Seetha Rama ; ಹೊಸ ಚಾಲೆಂಜ್ ಒಪ್ಪಿಕೊಂಡ ರಾಮ : 400 ರೂಪಾಯಿ ಜೀವನ..!
ಸೀತಾರಾಮ ಧಾರಾವಾಹಿಯಲ್ಲಿ ಸೀತಾ ಮತ್ತು ರಾಮನ ನಿಶ್ಚಿತಾರ್ಥಕ್ಕೆ ತಯಾರಿ ನಡೆಯುತ್ತಿದೆ. ಭಾರ್ಗವಿಗೆ ಸೀತಾಳ ಮೇಲೆ ಕೋಪವಿದ್ದರೂ ಎಲ್ಲೂ ತೋರಿಸಿಕೊಳ್ಳುತ್ತಿಲ್ಲ. ಎಂಗೇಜ್ಮೆಂಟ್ ಗೆ ಡೈಮಂಡ್ ಉಂಗುರ ಬೇಡ ಎನ್ನುತ್ತಿರುವ ಸೀತಾಳನ್ನು ರಾಮ ಕನ್ವಿನ್ಸ್ ಮಾಡಿದ್ದಾನೆ. ಮಿಡಲ್ ಕ್ಲಾಸ್ ಜೀವನ ನಡೆಸುವ ನನ್ನ ಲೈಫ್ ಸ್ಟೈಲ್ ಗೂ ನಿಮ್ಮ ಲೈಫ್ ಸ್ಟೈಲ್ ಗೂ ಬಹಳ ವ್ಯತ್ಯಾಸವಿದೆ ಎಂದು ಹೇಳುತ್ತಾಳೆ.ರಾಮ ಕೂಡ ನಿಮ್ಮ ಜೀವನ ಶೈಲಿಗೆ ನಾನು ಅಡ್ಜಸ್ಟ್ ಆಗುತ್ತೀನಿ ಆದರೆ, ಕೆಲವೊಂದನ್ನ ನೀವು ಒಪ್ಪಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿ ಸೀತಾಳನ್ನು ಸಮಾಧಾನ ಪಡಿಸಿದ್ದಾನೆ.
ಅಮ್ಮನ ಎಂಗೇಜ್ ಮೆಂಟ್ ಖುಷಿಯಲ್ಲಿ ಸಿಹಿ
ಸೀತಾ ಮನೆಗೆ ಬಂದ ಮೇಲೂ ಕೂಡ ಡೈಮಂಡ್ ರಿಂಗ್ ತನಗೆ ಬೇಕಾ ಎಂದು ಯೋಚಿಸುತ್ತಿರುತ್ತಾಳೆ. ಅದೇ ಸಮಯಕ್ಕೆ ರಾಮ್ ಫೋನ್ ಮಾಡಿ ಮಾತನಾಡುತ್ತಾನೆ. ಆಗ ಸೀತಾ ತಮ್ಮ ಮಿಡಲ್ ಕ್ಲಾಸ್ ಜನರ ಜೀವನಕ್ಕೆ ನಿಮ್ಮಂತಹ ಶ್ರೀಮಂತರೂ ಅಡ್ಜಸ್ಟ್ ಆಗುವುದು ಕಷ್ಟ. ನಾವು ಅದೆಷ್ಟೋ ಸಲ 200-300 ರೂಪಾಯಿಯಲ್ಲಿ ದಿನ ಕಳೆಯುತ್ತೇವೆ ಎಂದು ಹೇಳುತ್ತಾಳೆ. ಈ ಮಾತನ್ನು ರಾಮ್ ಕೂಡ ಸೀರಿಯಸ್ ಆಗಿ ತೆಗೆದುಕೊಳ್ಳುತ್ತಾನೆ. ಇನ್ನು ಸಿಹಹಿಗೆ ತನ್ನ ಅಮ್ಮ ಹಾಗೂ ಫ್ರೆಂಡ್ ಮದುವೆ ನಡೆಯುತ್ತಿರುವುದು ಬಹಳ ಖುಷಿ ಕೊಟ್ಟಿದೆ. ಹಾಗಾಗಿ ವಠಾರದ ಮನೆ ಮನೆಗೂ ಹೋಗಿ ನಿಶ್ಚಿತಾರ್ಥಕ್ಕೆ ತಪ್ಪದೇ ಬನ್ನಿ ಎಂದು ಆಹ್ವಾನ ನೀಡಿದ್ದಾಳೆ.

ಮಿಡಲ್ ಕ್ಲಾಸ್ ಜೀವನ ನಡೆಸುತ್ತಿರೋ ರಾಮ್
ರಾಮ್ ಬೆಳಗೆದ್ದು ಸೀತಾ ಮಾತುಗಳನ್ನು ನೆನಪು ಮಾಡಿಕೊಳ್ಳುತ್ತಾನೆ. ತಾನು ಕೂಡ ಒಂದು ದಿನದಲ್ಲಿ ಕೇವಲ 400 ರೂಪಾಯಿಯಲ್ಲಿ ಇಡೀ ದಿನ ಕಳೆಯಬೇಕು ಎಂದು ತೀರ್ಮಾನಿಸುತ್ತಾನೆ. ವಿಶ್ವ ಚಿಕ್ಕಪ್ಪನ ಬಳಿ 400 ರೂಪಾಯಿ ಸಾಲ ಪಡೆದು ಮನೆಯಿಂದ ಹೊರಡುತ್ತಾನೆ. ಕಾರಿನಲ್ಲಿ ಹೋದರೆ ಖರ್ಚಾಗುತ್ತೆ ಎಂದು ಆಟೋದಲ್ಲಿ ಆಫೀಸ್ ಬಳಿ ಹೋಗುತ್ತಾನೆ. 290 ರೂಪಾಯಿ ಆಟೋಗೆ ಕೊಟ್ಟು 45ರೂಪಾಯಿಯಲ್ಲಿ ತಿಂಡಿ ತಿಂದು ಆಫೀಸಿಗೆ ಹೋಗುತ್ತಾನೆ. ಸೀತಾ ಎದುರಿಗೆ ಬಂದಿದ್ದು, ಅವಳಿಗೆ ನಿನಗೊಂದು ಸರ್ಪ್ರೈಸ್ ಇದೆ ಎಂದು ಹೇಳಿದ್ದಾನೆ. ಉಳಿದ 65 ರೂಪಾಯಿಯಲ್ಲಿ ಇಡೀ ದಿನವನ್ನು ರಾಮ ಹೇಗೆ ಕಳೆಯುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.
ಬೇಸರ ವ್ಯಕ್ತಪಡಿಸಿದ ಶಾಂತಮ್ಮ-ಮೂರ್ತಿ
ಇತ್ತ ಸೀತಾ ಎಂಗೇಜ್ಮೆಂಟ್ ಗೆಂದು ಶಾಂತಮ್ಮ ಹಾಗೂ ಮೂರ್ತಿ ಸಿಹಿಗೆ ಫ್ರಾಕ್ ತಂದಿರುತ್ತಾರೆ. ಆದರೆ, ಸೀತಾಳ ಅತ್ತಿಗೆ ಬಂದು ಇದನ್ನೆಲ್ಲಾ ಅವರು ಹಾಕೊಲ್ಲ. ಸುಮ್ಮನೆ ದುಡ್ಡು ಖರ್ಚು ಮಾಡಬೇಡಿ ಎಂದು ವ್ಯಂಗ್ಯ ಮಾಡುತ್ತಾಳೆ. ಇದು ಇಬ್ಬರಿಗೂ ಬೇಸರವನ್ನುಂಟು ಮಾಡುತ್ತದೆ. ಸೀತಾ ಬಳಿ ನಾವೇ ಈ ವಠಾರದಲ್ಲೇ ನಿನ್ನ ಎಂಗೇಜ್ ಮೆಂಟ್ ಮಾಡಬಹುದಿತ್ತು. ನೀನು ನಮ್ಮ ಮಗಳಂತೆಯೇ ಎಂದು ತಮ್ಮ ಬೇಸರವನ್ನು ಹೇಳಿಕೊಳ್ಳುತ್ತಾಳೆ. ಸೀತಾ ನಾನು ಎಷ್ಟೇ ದೊಡ್ಡ ಮನೆಗೆ ಹೋದರೂ ನೀವು ನನ್ನ ಅಪ್ಪ-ಅಮ್ಮನೇ ಎಂದು ಹೇಳಿ ಸಮಾಧಾನ ಮಾಡುತ್ತಾಳೆ.

ಸಮಸ್ಯೆಯಲ್ಲಿ ಸಿಕ್ಕಿ ಬೀಳುತ್ತಾಳಾ ಅಂಜಲಿ..?
ಇತ್ತ ಅಶೋಕ್, ಅಂಜಲಿ ಹಾಗೂ ಪ್ರಿಯಾ ಸೇರಿ, ಪ್ರೇಮಾ ಅಮ್ಮನ ಹುಟ್ಟುಹಬ್ಬವನ್ನು ಆಚರಿಸಲು ಪ್ಲಾನ್ ಮಾಡಿರುತ್ತಾರೆ. ಅಂಜಲಿ ದಾರಿಯಲ್ಲಿ ಬರುತ್ತಾ ಕೇಕ್ ತರುವುದಾಗಿ ಹೇಳಿರುತ್ತಾಳೆ.ಆದರೆ, ದಾರಿಯಲ್ಲಿ ರುದ್ರ ಪ್ರತಾಪ್ ಎದುರಾಗುತ್ತಾನೆ. ನನ್ನ ಜೊತೆಗೆ ಸ್ವಲ್ಪ ಸಮಯ ಕಳೆಯಿರಿ. ನಿಮ್ಮಿಂದ ದೂರ ಇರಲು ಆಗುತ್ತಿಲ್ಲ ಎಂದು ಗೋಳಾಡುತ್ತಾನೆ. ಅಂಜಲಿ ಮನೆಗೆ ಹೋಗಲೇಬೇಕು ಎಂದು ಹೊರಟು ಬಿಡುತ್ತಾಳೆ. ರುದ್ರ ಪ್ರತಾಪ್ ಎಷ್ಟೇ ಫೋನ್ ಮಾಡಿದರೂ ಕೂಡ ರೆಸ್ಪಾನ್ಸ್ ಮಾಡಲಾಗದೇ ಒದ್ದಾಡುತ್ತಿರುತ್ತಾಳೆ. ಇದನ್ನೆಲ್ಲಾ ಪ್ರೇಮಾ ಗಮನಿಸುತ್ತಿದ್ದು, ಅಂಜಲಿ ಯಾವುದೋ ಸಮಸ್ಯೆಯಲ್ಲಿ ಸಿಕ್ಕಿ ಬಿದ್ದಿದ್ದಾಳೆ ಎಂಬುದನ್ನು ಕನ್ಫರ್ಮ್ ಮಾಡಿಕೊಂಡಿದ್ದಾಳೆ.


Click it and Unblock the Notifications











