Seetharama ; ಪೊಲೀಸರ ಮಧ್ಯಸ್ಥಿಕೆಯಲ್ಲಿ ತಾತನ ಬಳಿ ವಾಪಸ್ ಹೋಗುತ್ತಾಳಾ ಸುಬ್ಬಿ ?
ತಾರಾಮ ಧಾರಾವಾಹಿಯಲ್ಲಿ ಸುಬ್ಬಿಯನ್ನು ರಾಮ್ ಕರೆದುಕೊಂಡು ಬಂದಾಗಿನಿಂದಲೂ ಸ್ವಾಮಿ ವಿಚಿತ್ರವಾಗಿ ಆಡುತ್ತಿದ್ದಾನೆ. ತನಗೆ ಸುಬ್ಬಿ ಬೇಕೆ ಬೇಕು ಎಂದು ಗಲಾಟೆ ಮಾಡುತ್ತಿದ್ದಾನೆ. ಮನೆಯಲ್ಲಿ ಮಕ್ಕಳು ಬುದ್ಧಿ ಹೇಳಿದರೂ ಕೇಳಲಿಲ್ಲ. ಅಲ್ಲದೇ, ರಾಮ್ ಮತ್ತು ಅಶೋಕ್ ಯಾವ ರೀತಿ ಸಮಾಧಾನ ಮಾಡಿದರು ಕೂಡ ಸುಮ್ಮನಾಗುತ್ತಿಲ್ಲ. ಇದಕ್ಕೆ ಪುಷ್ಠಿ ಎಂಬಂತೆ ಈಗ ಪೊಲೀಸರು ಸ್ವಾಮಿ ಹಿಂದೆ ಬಿದ್ದಿದ್ದಾರೆ. ಮನೆಯಲ್ಲಿದ್ದ ಚಿಕ್ಕ ಮಗುವನ್ನು ಮಾರಿಕೊಂಡಿದ್ದೀಯಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಸ್ವಾಮಿ ತಾತನ ಜೊತೆಗೆ ಹೊರಟ ಸುಬ್ಬಿ
ಮಗುವನ್ನು ಯಾರಿಗೆ ಕೊಟ್ಟಿದ್ದೀಯೋ ಅವರಿಂದ ಆದಷ್ಟು ಬೇಗ ಕರೆದುಕೊಂಡು ಬಾ. ಇಲ್ಲದೇ ಹೋದರೆ ನಿನ್ನನ್ನು ಜೈಲಿಗೆ ಹಾಕುತ್ತೀವಿ ಎಂದು ಬೆದರಿಕೆ ಹಾಕಿದ್ದಾರೆ. ಈಗ ಸ್ವಾಮಿ ಪದೇ ಪದೇ ರಾಮ್ ಮನೆ ಬಳಿ ಹೋಗುತ್ತಿದ್ದಾನೆ. ಭಾರ್ಗವಿ ಮತ್ತು ಸೀತಾಳಿಗೆ ಯಾರೋ ತಲೆಕೆಟ್ಟ ಮನುಷ್ಯ ಆತ ಎಂದು ಹೇಳಿದ್ದಾರೆ. ಈಗ ಯಾರೂ ಇಲ್ಲದಾಗ ಸುಬ್ಬಿಯನ್ನು ಕರೆದುಕೊಂಡು ಹೋಗಲು ಸ್ವಾಮಿ ಬಂದಿದ್ದಾನೆ. ಸುಬ್ಬಿ ಹಲವು ದಿನಗಳ ಬಳಿಕ ತಾತನನ್ನು ಕಂಡು ಖುಷಿಪಟ್ಟಿದ್ದಾಳೆ. ಮನೆಗೆ ಹೋಗೋಣ ಎಂದು ಕರೆದಿದ್ದು, ಸುಬ್ಬಿಯೂ ಸ್ವಾಮಿ ತಾತನ ಜೊತೆಗೆ ಹೊರಟಿದ್ದಾಳೆ. ಸಿಹಿ ಯಾರದೋ ಜೊತೆಗೆ ಹೋಗುತ್ತಿರುವುದನ್ನು ಕಂಡ ಸೀತಾ ಗಾಬರಿಯಾಗಿದ್ದಾಳೆ. ಸಿಹಿಯನ್ನು ತಡೆಯಲು ಸೀತಾ ಓಡಿ ಬಂದಿದ್ದಾಳೆ.

ಸಿಹಿಯ ನಡವಳಿಕೆ ಕಂಡು ಗಾಬರಿಯಾದ ಸೀತಾ
ಸ್ವಾಮಿಗೆ ಬೈದು ಮಗಳು ಸಿಹಿಯನ್ನು ಮನೆಗೆ ಕರೆದುಕೊಂಡು ಹೋಗುತ್ತಾಳೆ. ಈ ಸಂದರ್ಭವನ್ನು ಹತೋಟಿಗೆ ತೆಗೆದುಕೊಳ್ಳಲು ಸ್ವಾಮಿಗೆ ರಾಮ್ ಬೈಯುತ್ತಾನೆ. ಪೊಲೀಸರನ್ನು ಕರೆಸುವುದಾಗಿ ಹೆದರಿಸುತ್ತಾನೆ. ಇತ್ತ ಸೀತಾ ಸಿಹಿಯ ನಡವಳಿಕೆಯನ್ನು ಕಂಡು ಗಾಬರಯಾಗಿದ್ದಾಳೆ. ಯಾವತ್ತೂ ಸಿಹಿ ಪರರ ಜೊತೆಗೆ ಹೋಗುವವಳಲ್ಲ. ಆದರೆ, ಇತ್ತೀಚೆಗೆ ಯಾಕೆ ಹೀಗೆ ನಡೆದುಕೊಳ್ಳುತ್ತಿದ್ದಾಳೆ ಎಂದು ಗಾಬರಿಯಾಗಿದ್ದಾಳೆ. ಉರಿಯುತ್ತಿರುವ ಬೆಂಕಿಗೆ ತುಪ್ಪ ಹಾಕಲು ಭಾರ್ಗವಿ ಬಂದಿದ್ದು, ಅಶೋಕ್ ಪರಿಸ್ಥಿತಿಯನ್ನು ನಿಭಾಯಿಸಿದ್ದಾನೆ. ಸಿಹಿಗೆ ಸೀತಾ ಬೈದಿದ್ದಾಳೆ. ಇನ್ನು ಸ್ವಾಮಿಗೆ ರಾಮ್ ಬೈದಿದ್ದನ್ನು ಕಂಡ ಸುಬ್ಬಿ ಅಪ್ಪನ ಮೇಲೆ ಇನ್ನಷ್ಟು ಕೋಪ ಮಾಡಿಕೊಂಡಿದ್ದಾಳೆ.
ಸುಬ್ಬಿಯನ್ನು ಸ್ವಾಮಿಗೆ ಒಪ್ಪಿಸುತ್ತಾನಾ ರಾಮ್..?
ಸ್ವಾಮಿ ಪೊಲೀಸರಿಗೆ ಹೆದರದೇ ಅವನೇ ಪೊಲೀಸರಿಗೆ ಫೋನ್ ಮಾಡಿಕೊಟ್ಟಿದ್ದಾನೆ. ಪೊಲೀಸರು ರಾಮ್ ನನ್ನು ಪ್ರಶ್ನೆ ಮಾಡಿದ್ದಾರೆ. ಮಗುವನ್ನು ಕರೆದುಕೊಂಡು ಹೋದವರು ದತ್ತು ತೆಗೆದುಕೊಂಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ರಾಮ್ ಮಾಡುತ್ತೇವೆ ಎಂದಿದ್ದಕ್ಕೆ, ಸ್ವಾಮಿ ನನ್ನ ಮಗುವನ್ನು ದತ್ತು ಕೊಡಲು ನನಗಿಷ್ಟವಿಲ್ಲ ಎಂದಿದ್ದಾನೆ. ಇದರಿಂದ ಪೊಲೀಸರು ಇನ್ನೊಂದು ದಿನದಲ್ಲಿ ಮಗುವನ್ನು ಸ್ವಾಮಿಗೆ ಒಪ್ಪಿಸಲು ತಿಳಿಸಿದ್ದಾರೆ. ಈಗ ರಾಮ್ ಸುಬ್ಬಿಯನ್ನು ಸ್ವಾಮಿಗೆ ಮರಳಿಸುತ್ತಾನಾ..? ಇಲ್ಲ ಹೋರಾಡಿ ಸುಬ್ಬಿಯನ್ನು ತನ್ನ ಜೊತೆಗೆ ಉಳಿಸಿಕೊಳ್ಳುತ್ತಾನಾ ಎಂಬುದೇ ಕುತೂಹಲವಾಗಿದೆ.
ಸತ್ಯಜಿತ್ ಮಾತುಗಳಿಗೆ ಬೆಲೆ ಕೊಡುತ್ತಾಳಾ ಸುಬ್ಬಿ..?
ಇತ್ತ ಬಹಳ ದಿನಗಳ ನಂತರ ಸತ್ಯಜಿತ್ ಮನೆಗೆ ಬಂದಿದ್ದಾನೆ. ಕುಡಿದು ಬಂದ ಸತ್ಯಜಿತ್ ಭಾರ್ಗವಿ ಮೇಲೆ ಕೂಗಾಡಿದ್ದಾನೆ. ಇವತ್ತು ನಿನ್ನಿಂದ ನಾನು ಈ ಸ್ಥಿತಿಯಲ್ಲಿದ್ದೀನಿ. ನಿನಗೆ ನಾನು ಸತ್ಯ ಹೇಳಿಬಿಡುತ್ತೀನಿ ಎಂದು ಭಯ, ಅದಕ್ಕೆ ನನ್ನ ಮಾತುಗಳು ಯಾವುದೂ ಸತ್ಯ ಅಲ್ಲ ಎಂಬಂತೆ ಎಲ್ಲರನ್ನು ನಂಬಿಸಿದ್ದೀಯಾ ಎಂದು ಒಗಟು ಒಗಟಾಗಿ ಮಾತನಾಡುತ್ತಾನೆ. ಈ ಮಾತುಗಳನ್ನು ಸಿಹಿಯ ಆತ್ಮ ಅರ್ಥ ಮಾಡಿಕೊಂಡು, ಸುಬ್ಬಿಗೆ ತಿಳಿ ಹೇಳುತ್ತಾ.? ಇದರಿಂದ ಸತ್ಯಜಿತ್ ಮಾತುಗಳಿಗೆ ಸುಬ್ಬಿ ಬೆಲೆ ಕೊಡುತ್ತಾಳಾ ಎಂಬುದೇ ಕುತೂಹಲವಾಗಿದೆ.


Click it and Unblock the Notifications











