Seetha Rama ; ಸೀತಾ-ರಾಮನ ನಿಶ್ಚಿತಾರ್ಥದಲ್ಲಿ ವಾಣಿ ಅತ್ತಿಗೆ : ಎಲ್ಲರಿಗೂ ಶಾಕ್ ಕೊಟ್ಟ ಸತ್ಯ...!
ಸೀತಾರಾಮ ಧಾರಾವಾಹಿಯಲ್ಲಿ ಸೀತಾ ಮತ್ತು ರಾಮನ ಎಂಗೇಜ್ ಮೆಂಟ್ ಗೆ ಭಾರ್ಗವಿ ಅದ್ಧೂರಿಯಾಗಿಯೇ ಅರೇಂಜ್ ಮೆಂಟ್ಸ್ ಮಾಡಿರುತ್ತಾಳೆ. ಎಂಗೇಜ್ ಮೆಂಟ್ ನಡೆಯುವ ಸಂದರ್ಭದಲ್ಲಿ ಅಶೋಕ್ ಬಹಳ ಖುಷಿಯಾಗಿರುತ್ತಾನೆ. ಇದನ್ನು ನೋಡಿದ ಭಾರ್ಗವಿಗೆ ಸಹಿಸಿಕೊಳ್ಳಲು ಆಗುವುದಿಲ್ಲ.ಹಾಗಾಗಿ ಭಾರ್ಗವಿ ತಕ್ಷಣವೇ ಅಶೋಕನಿಗೆ ಫೋಟೋ ಒಂದನ್ನು ಕಳಿಸುತ್ತಾಳೆ. ಅದನ್ನು ಅಶೋಕ್ ನೋಡಿ ಶಾಕ್ ಆಗುತ್ತಾನೆ. ತಾನು ಚರಣ್ ಡಿ ಜೊತೆಗೆ ಇರುವ ಫೋಟೋ ಆಗಿರುತ್ತದೆ.ಆಗ ಅಶೋಕನಿಗೆ ತನಗೆ ತಲೆಗೆ ಹೊಡೆದವರು ಭಾರ್ಗವಿ ಕಡೆಯವರೇ ಎಂಬುದು ಕನ್ಫರ್ಮ್ ಆಗುತ್ತದೆ
ಉಂಗುರ ಬದಲಿಸಿಕೊಂಡ ರಾಮ್-ಸೀತಾ
ಇನ್ನು ಸೀತಾ ಮತ್ತು ರಾಮ್ ಉಂಗುರ ಬದಲಿಸಿಕೊಳ್ಳುತ್ತಾರೆ. ಎಲ್ಲರೂ ಕುಣಿದು ಕುಪ್ಪಳಿಸುತ್ತಾರೆ. ಅಷ್ಟೇ ಅಲ್ಲದೇ, ರಾಮ್ ಮತ್ತು ಸೀತಾ ಮದುವೆಗೆ ಸಿಹಿ ಒಪ್ಪಿಗೆ ಕೊಟ್ಟ ವಿಚಾರವನ್ನೂ ಕೂಡ ಮಾತನಾಡುತ್ತಾರೆ. ಇದನ್ನೆಲ್ಲಾ ಕೇಳಿದ ಭಾರ್ಗವಿ ಸ್ನೇಹಿತರು ವ್ಯಂಗ್ಯವಾಗಿ ಮಾತನಾಡುತ್ತಾರೆ. ದೇಸಾಯಿ ಕುಟುಂಬದ ಮೊಮ್ಮಗ ಪ್ರೀತಿಸಿ ಮದುವೆಯಾಗುತ್ತಿದ್ದು, ಹುಡುಗಿ ಜೊತೆಗೆ ಅವಳ ಮಗಳನ್ನೂ ಮನೆಗೆ ತುಂಬಿಸಿಕೊಳ್ಳುತ್ತಿದೆ. ದೇಸಾಯಿ ಕುಟುಂಬ ನಿಜಕ್ಕೂ ಗ್ರೇಟ್ ಎಂದು ಮಾತನಾಡುತ್ತಾರೆ. ಭಾರ್ಗವಿ ಸುಮ್ಮನಿರದೇ, ಬೇರೆ ದೊಡ್ಡ ದೊಡ್ಡ ಕುಟುಂಬಗಳ ಮಕ್ಕಳು ಹುಡುಗಿ ಕೈಗೆ ಮಗು ಕೊಟ್ಟು ಮೋಸ ಮಾಡಿದಂತೆ ಅಂತೂ ಅಲ್ಲ. ನಿಜಕ್ಕೂ ನಮ್ಮ ರಾಮ ಗ್ರೇಟ್ ಎಂದು ಹೇಳುತ್ತಾಳೆ.

ಸೀತಾ ಪಾಲಾದ ವಾಣಿ ಸೀರೆ-ಒಡವೆಗಳು
ಇನ್ನು ಸೂರಿ ತಾತ ಭಾರ್ಗವಿಗೆ ಸೀತಾಳಿಗೆ ವಾಣಿ ಆಶಿರ್ವಾದ ಸಿಗಬೇಕು. ಹಾಗಾಗಬೇಕಾದರೆ, ವಾಣಿ ಒಡವೆಗಳನ್ನು ಸೀತಾಳಿಗೆ ಉಡುಗೊರೆಯಾಗಿ ಕೊಡಿ ಎಂದು ಹೇಳುತ್ತಾರೆ. ಸೀತಾ ಒಡವೆಗಳನ್ನು ಸೀತಾಳಿಗೆ ತೋರಿಸಿದಾಗ ಸೀತಾ, ಈ ಡ್ರೆಸ್ ಗೆ ಆ ಒಡವೆಗಳು ಸೂಟ್ ಆಗುವುದಿಲ್ಲ. ಜೊತೆಗ ನನಗೂ ಈ ಬಟ್ಟೆ ಅನ್ ಕಂಫರ್ಟ್ ಅನಿಸುತ್ತಿದೆ. ನಾನು ಸೀರೆ ಉಡಬಹುದಾ ಎಂದು ಸೂರಿಯನ್ನು ಕೇಳುತ್ತಾಳೆ. ಆಗ ಸೂರಿ ವಾಣಿ ಸೀರೆಯನ್ನು ಉಡಲು ಹೇಳುತ್ತಾನೆ. ಸೀತಾ ಸೀರೆಯನ್ನು ಉಟ್ಟುಕೊಂಡು ವಾಣಿ ಅತ್ತೆಯ ಒಡವೆಗಳನ್ನು ಧರಿಸಿಕೊಳ್ಳುತ್ತಾಳೆ. ಇದರಿಂದ ಭಾರ್ಗವಿಗೆ ವಾಣಿ ಕನಸಿನಲ್ಲಿ ಮಾತನಾಡಿದ ಮಾತುಗಳು ನೆನಪಾಗುತ್ತದೆ.
ಸೀತಾಳನ್ನು ವಾಣಿ ಅತ್ತಿಗೆ ಎಂದ ಸತ್ಯ
ಸೀರೆಯಲ್ಲಿ ಸೀತಾ ಎಲ್ಲರ ಮುಂದೆ ಬಂದಾಗ ಸತ್ಯ ವಾಣಿ ಅತ್ತಿಗೆ ಎಂದು ಕರೆಯುತ್ತಾನೆ. ಸೀತಾ ಬಳಿ ಹೋಗಿ ವಾಣಿ ಅತ್ತಿಗೆ ನಾನೇನು ತಪ್ಪು ಮಾಡಿಲ್ಲ. ನನ್ನದೇನೂ ತಪ್ಪಿಲ್ಲ. ನನ್ನನ್ನು ನಂಬಿ ಪ್ಲೀಸ್ ಎಂದು ಕಾಲಿಗೆ ಬೀಳಲು ಯತ್ನಿಸುತ್ತಾನೆ. ಸೀತಾಳಿಗೆ ಗಾಬರಿಯಾಗುತ್ತದೆ. ಇನ್ನು ಸೂರಿ ತಾತ ಅಂತೂ ಸೀತಾಳನ್ನು ನೋಡಿ ನಿಜಕ್ಕೂ ಈ ಸೀರೆಯಲ್ಲಿ ನೀನು ನಮ್ಮ ವಾಣಿಯಂತೆ ಕಾಣುತ್ತಿದ್ದೀಯಾ ಎನ್ನುತ್ತಾರೆ. ಇದೆಲ್ಲವೂ ಭಾರ್ಗವಿಗೆ ಆತಂಕವನ್ನುಂಟು ಮಾಡುತ್ತದೆ.

ಅಮ್ಮನ ಪರ ಮಾತನಾಡಿದ ಸಿಹಿ
ಇನ್ನು ಎಂಗೇಜ್ ಮೆಂಟ್ ಮುಗಿದ ಬಳಿಕ ಮಾತನಾಡುತ್ತಾ ಕುಳಿತಿರುತ್ತಾರೆ. ಈ ಸಂದರ್ಭದಲ್ಲಿ ಭಾರ್ಗವಿ ಸ್ನೇಹಿತರು ಮತ್ತೆ ಸೀತಾ ಬಗ್ಗೆ ಮಾತನಾಡುತ್ತಾರೆ. ದೇಸಾಯಿ ಕುಟುಂಬಕ್ಕೆ ಸೊಸೆಯಾಗಿ ಬರುತ್ತಿದ್ದಾಳೆ. ಈಗಲೂ ಕೂಡ 400ರೂಪಾಯಿಯಲ್ಲಿ ದಿನ ಕಳೆಯುವ ಬಗ್ಗೆ ಮಾತನಾಡುತ್ತಿದ್ದಾರೆ. ದೇಸಾಯಿ ಕುಟುಂಬಕ್ಕೆ ತಕ್ಕ ಹಾಗೆ ಬದಲಾಗದೇ ಹೋದರೆ, ನಿಜವಾಗಲೂ ಸೀತಾ ಒಬ್ಬಳು ಸ್ಟುಪಿಡ್ ಎಂದು ಬೈಯುತ್ತಿರುತ್ತಾರೆ. ಈ ಮಾತನ್ನು ಕೇಳಿದ ಸಿಹಿ ಸೀತಾಳನ್ನು ಅವರ ಮುಂದೆ ಕರೆದುಕೊಂಡು ಹೋಗಿ ಜೋರು ಮಾಡುತ್ತಾಳೆ. ನಮ್ಮಮ್ಮ ಅಲ್ಲ ಸ್ಟುಪಿಡ್, ಬೇರೆಯವರ ಬಗ್ಗೆ ಮಾತನಾಡುವ ನೀವೇ ಸ್ಟುಪಿಡ್ ಎಂದು ಹೇಳುತ್ತಾಳೆ. ನಾಳೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.


Click it and Unblock the Notifications











