Seetha Rama ; ಸತ್ಯನ ಮಾತುಗಳು ತಂದ ಅನುಮಾನ, ಪೆಟ್ಟಿಗೆಯಲ್ಲಿ ಅಡಗಿದೆಯಾ ರಹಸ್ಯ..?
ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಮತ್ತು ಸುಬ್ಬಿ ಕೊಂಚ ಸೈಲೆಂಟ್ ಆಗಿದ್ದಾರೆ. ವಿಶ್ವಜಿತ್ ಸೊಂಟಕ್ಕೆ ಸುಬ್ಬಿ ಏಟು ಮಾಡಿದ್ದು, ಸಿಹಿ ಮನೆಯಲ್ಲಿ ಯಾವುದೋ ಶಕ್ತಿ ಇದೆ ಎಂಬ ಹಾಗೆ ಬಿಂಬಿಸಿದ್ದಾಳೆ. ಸದ್ಯ ಇಬ್ಬರೂ ತಮ್ಮ ಪಾಡಿಗೆ ತಾವಿದ್ದು, ಸೀತಾ ಯುಗಾದಿ ಹಬ್ಬಕ್ಕಾಗಿ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಾಳೆ. ಸೀತಾಳಿಗೆ ರಾಮ್, ಅಶೋಕ್ ಮತ್ತು ಪ್ರಿಯಾ ಕೂಡ ಸಹಾಯ ಮಾಡಿದ್ದಾರೆ. ಸೈಕಲ್ ಗ್ಯಾಪ್ ನಲ್ಲಿ ರಾಮ್ ಸೀತಾ ಜೊತೆಗೆ ರೊಮ್ಯಾನ್ಸ್ ಮಾಡಿದ್ದು, ಇಬ್ಬರನ್ನು ಕಂಡ ಅಶೋಕ್, ಪ್ರಿಯಾ ಮತ್ತು ಸೂರಿ ತಾತ ಖುಷಿ ಪಟ್ಟಿದ್ದಾರೆ.
ಸತ್ಯನ ಮಾತುಗಳು ರಾಮ್ ಗೆ ಅರ್ಥವಾಗುತ್ತಾ..?
ಇನ್ನು ಮನೆಗೆ ಸತ್ಯಜಿತ್ ಆಗಮಿಸಿದ್ದಾನೆ. ಬಹಳ ದಿನಗಳ ಬಳಿಕ ಸತ್ಯಜಿತ್ ಮನೆಗೆ ಬಂದಿದ್ದು, ಬಂದವನೇ ಕುಡಿಯುತ್ತಾ ಕುಳಿತಿದ್ದಾನೆ. ಇದನ್ನು ಕಂಡ ಸಾಧನಾಳಿಗೆ ಬಹಳ ಬೇಸರವಾಗಿದೆ. ಯಾವಾಗಲೂ ಏನೋ ನೋವು ಅಂತ ಹೀಗೆ ಕುಡಿಯುತ್ತಾ ಕುಳಿತರೆ ಹೇಗೆ ಎಂದು ಪ್ರಶ್ನಿಸಿದ್ದಾಳೆ. ಆದರೆ, ಸತ್ಯ ಮತ್ತೆ ಹಳೆಯ ಮಾತುಗಳನ್ನೇ ಆಡಿದ್ದು, ಸಾಧನಾ ಬೇಸರದಿಂದ ಹೊರಟು ಹೋಗಿದ್ದಾಳೆ. ಸಾಧನಾಳ ಮೊಗವನ್ನು ಕಂಡು ಮನೆಯವರು ಪ್ರಶ್ನಿಸಿದಾಗ ಸಾಧನಾ ನಡೆದ ಘಟನೆಯನ್ನು ಹೇಳಿದ್ದಾಳೆ. ಆಗ ರಾಮ್ ನಾನು ಚಿಕ್ಕಪ್ಪನ ಬಳಿ ಮಾತನಾಡುತ್ತೇನೆ ಎಂದು ಹೋಗಿದ್ದಾನೆ. ಸತ್ಯಜಿತ್ ಆಗ ಈ ಮನೆಯಲಿ 25 ವರ್ಷಗಳಿಂದ ಕಹಿ ಸತ್ಯವೊಂದು ಹುದುಗಿ ಹೋಗಿದೆ ಎಂದು ಹೇಳುತ್ತಾನೆ.

ಭಾರ್ಗವಿಗೆ ಆತಂಕ ಹುಟ್ಟಿಸಿದ ಸತ್ಯನ ನಡವಳಿಕೆ
ಭಾರ್ಗವಿ ಅಸೇ ಸಮಯಕ್ಕೆ ಆಗಮಿಸಿದ್ದು, ಸತ್ಯಜಿತ್ ನ ಮಾತುಗಳನ್ನು ಅವಾಯ್ಡ್ ಮಾಡಲು ಯತ್ನಿಸಿದ್ದಾಳೆ. ಆದರೆ, ಸತ್ಯ ಬಾಯಿ ಮುಚ್ಚದೇ, ಕೆಲವರ ದುಷ್ಟ ಆಲೋಚನೆ ಸಿಕ್ಕಿ ನಾನು ಇವತ್ತು ಹೀಗೆ ಆಗಿದ್ದೇನೆ. ಎಲ್ಲಾ ಗೊತ್ತಿದ್ದರೂ ನಾನು ಏನೂ ಹೇಳಲು ಆಗುತ್ತಿಲ್ಲ. ಸತ್ಯವನ್ನು ಬಚ್ಚಿಟ್ಟುಕೊಂಡು ಆ ನೋವನ್ನು ಮರೆಯಲು ಹೀಗೆ ನಿತ್ಯ ಕುಡಿಯುತ್ತಿದ್ದೇನೆ. ಈ ಮನೆಯಲ್ಲಿ ಕೆಲವರು ತಮ್ಮ ಸ್ವಾರ್ಥಕ್ಕೆ ಜೀವಗಳನ್ನೇ ನುಂಗಿದ್ದಾರೆ ಎಂದೆಲ್ಲಾ ಮಾತನಾಡುತ್ತಾನೆ. ಈ ಮಾತುಗಳನ್ನು ಕೇಳುತ್ತಾ ಭಾರ್ಗವಿ ಮೊಗದಲ್ಲಿ ಭಯ ಕಾಡಲು ಶುರುವಾಗುತ್ತದೆ. ಇನ್ನು ರಾಮ್ ಭಾರ್ಗವಿ ಮತ್ತು ಸತ್ಯನ ಮಾತುಗಳನ್ನು ಗಮನಿಸಿದ್ದು, ಈಗ ರಾಮ್ ಗೆ ಅನುಮಾನ ಶುರುವಾಗುತ್ತದೋ ಎಂಬುದೇ ಕುತೂಹಲಕಾರಿಯಾಗಿದೆ.
ವಾಣಿಯ ಪೆಟ್ಟಿಗೆ ನೋಡಲು ಮುಂದಾದ ಸೀತಾ
ಇತ್ತ ಸೀತಾ ಗೋಡೌನ್ ನನ್ನು ಕೂಡ ಕ್ಲೀನ್ ಮಾಡಿದ್ದು, ಅಲ್ಲಿ ಹಳೆಯ ಕಾಲದ ಪೆಟ್ಟಿಗೆಯನ್ನು ನೋಡಿದ್ದಾಳೆ. ಆಂಟಿಕ್ ಪೀಸ್ ನಂತ ಕಂಡ ಪೆಟ್ಟಿಗೆಯನ್ನು ತೆರೆಯಲು ಸೀತಾ ಮುಂದಾಗಿದ್ದಾಳೆ. ಅದು ವಾಣಿಯ ಪೆಟ್ಟಿಗೆ ತೆಗೆಯಬೇಡ ಎಂದು ಸಾಧನಾ ಹೇಳಿದ್ದಾಳೆ. ಆದರೂ ಕೂಡ ಕುತೂಹಲದಿಂದ ಪೆಟ್ಟಿಗೆಯನ್ನು ನೋಡಲು ಮುಂದಾಗಿದ್ದಾಳೆ. ಅದರಲ್ಲಿ ವಾಣಿ ತನ್ನ ಬದುಕಿನ ಬಗ್ಗೆ ಹಲವು ವಿಚಾರಗಳನ್ನು ಇಟ್ಟಿದ್ದು, ಇದನ್ನು ನೋಡುವುದರಿಂದ ಭಾರ್ಗವಿಗೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.
ಪೆಟ್ಟಿಗೆಯಲ್ಲಿ ಅಡಗಿದೆಯಾ ಭಾರ್ಗವಿಯ ಭವಿಷ್ಯ..?
ಭಾರ್ಗವಿಯ ಗುಣಗಳ ಬಗ್ಗೆ ಮೊದಲಿನಿಂದಲೂ ತಿಳಿದಿದ್ದ ವಾಣಿ, ಮೊದಲೇ ತನ್ನ ಆಸ್ತಿಯ ವಿಲ್ ಅನ್ನು ಬಹಳ ಎಚ್ಚರಿಕೆಯಿಂದ ಬರೆದಿದ್ದಳು. ಅಲ್ಲದೇ, ಭಾರ್ಗವಿಗೆ ಬಿಡಿಗಾಸೂ ಕೂಡ ಸಿಗದಂತೆ ಎಚ್ಚರ ವಹಿಸಿದ್ದಳು. ವಿಲ್ ನಲ್ಲಿ ರಾಮ್ ಗೆ ತನ್ನ ಆಸ್ತಿಯನ್ನು ಯಾರಿಗೂ ವರ್ಗಾಯಿಸಲು ಸಾಧ್ಯವಿಲ್ಲ. ಅದು ವಾಣಿ ಬೇಕಂತಲೇ ಮಾಡಿಸಿದ್ದು, ಈ ಬಗ್ಗೆ ಈ ಹಿಂದೆಯೇ ಸೀತಾಳಿಗೆ ಅನುಮಾನವಿತ್ತು. ಈಗ ಪೆಟ್ಟಿಗೆ ತೆಗೆದರೆ ಆ ಪ್ರಶ್ನೆಗೆ ಉತ್ತರ ಸಿಗುವುದಲ್ಲದೇ, ಭಾರ್ಗವಿಯ ಭವಿಷ್ಯವೂ ನಿರ್ಧಾರವಾಗುವುದು ಪಕ್ಕಾ ಆಗಿದೆ.


Click it and Unblock the Notifications











