Seetharama:ಸೀತಾರಾಮನನ್ನು ದೂರಮಾಡಲು ಚಾಂದಿನಿ ಕುತಂತ್ರ; ಪ್ಲ್ಯಾನ್ ಪ್ಲಾಪ್ ಆಗಬಹುದೇ?

By ಪೂರ್ವ

ಚಾಂದಿನಿಗೆ ರಾಮ ಅಂದರೆ ಬಹಳ ಪ್ರೀತಿ ಮಾಡುವ ಹಾಗೆ ನಾಟಕ ಮಾಡುತ್ತಿರುತ್ತಾಳೆ. ಆಕೆ ಮೊದಲು ರಾಮನನ್ನು ಬಹಳ ಪ್ರೀತಿಸುವ ಹಾಗೆ ನಟನೆ ಮಾಡಿ ಆತನನ್ನು ನಡು ನೀರಿನಲ್ಲಿ ಕೈ ಬಿಟ್ಟು ಬಂದಿದ್ದಳು. ಆಕೆಗೆ ರಾಮನಿಗಿಂತ ಆತನ ಆಸ್ತಿಯ ಮೇಲೆ ಕಣ್ಣು. ಆಸ್ತಿ ಸಿಗಬೇಕು ಎಂದಾದರೆ, ಅದನ್ನು ಹೇಗಾದರೂ ಪಡೆದುಕೊಳ್ಳಲು ಚಾಂದಿನಿ ರೆಡಿ ಇರುತ್ತಾಳೆ.

ಇತ್ತ ಅಶೋಕನ ಮದುವೆ ಬಹಳ ಅದ್ದೂರಿಯಾಗಿ ನಡೆಯುತ್ತಿದೆ. ಹಾಗೆಯೇ ಸೀತಾ ರಾಮರ ಪ್ರೀತಿ ಕೂಡ ಬಹಳ ಹತ್ತಿರ ಆಗುತ್ತಿದೆ. ದೇವರು ಬೆಸೆದ ಬಂದ ಎಂದರೆ ತಪ್ಪಾಗದು. ಸದ್ಯ ಸೀತಾಗೆ ರಾಮ ಅಂದರೆ ಪಂಚ ಪ್ರಾಣ. ಆತ ತನ್ನ ಜೊತೆ ಇದ್ದರೆ ಏನು ಬೇಕಾದರೂ ಸಾಧಿಸುತ್ತೇವೆ ಎನ್ನುವ ಧೈರ್ಯ ಆಕೆಗೆ.

Seetharama serial April 12th episode update

ಸಿಹಿ ಕೂಡ ಸೀತಾ ರಾಮ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾಳೆ. ನೀವಿಬ್ಬರೂ ಒಟ್ಟಿಗೆ ಇದ್ದರೆ ಖುಷಿ ಅಂತಾದರೆ ನಾನು ಅದಕ್ಕೆ ಯಾವತ್ತೂ ಅಡ್ಡಿ ಮಾಡುವುದಿಲ್ಲ ಎಂದು ಹೇಳುತ್ತಾಳೆ. ಈ ವಿಚಾರ ತಿಳಿದ ರಾಮನಿಗೆ ಬಹಳ ಖುಷಿ ಆಗುತ್ತದೆ. ರಾಮನ ತಾತನಿಗೆ ರಾಮನಿಗೆ ಒಳ್ಳೆಯ ಹುಡುಗಿಯನ್ನು ನೋಡಬೇಕು ಆತ ಜೀವನದಲ್ಲಿ ಚೆನ್ನಾಗಿ ಇರಬೇಕು . ಇದಕ್ಕೆ ನಾನು ಏನಾದರು ಮಾಡಲೇ ಬೇಕು ಎಂದು ಆಲೋಚನೆ ಮಾಡುತ್ತಿರುತ್ತಾರೆ. ಆ ವೇಳೆ ರಾಮನ ಚಿಕಪ್ಪ ಅವರ ತಂದೆಯ ಬಳಿ ಬಂದು ಮಾತನಾಡುತ್ತಾರೆ.

"ಅಪ್ಪ, ರಾಮ ಯಾರನ್ನು ಇಷ್ಟ ಪಡುತ್ತಾನೆ ಅವರ ಜೊತೆಯೇ ಮದುವೆ ಮಾಡಿ. ದಯವಿಟ್ಟು ಅವನಿಗೆ ಬೇರೆ ಮದುವೆ ಮಾಡಲು ಹೋಗಬೇಡಿ. ನಿಮಗೆ ಕೈ ಮುಗಿದು ಬೇಡುತ್ತೇನೆ" ಎಂದು ಹೇಳಿದಾಗ ರಾಮನ ತಾತ ಕೂಡ ಸುಮ್ಮನಾಗುತ್ತಾರೆ. ಇನ್ನೂ ಮನೆಯಲ್ಲಿ ನಡೆದ ಅವಾಂತರವನ್ನು ಕಂಡು ರಾಮನಿಗೆ ಕೊಂಚ ಬೇಸರ ಆಗುತ್ತದೆ. ಭಾರ್ಗವಿ ಹೇಗಾದರೂ ಮಾಡಿ ತನ್ನ ಆಟ ಆಡಬೇಕೆಂದು ಮಸಲತ್ತು ಮಾಡುತ್ತಿರುತ್ತಾಳೆ. ಆಕೆಗೆ ಸೀತಾ ಮನೆಯ ಸೊಸೆಯಾಗಿ ಬರುವುದು ಸ್ವಲ್ಪವೂ ಇಷ್ಟವಿಲ್ಲ. ಆದ ಕಾರಣ ಹೇಗಾದರೂ ಮಾಡಿ ಸೀತಾನನ್ನು ಮನೆಗೆ ಬಾರದೆ ಇರುವ ಹಾಗೆ ಮಾಡಬೇಕು ಎಂದು ಆಲೋಚಿಸುತ್ತಿರುತ್ತಾಳೆ.

Seetharama serial April 12th episode update

ಗೆಳೆಯನ ಮದುವೆಯಲ್ಲಿ ರಾಮ ಬ್ಯುಸಿ

ರಾಮ ಮಾತ್ರ ಅಶೋಕನ ಮದುವೆಯ ದಿನ ಸೀತಾ ಹಿಂದೆ ಮುಂದೆ ಸುಳಿದಾಡುತ್ತ ಇರುತ್ತಾನೆ. ಇತ್ತ ಅಶೋಕನ ಮನೆಯಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದೆ. ಮೆಹೆಂದಿ ಇಡುವ ಶಾಸ್ತ್ರದಲ್ಲಿ ರಾಮ ಮಾತ್ರ ಫುಲ್ ಮಿಂಚಿಂಗ್. ಆತನ ಕೈಯಲ್ಲಿ ಎಸ್ ಎನ್ನುವ ಮದರಂಗಿಯನ್ನು ಹಾಕಿಸಿಕೊಳ್ಳುತ್ತಾನೆ. ಅದನ್ನು ಸೀತಾಗೆ ತೋರಿಸಿ ಖುಷಿ ಪಡುತ್ತಾನೆ. ಆದರೆ, ಇದೀಗ ಚಾಂದಿನಿ ಸೀತಾ ಎಲ್ಲಿಗೆ ಹೋದರೂ ಅಲ್ಲಿಗೆ ಬರುತ್ತಾಳೆ.

ಚಾಂದಿನಿ ಮಾತಿಗೆ ಬಗ್ಗದ ಸೀತಾ

ಸೀತಾಳನ್ನು ಹೇಗಾದರೂ ಮಾಡಿ ದೂರ ಮಾಡಬೇಕೆನ್ನುವುದು ಚಾಂದಿನಿ ಗುರಿ. ಸೀತಾ ಬಳಿ ರಾಮನ ತಾತನಿಗೆ ಆದ ಸ್ಥಿತಿ ಬಗ್ಗೆ ವಿವರಿಸುತ್ತಾರೆ. ರಾಮನಿಗೆ ಎರಡನೇ ಸಂಬಂಧ ಇರುವ ಹುಡುಗಿಯನ್ನು ಹುಡುಕಿದರೂ ಆ ನಿಮಿತ್ತ ಅವರಿಗೆ ಹುಷಾರು ತಪ್ಪಿತು ಎಂದಾಗ, ಸೀತಾಗೆ ತಳಮಳ ಆಗಿಯೇ ಆಗುತ್ತದೆ. ಆದರೆ, ಅದನ್ನು ಯಾರ ಜೊತೆಯೂ ತೋರ್ಪಡಿಸಿಕೊಳ್ಳುವುದಿಲ್ಲ. ಇತ್ತ ರಾಮನಿಗೆ ವಿಚಾರ ತಿಳಿದಿದ್ದರೂ ಆತ ಅಷ್ಟೊಂದು ಮನಸ್ಸಿಗೆ ಹಚ್ಚಿಕೊಂಡಿಲ್ಲ.

More from Filmibeat

English summary
Seetharama serial April 12th episode update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X