Seetharama ; ಭಾರ್ಗವಿ ಬಳಿ ಚಾಲೆಂಜ್ ಮಾಡಿದ ಸಿಹಿ : ಚಿಕ್ಕಿ ಮೇಲೆ ರಾಮ್‌ಗೆ ಅನುಮಾನ..!
ಸೀತಾರಾಮ ಧಾರಾವಾಹಿಯಲ್ಲಿ ಪ್ರಿಯಾ ತಾಯಿಯಾಗುವ ಆಸೆಯಲ್ಲಿದ್ದಾಳೆ. ಹೀಗಾಗಿ ನಿತ್ಯ ಅಶೋಕ್ ಬಳಿ ಡಾಕ್ಟರ್‌ನ ಭೇಟಿಯಾಗೋಣ ಎಂದು ಪೀಡಿಸುತ್ತಿದ್ದಳು.ಡಾ.ಅನಂತಲಕ್ಷ್ಮೀ ಅವರನ್ನು ಭೇಟಿ ಆದ ಬಳಿಕ ಅವರು ಒಂದಷ್ಟು ಟೆಸ್ಟ್ ಮಾಡಿಸಿ, ಬೇರೆ ವೈದ್ಯರನ್ನು ಕಾಣಲು ಸೂಚನೆ ನೀಡಿದರು. ಟೆಸ್ಟ್ ರಿಪೋರ್ಟ್ ತೆಗೆದುಕೊಂಡು ಅಶೋಕ್ ವೈದ್ಯರನ್ನು ಭೇಟಿ ಮಾಡಿದ್ದಾನೆ. ತನ್ನೊಬ್ಬನನ್ನೇ ಬರಲು ವೈದ್ಯರು ಹೇಳಿದ್ದು, ಅಶೋಕ್ ಮನದಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ. ಇದರಿಂದ ಏನಾಗಿರಬಹುದು ಎಂಬ ಗೊಂದಲದಲ್ಲೇ ವೈದ್ಯರನ್ನು ಭೇಟಿ ಮಾಡಿದ್ದಾನೆ.
ಪ್ರಿಯಾಳನ್ನು ಕಾಡುತ್ತಿರುವ ಬ್ರೆಸ್ಟ್ ಕ್ಯಾನ್ಸರ್
ರಿಪೋರ್ಟ್ ನೋಡಿದ ವೈದ್ಯರು ಪ್ರಿಯಾಳಿಗೆ ಬ್ರೆಸ್ಟ್ ಕ್ಯಾನ್ಸರ್ ಇದೆ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿದ ಅಶೋಕ್ ಎದೆ ಬಡಿತ ನಿಂತ ಹಾಗೆ ಆಗಿದ್ದು, ತುಂಬಾ ಸೆನ್ಸಿಟಿವ್ ಆಗಿರುವ ಪ್ರಿಯಾ ಬಳಿ ಈ ಸತ್ಯ ಹೇಳುವುದು ಹೇಗೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಗಾಬರಿಯಾಗಿದ್ದಾನೆ. ವೈದ್ಯರ ಬಳಿಯೂ ರಿಕ್ವೆಸ್ಟ್ ಮಾಡಿಕೊಂಡಿದ್ದಾನೆ. ವೈದ್ಯರು ಕೂಡ ಪ್ರಿಯಾಳಿಗೆ ಉತ್ತಮವಾದ ಟ್ರೀಟ್ ಮೆಂಟ್ ನೀಡುವುದಾಗಿ ಹೇಳಿದ್ದಾರೆ. ಅಶೋಕ್ ಮನೆಗೆ ಹೋಗಿ ಯಾರ ಬಳಿಯೂ ಸತ್ಯ ಹೇಳದೆಯೇ ತನ್ನೊಳಗೆ ದುಃಖ ತುಂಬಿಕೊಂಡಿದ್ದಾನೆ. ಅಶೋಕ್ ರೀತಿಯನ್ನು ಕಂಡು ಪ್ರೇಮಾ ಅನುಮಾನಗೊಂಡಿದ್ದಾಳೆ. ಅಶೋಕ್ ರಾಮ್ ಗೂ ಸತ್ಯ ಹೇಳಬಾರದು ಎಂದು ಅವನ ಫೋನ್ ಕಾಲ್ ಕೂಡ ಅವಾಯ್ಡ್ ಮಾಡಿದ್ದಾನೆ.

ರುದ್ರಪ್ರತಾಪ್ ನ ದಿಕ್ಕರಿಸಿದ ಅಂಜಲಿ
ಇನ್ನು ರುದ್ರಪ್ರತಾಪ್ ಸೀತಾ ಸಂಜೀವಿನಿ ಆಶ್ರಮದಲ್ಲಿದ್ದಾಗ ಯಾರಿಗೆ ಪತ್ರ ಬರೆಯುತ್ತಿದ್ದಳು. ಆ ಪತ್ರದಲ್ಲಿ ಏನಿದೆ. ಪತ್ರಗಳು ವಾಪಸ್ ಬರಲು ಕಾರಣವೇನು ಎಂದು ತಿಳಿಯಲು ಮುಂದಾಗಿದ್ದಾನೆ. ಹೀಗಾಗಿ ಅಂಜಲಿಗೆ ಫೋನ್ ಮಾಡಿದ್ದು, ನನ್ನ ಪ್ರೀತಿಯನ್ನು ಉಳಿಸಿಕೊಳ್ಳಬೇಕು ಎಂದರೆ ನಾನು ಕೊಟ್ಟ ಈ ಕೆಲಸವನ್ನು ಮಾಡು. ಆಶ್ರಮದಲ್ಲಿ ಸೀತಾ ಬರೆದ ಪತ್ರಗಳನ್ನು ನನಗೆ ತಂದು ಕೊಡು ಎಂದು ಕೇಳುತ್ತಾನೆ. ಅಂಜಲಿಗೆ ರುದ್ರಪ್ರತಾಪ್ ಕೊಟ್ಟ ಈ ಕೆಲಸದಲ್ಲಿ ಅನುಮಾನ ಬರುತ್ತದೆ. ಹೀಗಾಗಿ ಅಂಜಲಿ ಹೀಮದೆ ಮುಂದೆ ಯೋಚಿಸದೇ ತನ್ನ ಕೈಯಲ್ಲಿ ಈ ಕೆಲಸ ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿ ಫೋನ್ ಕಟ್ ಮಾಡುತ್ತಾಳೆ. ಇದರಿಂದ ರುದ್ರಪ್ರತಾಪ್ ಗೆ ಕೋಪ ಬರುತ್ತದೆ.
ಭಾರ್ಗವಿಗೆ ಚಾಲೆಂಜ್ ಮಾಡಿದ ಸಿಹಿ
ಇನ್ನು ಭಾರ್ಗವಿ ಸಿಹಿಗೆ ತಮ್ಮ ಬಂದರೆ ನಿನ್ನ ಮೇಲಿನ ಪ್ರೀತಿ ಕಡಿಮೆಯಾಗುತ್ತದೆ ಎಂದು ಹೇಳಿಕೊಡುತ್ತಾಳೆ. ತಕ್ಷಣವೇ ಸಿಹಿ ರಾಮ್ ಬಳಿ ಹೋಗಿ ಭಾರ್ಗವಿ ಹೇಳಿದ ಮಾತನ್ನು ಹೇಳಿದ್ದಕ್ಕೆ ರಾಮ್ ಚಿಕ್ಕಿಯನ್ನು ಪ್ರಶ್ನೆ ಮಾಡುತ್ತಾನೆ. ಭಾರ್ಗವಿ ನಿಮ್ಮ ಒಳ್ಳೆಯದಕ್ಕೆ ಹೇಳಿದೆ, ಇಲ್ಲದೇ ಹೋದರೆ ಸಿಹಿ ತಮ್ಮ ಬೇಕು ಎಂದು ಹಠ ಹಿಡಿಯುತ್ತಾಳೆ ಎಂದು ಹೇಳಿ ಸಮಾಧಾನ ಮಾಡುತ್ತಾಳೆ. ಬಳಿಕ ಸಿಹಿಗೆ ನಿನಗೆ ತಮ್ಮ ಬರುವುದಿಲ್ಲ ಎಂದು ಮತ್ತೆ ಹೇಳಿದಾಗ ಸಿಹಿ ಭಾರ್ಗವಿಗೆ ಚಾಲೆಂಜ್ ಮಾಡುತ್ತಾಳೆ. ನನಗೆ ತಮ್ಮ ಬಂದೇ ಬರುತ್ತಾನೆ ಎಂದು ಹೇಳುತ್ತಾಳೆ.

ಸೀತಾ, ರಾಮನಿಗೆ ಅನುಮಾನ ತಂದ ಸಿಹಿ ಮಾತು
ಇದೆಲ್ಲಾ ಒಂದು ಕಥೆಯಾದರೆ, ಸಿಹಿ ಪದೇ ಪದೇ ರಾಮ್ ಮತ್ತು ಸೀತಾ ಬಳಿ ತಮ್ಮ ಬೇಕು ಎಂದು ಕೇಳುತ್ತಿರುತ್ತಾಳೆ. ಸೀತಾ ಸಿಹಿಗೆ ಇದೆಲ್ಲಾ ಆಗುವಂತಹ ಮಾತಲ್ಲ ಎಂದು ಹೇಳುತ್ತಾಳೆ. ಆಗ ಸಿಹಿ ನಿಮಗೋಸ್ಕರ ನಾನು ಬೋರ್ಡಿಂಗ್ ಸ್ಕೂಲ್ ಗೆ ಹೋಗಿದ್ದೆ. ಈಗ ನೀವು ನನಗೋಸ್ಕರ ತಮ್ಮನನ್ನು ಕೊಡಿ ಎಂದು ಕೇಳುತ್ತಾಳೆ. ಭಾರ್ಗವಿ ಹೇಳಿದಂತೆ ನಾನು ಬೋರ್ಡಿಂಗ್ ಸ್ಕೂಲ್ ಗೆ ಹೋಗಿದ್ದು ನಿಮ್ಮ ಖುಷಿಗೆ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ರಾಮ್ ಗೊಂದಲವಾಗುತ್ತದೆ. ಸೀತಾ ಭಾರ್ಗವಿ ತಾನಂದುಕೊಂಡಂತೆ ಅಲ್ಲ ಎಂದು ಗೆಸ್ ಮಾಡುತ್ತಾಳೆ.


Click it and Unblock the Notifications











