Seetharama ; ಅಂಜಲಿಗೆ ತಾಳಿ ಕಟ್ಟಿದ ರುದ್ರಪ್ರತಾಪ್ : ಮುಂದೇನು ಗತಿ..?
ಸೀತಾರಾಮ ಧಾರಾವಾಹಿಯಲ್ಲಿ ಅಂಜಲಿ ಸದಾ ತನ್ನದೇ ಲೋಕದಲ್ಲಿ ಮುಳುಗಿ ಹೋಗಿರುತ್ತಾಳೆ. ಯಾವಾಗಲೂ ರುದ್ರಪ್ರತಾಪ್ ಬಗ್ಗೆಯೇ ಯೋಚಿಸುತ್ತಿರುತ್ತಾಳೆ. ಪ್ರೇಮಾಳಿಗೆ ಅಂಜಲಿ ಬಗ್ಗೆ ಅನುಮಾನವಿದ್ದರೂ ಕೂಡ ಯಾರನ್ನು ಪ್ರೀತಿಸುತ್ತಿದ್ದಾಳೆ. ಅವಳ ಜೀವನದಲ್ಲಿ ಏನಾಗುತ್ತಿದೆ ಎಂಬ ಸತ್ಯ ಮಾತ್ರ ಅರ್ಥವಾಗುತ್ತಿಲ್ಲ. ಅಂಜಲಿ ರುದ್ರಪ್ರತಾಪ್ ನನ್ನು ರಾಮು ಎಂದು ನಂಬಿದ್ದು, ಅವನನ್ನು ತನ್ನಂತೆ ಸಾಫ್ಟ್ ಮನುಷ್ಯ. ತಾನೂ ಅನಾಥೆ, ಆತನೂ ಅನಾಥ ಎಂದುಕೊಂಡು ಪ್ರೀತಿಸುತ್ತಿದ್ದಾಳೆ.
ಅಂಜಲಿಗೆ ತಾಳಿ ಕಟ್ಟಿದ ರುದ್ರಪ್ರತಾಪ್
ಅಂಜಲಿ ಮತ್ತು ರುದ್ರಪ್ರತಾಪ್ ಮತ್ತೆ ಸಾಯಿ ಬಾಬ ದೇವಸ್ಥಾನದಲ್ಲಿ ಭೇಟಿಯಾಗುತ್ತಾರೆ. ಇಬ್ಬರೂ ಮಾತನಾಡುವಾಗ, ರುದ್ರಪ್ರತಾಪ್ ಇನ್ನು ಮುಂದೆ ಅಣ್ಣನ ಎಂಗೇಜ್ ಮೆಂಟ್, ಮದುವೆ ಎಂದು ಬ್ಯುಸಿ ಆಗುತ್ತೀರಾ. ನನಗೆ ಸಮಯ ಕೊಡುವುದಕ್ಕೇ ಆಗುವುದಿಲ್ಲ ಅಲ್ವಾ ಎಂದು ಹೇಳುತ್ತಾನೆ. ಅದಕ್ಕೆ ಅಂಜಲಿ ಅದಕ್ಕೆ ಬಂದು ಮನೆಯಲ್ಲಿ ಮಾತನಾಡಿ ಎನ್ನುತ್ತಾಳೆ. ಅದಕ್ಕೆ ರುದ್ರಪ್ರತಾಪ್ ನನಗೆ ಕೆಲಸ ಸಿಕ್ಕ ಕೂಡಲೇ ಅದೇ ಕೆಲಸವನ್ನು ಮಾಡುತ್ತೇನೆ ಎಂದು ಹೇಳುತ್ತಾನೆ. ಬಳಿಕ ದೇವಸ್ಥಾನದ ಆಚೆ ನಿಂತು ಮಾತನಾಡುವಾಗ ರುದ್ರಪ್ರತಾಪ್ ಅಂಜಲಿಗೆ ತಾಳಿ ಕಟ್ಟಿ ಬಿಡುತ್ತಾನೆ. ಅಂಜಲಿ ಅಳುವುದಕ್ಕೆ ಶುರು ಮಾಡುತ್ತಾಳೆ. ನನ್ನನ್ನು ಕೇಳದೇ ತಾಳಿ ಕಟ್ಟಿ ತಪ್ಪು ಮಾಡಿದ್ರಿ. ನಾನು ನನ್ನ ಕುಟುಂಬದ ಸಮ್ಮುಖದಲ್ಲಿ ಮದುವೆ ಆಗಬೇಕು ಎಂದುಕೊಂಡಿದ್ದೆ ಎಂದು ಗೋಳಾಡುತ್ತಾಳೆ. ಅಷ್ಟರಲ್ಲಿ ರುದ್ರಪ್ರತಾಪ್ ಗೆ ಎಚ್ಚರವಾಗುತ್ತದೆ. ತಾನು ಕಂಡಿದ್ದು ಕನಸು ಎಂದು ತಿಳಿಯುತ್ತದೆ. ಅಂಜಲಿ ಮನೆಗೆ ಬಂದ ಬಳಿಕ ಮೆಸೇಜ್ ಮಾಡಿರುತ್ತಾನೆ. ಮದುವೆ ಸಂಭ್ರಮದಲ್ಲಿ ನನ್ನನ್ನು ಮರೆತು ಬಿಡುತ್ತೀರಾ..? ಎಂದೆಲ್ಲಾ ಮೆಸೇಜ್ ಮಾಡಿರುತ್ತಾನೆ. ಇದನ್ನೆಲ್ಲಾ ನೋಡಿ ಅಂಜಲಿ ಚಿಂತೆ ಮಾಡಲು ಶುರು ಮಾಡುತ್ತಾಳೆ.

ಸೀತಾಳನ್ನು ಕಾವಲು ಕಾಯುತ್ತಿರುವ ಭಾರ್ಗವಿ
ರುದ್ರಪ್ರತಾಪ್ ಸೀತಾ ಮತ್ತು ರಾಮನ ನಿಶ್ಚಿತಾರ್ಥ ಆಗುತ್ತಿರುವುದಕ್ಕೆ ಬೇಸರ ಮಾಡಿಕೊಳ್ಳುತ್ತಾನೆ. ಭಾರ್ಗವಿಗೆ ಫೋನ್ ಮಾಡಿ ವಿಚಾರಿಸುತ್ತಾನೆ. ಸೀತಾಳನ್ನು ನೋಡಿಕೋ ಎಂದು ಹೇಳಿ ಈಗ ನೀವೇ ಮುಂದೆ ನಿಂತು ಮದುವೆ ಕೆಲಸ ಮಾಡುತ್ತಿದ್ದೀರಾ. ಇದು ಎಷ್ಟು ಸರಿ ಎಂದು ಪ್ರಶ್ನೆ ಮಾಡುತ್ತಾನೆ. ಅದಕ್ಕೆ ಭಾರ್ಗವಿ ಇನ್ಮುಂದೆ ಸೀತಾಳಿಗೆ ನಾನೇ ಕಾವಲುಗಾರ್ತಿ. ಅವಳು ನನ್ನ ಮನೆ ಸೊಸೆ. ಅವಳಿಗೆ ತೊಂದರೆ ಕೊಟ್ಟು ನೋಡು ಆಗ ನೀನು ವಾಪಸ್ ಬಂದ ಜಾಗಕ್ಕೆ ಹೋಗಬೇಕಾಗುತ್ತದೆ ಎಂದು ಕನ್ಫ್ಯೂಸ್ ಆಗುವಂತೆ ಹೇಳಿ ಫೋನ್ ಇಡುತ್ತಾಳೆ.
ಭಾರ್ಗವಿ ರೂಮ್ ಚೆಲ್ಲಾಪಿಲ್ಲಿ ಮಾಡಿದ ಸತ್ಯ
ಭಾರ್ಗವಿ ಮನೆಯಲ್ಲಿ ಇಲ್ಲದಾಗ ಬೇಕಂತಲೇ ಅವಳ ರೂಮಿಗೆ ಹೋಗಿ ಎಲ್ಲಾ ವಸ್ತುಗಳನ್ನೂ ಸತ್ಯ ಚೆಲ್ಲಾ ಪಿಲ್ಲಿ ಮಾಡಿರುತ್ತಾನೆ. ಯಾಕೆ ಎಂದು ಭಾರ್ಗವಿ ಕೇಳಿದ್ದಕ್ಕೆ, ಸತ್ಯ ನಾನೇ ಮಾಡಿದ್ದು. ಲಾಕರ್ ಕೀ ಹುಡುಕಿದೆ ಎಲ್ಲೂ ಸಿಗಲಿಲ್ಲ. ನಾಳೆ ರಾಮ್ ಸೀತಾ ಎಂಗೇಜ್ ಮೆಂಟ್ ವಾಣಿ ಅತ್ತಿಗೆ ಒಡವೆಗಳನ್ನು ಸೀತಾಳಿಗೆ ಕೊಡಬೇಕು ಎಂದು ಹೇಳುತ್ತಾನೆ. ಭಾರ್ಗವಿ ಕೋಪ ಮಾಡಿಕೊಳ್ಳುತ್ತಾಳೆ. ನನ್ನ ಮನೆ ಸೊಸೆಯನ್ನು ನೋಡಿಕೊಳ್ಳುವುದು ನನಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳುತ್ತಾನೆ.

400 ರೂಪಾಯಿಯಲ್ಲಿ ದಿನ ಕಳೆದ ರಾಮ್
ರಾಮ್ ಉಳಿದಿರುವ 65 ರುಪಾಯಿಯಲ್ಲಿ ಮನೆಗೆ ಹೋಗಬೇಕಲ್ಲ ಎಂದು ನಡೆದುಕೊಂಡೇ ಹೋಗುತ್ತಿರುತ್ತಾನೆ. ರಾಮ್ ಗೆ ಸುಸ್ತಾದಾಗ ಸಾಕು ಎಂದುಕೊಂಡು ಡೆಲಿವರಿ ಬಾಯ್ ಬಳಿ ಲಿಫ್ಟ್ ಪಡೆಯುತ್ತಾನೆ.ಅವನಿಗೆ 60 ರೂಪಾಯಿ ಕೊಟ್ಟು ಉಳಿದ 5 ರೂಪಾಯಿಯನ್ನು ವಿಶ್ವ ಚಿಕ್ಕಪ್ಪನಿಗೆ ನೋಡಿ ಮಿಕ್ಕ ಸಾಲವನ್ನು ತೀರಿಸುವುದಾಗಿ ಹೇಳುತ್ತಾನೆ. ರಾಮ್ ಮಾತು ಕೇಳಿ ಭಾರ್ಗವಿ ಸಾಕು ಸಾಕು ಎನ್ನುವಷ್ಟು ಇರಿಟೇಟ್ ಆಗುತ್ತದೆ.


Click it and Unblock the Notifications











