Seetha Raama ; ಸೀತಾ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಪ್ಲಾನ್ : ಕುತೂಹಲ ಹೆಚ್ಚಿಸಿದ ಹೊಸ ಪ್ರೊಮೋ ..!

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಸದ್ಯ ಸಿಹಿ ಮತ್ತು ಸೀತಾ ಇಬ್ಬರೂ ಎಲ್ಲಾ ಸಮಸ್ಯೆಗಳಿಂದ ದೂರ ಬಂದಿದ್ದು, ಇಬ್ಬರೂ ಮತ್ತೆ ಒಟ್ಟಿಗೆ ಅರಾಮವಾಗಿದ್ದಾರೆ. ಸಿಹಿ ವಾಪಸ್ ಮನೆಗೆ ಬಂದಿದ್ದಕ್ಕೆ ಸಾಧನಾ, ಅನಿ, ಸೂರಿ ಎಲ್ಲರೂ ಸಂಭ್ರಮಿಸಿದ್ದಾರೆ. ಅಶೋಕ್ ಮತ್ತು ಪ್ರಿಯಾ ಕೂಡ ಸಿಹಿ ವಾಪಸ್ ಬಂದಳು ಎಂದು ಖುಷಿ ಪಟ್ಟಿದ್ದಾರೆ. ಆದರೆ, ಭಾರ್ಗವಿಗೆ ಸಿಹಿ ವಾಪಸ್ ಬಂದಿದ್ದು ಸ್ವಲ್ಪವೂ ಇಷ್ಟವಿಲ್ಲ. ಅಲ್ಲದೇ, ತನ್ನ ಪ್ಲಾನ್ ಅನ್ನೇ ಉಲ್ಟಾ ಮಾಡಿ, ತನ್ನನ್ನೇ ಸೋಲಿಸಿದ್ದಾಳೆ ಎಂದು ಕೋಪ ಹಾಗೂ ಬೇಸರ ಎರಡೂ ಇದೆ.

ಭಾರ್ಗವಿ ಆಟ ಸಿಹಿಗೆ ಗೊತ್ತಾಗುತ್ತಾ..?

ಇನ್ನು ಮನೆಯಲ್ಲಿ ಎಲ್ಲರೂ ಸಿಹಿಯನ್ನು ಮನೆ ಮಹಾರಾಣಿ ಎಂಬಂತೆ ನೋಡಿಕೊಳ್ಳುತ್ತಿದ್ದು, ಎಲ್ಲರೂ ಅವಳ ಮಾತಿಗೆ ತಲೆದೂಗುತ್ತಿದ್ದಾರೆ. ಇದನ್ನು ನೋಡಿದ ಭಾರ್ಗವಿಗೆ ನಿರಾಸೆಯಾಗಿದ್ದು, ತನ್ನ ಆತ್ಮದ ಜೊತೆಗೆ ಅವಳೇ ಮಾತನಾಡಿಕೊಂಡಿದ್ದಾಳೆ. ಇಷ್ಟು ವರ್ಷದಿಂದ ತಾನು ಈ ಮನೆಯನ್ನು ನಡೆಸಿಕೊಂಡು ಬಂದಿದ್ದು, ಇದೀಗ ಸಿಹಿ ತನ್ನ ಆಟಗಳಿಗೆ ಅಡ್ಡವಾಗುತ್ತಿದ್ದಾಳೆ ಎಂದು ಬೇಸರವಾಗಿರುವ ಬಗ್ಗೆ ಮಾತನಾಡುತ್ತಿರುತ್ತಾಳೆ. ಸಿಹಿ ಇರುವವರೆಗೂ ತನ್ನ ಆಟ ನಡೆಯುವುದಿಲ್ಲ ಎಂದು ತಿಳಿದ ಭಾರ್ಗವಿ ಸಿಹಿಯನ್ನು ಹುಟ್ಟಲಿಲ್ಲ ಅನಿಸಿ ಬಿಡುತ್ತೇನೆ ಎಂದು ಒಬ್ಬಳೇ ಕಿರುಚುತ್ತಿರುತ್ತಾಳೆ. ಇದೇ ಸಮಯಕ್ಕೆ ಸರಿಯಾಗಿ ಸಿಹಿ ಬಂದು ಏನದು ಎಂದು ಕೇಳಿದ್ದಕ್ಕೆ ಸೀತಾ ಹುಟ್ಟುಹಬ್ಬದ ಬಗ್ಗೆ ಪ್ಲಾನ್ ಮಾಡುತ್ತಿದ್ದೇನೆ ಎಂದು ಸುಳ್ಳು ಹೇಳುತ್ತಾಳೆ.

seetharama-serial-27-november-episode-written-update

ಸೀತಾಳ ಹುಟ್ಟುಹಬ್ಬಕ್ಕೆ ಸರ್ಪ್ರೈಸ್

ಸಿಹಿ ಭಾರ್ಗವಿಯ ಮಾತನ್ನು ಸೀತಾಳ ಬಳಿ ಹೇಳಲು ಯತ್ನಿಸುತ್ತಾಳೆ. ಆದರೆ, ಸಿಹಿಗೆ ಹುಟ್ಟಲಿಲ್ಲ ಎಂಬ ಪದ ನೆನಪಾಗುವುದಿಲ್ಲ. ಭಾರ್ಗವಿ ಚಿಕ್ಕಿ ವಿಚಾರದಲ್ಲಿ ಏನೋ ಸರಿ ಇಲ್ಲ ಎಂಬುದನ್ನು ತಿಳಿಸಲು ಯತ್ನಿಸುತ್ತಾಳೆ. ಆದರೆ, ಸೀತಾಳಿಗೆ ಸಿಹಿ ಮಾತು ಅರ್ಥವಾಗುವುದಿಲ್ಲ. ಇನ್ನು ಮನೆಯವರೆಲ್ಲಾ ಸೇರಿ ಸೀತಾಳ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಕೊಡಬೇಕು ಎಂದು ಪ್ಲಾನ್ ಮಾಡುತ್ತಿದ್ದಾರೆ. ಅದರಲ್ಲೂ ಸೂರಿ ಸೀತಾ ಹುಟ್ಟುಹಬ್ಬಕ್ಕೆ ಸಿಹಿ ಹೆಸರಲ್ಲೂ ಆಸ್ತಿ ಬರೆಯಬೇಕು ಎಂದುಕೊಂಡಿದ್ದು, ಈ ಪ್ಲಾನ್ ಬಗ್ಗೆ ಭಾರ್ಗವಿಗೆ ಗೊತ್ತಿಲ್ಲ. ಸೀತಾ ಹೆಸರಿಗೆ ಆಸ್ತಿಯನ್ನು ಬರೆದರೆ, ಅವಳನ್ನು ಹೆದರಿಸಿ ತನ್ನ ಹೆಸರಿಗೆ ಮಾಡಿಕೊಳ್ಳಬೇಕು ಎಂದು ಆಲೋಚಿಸಿದ್ದಾಳೆ. ಆದರೆ, ಸೀತಾ ಹುಟ್ಟುಹಬ್ಬದ ದಿನ ಸೀತಾ ಜೊತೆಗೆ ಭಾರ್ಗವಿಗೂ ಸರ್ಪ್ರೈಸ್ ಆಗುವುದು ಗ್ಯಾರೆಂಟಿ.


ಮಗಳಿಗಾಗಿ ಹುಚ್ಚಿಯಾಗುತ್ತಾಳಾ ಸೀತಾ

ಇನ್ನು ಈ ಹಿಂದೆ ಜೀ ವಾಹಿನಿ ಸಿಹಿ ಅಪಘಾತದಲ್ಲಿ ಸಾಯುವ ಪ್ರೊಮೋ ನೋಡಿದ್ದು, ಇದೀಗ ಸಿಹಿ ಸಾವನ್ನಪ್ಪಿದಾಗ ಸೀತಾ ಹುಚ್ಚಿಯಾಗುವ ಪ್ರೊಮೋವನ್ನು ಪ್ರಸಾರ ಮಾಡಲಾಗಿದೆ. ಇದರ ಪ್ರಕಾರ ಸಿಹಿಯನ್ನು ಕಳೆದುಕೊಂಡು ಸೀತಾ ಹುಚ್ಚಿಯಾಗಿರುತ್ತಾಳೆ. ರಾಮ್ ತನ್ನ ಹೆಂಡತಿಯ ಪರೀಸ್ಥಿತಿಯನ್ನು ಕಂಡು ಹೇಗೆ ಇದರಿಂದ ಹೊರಬರುವುದು ಎಂದು ತಲೆ ಕೆಡಿಸಿಕೊಂಡಿರುತ್ತಾನೆ.


ಸೀತಾಳ ಬಾಳಿಗೆ ಸಿಹಿಯ ಸಹೋದರಿ ಬರುತ್ತಾಳಾ..?

ಇದೇ ಸಂದರ್ಭದಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ ಸಿಹಿ ಆತ್ಮ ಊರೆಲ್ಲಾ ಅಲೆದಿದ್ದು, ತನ್ನ ಸಹೋದರಿಯನ್ನು ಕಾಣುತ್ತಾಳೆ. ಅವಳ ಸಹಾಯ ಪಡೆದು ಮತ್ತೆ ಸೀತಾಳ ಮಡಿಲನ್ನು ಸೇರುತ್ತಾಳಾ ಎಂಬ ಕುತೂಹಲ ಮೂಡಿದೆ. ಸೀತಾ ಜನ್ಮ ನೀಡಿದ್ದು, ಅವಳಿ ಮಕ್ಕಳಿಗೆ ಎಂಬುದು ಆಕೆಗೇ ಗೊತ್ತಿರುವುದಿಲ್ಲ. ಸಿಹಿ ಮಾತ್ರ ಅವಳ ಜೊತೆಗೆ ಇರುತ್ತಾಳೆ. ಮತ್ತೊಂದು ಮಗು ಸರ್ಕಸ್ ಮಾಡುವ ಕುಟುಂಬದೊಂದಿಗೆ ಸೇರಿರುತ್ತಾಳೆ. ಈ ವಿಚಾರ ಸಿಹಿಯ ಸಾವಿನ ಬಳಿಕ ತಿಳಿಯಲಿದ್ದು, ಈಗ ಈ ಹೊಸ ಪ್ರೊಮೋ ವೀಕ್ಷಕರಲ್ಲಿ ಗೊಂದಲದ ಜೊತೆಗೆ ಕುತೂಹಲವನ್ನೂ ಹೆಚ್ಚಿಸಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X