Seetharama ; ಸೀತಾ ಹುಟ್ಟುಹಬ್ಬದ ದಿನವೇ ಸಿಹಿಯ ಸಾವು ಸಂಭವಿಸುತ್ತಾ..?
ಸೀತಾರಾಮ ಧಾರಾವಾಹಿಯಲ್ಲಿ ಸೀತಾಳ ಹುಟ್ಟುಹಬ್ಬದ ದಿನವೇ ವಾಣಿ ಆಸೆಯಂತೆ ಸೊಸೆಗೆ ಆಸ್ತಿಯಲ್ಲಿ ಹಕ್ಕಿರಲಿ ಎಂದು ಸೂರಿ ಒಂದಷ್ಟು ಪ್ಲಾನ್ ಗಳನ್ನು ಮಾಡಿದ್ದಾರೆ. ಈ ಬಗ್ಗೆ ಸೂರಿ ಸೀತಾಳಿಗೂ ತಿಳಿಸಿದ್ದಾರೆ. ಆಸ್ತಿಯ ಮೇಲೆ ಆಸೆ ಇಲ್ಲದೇ ಹೋದರೂ ಕೂಡ ಅತ್ತೆಯ ಆಸೆಯನ್ನು ನೆರವೇರಿಸಲು ಸೀತಾ ಮುಂದಾಗಿದ್ದಾಳೆ. ಇನ್ನು ಸಿಹಿ ಭಾರ್ಗವಿ ಚಿಕ್ಕಿ ಆಡಿದ ಮಾತಿನ ಬಗ್ಗೆ ಆಲೋಚಿಸುತ್ತಿದ್ದು, ತಮ್ಮವರಿಂದಲೇ ತನಗೂ, ತನ್ನ ಮಗಳು ಸಿಹಿಗೂ ಅಪಾಯವಿದೆ ಎಂಬುದನ್ನು ಸ್ಪಷ್ಟಗೊಂಡಿದ್ದಾಳೆ.
ಸೀಕ್ರೇಟ್ ಪತ್ರ ಬರೆದ ಸತ್ಯಜಿತ್
ಈದೆಲ್ಲಾ ಅನುಮಾನಗಳು ಇರುವ ಸಂದರ್ಭದಲ್ಲೇ ಸೀತಾಳಿಗೆ ಸತ್ಯಜಿತ್ ಪತ್ರ ಬರೆದಿದ್ದಾನೆ. ತಾನು ಬರೆದ ಪತ್ರದ ಬಗ್ಗೆ ಯಾರಿಗೂ ಮಾಹಿತಿ ನೀಡದಂತೆ ತಿಳಿಸಿದ್ದು, ಸೀತಾ ಮತ್ತು ಸಿಹಿಗೆ ಅಪಾಯವಿರುವ ಬಗ್ಗೆ ಮುನ್ಸೂಚನೆ ನೀಡಿದ್ದಾನೆ. ಅಲ್ಲದೇ, ವಾಣಿಯ ಆಸ್ತಿಯ ಪತ್ರಗಳ ಬಗ್ಗೆ ಸೀತಾ ಲಾಯರ್ ಆಫೀಸಿನಲ್ಲೇ ಮಾಹಿತಿ ಪಡೆಯಬೇಕು. ಈ ವಿಚಾರ ಮನೆಯವರಿಗೆ ತಿಳಿಯದಂತೆ ಕಾಪಾಡಿಕೊಳ್ಳಬೇಕು ಎಂದು ಎಚ್ಚರಿಕೆಯನ್ನೂ ನೀಡಿದ್ದಾನೆ. ಹೀಗಾಗಿ ಸೀತಾ ಶಾಪಿಂಗ್ ಗೆ ಹೋಗುವ ನೆಪದಲ್ಲಿ ಸಿಹಿ ಮತ್ತು ರಾಮ್ ಜೊತೆಗೆ ಲಾಯರ್ ಆಫೀಸಿಗೆ ಹೋಗಿದ್ದಾಳೆ. ಸೀತಾ ಎಷ್ಟೇ ರಹಸ್ಯವಾಗಿರಲು ಯತ್ನಿಸಿದರೂ ಭಾರ್ಗವಿಗೆ ಈ ವಿಚಾರ ಗೊತ್ತಾಗಿದೆ.

ಸೀತಾಳಲ್ಲಿ ಎದ್ದ ಹೊಸ ಅನುಮಾನಗಳು
ಲಾಯರ್ ಆಫಿಸಿನಲ್ಲಿ ಆಸ್ತಿ ಬಗ್ಗೆ ಚರ್ಚಿಸಿದ ಸೀತಾಳಿಗೆ ವಾಣಿ ಅತ್ತೆ ಮಗನಿಗೆ ಸಲ್ಲುವ ಆಸ್ತಿಯಲ್ಲಿ ಮಗನ ಕುಟುಂಬ ಬಿಟ್ಟು ಬೇರೆಯವರಿಗೆ ಹಕ್ಕು ಇರಬಾರದು ಎಂಬ ಸತ್ಯ ಅರ್ಥವಾಗಿದೆ. ವಾಣಿ ಅತ್ತೆಯ ಈ ಆಲೋಚನೆ ಹಿಂದೆ ಬಲವಾದ ಕಾರಣವಿದ್ದು, ಸತ್ಯ ತಿಳಿಯಲು ಸೀತಾ ಮುಂದಾಗಿದ್ದಾಳೆ. ಅಷ್ಟೇ ಅಲ್ಲದೇ, ವಿಶ್ವ ಫೋನ್ ನಲ್ಲಿ ದತ್ತು ಪಡೆಯುವ ಮುನ್ನ ಸಿಹಿ ಮತ್ತು ಸೀತಾಳಿಗೆ ಅಪಾಯವನ್ನು ತರಬೇಕು ಎಂಬ ಮಾತನ್ನು ಭಾರ್ಗವಿಯೊಂದಿಗೆ ಮಾತನಾಡುವ ಮಾತುಗಳನ್ನು ಸಿಹಿ ಮೂಲಕ ತಿಳಿದ ಸೀತಾಳಲ್ಲಿನ ಆತಂಕ ಹೆಚ್ಚಾಗಿದೆ. ಸಿಹಿಯನ್ನು ಲೀಗಲ್ ಆಗಿ ದತ್ತು ತೆಗೆದುಕೊಳ್ಳುವ ಕಾರ್ಯಕ್ರಮ ಯಾವುದೇ ಅಡ್ಡಿ-ಆತಂಕಗಳಿಲ್ಲದೇ ನಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾಳೆ. ಭಾರ್ಗವಿ ಮತ್ತು ವಿಶ್ವನ ಮೇಲಿನ ಸೀತಾ ಅನುಮಾಗಳು ಹೆಚ್ಚಾಗಿದೆ.
ಸಿಹಿಗೆ ಅಮ್ಮನ ಹುಟ್ಟುಹಬ್ಬ ತರುತ್ತಾ ಸಾವು..?
ಹುಟ್ಟುಹಬ್ಬವನ್ನು ಆಚರಿಸಲು ಮನೆಯವರೆಲ್ಲಾ ಕಾತುರರಾಗಿದ್ದರೆ, ಸೀತಾ ಮೊದಲು ಸಿಹಿ ದತ್ತು ಪಡೆಯುವ ಕೆಲಸ ಮುಗಿಯಲಿ ಎಂದು ಬಯಸಿದ್ದು, ಆತುರವಾಗಿ ಮನೆಯಿಂದ ಹೊರಟಿದ್ದಾಳೆ. ಆದರೆ, ಭಾರ್ಗವಿ ಅದಾಗಲೇ ಅಪಾಯದ ಪ್ಲಾನ್ ಮಾಡಿದ್ದು, ಸೀತಾ ಮತ್ತು ಸಿಹಿ ಜೀವಕ್ಕೆ ತೊಂದರೆಯಾಗುವಂತೆ ಮಾಡಿದ್ದಾಳೆ. ರೌಡಿಗಳು ಸೀತಾ ಮತ್ತು ಸಿಹಿಯ ಆಗಮನಕ್ಕೆ ಕಾಯುತ್ತಿದ್ದಾರೆ. ಸೀತಮ್ಮನ ಹುಟ್ಟುಹಬ್ಬದ ದಿನವೇ ಸಿಹಿಗೆ ಸಾವು ಸಂಭವಿಸುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿದೆ. ಪ್ರೊಮೋದಲ್ಲಿ ತೋರಿದಂತೆ ಸೀತಾ ಹುಟ್ಟುಹಬ್ಬದ ದಿನವೇ ಸಿಹಿ ಸಾಯುವುದು ಪಕ್ಕಾ ಆಗಿದೆ.
ದತ್ತು ಪಡೆಯಲು ಸಾಧ್ಯವಾಗುತ್ತಾ..?
ಆದರೆ, ಸೀತಾ ಮತ್ತು ರಾಮ್ ದತ್ತು ಪತ್ರಗಳಿಗೆ ಸಹಿ ಹಾಕಿದ ಬಳಿಕ ಸಿಹಿಗೆ ಅಪಘಾತವಾಗುತ್ತಾ..? ಇಲ್ಲವೇ ಮುನ್ನವೇ ಸಾಯುತ್ತಾಳಾ ಎಂಬ ಕುತೂಹಲವಂತೂ ಮೂಡಿದೆ. ಅಶೋಕ್ ಮತ್ತು ಸೀತಾ ಇಬ್ಬರೂ ಪರೀಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದರೂ, ರಾಮ್ ಹೆಂಡತಿ ಮತ್ತು ಗೆಳೆಯನ ಆತಂಕವನ್ನು ನಿರ್ಲಕ್ಷಿಸಿದ್ದಾನೆ. ಇದರಿಂದ ಮುಂದೆ ಏನೆಲ್ಲಾ ಆಗುತ್ತೆ. ಭಾರ್ಗವಿ ಆಟಗಳಿಗೆ ಬ್ರೇಕ್ ಹಾಕಲು ಸಿಹಿಯ ತದ್ರೂಪಿಯಾಗಿರುವ ಅವಳ ಸಹೋದರಿ ಬರುತ್ತಾಳಾ ಎಂಬ ಪ್ರಶ್ನೆಗಳು ಎದ್ದಿದ್ದು, ಎಲ್ಲಾ ಕುತೂಹಲಗಳಿಗೆ ಮುಂದಿನ ಎಪಿಸೋಡ್ ಗಳೇ ಬ್ರೇಕ್ ಹಾಕಬೇಕಿದೆ.


Click it and Unblock the Notifications











