Seetharama ; ಸಿಹಿಗಾಗಿ ಆತಂಕಗೊಂಡಿರುವ ಸೀತಾ : ಸೊಸೆಯ ಮೇಲೆ ಭಾರ್ಗವಿಗೆ ಅನುಮಾನ

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಸೀತಾಳಿಗೆ ಸಿಹಿಯದ್ದೇ ಯೋಚನೆಯಾಗಿದೆ. ಹಗಲು ರಾತ್ರಿ, ನಿಂತಲ್ಲಿ ಕುಂತಲ್ಲಿ ಸಿಹಿ ಪೋಷಕರ ಬಗ್ಗೆ ಯೋಚಿಸುತ್ತಿದ್ದಾಳೆ. ಹೀಗಾಗಿ ಸೀತಾಳಿಗೆ ಬೆಳಗಿನ ಜಾವದಲಿ ಕನಸೊಂದು ಬಿದ್ದಿದೆ. ಅದರ ಪ್ರಕಾರ ಡಾ.ಅನಂತಲಕ್ಷ್ಮೀ ಬಂದಿದ್ದು, ಸಿಹಿ ತಂದೆ-ತಾಯಿ ಬಂದರೆ ನಿನ್ನ ಮಗಳನ್ನು ಕೊಡಬೇಡ ಎಂದು ಹೇಳುತ್ತಾಳೆ. ಈ ಕನಸು ಸೀತಾಳನ್ನು ಕಂಗಾಲಾಗುವಂತೆ ಮಾಡಿದೆ. ಅಡುಗೆ ಮನೆಯಲ್ಲೂ ಸೀತಾ ಸಿಹಿ ತಂದೆ-ತಾಯಿ ಬರುತ್ತಾರಾ..? ಬಂದರೆ ಸಿಹಿಯನ್ನು ನಾನು ಅವರಿಗೆ ಕೊಡಬೇಕಾ ಎಂದು ಯೋಚಿಸುತ್ತಿದ್ದಾಳೆ.

ವೈದ್ಯರನ್ನು ಭೇಟಿಯಾಗಲು ಮುಂದಾದ ಸೀತಾ

ಅಲ್ಲದೇ, ಅವಳಿಗೆ ಶ್ಯಾಮ್ ಅವರಿಗೂ ಡಾ.ಅನಂತಲಕ್ಷ್ಮೀ ಅವರೇ ವೈದ್ಯರು ಎಂದರೆ, ಸಿಹಿ ಅವರಿಗೆ ಸೇರಬೇಕಿದ್ದ ಮಗುನಾ ಎಂಬ ಅನುಮಾನ ಬೇರೆ ಶುರುವಾಗಿದೆ. ಈಗ ಏನು ಮಾಡಬೇಕು ಎಂಬುದು ಅರ್ಥವಾಗದೇ ಒದ್ದಾಡುತ್ತಿದ್ದಾಳೆ. ಹಗಲು-ರಾತ್ರಿ ಯೋಚಿಸುವ ಬದಲು ನಾನೀಗ ವೈದ್ಯರನ್ನು ಭೇಟಿಯಾಗಿ ಸತ್ಯ ಏನು ಎಂದು ತಿಳಿದುಕೊಳ್ಳುವುದೇ ಮುಖ್ಯ ಎಂದು ಭಾವಿಸಿದ್ದಾಳೆ. ಇದ್ದಕ್ಕಿದ್ದ ಹಾಗೆಯೇ ಕೆಲಸವಿದೆ ಎಂದು ಹೇಳಿ ಹೊರಟಿದ್ದಾಳೆ. ಭಾರ್ಗವಿ ಬಲವಂತ ಮಾಡಿ ಕೇಳಿದ್ದಕ್ಕೆ ಬ್ಯಾಂಕ್ ಕೆಲಸವಿದೆ ಎಂದು ಸುಳ್ಳು ಹೇಳಿ ಹೋಗಿದ್ದು, ಭಾರ್ಗವಿಗೆ ಸೀತಾ ಮೇಲೆ ಅನುಮಾನ ಮೂಡಿದೆ.

Seetharama Serial 30 September episode written update

ಎಂಜಾಯ್ ಮಾಡುತ್ತಿರುವ ಪ್ರಿಯಾ-ಅಶೋಕ್

ಇತ್ತ ಪ್ರಿಯಾಳಿಗೆ ತನಗೆ ಬ್ರೆಸ್ಟ್ ಕ್ಯಾನ್ಸರ್ ಇದೆ ಎಂಬುದು ಗೊತ್ತಾದ ಮೇಲೂ ಕೂಡ ಖುಷಿಯಾಗಿದ್ದಾಳೆ. ಖಾಯಿಲೆಯನ್ನು ಟ್ರೀಟ್ ಮೆಂಟ್ ತೆಗೆದುಕೊಂಡರೆ ಎಲ್ಲಾ ಸರಿ ಹೋಗುತ್ತೆ ಎಂದು ಕಾನ್ಫಿಡೆನ್ಸ್ ನಲ್ಲಿ ಪ್ರಿಯಾ ಇದ್ದಾಳೆ. ಆದರೆ, ಅಶೋಕ್ ಆತಂಕದಲ್ಲಿದ್ದು, ಪ್ರಿಯಾಳೇ ಭರವಸೆ ತುಂಬುತ್ತಿದ್ದಾಳೆ. ಇನ್ನು ಹೊರಗಡೆ ಟ್ರಿಪ್ ನಲ್ಲಿರುವ ಪ್ರಿಯಾ ಹಾಗೂ ಅಶೋಕ್ ಏಕಾಂತದ ಕ್ಷಣಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಪ್ರವಾಸದಿಂದ ಬಂದ ಕೂಡಲೇ ವೈದ್ಯರನ್ನು ಭೇಟಿಯಾಗಬೇಕು ಎಂದು ತೀರ್ಮಾನಿಸಿದ್ದಾರೆ. ಪ್ರಿಯಾಳ ನಡವಳಿಕೆ ಅಶೋಕ್ ಮನದಲಿ ಹೊಸ ಭರವಸೆಯನ್ನು ಮೂಡಿಸಿದೆ.

ಸೀತಾಳ ಬೆನ್ನು ಬಿದ್ದಿರುವ ಭಾರ್ಗವಿ

ಭಾರ್ಗವಿಗೆ ಸೀತಾಳ ಹಳೆಯ ಕಥೆಯ ಬಗ್ಗೆ ಭಾರೀ ಕುತೂಹಲವಿದೆ. ಸಿಹಿ ತಂದೆ ಯಾರು ಎಂದು ಈಗಾಗಲೇ ಹುಡುಕಿಸುತ್ತಿದ್ದಾಳೆ. ಈಗ ಸೀತಾ ಸುಳ್ಳು ಹೇಳಿ ಮನೆಯಿಂದ ಹೊರಗೆ ಹೋಗಿರುವುದನ್ನು ಸಹಿಸಲಾರದೇ, ಅವಳ ಹಿಂದೆ ತನ್ನ ಕಡೆಯವರನ್ನು ಬಿಟ್ಟಿದ್ದಾಳೆ. ಸೀತಾ ಎಲ್ಲಿಗೆ ಹೋಗುತ್ತಾಳೆ ಎಂಬುದನ್ನು ತಿಳಿದುಕೊಳ್ಳಲು ಮುಂದಾಗಿದ್ದಾಳೆ. ಇದರೊಂದಿಗೆ ಸೂರಿಯನ್ನು ಭೇಟಿ ಮಾಡಿ, ಸೀತಾ ಮನೆಯವರಿಗೆ ಹೇಳದೇ ಕೇಳದೆಯೇ ಹೊರಗೆ ಹೋಗಿದ್ದಾಳೆ. ಅವಳು ಮನೆಗೆ ಬಂದ ಬಳಿಕ ಎಲ್ಲಿಗೆ ಹೋಗಿದ್ದಳು. ಯಾಕೆ ಮನೆಯಲ್ಲಿ ಯಾರಿಗೂ ಏನೂ ಹೇಳಿಲ್ಲ ಎಂದು ಪ್ರಶ್ನಿಸುವಂತೆ ಚಾಡಿ ಹೇಳಿದ್ದಾಳೆ. ಇದನ್ನೆಲ್ಲಾ ಸಿಹಿ ಕೇಳಿಸಿಕೊಂಡಿದ್ದು, ಭಾರ್ಗವಿಯ ಮತ್ತೊಂದು ಮುಖವನ್ನು ಸಿಹಿಯೇ ಎಲ್ಲರಿಗೂ ತೋರಿಸುತ್ತಾಳಾ ಕಾದು ನೋಡಬೇಕಿದೆ.

ಮೇಘಶ್ಯಾಮ್ ಮಾತು ಕೇಳಿ ಶಾಲಿನಿಗೆ ಗಾಬರಿ

ಇನ್ನು ಮೇಘಶ್ಯಾಮ್ ಮತ್ತು ಶಾಲಿನಿ ಇಬ್ಬರೂ ಹೊಸ ಮನೆಗೆ ಹೋಗಿದ್ದು, ಸದ್ಯ ಮನೆಯಲ್ಲಿ ಪಾತ್ರೆ, ಫರ್ನಿಚರ್ ಏನೂ ಇಲ್ಲ. ಎಲ್ಲವನ್ನೂ ಆರ್ಡರ್ ಮಾಡಿದ್ದು, ಇಬ್ಬರೂ ಮನೆಯನ್ನು ಅರೇಂಜ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಶ್ಯಾಮ್ ಡಾ.ಅನಂತಲಕ್ಷ್ಮೀ ಅವರನ್ನು ಭೇಟಿ ಮಾಡಿ ನನ್ನ ಮಗು ಸತ್ತಿದೆ ಎಂದು ಯಾಕೆ ಹೇಳಿದ್ದು ಅಂತ ಪ್ರಶ್ನೆ ಮಾಡುತ್ತೇನೆ ಎಂದಿದ್ದಾನೆ. ಈ ಮಾತು ಶಾಲಿನಿಯಲ್ಲಿ ಗಾಬರಿ ಹುಟ್ಟಿಸಿದೆ. ಶ್ಯಾಮ್ ವೈದ್ಯರನ್ನು ಭೇಟಿ ಮಾಡಿದರೆ, ತಾನು ಸುಳ್ಳು ಹೇಳಿದ್ದು ಎಂಬ ಸತ್ಯ ಗೊತ್ತಾಗುತ್ತೆ. ಹಾಗೇನಾದರೂ ಆದರೆ, ತಮ್ಮಿಬ್ಬರ ಸಂಬಂಧ ಹಾಳಾಗುತ್ತೆ ಎಂಬ ಆತಂಕವಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X