Seetharama ; ಸೀತಾಳನ್ನು ಆಸ್ಪತ್ರೆಗೆ ಸೇರಿಸಲು ಸೂರಿ ನಿರ್ಧಾರ : ಈಗ ರಾಮ್ ಏನು ಮಾಡುತ್ತಾನೆ..?
ಸೀತಾರಾಮ ಧಾರಾವಾಹಿಯಲ್ಲಿ ರಾಮ್ ಮತ್ತು ಅಶೋಕ್ ಸುಬ್ಬಿಯನ್ನು ಹುಡುಕಾಡುತ್ತಿದ್ದಾರೆ. ಶಾಲೆಯಲ್ಲಿನ ಹಾರ್ಡ್ ಡಿಸ್ಕ್ ಹಾಳಾದ ಕಾರಣ ಸುಬ್ಬಿಯ ಮುಖವನ್ನು ನೋಡಲಾಗಲಿಲ್ಲ. ಹಾಗಾಗಿ ಸ್ಲಮ್ ಬಳಿ ಸುಬ್ಬಿಯನ್ನು ಹುಡುಕಾಡುತ್ತಿದ್ದಾರೆ. ಅಶೋಕ್ ಮತ್ತು ರಾಮ್ ಇಬ್ಬರು ಬಂದಾಗ ಸುಬ್ಬಿಗೆ ತನ್ನನ್ನೇ ಹುಡುಕಿಕೊಂಡು ಬಂದಿದ್ದಾರೆ ಎಂಬುದು ಗೊತ್ತಾಗಿದೆ. ಹೀಗಾಗಿ ಅವಳು ಅವರಿಂದ ತಪ್ಪಿಸಿಕೊಂಡಿದ್ದಾಳೆ. ಮೊದಲೇ ರಾಮ್ ಎಂದರೆ ಸುಬ್ಬಿಗೆ ಒಂದು ರೀತಿಯ ಕೋಪವಿದೆ. ಈಗ ಅವರು ತನ್ನನ್ನು ಹುಡುಕಿಕೊಂಡು ಬಂದಿದ್ದಕ್ಕೆ ಗಾಬರಿಯಾಗಿದ್ದಾಳೆ.
ಸಿಹಿ ರಿಕ್ವೆಸ್ಟ್ ಮಾಡಿಕೊಂಡರೂ ಕೇಳದ ಸುಬ್ಬಿ
ಸಿಹಿ ನಮ್ಮ ಮನೆಗೆ ಬಾ. ಅದರಿಂದ ನೀನು ಕಳ್ಳತನ ಮಾಡುವುದು ತಪ್ಪುತ್ತದೆ. ನಮ್ಮ ಮನೆಯಲ್ಲಿ ನಿನಗೆ ತಿನ್ನಲು ಊಟ. ಇಷ್ಟವಾಗುವಂತಹ ಬಟ್ಟೆಗಳು. ದೊಡ್ಡ ಮನೆ ಹಾಗೂ ಪ್ರೀತಿ ಕೊಡುವ ಅಪ್ಪ-ಅಮ್ಮ ಇಬ್ಬರೂ ಇದ್ದಾರೆ ಎಂದು ಹೇಳುತ್ತಾಳೆ. ಸುಬ್ಬಿಗೆ ಸೀತಮ್ಮ ಸಿಗುತ್ತಾಳೆ ಎಂದಾಗ ಮನಸ್ಸು ಚಂಚಲವಾಗುತ್ತದೆ. ಸಿಹಿಯ ಜೊತೆಗೆ ಹೋಗಿ ರಾಮ್ ಮನೆ ಸೇರಿಕೊಂಡರೆ ಹಲವು ಸಮಯದಿಂದ ತಾನು ಹಂಬಲಿಸುತ್ತಿರುವ ತಾಯಿಯ ಪ್ರೀತಿ ಸಿಗುತ್ತದೆ ಎಂದು ಖುಷಿ ಪಡುತ್ತಾಳೆ. ಮರು ಕ್ಷಣವೇ ತನ್ನ ಮನೆಯನ್ನು ಬಿಟ್ಟು ಹೋಗುವುದು ಸರಿಯಲ್ಲ. ಅದರ ಜೊತೆಗೆ ರಾಮ್ ಕೆಟ್ಟವರು. ಅವರ ಮನೆಗೆ ಹೋಗುವುದು ಎಷ್ಟು ಸರಿ ಎಂದು ತನ್ನನ್ನು ತಾನು ಪ್ರಶ್ನಿಸಿಕೊಂಡು ಬರುವುದಿಲ್ಲ ಎಂದು ಹೇಳಿದ್ದಾಳೆ.

ಭಾರ್ಗವಿ ಮಾತಿನಿಂದ ರಾಮ್ ಗೆ ಬೇಸರ
ಇತ್ತ ಭಾರ್ಗವಿ ಸೂರಿಯನ್ನು ಮನವೊಲಿಸುವ ಪ್ರಯತ್ನವನ್ನು ಬೆಂಬಿಡದೇ ಮಾಡಿದ್ದಾಳೆ. ಈಗಲೂ ಸೀತಾಳನ್ನು ಆಸ್ಪತ್ರೆಗೆ ಸೇರಿಸದೇ ಹೋದರೆ ಇನ್ನಷ್ಟು ಕಷ್ಟವಾಗುತ್ತದೆ. ಸಿಹಿಯಂತಹ ಮತ್ತೊಂದು ಮಗು ಇರುವುದಕ್ಕೆ ಸಾಧ್ಯವಿಲ್ಲ. ಇದ್ದರೂ ನಮ್ಮ ಮನೆಗೆ ಹೇಗೆ ಬರಲು ಸಾಧ್ಯ ಎಂದು ಹೇಳಿದ್ದಾಳೆ. ಸೂರಿಗೂ ಸೀತಾ ತನ್ನ ಜೊತೆಗೆ ನಡೆದುಕೊಂಡ ರೀತಿ ಗಾಬರಿಯನ್ನುಂಟು ಮಾಡಿರುತ್ತದೆ. ಸೀತಾಳನ್ನು ಆದಷ್ಟು ಬೇಗ ಆಸ್ಪತ್ರೆಗೆ ತೋರಿಸಬೇಕು. ಇಲ್ಲದೇ ಹೋದರೆ ಸಮಸ್ಯೆ ಆಗುತ್ತದೆ. ರಾಮ್ ಬದುಕಿಗೂ ತೊಂದರೆಯಾಗುತ್ತದೆ. ಶುರುವಿನಲ್ಲೇ ಸರಿ ಮಾಡದೇ ಹೋದರೆ ಮುಂದೆ ಅಪಾಯವಾಗಬಹುದು ಎಂದು ಲೆಕ್ಕಾಚಾರ ಹಾಕಿದ್ದಾರೆ.
ಒಂದು ವಾರ ಸಮಯ ಕೇಳಿದ ರಾಮ್
ಭಾರ್ಗವಿ ಬಳಿ ಸೀತಾಳನ್ನು ಆದಷ್ಟು ಬೇಗನೇ ಆಸ್ಪತ್ರೆಗೆ ಕಳಿಸಬೇಕು ಎಂದು ಸೂರಿ ಮಾತನಾಡುತ್ತಿರುತ್ತಾರೆ. ಈ ಮಾತನ್ನು ಕೇಳಿದ ರಾಮ್ ಗೆ ಬೇಸರವಾಗುತ್ತದೆ. ಅಲ್ಲದೇ, ತನಗೆ ಸುಬ್ಬಿ ಸಿಗದೇ ಹೋಗಿದ್ದಕ್ಕೂ ಬೇಸರ ಮಾಡಿಕೊಂಡಿರುತ್ತಾನೆ. ಸೂರಿ ತಾತನನ್ನು ಕನ್ವಿನ್ಸ್ ಮಾಡಲು ಪ್ರಯತ್ನಿಸುತ್ತಾನೆ. ಆದರೆ, ಇದು ಯಾವಾಗ ಸರಿ ಹೋಗುತ್ತದೆ ಎಂದು ಪ್ರಶ್ನಿಸಿದ್ದಕ್ಕೆ ರಾಮ್, ಒಂದು ವಾರ ಸಮಯ ಕೊಡಿ ಎಂದು ಕೇಳಿದ್ದಾನೆ. ಇನ್ನೊಂದು ವಾರದಲ್ಲಿ ಸೀತಾ ಸರಿ ಹೋಗುತ್ತಾಳೆ ಎಂದು ಭರವಸೆ ಕೊಟ್ಟಿದ್ದಾನೆ.
ಆಡಿಷನ್ ನೆಪದಲ್ಲಿ ಸುಬ್ಬಿ ಹುಡುಕಾಟ
ರಾಮ್ ಅಶೋಕನಿಗೆ ಫೋನ್ ಮಾಡಿ ನಮಗೆ ಇನ್ನು ಒಂದು ವಾರ ಟೈಮ್ ಇದೆ ಅಷ್ಟೇ. ಅಷ್ಟರೊಳಗಡೆ ನಾವು ಸಿಹಿಯಂತೆ ಇರುವ ಮಗುವನ್ನು ಕರೆದುಕೊಂಡು ಬರಬೇಕು. ಇಲ್ಲದೇ ಹೋದರೆ ಸಮಸ್ಯೆ ಆಗುತ್ತದೆ ಎಂದು ಹೇಳುತ್ತಾನೆ. ಆಗ ಅಶೋಕ್ ಹೊಸ ಐಡಿಯಾ ಕೊಟ್ಟು ಸ್ಲಮ್ ನಲ್ಲಿ ಆ ಹುಡುಗಿಯನ್ನು ಹುಡುಕುವ ಉಪಾಯ ಮಾಡಿದ್ದಾನೆ. ಸೀರಿಯಲ್ ಗಾಗಿ ಐದರಿಂದ ಹತ್ತು ವರ್ಷದ ಹೆಣ್ಣು ಮಗು ಬೇಕಾಗಿದೆ ಎಂದು ಆಡಿಷನ್ ಕರೆಯಲಾಗಿದೆ. ಈ ಆಡಿಷನ್ ಗೆ ಸುಬ್ಬಿಯೂ ಹೋಗಲು ಮುಂದಾಗಿದ್ದಾಳೆ. ರಾಮ್ ಕೈಗೆ ಸುಬ್ಬಿ ಸಿಗಲು ಇನ್ನು ಕೆಲವೇ ದಿನಗಳು ಬಾಕಿ ಇದೆ.


Click it and Unblock the Notifications











