Seetharama ; ಮಾವನ ಬಳಿ ಭಾರ್ಗವಿ ಹೇಳಿದ ಸುಳ್ಳು, ರಾಮ್ ಸಂಸಾರಕ್ಕೆ ಅಪಾಯ ತರುತ್ತಾ..?
ಸೀತಾರಾಮ ಧಾರಾವಾಹಿಯಲ್ಲಿ ಶಾಲೆಗೆ ಬಿಟ್ಟ ಬಳಿಕ ಶಾಂತಜ್ಜಿ ಮತ್ತು ಮೂರ್ತಿ ತಾತ ಮೊಮ್ಮಗಳನ್ನು ಪದೇ ಪದೇ ನೋಡಲು ಅವಕಾಶ ಕೇಳಿದ್ದು, ರಾಮ ಸೀತಾ ಅವಳು ನಿಮ್ಮ ಮೊಮ್ಮಗಳು ಎಂದು ಹೇಳುತ್ತಾರೆ. ಇನ್ನು ಸುಲೋಚನಾ ಬೇಕಂತಲೇ ವಠಾರಕ್ಕೆ ಬಂದಿದ್ದು, ಅಜ್ಜಿ ಮನೆಯಲ್ಲಿ ತಿಂಡಿ ತಿನ್ನುತ್ತಾ ಸೀತಾ ತಮಗಾಗಿ ಬೈಕ್ ಕೊಡಿಸುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದಾಳೆ. ಅಲ್ಲದೇ, ವಠಾರದ ಸೀತಾ ಮನೆಯನ್ನು ತನ್ನ ಪಾಲಾಗಿಸಿಕೊಳ್ಳಲು ಯತ್ನಿಸಿದ್ದು, ಇದರಿಂದ ಶಾಂತಜ್ಜಿ ಮತ್ತು ಮೂರ್ತಿ ತಾತ ಸುಲೋಚನಾ ಮಾತಿಗೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಆಶ್ರಮದಲ್ಲೇ ಉಳಿಯಲು ಅಂಜಲಿ ಪ್ಲಾನ್
ಅಂಜಲಿ ಅಣ್ಣ ಮತ್ತು ಅತ್ತಿಗೆಯಿಂದ ದೂರಾಗಿ, ತನ್ನ ಬದುಕನ್ನು ಒಂಟಿಯಾಗಿಯೇ ಕಳೆಯಲು ತೀರ್ಮಾನ ಮಾಡಿದ್ದಾಳೆ. ಹೀಗಾಗಿ ಆಶ್ರಮದ ನೆಪವೊಡ್ಡಿ ಬಂದಿದ್ದು, ಈಗ ಅತ್ತಿಗೆ ಪ್ರಿಯಾಳಿಗೆ ಯೋಗಕ್ಷೇಮ ವಿಚಾರಿಸಿಕೊಳ್ಳಲು ಕರೆ ಮಾಡಿದ್ದಾಳೆ. ತಾನು ಇಲ್ಲೇ ವೈದ್ಯೆಯಾಗಿ ಆಶ್ರಮದಲ್ಲೇ ಉಳಿಯುವ ಬಗ್ಗೆ ತಿಳಿಸಿದ್ದಾಳೆ. ಆದರೆ, ಅಂಜಲಿ ಮಾತಿಗೆ ಪ್ರಿಯಾ ಬೈದಿದ್ದು, ನಮ್ಮಿಬ್ಬರನ್ನು ಬಿಟ್ಟು ನೀನು ಎಲ್ಲೂ ಹೋಗುವಂತಿಲ್ಲ. ವಾಪಸ್ ಮನೆಗೆ ಬಾ. ನಿಮ್ಮ ಅಣ್ಣ ಅಶೋಕ್ ಕೂಡ ಬೇಸರ ಮಾಡಿಕೊಂಡಿದ್ದಾರೆ ಎಂದು ಹೇಳುತ್ತಾಳೆ. ಅಂಜಲಿಗೆ ಈಗ ಗೊಂದಲ ಉಂಟಾಗಿದ್ದು, ಪ್ರೇಮಾ ಮಾತನ್ನು ಮನಸ್ಸಲ್ಲಿಟ್ಟುಕೊಂಡು ಆಶ್ರಮದಲ್ಲೇ ಇರುತ್ತಾಳಾ..? ಇಲ್ಲ ವಾಪಸ್ ಅಣ್ಣನ ಮನೆಗೆ ಬಂದು ಎಲ್ಲರ ಜೊತೆಗೆ ಒಂದಾಗುತ್ತಾಳಾ ಗೊತ್ತಿಲ್ಲ

ವಂಶೋದ್ಧಾರಕ ಬೇಕು ಎಂದ ಸೂರಿ
ಸೂರಿ ತಾತನಿಗೆ ಮೊಮ್ಮಗನ ಮದುವೆ ಮಾಡಿ ಖುಷಿಯಾಗಿದೆ. ಮಗ ಮತ್ತು ಸೊಸೆ ತೀರಿಕೊಂಡ ಮೇಲೆ ಮೊಮ್ಮಗನನ್ನು ಬೆಳೆಸಿ ದೊಡ್ಡವನನ್ನು ಮಾಡಿದ ಸೂರಿ ತಾತನಿಗೆ ಮೊಮ್ಮಗನ ಮದುವೆ ಮಾಡುವ ಆಸೆ ಇತ್ತು. ಈಗ ಅದೂ ಕೂಡ ನೆರವೇರಿದ್ದು, ಈ ವಂಶವನ್ನು ಬೆಳೆಸಲು ಮೊಮ್ಮಗನಿಂದ ಗಂಡು ಮಗುವನ್ನು ಸೂರಿ ತಾತ ಬಯಸುತ್ತಿದ್ದಾರೆ. ಸೀತಾಳಿಗೆ ಮಗುವಿದೆ ಎಂಬ ಸತ್ಯ ತಿಳಿದಾಗಲೂ ಸೂರಿ ತಾತ ವಂಶೋದ್ಧಾರಕ ಬೇಕು ಎಂದು ಕಂಡೀಷನ್ ಹಾಕಿಯೇ ಮದುವೆಗೆ ಒಪ್ಪಿಗೆ ಕೊಟ್ಟಿದ್ದರು. ಈಗ ರಾಮ್ ಮತ್ತು ಸೀತಾಳನ್ನು ಹನಿಮೂನ್ ಕಳಿಸಿ, ಅವರ ಸಂಸಾರ ಶುರುವಾಗುವಂತೆ ಮಾಡಬೇಕು ಎಂದುಕೊಂಡಿದ್ದಾರೆ.
ಮಾವನ ಬಳಿ ಸುಳ್ಳು ಹೇಳಿದ ಭಾರ್ಗವಿ
ಆದರೆ, ಭಾರ್ಗವಿ ಈಗಾಗಲೇ ರಾಮನ ಬದುಕನ್ನು ಹಾಳು ಮಾಡಬೇಕು ಎಂದು ಸಾಕಷ್ಟು ಪ್ಲಾನ್ ಮಾಡಿಕೊಂಡಿದ್ದು, ಸಿಹಿಗೆ ಈ ಮನೆಯಿಂದ ಅಪಾಯವಿದೆ ಎಂದು ಸುಳ್ಳು ಹೇಳಿಸಿದ್ದಾಳೆ. ಅಲ್ಲದೇ, ಸಿಹಿ ಬಳಿ ನಿನ್ನಿಂದ ಅಪ್ಪ-ಅಮ್ಮನಿಗೆ ತೊಂದರೆ ಆಗುತ್ತಿದೆ ಎಂದು ಕಥೆ ಕಟ್ಟಿದ್ದಾಳೆ. ಇದೀಗ ಸೂರಿ ಮಾವನ ಬಳಿ ವಂಶೋದ್ಧಾರಕನನ್ನು ಮರೆತು ಬಿಡಿ ಎಂದಿದ್ದು, ಹೊಸ ಸುಳ್ಳೊಂದನ್ನು ಹೇಳಿದ್ದಾಳೆ. ಜ್ಯೋತಿಷಿಗಳಿಗೆ ರಾಮ್ ಮತ್ತು ಸೀತಾ ಜಾತಕ ತೋರಿಸಿದ್ದು, ಸಿಹಿ ಅವರ ಜೊತೆಗೆ ಇರುವವರೆಗೂ ಬೇರೊಂದು ಮಗು ಆಗುವುದಿಲ್ಲ ಎಂದಿದ್ದಾರೆ ಎನ್ನುತ್ತಾಳೆ. ಈ ಮಾತನ್ನು ಕೇಳಿದ ಸೂರಿಗೆ ಶಾಕ್ ಆಗಿದೆ.

ರಾಮನ ಮೇಲೆ ತಾತನಿಗೆ ಕೋಪ
ಜಾತಕದ ವಿಚಾರ ಕೇಳಿದ ಸೂರಿಗೆ ರಾಮನ ಸಂಸಾರದ ಬಗ್ಗೆ ಆತಂಕ ಶುರುವಾಗಿದೆ. ಏನಾದರೂ ಮಾಡಿ ರಾಮನ ಸಂಸಾರ ಪ್ರಾರಂಭವಾಗುವಂತೆ ಮಾಡಬೇಕು ಎಂದು ಆಲೋಚಿಸಿದ್ದು, ಮೊಮ್ಮಗನಿಗೆ ಹನಿಮೂನ್ ಗೆ ಹೋಗುವಂತೆ ಒತ್ತಾಯ ಮಾಡಿದ್ದಾರೆ. ರಾಮ್ ಕೂಡ ಹನಿಮೂನ್ ಗೆ ಹೋಗಲು ಬಯಸಿದ್ದು, ಸಿಹಿಯನ್ನು ಒಂಟಿ ಮಾಡಿ ಹನಿಮೂನ್ ಗೆ ಹೋಗುತ್ತಾರಾ..? ಇಲ್ಲ ಮಗಳನ್ನು ಕೂಡ ತಮ್ಮ ಜೊತೆಗೆ ಕರೆದುಕೊಂಡು ಫ್ಯಾಮಿಲಿ ಟ್ರಿಪ್ ಎಂಜಾಯ್ ಮಾಡುತ್ತಾರಾ ಎಂದು ವೀಕ್ಷಕರು ಕುತೂಹಲಗೊಂಡಿದ್ದಾರೆ.


Click it and Unblock the Notifications











