Seetharama; ಭಾರ್ಗವಿಯನ್ನು ಕೆರಳಿಸಿತು ಸೂರಿ ತಾತಾ ಮಾತು, ಯೋಚನೆಯಲ್ಲಿ ಮುಳುಗಿದ ಸಿಹಿ..!
ಸೀತಾರಾಮ ಧಾರಾವಾಹಿಯಲ್ಲಿ ಅಂಜಲಿ ಆಶ್ರಮಕ್ಕೆ ಹೋದವಳು ಇನ್ನು ವಾಪಸ್ ಬಂದಿಲ್ಲ. ಬಿಸಿನೆಸ್ ಟೂರ್ ಮುಗಿಸಿಕೊಂಡು ಬಂದ ಅಶೋಕ್ ಜೊತೆಗೆ ಪ್ರಿಯಾ ಸಂಭ್ರಮ.ಗರ್ಭಿಣಿ ಆಗಿದ್ದೀನಿ ಎಂದು ನಂಬಿದ್ದೆ. ನೀನು ಮನೆಗೆ ಬಂದ ಕೂಡಲೇ ಸರ್ಪ್ರೈಸ್ ಆಗಿ ಹೇಳಬೇಕು ಎಂದುಕೊಂಡಿದ್ದೆ. ಆದರೆ, ಏನು ಮಾಡುವುದು ಅದು ಸಾಧ್ಯವಾಗಲಿಲ್ಲ ಎನ್ನುತ್ತಾಳೆ. ಅಶೋಕ್ ಅದಕ್ಕಿನ್ನು ಸಮಯವಿದೆ. ಅರಾಮವಾಗಿ ಇರೋಣ. ನಮ್ಮ ಮನೆಗೂ ಪುಟಾಣಿ ಕಂದ ಬರುತ್ತದೆ ಎಂದಿದ್ದು, ಅಶೋಕ್ ಜೊತೆಗಿರುವುದುಕ್ಕೆ ಪ್ರಿಯಾ ಖುಷಿಯಾಗಿದ್ದಾಳೆ.
ಗಂಡನಿಗಾಗಿ ಮಿಡಿಯುತ್ತಿರುವ ಸಾಧನಾ
ರಾಮ್-ಸೀತಾ ಮದುವೆಯ ದಿನ ತಂದೆ ಸೂರಿ ಆಡಿದ ಮಾತುಗಳನ್ನು ಕೇಳಿಸಿಕೊಂಡು ಸತ್ಯಜಿತ್ ತಾನು ಇಲ್ಲಿರುವುದು ಸರಿಯಲ್ಲ ಎಂದು ಮನೆ ಬಿಟ್ಟು ಹೋಗಿದ್ದಾನೆ.ಈ ಸತ್ಯ ಭಾರ್ಗವಿಗೂ ಗೊತ್ತಿದೆ.ಆದರೆ,ಭಾರ್ಗವಿ ಬೇಕಂತಲೇ ಸಾಧನಾ ಬಳಿ ಸುಳ್ಳು ಹೇಳಿದ್ದಾಳೆ.ಸತ್ಯ ಫಾರ್ಮ್ ಹೌಸ್ ನಲ್ಲಿದ್ದಾನೆ ಎಂದಿದ್ದಾಳೆ. ಈ ಮಾತನ್ನೇ ನಂಬಿಕೊಂಡಿರುವ ಸಾಧನಾ ನಿತ್ಯ ಫಾರ್ಮ್ ಹೌಸ್ ಗೆ ಊಟ ಕಳಿಸುತ್ತಿದ್ದಾಳೆ. ಆದರೆ, ಸತ್ಯ ನಿಜವಾಗಿಯೂ ಫಾರ್ಮ್ ಹೌಸ್ ನಲ್ಲಿ ಇದ್ದಾನಾ. ಇಲ್ಲ ಭಾರ್ಗವಿ ಸುಳ್ಳು ಹೇಳಿದ್ದಾಳಾ.. ಸತ್ಯಜಿತೆ ಎಲ್ಲಿಗೆ ಹೋಗಿರಬಹುದು ಎಂಬುದು ಯಾರಿಗೂ ಗೊತ್ತಿಲ್ಲ. ರಾಮ್ ಮತ್ತು ಸೀತಾ ಸಾಕಷ್ಟು ಬಾರಿ ಸತ್ಯಜಿತ್ ಬಗ್ಗೆ ಕೇಳಿದ್ದು, ಎಲ್ಲರೂ ನೆಗಲೆಕ್ಟ್ ಮಾಡಿದ್ದಾರೆ. ಆದರೆ, ಸಾಧನಾ ಮನಸ್ಸು ಸದಾ ತನ್ನ ಗಂಡನ ಬಗ್ಗೆ ಯೋಚಿಸುತ್ತಲೇ ಇದೆ.

ಭಾರ್ಗವಿ ಮಾತಿನ ಬಗ್ಗೆ ಸಿಹಿ ಯೋಚನೆ
ರಾಮ್ ಮತ್ತು ಸೀತಾ ಇತ್ತೀಚೆಗೆ ಸಿಹಿ ವಿಚಾರಕ್ಕೆ ಬಹಳ ವಾದ ಮಾಡುತ್ತಿದ್ದಾರೆ. ಸಿಹಿಗೆ ಆರೋಗ್ಯ ಸಮಸ್ಯೆ ಆದಾಗಲೂ ವೈದ್ಯರಿಗೆ ತೋರಿಸಬೇಕು ಬೇಡ ಎಂದು ಇಬ್ಬರೂ ವಾದಿಸಿದ್ದರು, ಬೇರೆ ಮನೆ ಮಾಡುವ ವಿಚಾರಕ್ಕೂ ಚರ್ಚೆ ಮಾಡಿದ್ದರು. ಈಗ ಸಿಹಿಯನ್ನು ಶಾಲೆಗೆ ಕಳಿಸಲು ಸೀತಾ ವ್ಯಾನ್ ವ್ಯವಸ್ಥೆ ಮಾಡಿದ್ದು, ರಾಮ್ ಗೆ ಇದು ಇಷ್ಟವಿಲ್ಲ. ಈ ವಿಚಾರಕ್ಕೂ ಇಬ್ಬರೂ ವಾದ ಮಾಡಿದ್ದಾರೆ. ಇದು ಸಿಹಿಗೆ ಇಷ್ಟವಾಗಿಲ್ಲ. ಇದೇ ಸಂದರ್ಭವನ್ನು ಬಳಸಿಕೊಂಡ ಭಾರ್ಗವಿ ಸಿಹಿ ಇಲ್ಲದಾಗ ರಾಮ್ ಮತ್ತು ಸೀತಾ ಖುಷಿಯಾಗಿರುವುದನ್ನು ತೋರಿಸಿದ್ದಾಳೆ. ನಿನ್ನಿಂದಲೇ ಅಪ್ಪ ಅಮ್ಮ ಜಗಳ ಮಾಡುತ್ತಾರೆ ಎಂದು ಹೇಳಿದ್ದು, ಈ ಬಗ್ಗೆ ಸಿಹಿ ದೀರ್ಘವಾಗಿ ಯೋಚಿಸಿದ್ದಾಳೆ.
ಅಪ್ಪ-ಅಮ್ಮನೊಂದಿಗೆ ಶಾಲೆಗೆ ಹೊರಟ ಸಿಹಿ
ಭಾರ್ಗವಿ ಆಂಟಿ ಹೇಳಿದ ಮಾತುಗಳು ಎಷ್ಟು ಸರಿ. ಅಪ್ಪ ಅಮ್ಮ ನಿಜವಾಗಲೂ ತನಗೋಸ್ಕರ ಜಗಳ ಮಾಡುತ್ತಿದ್ದಾರಾ..? ತಾನಿಲ್ಲದಿದ್ದರೆ, ಇಬ್ಬರೂ ಖುಷಿಯಾಗಿರುತ್ತಾರಾ ಎಂದು ಪದೇ ಪದೇ ಯೋಚಿಸುತ್ತಲೇ ಇದ್ದಾಳೆ. ಸಿಹಿಗೆ ಭಾರ್ಗವಿ ಮಾತಿನಲ್ಲಿ ನಂಬಿಕೆ ಇಲ್ಲದಿದ್ದರೂ, ಸತ್ಯ ಏನು ಎಂದು ತಿಳಿಯಲಾಗದೇ ಒದ್ದಾಡುತ್ತಿದ್ದಾಳೆ. ಈ ನಡುವೆ ರಾಮ್ ಮತ್ತು ಸೀತಾ ಇಬ್ಬರೂ ಸಿಹಿಯನ್ನು ಶಾಲೆಗೆ ಡ್ರಾಪ್ ಮಾಡಲು ಮುಂದಾಗಿದ್ದಾರೆ. ಮೊದಲ ಸಲ ಸಿಹಿ ಅಪ್ಪ ಅಮ್ಮನ ಜೊತೆಗೆ ಶಾಲೆಗೆ ಹೋಗುತ್ತಿದ್ದಾಳೆ.

ಅನಿಕೇತನ್ ಗೆ ಸಿಹಿ ಬುದ್ಧಿ ಬರುತ್ತಾ..?
ಶಾಲೆಗೆ ಹೋಗಲು ಸಿಹಿ ತಾನೇ ರೆಡಿಯಾಗಿದ್ದು, ಶೂ ಕೂಡ ಅವಳೇ ಹಾಕಿಕೊಂಡಿದ್ದಾಳೆ. ಅನಿಕೇತನ್ ಗೂ ತನ್ನ ಕೆಲಸವನ್ನು ಮಾಡಿಕೊಳ್ಳುವಂತೆ ಹೇಳಿದ್ದು, ಅನಿಕೇತನ್ ಕೋಪ ಮಾಡಿಕೊಂಡಿದ್ದಾನೆ. ನಿನ್ನ ಯೂನಿಫಾರ್ಮ್ ಸರಿಯಿಲ್ಲ, ಸ್ಕೂಲ್ ಚೆನ್ನಾಗಿಲ್ಲ ಎಂದು ಕಿರುಚಾಡಿದ್ದಾನೆ. ಸಿಹಿಗೆ ಬೇಸರವಾಗಿದ್ದು, ಯಾರ ಬಳಿಯೂ ಹೇಳಿಲ್ಲ. ಶಾಲೆಗೆ ಹೋಗುವ ಮುನ್ನ ಸೂರಿ ತಾತನನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಟಾಟಾ ಮಾಡಿ ಬಂದಿದ್ದಾಳೆ. ಸಿಹಿಯ ಈ ಗುಣವನ್ನು ಕಂಡ ಸೂರಿ ಭಾರ್ಗವಿಗೆ ನಿನ್ನ ಮಗ ಅನಿಕೇತನ್ ಗೂ ಸಿಹಿ ಬುದ್ಧಿಯನ್ನು ಸ್ವಲ್ಪವಾದರೂ ಹೇಳಿಕೊಡು ಎಂದಿದ್ದಾನೆ. ಆದರೆ, ಅನಿಕೇತನ್ ಇದನ್ನೆಲ್ಲಾ ಕಲಿಯುತ್ತಾನಾ..?


Click it and Unblock the Notifications











