Seetharama ; ಮೊನ್ನೆ ನೋಡಿದರೆ ಸಿಹಿ ಸತ್ತೇ ಹೋದಳು ಅಂದರು, ಇಂದು ನೋಡಿದರೆ ಕಿಡ್ನಾಪ್ ಮಾಡಿಸಿದರು..!

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಬಯಲಾಜಿಕಲ್‌ ತಂದೆ-ತಾಯಿಯಾದ ಶಾಲಿನಿ ಮತ್ತು ಶ್ಯಾಮ್‌ ತಮಗೆ ತಮ್ಮ ಮಗಳು ಬೇಕು ಎಂದು ಹಠ ಮಾಡುತ್ತಿದ್ದಾರೆ.ಆದರೆ, ಮಗು ಜನಿಸಿದಾಗ ಯಾರೂ ಬರಲಿಲ್ಲ. ಕಷ್ಟದಲ್ಲಿದ್ದರೂ ಮಗು ಅನಾಥವಾಗಬಾರದು ಎಂದು ನಾನು ಸಾಕಿದ್ದೇನೆ. ಸಿಹಿಗೆ ಈಗ ನಾನೇ ತಾಯಿ. ಅವಳು ನನ್ನ ಮಗಳು ಎನ್ನುತ್ತಿದ್ದಾಳೆ ಸೀತಾ. ಡಾ. ಅನಂತಲಕ್ಷ್ಮೀ ಅವರು ಕೂಡ ಬಾಡಿಗೆ ತಾಯಿ ಸೀತಾ ಪರವಿದ್ದಾರೆ. ಆದರೆ, ಕಾನೂನಿನಲ್ಲಿ ಯಾವ ರೀತಿಯ ತೀರ್ಮಾನ ಬರುತ್ತದೆ ಎಂಬುದು ಗೊತ್ತಿಲ್ಲ.


ಮನೆಯಲ್ಲಿ ಸೀತಾ ಮತ್ತು ಸಿಹಿ ಕಾಣಿಸುತ್ತಿಲ್ಲ

ಹೀಗಾಗಿ ಹೆದರಿರುವ ಸೀತಾ ಬೆಳಗ್ಗೆದ್ದವಳೇ ಮಗಳು ಸಿಹಿಯನ್ನು ಕರೆದುಕೊಂಡು ಸೀದಾ ಹೊರಗೆ ಹೊರಟಿದ್ದಾಳೆ. ವೈದ್ಯರಾದ ಅನಂತಲಕ್ಷ್ಮೀ ಅವರನ್ನು ಭೇಟಿ ಮಾಡಿ ಸಮಸ್ಯೆಯ ಪರಿಹಾರ ತಿಳಿಯಬೇಕು ಎಂದು ಹೊರಟಿದ್ದಾಳೆ. ಆದರೆ, ಮನೆಯವರೆಲ್ಲಾ ಸೀತಾ ಸಿಹಿಯನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿದ್ದಾಳೆ ಎಂದು ಭಾವಿಸಿದ್ದಾರೆ. ಆದರೆ, ರಾಮ್‌ ಸೀತಾ ಹಾಗೆಲ್ಲಾ ಮಾಡುವವಳಲ್ಲ ಎಂದು ಆಕೆಯನ್ನು ಹುಡುಕಲು ಮುಂದಾಗಿದ್ದಾನೆ. ಆದರೆ, ರಾಮ್‌ ಮನೆ ಬಿಟ್ಟು ಹೋಗುವಂತಿಲ್ಲ ಎಂದು ಶ್ಯಾಮ್‌ ಮತ್ತು ಶಾಲಿನಿ ಗಲಾಟೆ ಮಾಡುತ್ತಿದ್ದಾರೆ.

Seetharama Serial 28 October episode written update


ಮಗುವಿಗಾಗಿ ಶ್ಯಾಮ್-ಶಾಲಿನಿ ಗಲಾಟೆ

ಮನೆಗೆ ಬಂದ ಶ್ಯಾಮ್‌ ಮತ್ತು ಶಾಲಿನಿ ನಮ್ಮ ಮಗು ಸಿಹಿಯನ್ನು ನಮಗೆ ಒಪ್ಪಿಸುವವರೆಗೂ ನಾನು ಯಾವುದೇ ಕಾರಣಕ್ಕೂ ಇಲ್ಲಿಂದ ಹೋಗುವುದಿಲ್ಲ ಎಂದಿದ್ದಾರೆ. ಅಲ್ಲದೇ, ರಾಮ್‌ ಸೀತಾಳನ್ನು ಹುಡುಕಲು ಮನೆಯಿಂದ ಹೊರಗೆ ಹೋಗಲು ಕೂಡ ಬಿಡುತ್ತಿಲ್ಲ. ನೀವು ಬೇಕಂತಲೇ ಪ್ಲಾನ್‌ ಮಾಡಿಕೊಂಡಿದ್ದೀರಾ. ಈಗ ಸಿಹಿ ಮತ್ತು ಸೀತಾ ಕಾಣುತ್ತಿಲ್ಲ. ಅವರನ್ನು ಹುಡುಕುವ ನೆಪದಲ್ಲಿ ನೀನು ಮನೆಯಿಂದ ಹೋಗಿ ಮೂವರು ಮಲೇಷಿಯಾದಲ್ಲಿ ಸೆಟಲ್‌ ಆಗುತ್ತಿರಾ. ನಮ್ಮ ಮಗುವನ್ನು ನೀವು ಕರೆದುಕೊಂಡು ಹೋಗುವ ಪ್ಲಾನ್‌ ನಿಮ್ಮದು. ಇದ್ಯಾವುದಕ್ಕೂ ನಾವು ಅವಕಾಶ ಮಾಡಿಕೊಡುವುದಿಲ್ಲ ಎಂದು ಹಠ ಮಾಡಿದ್ದಾರೆ.


ಕಿಡ್ನ್ಯಾಪ್‌ ಆದ ಸಿಹಿ

ಸಿಹಿ ಜೊತೆಗೆ ಸೀತಾ ಹೊರಗೆ ಹೊರಟ ಮೇಲೆ ಸುದೇಶ್‌ ಸುಮ್ಮನಿರದೇ ರುದ್ರಪ್ರತಾಪ್‌ ಗೆ ಫೋನ್‌ ಮಾಡಿದ್ದಾನೆ. ಸೀತಾ ಮತ್ತು ಸಿಹಿ ಹೊರಗೆ ಹೋಗಿದ್ದಾರೆ. ನೀನು ಸಿಹಿಯನ್ನು ಕಿಡ್ನ್ಯಾಪ್‌ ಮಾಡಿ ಅವಳ ಮನೆಯ ಪತ್ರ ಕೇಳು ಎಂದು ಐಡಿಯಾ ಕೊಟ್ಟಿದ್ದಾನೆ. ಇದನ್ನೇ ಬಳಸಿಕೊಂಡ ರುದ್ರಪ್ರತಾಪ್‌ ಸಿಹಿಯನ್ನು ಕಿಡ್ನ್ಯಾಪ್‌ ಮಾಡಿದ್ದಾನೆ. ಮಗಳಿಗಾಗಿ ಸೀತಾ ಹೋರಾಡಿದ್ದಾಳೆ. ಸಿಹಿಗೆ ಬೇಕಂತಲೇ ರುದ್ರಪ್ರತಾಪ್‌ ಹೊಡೆದಿದ್ದು, ಸೀತಾ ರುದ್ರಪ್ತಾಪ್ ಗೆ ಕೈಗೆ ಸಿಕ್ಕ ವಸ್ತುವಿನಿಂದ ಹೊಡೆದಿದ್ದಾನೆ. ಇದರಿಂದ ಇಬ್ಬರೂ ಪ್ರಜ್ಞೆ ತಪ್ಪಿದ್ದಾರೆ.

ಯಾರ ಕೈ ಸೇರುತ್ತಾಳೆ ಸಿಹಿ

ಇದೇ ಸಮಯಕ್ಕೆ ಸರಿಯಾಗಿ ಚಾಂದಿನಿ ಅದೇ ದಾರಿಯಲ್ಲಿ ಬಂದಿದ್ದು, ಸಿಹಿಯನ್ನು ನೋಡಿದ್ದಾಳೆ. ಸಿಹಿಯನ್ನು ಎತ್ತುಕೊಂಡು ಸೀದಾ ರಾಮ್‌ ಮನೆಗೆ ಹೋಗಿ ಶಾಲಿನಿಗೆ ಮಗುವನ್ನು ಒಪ್ಪಿಸಿದ್ದಾಳೆ. ಈಗ ಸಿಹಿ ಯಾರ ಪಾಲಾಗುತ್ತಾಳೆ ಎಂಬ ಗೊಂದಲ ಶುರುವಾಗಿದೆ. ಆದರೆ, ಈ ಎಲ್ಲಾ ಆಟವನ್ನೂ ಭಾರ್ಗವಿ ಮನೆಯಲ್ಲಿ ಕುಳಿತು ಆಡಿಸುತ್ತಿದ್ದಾಳೆ. ಭಾರ್ಗವಿಯ ಈ ಆಟದಲ್ಲಿ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಮೂಡಿದೆ. ಇದರ ನಡುವೆ ಸೀತಾರಾಮ ಧಾರಾವಾಹಿಯ ಪ್ರೊಮೋದಲ್ಲಿ ಸಿಹಿ ಸಾವನ್ನಪ್ಪಿದ್ದನ್ನು ತೋರಿಸಲಾಗಿದೆ. ಇದರಿಂದ ವೀಕ್ಷಕರಿಗೆ ಧಾರಾವಾಹಿ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದ ಗೊಂದಲ ಶುರುವಾಗಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X