Chandana-Deepak: 'ಸೀತಾರಾಮ' ಶಾಲಿನಿ, ಪತಿ 100 ರೂ. ಕೇಳಿದ್ರೆ ಕೊಡಲ್ಲ; ದೀಪಕ್ ಕಷ್ಟ ನೋಡಿ..!

By ಎಸ್ ಸುಮಂತ್

'ಸೀತಾರಾಮ' ಧಾರಾವಾಹಿಯ ಶಾಲಿನಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ತನ್ನ ಸೌಂದರ್ಯದ ಕಡೆಗೆ ಹೆಚ್ಚು ಗಮನ ಕೊಡುವ ಹೆಣ್ಣು. ಅದಕ್ಕಾಗಿ ಸಾಕಷ್ಟು ವರ್ಕೌಟ್ ಕೂಡ ಮಾಡ್ತಾರೆ. ಮಗು ಮಾಡಿಕೊಂಡರೆ ಇನ್ನೆಲ್ಲಿ ಈ ಸೌಂದರ್ಯ ಬಾಡಿ ಹೋಗುತ್ತದೋ ಎಂಬ ಭಯ. ಅದಕ್ಕೆಂದೆ ಬಾಡಿಗೆ ತಾಯಿಯ ಮೊರೆ ಹೋಗಿದ್ದಳು. ಗಂಡನಿಗೆ ಮಗು ಸತ್ತು ಹೋಗಿದೆ ಎಂದು ನಂಬಿಸಿದ್ದಳು. ಈಗ ಶ್ಯಾಮ್ ಆ ಮಗುವಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದು ಧಾರಾವಾಹಿಯ ಪಾತ್ರ.

ಶಾಲಿನಿ ರಿಯಲ್ ಲೈಫ್‌ನಲ್ಲಿ ಸಿಕ್ಕಾಪಟ್ಟೆ ಆಕ್ಟೀವ್. ಅವರ ರಿಯಲ್ ಪತಿ ಕೂಡ ಆಕ್ಟರ್. ಗಂಡ ಹೆಂಡತಿ ಇಬ್ಬರು ಕೂಡ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತಾ ಮನರಂಜನೆ ನೀಡುತ್ತಾ ಇರುತ್ತಾರೆ‌. ಈಗ ತಮ್ಮ ರಿಯಲ್ ಪತಿಗೆ ನೂರು ರೂಪಾಯಿ ಕೇಳಿದ್ರೆ ಕೊಡಲ್ಲ.

Seetharama serial Fame actress Shalini funny reels with her husband

ಮನೆ ಕೆಲಸ ಮಾಡುತ್ತಿದ್ದ ಚಂದನಾ

ಸೀತರಾಮ ಸೀರಿಯಲ್ ಶಾಲಿನಿ.. ರಿಯಲ್ ಲೈಫ್‌ನ ಚಂದನಾ ಸದ್ಯ ಶೂಟಿಂಗ್ ಇಲ್ಲದ ಸಮಯದಲ್ಲಿ ಮನೆ ಕೆಲಸವನ್ನು ಮಾಡಿಕೊಳ್ಳುತ್ತಿದ್ದರು. ಮಾಪ್ ಹಿಡಿದು ನೆಲ ಕ್ಲೀನ್ ಮಾಡುತ್ತಾ ಇದ್ದರು. ಆಗ ಬಂದಂತಂತ ದೀಪಕ್ ಹೆಂಡತಿಯನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ.

ನೂರು ರೂ. ಸಾಲ ಕೇಳಿದ ಪತಿ

'ಚಿನ್ನ ಏನ್ ಮಾಡ್ತಾ ಇದ್ದೀಯಾ..? ನೀನು ಮನೆ ಕೆಲಸ ಎಲ್ಲಾ ಮಾಡೋದಾ. ಬೇಡ ಬೇಡ. ಕೆಲಸದವ್ರಿಗೆ ಹೇಳ್ತೀನಿ. ಈ ರೀತಿ ಬಟ್ಟೆಯನ್ನೆಲ್ಲ ಹಾಕೋದಾ. ನನ್ನ ಪರ್ಸ್ ನಲ್ಲಿ ಕಾರ್ಡ್ ಇದೆ ತಗೊಂಡ್ ಹೋಗಿ ಒಂದಷ್ಟು ಬಟ್ಟೆಗಳನ್ನ ತೆಗೆದುಕೋ' ಎಂದಿದ್ದಾರೆ. ಇದನ್ನು ಕೇಳಿಸಿಕೊಂಡ ಚಂದನಾಗೆ ಫುಲ್ ಖುಷಿಯಾಗಿದೆ. ರಿಯಲ್ ಆಗಿನೇ ಶಾಪಿಂಗ್ ಹೋಗಬಹುದು ಅನ್ನೋ ನಟನೆ ಮಾಡಿದ್ದಾರೆ. ತಕ್ಷಣ ತನ್ನ ರೀತಿ‌ ನೀತಿ ಬದಲಾಯಿಸಿಕೊಂಡ ದೀಪಕ್, ಚಿನ್ನ ನೂರು ರೂಪಾಯಿ ಇದ್ರೆ ಕೊಡ್ತೀಯಾ ಅಂತ ಕೇಳಿದ್ದಾರೆ. ಕೆಂಡದಂತ ಕಣ್ಣು ಬಿಟ್ಟ ಚಂದನಾರನ್ನು ಹೆದರಿಸಲು ಆಗದೆ ದೀಪಕ್ ನಾಪತ್ತೆಯಾಗಿದ್ದಾರೆ.

ಹಿಂದೆಯೇ ವೈರಲ್ ಆಗಿತ್ತು ಈ ರೀಲ್

ಇದು ಗಂಡ ಹೆಂಡತಿ ಸೇರಿಕೊಂಡು ಮಾಡಿದಂತೆ ರೀಲ್ ಆಗಿದೆ. ಈ ಕಾಮಿಡಿ ರೀಲ್ ಈಗಾಗಲೇ ಟ್ರೆಂಡಿಂಗ್ ನಲ್ಲಿದೆ. ಹೀಗಾಗಿ ಟ್ರೆಂಡಿಂಗ್ ಫಾಲೋ ಮಾಡಿರುವ ದಂಪತಿ, ವಿಡಿಯೋ ಮಾಡಿ ನಕ್ಕು ನಲಿದಿದ್ದಾರೆ. ಚಂದನಾ ಸ್ನೇಹಿತರು ಕೂಡ ಈ ರೀಲ್ ಗೆ ಕಮೆಂಟ್ ಹಾಕುತ್ತಿದ್ದಾರೆ. ಇನ್ನು ಈಗಷ್ಟೇ ಹಾಕಿರುವ ಈ ರೀಲ್ ಸಾಕಷ್ಟು ವೀವ್ಸ್ ಪಡೆಯುತ್ತಿದೆ.

ಶಾಲಿನಿ ಪತಿ ಕೂಡ ಆಕ್ಟರ್

ಇನ್ನು ಚಂದನಾ ಹಾಗೂ ದೀಪಕ್ ಇಬ್ಬರು ಕಲಾವಿದರೆ. ಆಕ್ಟಿಂಗ್ ನಲ್ಲಿ ಇದ್ದಾರೆ. ದೀಪಕ್ ಕೂಡ ಹಲವು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಈಗ ದೀಪಕ್ ನಿರ್ಮಾಪಕ ಕೂಡ ಆಗಿದ್ದಾರೆ. ಕಲರ್ಸ್ ಕನ್ನಡದಲ್ಲಿ ಬರುತ್ತಿರುವ ಕರಿಮಣಿ ಧಾರಾವಾಹಿಯ ನಿರ್ವಹಣೆಯ ಹೊಣೆಯನ್ನು ಹೊತ್ತಿದ್ದಾರೆ. ಗಂಡ ಹೆಂಡತಿ ರಿಯಲ್ ಲೈಫ್ ನಲ್ಲೂ ತುಂಬಾ ಹ್ಯಾಪಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ರೀತಿ ತರಲೆ ತುಂಟಾಟ ಮಾಡಿಕೊಂಡು, ಖುಷಿ ಖುಷಿಯಾಗಿದ್ದಾರೆ. ಸದ್ಯ ಇವರಿಬ್ಬರ ರೀಲ್ಸ್ ಸಿಕ್ಕಾಪಟ್ಟೆ ವೈರಲ್ ಆಗಿದೆ.

More from Filmibeat

English summary
Zee kannada seetharama Written Update on Shalini real life. Here is the details about Chandana did not give even 100 rupees to her husband;
Read more about: serial sumanth tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X