೇಗನೇ ದೂರ ಹೋಗುವುದು ಒಳ್ಳೆಯದು. ಇಲ್ಲದೇ ಹೋದರೆ, ನನ್ನ ಮಗಳು ನನ್ನಿಂದ ದೂರಾಗುತ್ತಾಳೆ ಎಂಬ ಆತಂಕದಲ್ಲಿ ಸೀತಾ ಇದ್ದಾಳೆ. ಸಿಹಿ ಇತ್ತೀಚೆಗೆ ಅತೀ ಹೆಚ್ಚು ಸಮಯ ಶ್ಯಾಮ್ ಮತ್ತು ಶಾಲಿನಿ ಜೊತೆಗೆ ಕಾಲ ಕಳೆಯುತ್ತಾಳೆ. ಇದು ಸೀತಾಳಲ್ಲಿ ಆತಂಕ ಮೂಡಿಸಿದೆ. ಎಲ್ಲಿ ನನ್ನ ಮಗಳು ನನ್ನಿಂದ ದೂರಾಗುತ್ತಾಳೋ ಎಂದು ಭಯ ಪಟ್ಟಿದ್ದಾಳೆ. ಹೀಗಾಗಿ ಶ್ಯಾಮ್ ಅವರಿಗೆ ದೂರದಲ್ಲಿ ಮನೆಯನ್ನೂ ನೋಡಿರುತ್ತಾಳೆ. ಆದರೆ, ಶ್ಯಾಮ್ ಸಿಹಿಯನ್ನು ನಿತ್ಯ ಭೇಟಿಯಾಗಬೇಕೆಂದರೆ ಹತ್ತಿರದಲ್ಲೇ ಮನೆ ಮಾಡಬೇಕು ಎಂದು ಆಲೋಚಿಸಿದ್ದಾರೆ. ಇದು ಸೀತಾಳ ಆತಂಕವನ್ನು ಹೆಚ್ಚು ಮಾಡುತ್ತದೆ.
ಶ್ಯಾಮ್ ಸ್ಕೆಚ್ ಮಾಡಿಸಿದ ರುದ್ರಪ್ರತಾಪ್
ರುದ್ರಪ್ರತಾಪ್ ಗೆ ಸಿಹಿ ತಂದೆಯನ್ನು ಹುಡುಕುವ ಕೆಲಸ ಕಷ್ಟಕರವಾಗಿದೆ. ಭಾರ್ಗವಿ ಬೇರೆ ಪದೇ ಪದೇ ಫೋನ್ ಮಾಡಿ ಹೇಳುತ್ತಲೇ ಇರುತ್ತಾಳೆ. ರುದ್ರಪ್ರತಾಪ್ ಕೂಡ ಸಿಹಿ ತಂದೆ ಸಿಕ್ಕರೆ, ಸೀತಾ ತನ್ನವಳಾಗುತ್ತಾಳೆ ಎಂಬ ಭ್ರಮೆಯಲ್ಲಿದ್ದಾನೆ. ಹೀಗಾಗಿ ರುದ್ರಪ್ರತಾಪ್ ಸಿಹಿ ಫೋಟೋವನ್ನು ತೋರಿಸಿ, ಇವರ ತಂದೆ ಹೇಗಿರಬಹುದು ಎಂಬುದನ್ನು ಸ್ಕೆಚ್ ಮಾಡಿಸಿದ್ದಾನೆ. ಸ್ಕೆಚ್ ನಲ್ಲಿರುವಾತ ಥೇಟ್ ಶ್ಯಾಮ್ ನಂತಿದ್ದು, ರುದ್ರಪ್ರತಾಪ್ ಕೈಗೆ ಶ್ಯಾಮ್ ಕಾಣಿಸಿಕೊಂಡರೆ ಏನಾಗಬಹುದು ಎಂಬ ಕುತೂಹಲ ಮೂಡಿದೆ.

ಅಶೋಕ್ ಮುಚ್ಚಿಟ್ಟಿದ್ದ ಸತ್ಯ ತಿಳಿದ ಪ್ರಿಯಾ
ಇತ್ತ ಅಶೋಕ್ ಪ್ರಿಯಾಳಿಗೆ ಬ್ರೆಸ್ಟ್ ಕ್ಯಾನ್ಸರ್ ಇದೆ ಎಂಬುದನ್ನು ಮುಚ್ಚಿಟ್ಟಿದ್ದು, ಆಕೆಯ ಖುಷಿಗಾಗಿ ಹೊರಗಡೆ ಟ್ರಿಪ್ ಕರೆದುಕೊಂಡು ಬಂದಿದ್ದಾನೆ. ಆದರೆ, ಪ್ರಿಯಾಳಿಗೆ ತನ್ನ ಬಗ್ಗೆ ಎಲ್ಲಾ ಸತ್ಯವೂ ಗೊತ್ತಿದ್ದು, ಅಶೋಕ್ ಹೇಳಲಿ ಎಂದು ಕಾದಿದ್ದಾಳೆ. ಅಶೋಕ್ ಹೇಳದೇ ತನ್ನ ನೋವನ್ನೆಲ್ಲಾ ತಾನೇ ಬಚ್ಚಿಟ್ಟುಕೊಂಡಿದ್ದನ್ನು ಸಹಿಸಲಾರದೇ, ರಿಪೋರ್ಟ್ ನೋಡಿ ತನಗೂ ಸತ್ಯ ಗೊತ್ತಾಗಿದೆ ಎಂಬುದನ್ನು ಹೇಳುತ್ತಾಳೆ. ಅಲ್ಲದೇ, ಬ್ರೆಸ್ಟ್ ಕ್ಯಾನ್ಸರ್ ಕ್ಯೂರ್ ಮಾಡದಂತಹ ಖಾಯಿಲೆ ಏನಲ್ಲ. ಅದರಲ್ಲೂ ನೀವು ನನ್ನ ಜೊತೆಗೆ ಸಪೋರ್ಟಿವ್ ಆಗಿ ಇರುವಾಗ ನನಗೆ ಯಾವ ಭಯವೂ ಇಲ್ಲ. ನೀವ್ಯಾಕೆ ಹೀಗೆ ಎಂದು ಕೇಳುತ್ತಾಳೆ. ಅಶೋಕ್ ಕೂಡ ಎಮೋಷನಲ್ ಆಗುತ್ತಾನೆ.


Click it and Unblock the Notifications











