Seetharama ; ಭಾರ್ಗವಿ ಮಾತು ಕೇಳಿದ ಸಿಹಿ : ಮನೆ ಬಿಟ್ಟು ಹೊರಟಿದ್ದೇಲ್ಲಿಗೆ..?

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಸೀತಾ ಮನೆಯಲ್ಲಿ ಎಲ್ಲಾ ಕೆಲಸವನ್ನು ಮಾಡುತ್ತಿದ್ದಾಳೆ. ಅಡುಗೆ ಮಾಡಿ, ಪೂಜೆ ಮಾಡಿ. ಮನೆಯಲ್ಲಿ ಎಲ್ಲರಿಗೂ ಹೊತ್ತೊತ್ತಿಗೆ ಏನೇನು ಬೇಕೋ ಎಲ್ಲವನ್ನೂ ಸೀತಾಳೇ ತಯಾರಿಸುತ್ತಿದ್ದಾಳೆಇದು ಭಾರ್ಗವಿಗೆ ಸ್ವಲ್ಪವೂ ಇಷ್ಟವಾಗುತ್ತಿಲ್ಲ. ಆದರೆ, ಮನೆಯ ಸೊಸೆಗೆ ಏನೂ ಹೇಳಲಾಗುವುದಿಲ್ಲ ಎಂದು ಬಾಯಿ ಮುಚ್ಚಿಕೊಂಡಿದ್ದಾಳೆ. ಇನ್ನು ಸೀತಾರುಚಿ ರುಚಿಯಾಗಿ ಅಡುಗೆ ಮಾಡುತ್ತಿರುವುದು ಸಾಧನಾಳಿಗೂ ಇಷ್ಟವಿಲ್ಲಸಿಹಿ ಬರುವ ಮುನ್ನ ಅವಳಿಗೆಂದು ಸೀತಾ ಚಪಾತಿ ರೋಲ್ ಮಾಡಿದ್ದಾಳೆ. ಅನಿಕೇತನ್ ಗೂ ಮಾಡಿಟ್ಟಿದ್ದು, ಅದನ್ನು ಅನಿಕೇತನ್ ತಿನ್ನುವುದಿಲ್ಲ ಎಂದು ಭಾರ್ಗವಿ ನೇರವಾಗಿ ಹೇಳಿದ್ದಾಳೆ.

ಈಗ ಕಂಪನಿಯ ಬೋರ್ಡ್ ಮೆಂಬರ್ ಸೀತಾ

ಸೀತಾ ಸೂರಿ ತಾತನ ಒಪ್ಪಿಗೆ ಪಡೆದು ರಾಮ್ ಜೊತೆಗೆ ಆಫೀಸಿಗೆ ಹೋಗಿದ್ದಾಳೆ. ಆಫೀಸಿಗೆ ಹೋದ ಸೀತಾಳಿಗೆ ರಾಮ್ ದೊಡ್ಡ ಸರ್ಪ್ರೈಸ್ ನೀಡಿದ್ದಾನೆ, ಇಷ್ಟು ದಿನ ಅಕೌಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಸೀತಾ ಇನ್ಮುಂದೆ ಕಂಪನಿಯ ಬೋರ್ಡ್ ಮೆಂಬರ್ ಆಗಿದ್ದಾಳೆ. ಈ ವಿಚಾರವನ್ನು ಕೇಳಿದ ಪ್ರಿಯಾಳಿಗೆ ಫುಲ್ ಖುಷಿಯಾಗಿದೆ. ಸೀತಾ ಇದೆಲ್ಲಾ ತನಗೆ ಬೇಕಾಗಿರಲಿಲ್ಲ ಎಂದಿದ್ದು, ರಾಮ್ ಸೀತಾಳಿಗೆ ನೀನು ನನ್ನ ಹೆಂಡತಿ. ನಿನಗೆ ಅರ್ಹತೆ ಇರುವುದರಿಂದಲೇ ಈ ಸ್ಥಾನವನ್ನು ಕೊಟ್ಟಿರುವುದು ಎಂದು ಹೇಳಿದ್ದಾನೆ.

seetharama-serial-31-july-episode-written-update

ಈಗ ಕಂಪನಿಯ ಬೋರ್ಡ್ ಮೆಂಬರ್ ಸೀತಾ

ಸೀತಾ ಸೂರಿ ತಾತನ ಒಪ್ಪಿಗೆ ಪಡೆದು ರಾಮ್ ಜೊತೆಗೆ ಆಫೀಸಿಗೆ ಹೋಗಿದ್ದಾಳೆ. ಆಫೀಸಿಗೆ ಹೋದ ಸೀತಾಳಿಗೆ ರಾಮ್ ದೊಡ್ಡ ಸರ್ಪ್ರೈಸ್ ನೀಡಿದ್ದಾನೆ, ಇಷ್ಟು ದಿನ ಅಕೌಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಸೀತಾ ಇನ್ಮುಂದೆ ಕಂಪನಿಯ ಬೋರ್ಡ್ ಮೆಂಬರ್ ಆಗಿದ್ದಾಳೆ. ಈ ವಿಚಾರವನ್ನು ಕೇಳಿದ ಪ್ರಿಯಾಳಿಗೆ ಫುಲ್ ಖುಷಿಯಾಗಿದೆ. ಸೀತಾ ಇದೆಲ್ಲಾ ತನಗೆ ಬೇಕಾಗಿರಲಿಲ್ಲ ಎಂದಿದ್ದು, ರಾಮ್ ಸೀತಾಳಿಗೆ ನೀನು ನನ್ನ ಹೆಂಡತಿ. ನಿನಗೆ ಅರ್ಹತೆ ಇರುವುದರಿಂದಲೇ ಈ ಸ್ಥಾನವನ್ನು ಕೊಟ್ಟಿರುವುದು ಎಂದು ಹೇಳಿದ್ದಾನೆ.

ಮನೆಯನ್ನು ಮಾರಿ ಬಿಡುತ್ತಾಳಾ ಸೀತಾ

ಸುಲೋಚನಾ ಹೇಗಾದರೂ ಮಾಡಿ ಸೀತಾ ಹೆಸರಿನಲ್ಲಿರುವ ಮನೆಯನ್ನು ತನ್ನ ಪಾಲಾಗಿಸಿಕೊಳ್ಳಬೇಕು ಎಂದು ಸಾಕಷ್ಟು ಪ್ರಯತ್ನಗಳನ್ನು ಪಡುತ್ತಲೇ ಇದ್ದಾಳೆ. ಆದರೆ, ಎಲ್ಲಾ ಅವಳ ಪ್ರಯತ್ನಗಳು ವ್ಯರ್ಥವಾಗುತ್ತಿದೆ. ಈಗ ಸುದೇಶ್ ಹೊಸ ಐಡಿಯಾವನ್ನು ನೀಡಿದ್ದು, ಅದರಂತೆ ಮನೆಯ ಫೋಟೋ ತೆಗೆದುಕೊಂಡಿರುವ ಸುಲೋಚನಾ ಮನೆ ಮಾರಲು ಪ್ಲಾನ್ ಮಾಡಿದ್ದಾಳೆ. ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿ ಮಾರಾಟ ಮಾಡಿದರೆ, ಕಡಿಮೆ ಎಂದರೂ 50-60ಲಕ್ಷ ರೂಪಾಯಿ ಹಣ ಸಿಗುತ್ತದೆ ಎಂದು ಯೋಚಿಸಿದ್ದಾಳೆ. ಆದರೆ ಇದಕ್ಕೆಲ್ಲಾ ಸೀತಾ ಆಗಲೀ ಅಥವಾ ರಾಮ್ ಆಗಲೀ ಅವಕಾಶ ಮಾಡಿಕೊಡುತ್ತಾನಾ ಎಂಬುದೇ ಅನುಮಾನವಾಗಿದೆ.

seetharama-serial-31-july-episode-written-update


ಬೋರ್ಡಿಂಗ್ ಸ್ಕೂಲ್ ಗೆ ಕಳಿಸುತ್ತಾಳಾ ಭಾರ್ಗವಿ

ಸಿಹಿ ಅಪ್ಪ-ಅಮ್ಮನನ್ನು ಹನಿಮೂನ್ ಗೆ ಕಳಿಸಬೇಕು ಎಂದುಕೊಂಡಿದ್ದು, ಸೀತಾ ಬಳಿ ನೀವಿಬ್ಬರು ಹನಿಮೂನ್ ಗೆ ಹೋಗಿ ಬನ್ನಿ ಎನ್ನುತ್ತಾಳೆ. ಸಿಹಿ ಬಾಯಲ್ಲಿ ಈ ಮಾತನ್ನು ಕೇಳಿದ ಸೀತಯಾ ಬೈಯುತ್ತಾಳೆ. ನಿನ್ನನ್ನು ಬಿಟ್ಟು ನಾವು ಎಲ್ಲೂ ಹೋಗುವುದಿಲ್ಲ ಎಂದಿದ್ದಾಳೆ. ಇದೇ ಸಮಯದಲ್ಲಿ ಬಾರ್ಗವಿ ಸಿಹಿ ಬಳಿ ಮಾತನಾಡಿದ್ದಾಳೆ. ಮದುವೆ ಮಾಡಿದ ಮೇಲೆ ಅವರಿಬ್ಬರನ್ನು ಖುಷಿಯಾಗಿಡಲು ನೀನೇ ಅಡ್ಡಲಾಗಿದ್ದೀಯಾ. ನೀನೂ ಬೋರ್ಡಿಂಗ್ ಸ್ಕೂಲ್ ಗೆ ಹೋದರೆ ಅವರಿಬ್ಬರೂ ಚೆನ್ನಾಗಿರುತ್ತಾರೆ ಎಂದು ಹೇಳಿಕೊಡುತ್ತಾಳೆ. ಬೋರ್ಡಿಂಗ್ ಸ್ಕೂಲ್ ಬಗ್ಗೆ ಗೊತ್ತಿಲ್ಲದ ಸಿಹಿ ಅದು ಹೇಗಿರುತ್ತೆ ಎಂದೆಲ್ಲಾ ಭಾರ್ಗವಿ ಬಳಿ ಕೇಳಿ ತಿಳಿದುಕೊಂಡಿದ್ದಾಳೆ.


ಅಪ್ಪ-ಅಮ್ಮನಿಗಾಗಿ ಮನೆ ಬಿಟ್ಟ ಸಿಹಿ

ಅಪ್ಪ-ಅಮ್ಮನ ಬಗ್ಗೆ ಯೋಚಿಸುತ್ತಿರುವ ಸಿಹಿ ಶಾಲೆಯಲ್ಲಿ ಓದಲು ಗಮನವೇ ಕೊಡುತ್ತಿಲ್ಲ. ಕೊಟ್ಟ ಹೋಮ್ ವರ್ಕ್ ಅನ್ನು ಕೂಡ ಮಾಡಿಕೊಂಡು ಬಂದಿಲ್ಲ. ಸ್ನೇಹಿತನ ಬಳಿ ಬೋರ್ಡಿಂಗ್ ಸ್ಕೂಲ್ ಮತ್ತು ಅಪ್ಪ-ಅಮ್ಮನ ಬಗ್ಗೆ ವಿಚಾರಿಸಿದ್ದಾಳೆ. ತಾನು ಈ ಮನೆಯಲ್ಲಿ ಇದ್ದರೆ ಆಗುವುದಿಲ್ಲ ಎಂದು ಭಾವಿಸಿ ಮನೆ ಬಿಡಲು ಪ್ಲಾನ್ ಮಾಡಿದ್ದಾಳೆ. ಅಪ್ಪ-ಅಮ್ಮ ಬಂದು ಸಿಹಿಯನ್ನು ಪಿಕ್ ಮಾಡುವ ಮುನ್ನವೇ ಓಡಿ ಹೋಗಬೇಕು ಎಂದು ಸ್ಕೂಲ್ ನಿಂದ ಸಿಹಿ ಹೊರಟಿದ್ದಾಳೆ. ಇತ್ತ ಸೀತಾ ಮತ್ತು ರಾಮ್ ಸಿಹಿಗಾಗಿ ಹುಡುಕಾಡುತ್ತಿದ್ದಾರೆ. ಆದರೆ, ಸಿಹಿ ಮೂರ್ತಿ ತಾತನ ಕೈಗೆ ಸಿಕ್ಕಿ ಬಿದ್ದಿದ್ದು ವಠಾರ ದ ಕಡೆಗೆ ಹೊರಟಿದ್ದಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X