Seetha Rama ; ಮನೆ ಸಂಪೂರ್ಣ ಖಾಲಿ ಖಾಲಿ : ಸೀತಾ ಮನದಲ್ಲಿ ನೂರೆಂಟು ನೆನಪುಗಳು...!

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಅಂತೂ ಇಂತೂ ರಾಮ್ ಮತ್ತು ಅಶೋಕ್ ಸೇರಿಕೊಂಡು ರುದ್ರಪ್ರತಾಪ್ ಗೆ ಪಾಠ ಕಲಿಸಿದ್ದಾರೆ. ಅವನಿಂದಾಗಬೇಕಿದ್ದ ಅನಾಹುತವನ್ನು ತಪ್ಪಿಸಿದ್ದಾರೆ. ಇನ್ನು ಆವತ್ತು ಪೇಪರ್ ಬಿಲ್ ಹೆಸರಲ್ಲಿ ಮನೆಗೆ ಬಂದಿದ್ದು ರುದ್ರಪ್ರತಾಪ್ ಎಂಬ ಸತ್ಯವನ್ನು ಪ್ರೇಮಾ ಅರ್ಥ ಮಾಡಿಕೊಂಡಿದ್ದು, ಇದನ್ನು ಪ್ರಿಯಾಳಿಗೆ ಹೇಳುತ್ತಾಳೆ.ಸತ್ಯಜಿತ್, ವಿಶ್ವನಾಥ್ ಇಬ್ಬರೂ ತಮ್ಮ ಅಣ್ಣನ ಮಗನ ಮದುವೆ ನಡೆಯುತ್ತಿರುವುದಕ್ಕೆ ಖುಷಿಯಾಗಿದ್ದಾರೆ. ಮದುವೆ ಮನೆಯಲ್ಲಿ ಸಂಭ್ರಮ ಪಡುತ್ತಿದ್ದಾರೆ.

ಖಾಲಿಯಾಗುತ್ತಿದೆ ಸೀತಾ ಮನೆ

ಎಲ್ಲರೂ ಮದುವೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸೀತಾ ಒಂದೊಳ್ಳೆ ಮನೆಗೆ ಹೋಗುತ್ತಿರುವುದಕ್ಕೆ ಹಾಗೂ ತನ್ನದು ಒಂದು ಎಂದು ಕುಟುಂಬ ಕಟ್ಟಿಕೊಳ್ಳುತ್ತಿರುವುದಕ್ಕೆ ವಠಶರದ ಜನರೆಲ್ಲಾ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಸೀತಾ ಮಾತ್ರ ತನ್ನ ಮನೆಯಲ್ಲಿ ತಾನೊಬ್ಬಳೇ ಬ್ಯಾಗ್ ಪ್ಯಾಕ್ ಮಾಡುತ್ತಿದ್ದಾಳೆ. ಈ ಮನೆಯಿಂದ ಹೋದರೆ ಇನ್ಮುಂದೆ ತನ್ನ ಜೀವನ ರಾಮ್ ಮನೆಯಲ್ಲಿ. ಹಾಗಾಗಿ ತನಗೆ ಬೇಕಾದ ವಸ್ತುಗಳನ್ನು ಮತ್ತು ಬಟ್ಟೆ ಸೇರಿದಂತೆ ಹಲವು ವಸ್ತುಗಳನ್ನು ಪ್ಯಾಕ್ ಮಾಡಿಕೊಳ್ಳುತ್ತಿದ್ದಾಳೆ. ಸಿಹಿ ಕೂಡ ಸೀತಮ್ಮನಿಗೆ ಹೆಲ್ಪ್ ಮಾಡತ್ತಿದ್ದಾಳೆ. ತನ್ನ ಪುಸ್ತಕಗಳನ್ನು ಪ್ಯಾಕ್ ಮಾಡಿಕೊಂಡಿದ್ದಾಳೆ. ತನ್ನಿಷ್ಟದ ಚೇರ್, ದಿಂಬುಗಳನ್ನು ಕೂಡ ಪ್ಯಾಕ್ ಮಾಡಿಕೊಳ್ಳಲು ಸಹಾಯ ಮಾಡಿದ್ದಾಳೆ.

Seetharama Serial 28 June episode written update

ಗೆಳತಿಗೆ ಉಡುಗೊರೆ ಕೊಟ್ಟ ಸ್ನೇಹಿತರು

ಇನ್ನು ಸಿಹಿ ಇನ್ಮುಂದೆ ತಮ್ಮ ಜೊತೆಗೆ ಆಟವಾಡಲು ಇರುವುದಿಲ್ಲ ಎಂಬ ಸತ್ಯ ತಿಳಿದ ಗೆಳಯರು ಬೇಸರ ಮಾಡಿಕೊಂಡಿದ್ದಾರೆ. ಸಿಹಿಯನ್ನು ಹಾಗೆ ಕಳಿಸಿಕೊಡುವುದು ಸರಿಯಲ್ಲ ಎಂದು ಬೀಳ್ಕೊಡುಗೆ ನೀಡಲು ಒಂದಷ್ಟು ತಯಾರಿ ಮಾಡಿಕೊಂಡಿದ್ದಾರೆ. ಹೀಗಾಗಿ ಸಿಹಿಯನ್ನು ಕರೆದುಕೊಂಡು ಹೋಗಿದ್ದು, ಒಬ್ಬೊಬ್ಬರು ಒಂದೊಂದು ಉಡುಗೊರೆಯನ್ನು ನೀಡಿದ್ದಾರೆ. ಇದನ್ನೆಲ್ಲಾ ನೋಡಿದ ಸಿಹಿ ಫೀಲ್ ಆಗಿದ್ದಾಳೆ. ಭಾವನಾತ್ಮಕವಾಗಿ ಕಣ್ಣಿರು ಹಾಕಿದ್ದಾಳೆ. ಎಲ್ಲರಿಗೂ ಧನ್ಯವಾದ ಹೇಳಿದ್ದಾಳೆ. ರಜೆ ಸಿಕ್ಕಾಗಲೆಲ್ಲಾ ಬರುತ್ತೀನಿ, ನೀವು ಕೂಡ ನಮ್ಮ ಮನೆಗೆ ಬನ್ನಿ ಎಂದು ಆಹ್ವಾನಿಸಿದ್ದಾಳೆ. ಇದೆಲ್ಲಾ ದೃಶ್ಯಗಳನ್ನು ನೋಡಿದ ಸೀತಾ ಕೂಡ ಮಕ್ಕಳ ಮುಗ್ಧತೆಗೆ ಮೂಕವಿಸ್ಮಿತಳಾಗಿದ್ದಾಳೆ.

ಮಿಸ್ ಮಾಡಿಕೊಳ್ಳುತ್ತಿರುವ ಜೋಡಿಗಳು

ರಾಮ್ ಸೀತಾಳನ್ನು ಮಿಸ್ ಮಾಡಿಕೊಂಡಿದ್ದು ಇಬ್ಬರೂ ಫೋನ್ ನಲ್ಲಿ ಮಾತನಾಡಿದ್ದಾರೆ. ನಾಳೆ ಒಂದು ದಿನ ಕಳೆದರೆ ನಾವಿಬ್ಬರು ಗಂಡ-ಹೆಂಡತಿ ಆಗುತ್ತೀವಿ. ಆದರೂ ನಾವು ಸ್ನೇಹಿತರಂತೆ ಇದ್ದು ಬಿಡೋಣ ಎಂದು ಮಾತನಾಡುತ್ತಾರೆ. ಸೀತಾ ಈ ಮನೆಯನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತೀನಿ ಎಂದು ರಾಮ್ ಬಳಿ ಹಂಚಿಕೊಳ್ಳುತ್ತಾಳೆ. ರಾಮ್ ಸಮಾಧಾನ ಮಾಡುತ್ತಾನೆ. ಆ ಮನೆ ಯಾವತ್ತಿದ್ದರೂ ನಿಮ್ಮದೇ ಎಂದು ಹೇಳುತ್ತಾನೆ. ಫೋನ್ ಕಟ್ ಮಾಡಿದ ಬಳಿಕ ಸೀತಾ ತನ್ನ ಕಷ್ಟದ ದಿನಗಳಲ್ಲಿ ಆಸರೆಯಾಗಿದ್ದ ಈ ಮನೆಯ ಅಷ್ಟೂ ಸವಿ ನನೆಪುಗಳನ್ನು ಸ್ಮರಿಸಿಕೊಳ್ಳುತ್ತಾಳೆ. ಆಗ ಸೀತಾ ಖಣ್ಣು ತುಂಬಿ ಬರುತ್ತದೆ.

Seetharama Serial 28 June episode written update

ಮದುವೆಗೆ ಇನ್ನು ಒಂದೇ ದಿನ ಬಾಕಿ

ಬೆಳಗ್ಗೆ ಎದ್ದು ಎಲ್ಲರೂ ರೆಡಿಯಾಗುತ್ತಾರೆ. ಮದುವೆಗೆ ಮಂಟಪಕ್ಕೆ ಹೋಗಲು ತಯಾರಾಗಿದ್ದಾರೆ. ಈ ವೇಳೆ ಶಾಂತಜ್ಜಿ ಮತ್ತು ಮೂರ್ತಿ ತಾತ ಇನ್ಮುಂದೆ ನೀವಿಬ್ಬರೂ ಇರುವುದಿಲ್ಲ ಎಂದು ನೋವು ಹಂಚಿಕೊಳ್ಳುತ್ತಿರುತ್ತಾರೆ. ಇನ್ಮುಂದೆ ಯಾರಿಗೆ ಪೂರಿ ಮಾಡಿಕೊಳ್ಳಲಿ, ಶಾಲೆಗೆ ಯಾರನ್ನು ಕರೆದುಕೊಂಡು ಹೋಗಲಿ ಎಂದು ಹೇಳುತ್ತಾರೆ. ಅದಕ್ಕೆ ಸೀತಾ ನಾವು ಎಲ್ಲೇ ಇದ್ದರೂ ಆಗಾಗ ಇಲ್ಲಿಗೆ ಬರುತ್ತೀವಿ. ಇನ್ಮುಂಧೇಐಊ ನೀವೆ ನಮಗೆ ಅಪ್ಪ-ಅಮ್ಮ ಎಂದು ಹೇಳುತ್ತಾಳೆ. ಶಾಂತಜ್ಜಿ ಕೊನೆಯದಾಗಿ ಸೀತಾಳಿಗೆ ಆರತಿ ಮಾಡುತ್ತಾಳೆ.

More from Filmibeat

English summary
Seethe packs all clothes and things. House feels empty
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X