Seetharama ; ಸತ್ಯ ಹೇಳಿದ ಪ್ರಿಯಾಳಿಗೆ ಕಪಾಳಮೋಕ್ಷ ; ಸೀತಾ ಮನೆ ಸೇರಿದ ಸುಬ್ಬಿ..!
ಸೀತಾರಾಮ ಧಾರಾವಾಹಿಯಲ್ಲಿ ತಮ್ಮ ಸ್ಲಮ್ ಅನ್ನು ನೆಲಸಮ ಮಾಡಲು ಬಂದ ವ್ಯಕ್ತಿ ಕೈಗೆ ಕಂತೆ ಕಂತೆ ಹಣವನ್ನು ಸುಬ್ಬಿ ಕೊಟ್ಟು ಇಡೀ ಸ್ಲಮ್ ಜನರ ಪಾಲಿಗೆ ದೇವರಾಗಿದ್ದಾಳೆ. ಯಾರ ಕೈಯಲ್ಲೂ ಮಾಡಲಾಗದ ಕೆಲಸವನ್ನು ಚೋಟು ಮೆಣಸಿನಕಾಯಿಯಂತಿರುವ ಸುಬ್ಬಿ ಮಾಡಿದ್ದು, ಎಲ್ಲರೂ ಪ್ರಶಂಸಿದ್ದಾರೆ. ಆದರೆ, ಇದು ಭಾರ್ಗವಿ ಕೈಯಲ್ಲಿ ಸಹಿಸಲು ಆಗಿಲ್ಲ. ಮೂರು ಲಕ್ಷ ಹಣವನ್ನು ಅದು ಹೇಗೆ ತಂದು ಕೊಟ್ಟರು. ತಮ್ಮ ಪಾಲಾಗಬೇಕಿದ್ದ ಜಾಗ ಈಗ ಕೈ ತಪ್ಪಿದ್ದಕ್ಕೆ ಭಾರ್ಗವಿ ಕೋಪ ಮಾಡಿಕೊಂಡಿದ್ದು, ಬೇರೆ ದಾರಿ ಇಲ್ಲದೇ ಸುಮ್ಮನಾಗಿದ್ದಾಳೆ.
ಸತ್ಯ ಹೇಳಿದ ಗೆಳತಿಗೆ ಕಪಾಳಮೋಕ್ಷ
ಇತ್ತ ಸೀತಾ ಬೆಳ್ಳಿ ಗೊಂಬೆಗೆ ಸಿಹಿಯ ಫ್ರಾಕ್ ಅನ್ನು ಧರಿಸಿ ರೆಡಿ ಮಾಡುತ್ತಿರುತ್ತಾಳೆ. ಸೀತಾಳನ್ನು ನೋಡಲಾಗದ ಪ್ರಿಯಾ ಸತ್ಯ ಹೇಳಿದ್ದಾಳೆ. ನೀನು ಹೀಗಿರುವುದನ್ನು ನೋಡಲು ಸಾಧ್ಯವಿಲ್ಲ. ದಯವಿಟ್ಟು ಸತ್ಯವನ್ನು ಅರ್ಥ ಮಾಡಿಕೊ. ಸಿಹಿ ಬದುಕಿಲ್ಲ. ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ. ಈ ಸತ್ಯವನ್ನು ಅರ್ಥ ಮಾಡಿಕೊಳ್ಳದೇ ಒದ್ದಾಡುತ್ತಿರುವ ನಿನ್ನ ಸ್ಥಿತಿಯನ್ನು ನೋಡಲು ಕಷ್ಟವಾಗುತ್ತಿದೆ ಎಂದಿದ್ದಾಳೆ. ಪ್ರಿಯಾಳ ಮಾತನ್ನು ಕೇಳಿದ ಸೀತಾಳಿಗೆ ಕೋಪ ಬಂದಿದೆ. ಹೀಗಾಗಿ ಸೀತಾ ಪ್ರಿಯಾಳಿಗೆ ಕಪಾಳಕ್ಕೆ ಹೊಡೆದಿದ್ದಾಳೆ. ಸಿಹಿ ಕಣ್ಣ ಮುಂದೆಯೇ ಇದ್ದು, ಹೀಗೆಲ್ಲಾ ಮಾತನಾಡುತ್ತೀಯಾ ಎಂದು ಬೈದು ಕಳಿಸಿದ್ದಾಳೆ.

ಪ್ರಿಯಾಳಿಗೆ ಸಮಾಧಾನ ಮಾಡಿದ ಅಶೋಕ್
ಇದರಿಂದ ಪ್ರಿಯಾಳಿಗೆ ಬೇಸರವಾಗಿದೆ. ಸೀತಾ ನಡೆದುಕೊಂಡ ರೀತಿಯನ್ನು ಪ್ರಿಯಾ ಅಶೋಕ್ ಬಳಿ ಹೇಳಿಕೊಂಡಿದ್ದಾಳೆ. ಅಶೋಕ್ ಪ್ರಿಯಾಳನ್ನು ಸಮಾಧಾನ ಮಾಡಿದ್ದು, ಸಧ್ಯ ಸೀತಾ ಮನಸ್ಸು ಬಹಳ ಸೂಕ್ಷ್ಮವಾಗಿದೆ. ಅವಳಿಗೆ ನಾವು ಸತ್ಯ ಹೇಳಿದರೂ ಅರ್ಥವಾಗುವುದಿಲ್ಲ. ನೀನು ಸೀತಾ ಮೇಲೆ ಬೇಸರ ಮಾಡಿಕೊಳ್ಳಬೇಡ ಎಂದು ಅರ್ಥ ಮಾಡಿಸಿದ್ದಾನೆ. ಆದರೆ, ಪ್ರಿತಯಾಳಿಗೆ ಸೀತಾ ಸತ್ಯವನ್ನು ಅರಿಯದೆಯೇ ಒದ್ದಾಡುತ್ತಿರುವುದನ್ನು ಹಾಗೂ ಅವಳ ನಡವಳಿಕೆಯಿಂದ ಮನೆಯವರೆಲ್ಲಾ ಅನುಭವಿಸುತ್ತಿರುವ ಹಿಂಸೆಯನ್ನು ನೋಡಲು ಸಾಧ್ಯವಾಗುತ್ತಿಲ್ಲ.
ಭಾರ್ಗವಿ ಕೊಟ್ಟ ಜ್ಯೂಸ್ ಸೀತಾ ಕುಡಿತಾಳಾ..?
ಇನ್ನು ಭಾರ್ಗವಿ ಬೇಕಂತಲೇ ಸೀತಾ ಕುಡಿಯುವ ಜ್ಯೂಸ್ ನಲ್ಲಿ ಅದೇನೋ ಬೆರೆಸಿದ್ದಾಳೆ. ಇದನ್ನು ಸಿಹಿಯ ಆತ್ಮ ನೋಡಿದ್ದಾಗಿದೆ. ಸಾಧನಾಳಿಗೆ ಇದು ಗೊತ್ತಿಲ್ಲ. ಬೆಳಗ್ಗಿನಿಂದ ಉಪವಾಸವಿರುವ ಸೀತಾಳಿಗೆ ಜ್ಯೂಸ್ ಕೊಟ್ಟಿದ್ದಾಳೆ. ಸೀತಾ ಸಾಧನಾ ಬಳಿ ಸಿಹಿಯ ಬಗ್ಗೆ ಸಾಕಷ್ಟು ನೆನಪುಗಳನ್ನು ಹಂಚಿಕೊಂಡಿದ್ದಾಳೆ. ಸಾಧನಾ ಇದರಿಂದ ಸೀತಾಳಿಗೆ ಸಿಹಿಯ ಸಾವು ನಿಜ ಎಂಬ ಸತ್ಯ ಗೊತ್ತಿದೆ. ಆದರೆ, ಅವಳ ಮನಸ್ಸಿಗೆ ಗೊತ್ತಿರುವ ಸತ್ಯವನ್ನು ಅರಗಿಸಿಕೊಳ್ಳಲಾಗದೇ ಹೀಗೆ ನಡೆದುಕೊಳ್ಳೂತ್ತಿದ್ದಾಳೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾಳೆ. ಸಿಹಿ ಸಾಕಷ್ಟು ಬಾರಿ ಜ್ಯೂಸ್ ಕುಡಿಯ ಬೇಡ ಸೀತಮ್ಮ ಎಂದು ಹೇಳುತ್ತಲೇ ಇದ್ದಾಳೆ. ಆದರೂ, ಇದು ಸೀತಾಳಿಗೆ ಕೇಳದ ಕಾರಣ ಜ್ಯೂಸ್ ಕುಡಿಯಲು ಮುಂದಾಗಿದ್ದಾಳೆ.
ರಾಮ್ ಮನೆಗೆ ಕನ್ನ ಹಾಕಲು ಬಂದ ಸುಬ್ಬಿ
ಇದೇ ಸಂದರ್ಭಕ್ಕೆ ಸರಿಯಾಗಿ ಕಳ್ಳತನ ಮಾಡಲು ಬಂದಿರುವ ಸುಬ್ಬಿ ರಾಮ್ ನನ್ನು ನೋಡಿ ಗುರುತು ಹಿಡಿದಿದ್ದಾಳೆ. ಒಳ್ಳೆಯ ಜನ ಅವರ ಹಣ ಕದ್ದರೂ ದೂರು ಕೊಟ್ಟಿಲ್ಲ ಎನ್ನುತ್ತಾಳೆ. ಆದರೆ, ಅವರು ದೇಸಾಯಿ ಕುಟುಂಬದವರು. ಅವರ ಕಂಪನಿಯವರೇ ತಮ್ಮ ಸ್ಲಮ್ ಅನ್ನು ತಮ್ಮ ವಶ ಮಾಡಿಕೊಳ್ಳಲು ಬಂದಿದ್ದು, ಕೆಟ್ಟ ಜನ ಎಂದಿದ್ದು, ಈಗ ಸುಬ್ಬಿ ಅವರ ಮನೆಗೆ ಕನ್ನ ಹಾಕಲು ಹೊರಟಿದ್ದಾಳೆ. ರಾಮ್ ಮನೆ ಹೊಕ್ಕಿರುವ ಸುಬ್ಬಿ ಸಿಹಿಯಾಗಿ ಸೀತಾ ಜೊತೆಗೆ ಉಳಿಯುತ್ತಾಳಾ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.


Click it and Unblock the Notifications











