ಸದ್ದಿಲ್ಲದೇ ಮದುವೆ ಆದ್ರಾ ಕಿರುತೆರೆ ನಟಿ ವೈಷ್ಣವಿ ಗೌಡ? ಅಭಿಮಾನಿಗಳಿಂದ ಶುಭಾಶಯ

ಕನ್ನಡ ಕಿರುತೆರೆ ನಟಿ ವೈಷ್ಣವಿ ಗೌಡ ಇತ್ತೀಚೆಗೆ ಬಹಳ ಸುದ್ದಿಯಲ್ಲಿದ್ದಾರೆ. 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಟಿಸಿ ಗೆದ್ದಿದ್ದ ಚೆಲುವೆ ಈಗ 'ಸೀತಾರಾಮ' ಧಾರಾವಾಹಿ ಮೂಲಕ ವೀಕ್ಷಕರಿಗೆ ಹತ್ತಿರವಾಗಿದ್ದಾರೆ. ಸದ್ದಿಲ್ಲದೇ ಆಕೆಯ ಮದುವೆ ಆಗಿಬಿಡ್ತಾ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವೈಷ್ಣವಿ ಗೌಡ ಸಖತ್ ಆಕ್ಟೀವ್ ಆಗಿದ್ದಾರೆ. ಆಗಾಗ್ಗೆ ಫೋಟೊ, ವೀಡಿಯೋ ಶೇರ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಜಂಗ್ಲಿ ರಮ್ಮಿ ಜಾಹೀರಾತು ಪೋಸ್ಟ್ ಮಾಡಿ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದರು. ರಮ್ಮಿ ಗೇಮ್ ಜೂಜಿಗೆ ಜನರನ್ನು ಪ್ರೇರೇಪಿಸುತ್ತಿದ್ದಾರೆ ಎಂದು ಕೆಲವರು ಆರೋಪಿಸಿದ್ದರು. ಸುಖಾಸುಮ್ಮನೆ ಟ್ರೋಲ್ ಮಾಡುತ್ತಾರೆ ಎಂದು ಯಾರು ಕಾಮೆಂಟ್ ಹಾಕದಂತೆ ಮಾಡಿದ್ದರು.

Seetharama serial actress Vaishnavi Gowda wears mangalsutra leaves fans guessing

ಇತ್ತೀಚೆಗೆ ವೈಷ್ಣವಿ ಗೌಡ ಕುಂಭಮೇಳದಲ್ಲಿ ಭಾಗಿ ಆಗಿದ್ದಾರೆ. ಪ್ರಯಾಗ್‌ರಾಜ್‌ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಭಗವಂತನ ಕೃಪೆಗೆ ಪಾತ್ರರಾಗಿದ್ದಾರೆ. ಬಹಳ ತಡವಾಗಿ ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಸಹ ಅಲ್ಲಿಯೇ ಆಚರಿಸಿಕೊಂಡಿರುವುದಾಗಿ ವೈಷ್ಣವಿ ಪೋಸ್ಟ್ ಮಾಡಿ ತಿಳಿಸಿದ್ದಾರೆ.

ಸೀರೆಯುಟ್ಟು ವೈಷ್ಣವಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ಈ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. ಆದರೆ ಒಂದು ಫೋಟೊದಲ್ಲಿ ಆಕೆಯ ಕೊರಳಿನಲ್ಲಿರುವ ಮಾಂಗಲ್ಯ ಸರ ಕಾಣಿಸುತ್ತಿದೆ. ಇದನ್ನು ನೋಡಿ ಯಾವಾಗ ಮದುವೆ ಆಯಿತು? ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳು ಮದುವೆ ಶುಭಾಶಯ ಕೂಡ ತಿಳಿಸುತ್ತಿದ್ದಾರೆ.

ಕುಂಭಮೇಳದಲ್ಲಿ 'ಸೀತಾರಾಮ' ಧಾರಾವಾಹಿ ಚಿತ್ರೀಕರಣ ಸಹ ಮಾಡಲಾಗುತ್ತಿದೆ. ಧಾರಾವಾಹಿಯಲ್ಲಿ ವೈಷ್ಣವಿ ಮದುವೆಯಾದ ಗೃಹಿಣಿ ಸೀತಾ ಆಗಿ ನಟಿಸುತ್ತಿದ್ದಾರೆ. ಹಾಗಾಗಿ ಅವರ ಕೊರಳಿನಲ್ಲಿ ಮಾಂಗಲ್ಯ ಸರ ಇದೆ ಎಂದು ಕಾಮೆಂಟ್ ಬಾಕ್ಸ್‌ನಲ್ಲೇ ಕೆಲವರು ಸ್ಪಷ್ಟನೆ ಕೊಡುತ್ತಿದ್ದಾರೆ. ಆದರೆ ಬಹುತೇಕರು ವೈಷ್ಣವಿಗೆ ನಿಜಕ್ಕೂ ಮದುವೆ ಆಗಿಬಿಡ್ತಾ? ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಲಕ್ಷಣವಾಗಿ ಸೀರೆ ಉಟ್ಟುಕೊಂಡು ಹೋಗಿರುವುದು ನೀವೊಬ್ಬರೆ ಅನ್ನಿಸುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ವೈಷ್ಣವಿ ಗೌಡ ಪೋಸ್ಟ್‌ಗೆ ಲಕ್ಷಕ್ಕೂ ಅಧಿಕ ಲೈಕ್ಸ್ ಹಾಗೂ ನೂರಾರು ಕಾಮೆಂಟ್ಸ್ ಸಿಕ್ಕಿದೆ.

ಫೆಬ್ರವರಿ 20ರಂದು ವೈಷ್ಣವಿ ತಮ್ಮ 33ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. "ಕುಂಭಮೇಳದಲ್ಲಿ ಭಾಗಿ ಆಗಿದ್ದೇನೆ. ಇಲ್ಲೇ ನನ್ನ ಹುಟ್ಟುಹಬ್ಬ ಆಚರಿಸಿಕೊಂಡಿದ್ದಕ್ಕೆ ಕೃತಜ್ಞಳಾಗಿದ್ದೇನೆ. ನಿಮ್ಮೆಲ್ಲರ ಶುಭಾಶಯಕ್ಕೆ ಧನ್ಯವಾದ. ನಿಮ್ಮ ಶುಭ ಹಾರೈಕೆ ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿಸಿತು" ಎಂದು ವೈಷ್ಣವಿ ಬರೆದುಕೊಂಡಿದ್ದಾರೆ.

ಕನ್ನಡ ಕಿರುತೆರೆ ನಟಿಯರಲ್ಲಿ ಕೆಲವರು ಕುಂಭಮೇಳದಲ್ಲಿ ಭಾಗಿ ಆಗಿದ್ದಾರೆ. ಇತ್ತೀಚೆಗೆ ನಟಿ, ನಿರೂಪಕಿ ಕಾವ್ಯಾ ಶಾಸ್ತ್ರಿ ಕೂಡ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ವಿಚಾರವನ್ನು ಹಂಚಿಕೊಂಡಿದ್ದರು. ನಿರ್ದೇಶಕ ರಾಜ್‌. ಬಿ ಶೆಟ್ಟಿ ಹಾಗೂ ಸ್ನೇಹಿತರ ಜೊತೆ ನಿರೂಪಕಿ ಅನುಶ್ರೀ ಕೂಡ ಕುಂಭಮೇಳಕ್ಕೆ ಹೋಗಿದ್ದರು. ನಿರ್ದೇಶಕ ಆರ್‌. ಚಂದ್ರು, ಪವನ್ ಒಡೆಯರ್, ಬಿಗ್‌ಬಾಸ್ ಖ್ಯಾತಿಯ ಅನುಷಾ ರೈ, ನಟ ಲವ್ಲಿ ಸ್ಟಾರ್ ಪ್ರೇಮ್, ನಟಿ ಪವಿತ್ರಾ ಗೌಡ, ಕೆಜಿಎಫ್ ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಸೇರಿದಂತೆ ಕನ್ನಡದ ಹಲವು ತಾರೆಯರು ಕುಂಭಮೇಳಕ್ಕೆ ಹೋಗಿ ಬಂದಿದ್ದಾರೆ.

More from Filmibeat

English summary
Kannada Tv Actress Vaishnavi Gowda Wore A Mangalsutra For SeethaRaama Serial
Read more about: filmibeat original serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X