Seetharama ; ಸುಬ್ಬಿಯನ್ನು ಕಂಡು ಬೆಕ್ಕಸ ಬೆರಗಾದ ರಾಮ್,ಸೀತಾ ಮನೆಗೆ ಹೋಗ್ತಾಳಾ ಸುಬ್ಬಿ ?
ಸೀತಾರಾಮ ಧಾರಾವಾಹಿಯಲ್ಲಿ ಸಿಹಿಯಂತೆ ಇರುವ ಸುಬ್ಬಿಯನ್ನು ಸೀತಾ ಯಾವಾಗಲೂ ನನ್ನ ಮಗಳು ಎಂದು ಹೇಳುತ್ತಾಳೆ. ಹಾಗಾಗಿ ಸುಬ್ಬಿಯನ್ನು ರಾಮ್ ಸ್ಲಂನಲ್ಲಿ ಹುಡುಕಾಡುತ್ತಿದ್ದಾನೆ. ಮನೆಯಲ್ಲಿ ಈ ವಿಚಾರವನ್ನು ತಿಳಿಸದ ರಾಮ್, ಅಶೋಕ್ ಜೊತೆ ಸೇರಿ ಸೀತಾಳೀಗೆ ಸರ್ಪ್ರೈಸ್ ಕೊಡಲು ಕಷ್ಟಪಡುತ್ತಿದ್ದಾನೆ. ಆದರೆ, ಸುಬ್ಬಿ ಆಡಿಷನ್ ಗೆ ಬಂದು ಓಡಿ ಹೋಗಿದ್ದಾಳೆ. ರಾಮ್ ಕೆಟ್ಟವನು ಅವನ ಧಾರಾವಾಹಿಗೆ ನಾನು ಕೆಲಸ ಮಾಡುವುದಿಲ್ಲ ಎಂದು ಮನೆಗೆ ವಾಪಸ್ ಬಂದಿದ್ದಾಳೆ. ಇದರಿಂದ ರಾಮ್ ಕೂಡ ಬೇಸರ ಮಾಡಿಕೊಂಡಿದ್ದಾನೆ.
ರಾಮ್ ಬಗ್ಗೆ ತಿಳಿಯಲು ಭಾರ್ಗವಿ ಯತ್ನ
ಸುಬ್ಬಿಯನ್ನು ಹುಡುಕುವ ಕೆಲಸದಲ್ಲಿ ರಾಮ್ ಬ್ಯುಸಿಯಾಗಿದ್ದಾನೆ. ಮನೆಯಲ್ಲಿ ಯಾರಿಗೂ ಈ ವಿಷಯ ತಿಳಿಸದ ಕಾರಣ, ಭಾರ್ಗವಿ ಆತಂಕಗೊಂಡಿದ್ದಾಳೆ. ರಾಮ್ ಮತ್ತು ಅಶೋಕ್ ಸೇರಿಕೊಂಡು ಏನೋ ಮಾಡುತ್ತಿದ್ದಾರೆ. ಮಾಹಿತಿ ತಿಳಿಯಲು ಪ್ರಯತ್ನಿಸಿದ್ದಾಳೆ. ಸೀತಾ ಬಳಿ ರಾಮ್ ಫೋನ್ ಗೆ ಸಿಗುತ್ತಿಲ್ಲ. ಫೋನ್ ಮಾಡಿ ಲೊಕೇಶನ್ ಕಳಿಸಲು ಹೇಳು, ಕೆಲ ಫೈಲ್ ಗಳಿಗೆ ಸೈನ್ ಆಗಬೇಕಿದೆ ಎಂದು ಭಾರ್ಗವಿ ಹೇಳುತ್ತಾಳೆ. ಸೀತಾ ಈ ಮಾತನ್ನು ನಂಬಿ ರಾಮ್ ಗೆ ಲೊಕೇಶನ್ ಕಳಿಸಲು ಹೇಳುತ್ತಾಳೆ. ಆದರೆ, ಅಶೋಕ್ ಬೇಕಂತಲೇ ಯಾವುದೋ ಲೊಕೇಶನ್ ಕಳಿಸಿ ಯಾಮಾರಿಸುತ್ತಾನೆ. ಇದರಿಂದ ಭಾರ್ಗವಿಗೆ ಕೆಟ್ಟ ಕೋಪ ಬರುತ್ತದೆ. ಆದರೆ, ಕೋಪ ತೋರಿಸಲಾಗದೇ ಸುಮ್ಮನಾಗುತ್ತಾಳೆ.

ಸುಬ್ಬಿಯನ್ನು ಕಂಡು ಬೆರಗಾದ ರಾಮ್
ಸುಬ್ಬಿ ಇರುವ ಕಡೆಗೆ ಸಿಹಿ ಹೋಗುತ್ತಾಳೆ. ನೀನು ಮಾಡುತ್ತಿರುವುದು ತಪ್ಪು. ಕಳ್ಳತನ ಮಾಡುವುದಕ್ಕಿಂತಲೂ ಆಡಿಶನ್ ಕೊಟ್ಟು ಸೀರಿಯಲ್ ಮಾಡು. ಆಗ ಒಳ್ಳೆಯದಾಗುತ್ತೆ. ಸೀತಮ್ಮನನ್ನು ನೋಡಬಹುದು ಎಂದೆಲ್ಲಾ ಹೇಳಿ ಮನವೊಲಿಸುತ್ತಾಳೆ. ಸಿಹಿಯ ಮಾತನ್ನು ಸುಬ್ಬಿ ಅರ್ಥ ಮಾಡಿಕೊಂಡು ಆಡಿಷನ್ ಗೆ ತೆರಳುತ್ತಾಳೆ. ಅಲ್ಲಿ ಸುಬ್ಬಿಯನ್ನು ಕಂಡು ರಾಮ್ ಬೆರಗಾಗುತ್ತಾನೆ. ತನ್ನ ಸಿಹಿಯನ್ನು ನೋಡಿದಂತೆಯೇ ಫೀಲ್ ಆಗುತ್ತಿದೆ ಎಂದು ಕೆಲ ಕ್ಷಣಗಳು ಮೌನವಾಗಿ ಸುಬ್ಬಿಯನ್ನು ನೋಡುತ್ತಲೇ ಇರುತ್ತಾನೆ. ಬಳಿಕ ಆಡಿಷನ್ ನಲ್ಲಿ ಡೈಲಾಗ್ ಹೇಳಲು ಹೇಳುತ್ತಾನೆ.
ಮನೆಗೆ ಕರೆದುಕೊಂಡು ಹೋಗಲು ಬಂದ ರಾಮ್
ಅಶೋಕ್ ಬಳಿ ಸೀತಾ ಈ ಮಗುವನ್ನು ನೋಡಿ ಸಿಹಿ ಎಂದಾಗಲೆಲ್ಲಾ ಏನೋ ಸ್ವಲ್ಪ ಹೋಲಬಹುದು ಎಂದುಕೊಂಡಿದ್ದೆ. ಆದರೆ, ಈ ಮಗು ನಮ್ಮ ಸಿಹಿಯಂತೆ ಇದ್ದಾಳೆ ಎಂದು ತನಗಾದ ಆಶ್ಚರ್ಯವನ್ನು ಹೇಳುತ್ತಾನೆ. ಬಳಿಕ ಸುಬ್ಬಿ My name is Sihi, S I H I, S capital ಎಂದು ಹೇಳಲು ಮೊದಲು ಒದ್ದಾಡುತ್ತಾಳೆ. ಸಿಹಿ ಹೇಳಿಕೊಟ್ಟ ಬಳಿಕ ಡೈಲಾಗ್ ಹೇಳಿ ಸೆಲೆಕ್ಟ್ ಆಗುತ್ತಾಳೆ. ಸುಬ್ಬಿ ಆಯ್ಕೆ ಆಗಿದ್ದಕ್ಕೆ ಅವರ ಮನೆಯವರೆಲ್ಲಾ ಖುಷಿ ಪಡುತ್ತಾರೆ. ರಾಮ್, ಮಿಕ್ಕ ವಿಚಾರವನ್ನೆಲ್ಲಾ ಮನೆಗೆ ಬಂದು ಹೇಳುವುದಾಗಿ ಹೇಳಿ ಕಳಿಸುತ್ತಾನೆ.
ರಾಮ್ ಮಾತು ಕೇಳಿ ಶಾಕ್ ಆದ ಸುಬ್ಬಿ
ಸುಬ್ಬಿ ಧಾರಾವಾಹಿಯಲ್ಲಿ ನಟಿಸುತ್ತಾಳೆ ಎಂದು ಮನೆಯವರೆಲ್ಲಾ ಖುಷಿಯಿಂದ ಇರುತ್ತಾರೆ. ರಾಮ್ ಮತ್ತು ಅಶೋಕ್ ಮನೆಗೆ ಬಂದು ಹಣ್ಣು ಕೊಟ್ಟು ಸುಬ್ಬಿ ಸೀರಿಯಲ್ ನಲ್ಲಿ ನಟಿಸುವ ಅಗತ್ಯವಿಲ್ಲ. ನಮ್ಮ ಮನೆಯಲ್ಲಿ ನಟಿಸಬೇಕಿದೆ. ನನ್ನ ಹೆಂಡತಿ ಸುಬ್ಬಿಯಂತಾ ಮಗುವನ್ನು ಕಳೆದುಕೊಂಡು ಹುಚ್ಚಿಯಾಗಿದ್ದಾಳೆ. ಅವಳು ಸರಿ ಹೋಗಬೇಕು ಎಂದರೆ, ಸುಬ್ಬಿ ಮನೆಗೆ ಬರಬೇಕು ಎಂದು ಹೇಳುತ್ತಾನೆ. ಆಗ ಸುಬ್ಬಿ ತಾತ ಕೋಪ ಮಾಡಿಕೊಂಡು ಅದೆಲ್ಲಾ ಬೇಕಿಲ್ಲ ಎಂದು ಹೇಳುತ್ತಾರೆ. ಆಗ ರಾಮ್ ಒಂದು ಸಲ ಈ ಮಗುವನ್ನು ತಬ್ಬಿಕೊಳ್ಳಬಹುದಾ ಎಂದು ಕೇಳುತ್ತಾನೆ. ಸುಬ್ಬಿಯನ್ನು ತಬ್ಬಿಕೊಂಡಾಗ ಅವಳ ಕುತ್ತಿಗೆಯಲ್ಲಿರುವ ಸರವನ್ನು ನೋಡಿ ಈ ಮಗು ಮತ್ತು ಸಿಹಿ ಅವಳಿ ಮಕ್ಕಳಿರಬಹುದಾ ಎಂದು ಮನದಲ್ಲೇ ಆಲೋಚಿಸುತ್ತಾನೆ.


Click it and Unblock the Notifications











