ಕುಚಿಕು ಕುಚಿಕು: 'ಸೀತಾರಾಮ' ಧಾರಾವಾಹಿಯ ಅಶೋಕ್, ರಾಮ್ ರಿಯಲ್ ಲೈಫ್‌ನಲ್ಲಿ ಎಷ್ಟು ಕ್ಲೋಸ್ ನೋಡಿ
ಕೆಲವೊಮ್ಮೆ ತೆರೆಮೇಲೆ ಬೆಸ್ಟ್ ಫ್ರೆಂಡ್ಸ್ ಆದವರು ತೆರೆ ಹಿಂದೆಯೂ ಅದೇ ಬಾಂಧವ್ಯ ಉಳಿಸಿಕೊಳ್ಳುವುದು ಬಹಳ ಕಷ್ಟ. ಆದರೆ ರಾಮ್ ಹಾಗೂ ಅಶೋಕ್‌ರದ್ದು ಆ ರೀತಿಯಲ್ಲ. ಸೀರಿಯಲ್‌ನಲ್ಲಿ ಒಬ್ಬರಿಗೊಬ್ಬರು ಹೇಗೆ ಅನ್ಯೋನ್ಯವಾಗಿ ಇರುತ್ತಾರೋ, ರಿಯಲ್ ಲೈಫ್‌ನಲ್ಲೂ ಅದೇ ತರ ಇರುತ್ತಾರೆ. ಅದಕ್ಕೆ ಉದಾಹರಣೆ ಎಂದರೆ ಅಶೋಕ್ ಹಂಚಿಕೊಂಡಿರುವ ಒಂದು ಫನ್ನಿ ವಿಡಿಯೋ.
ಇತ್ತಿಚೆಗಷ್ಟೇ ಅಶೋಕನ ಮದುವೆಯಾಗಿದೆ. ರಾಮನೇ ಈ ಜವಾಬ್ದಾರಿ ತೆಗೆದುಕೊಂಡು ಅದ್ದೂರಿಯಾಗಿ ಮದುವೆ ಮಾಡಿ ಮುಗಿಸಿದ್ದಾನೆ. ಇದು ಧಾರಾವಾಹಿಯಲ್ಲಿ ನಡೆಯುವ ಸ್ನೇಹ-ಸಂಬಂಧ. ರಿಯಲ್ ಲೈಫ್‌ನಲ್ಲಂತು ಅದೆಷ್ಟು ಜೋಶ್ ಇರುತ್ತೆ ಗೊತ್ತಾ ಇಬ್ಬರಲ್ಲೂ. ನೋಡೋಕೆನೆ ಚೆಂದ.

ಒಬ್ಬರನ್ನೊಬ್ಬರು ಬಿಟ್ಟುಕೊಡದ ಫ್ರೆಂಡ್ಸ್
ಸೀತಾರಾಮ ಧಾರಾವಾಹಿಯಲ್ಲಿ ಏನೇ ಸಮಸ್ಯೆ ಬಂದರೂ ರಾಮ್ ಹಾಗೂ ಅಶೋಕ್ ಒಬ್ಬರಿಗೊಬ್ಬರು ಬಿಟ್ಟು ಕೊಡುವುದಿಲ್ಲ. ರಾಮ್‌ಗೆ ಕೊಂಚವೂ ನೋವು ಆಗಬಾರದು, ತೊಂದರೆ ಆಗಬಾರದು ಆ ರೀತಿ, ಲಕ್ಷ್ಮಣನಂತೆ ಕಾಯುತ್ತಿದ್ದಾನೆ. ರಾಮನು ಅಷ್ಟೇ ಮನೆಯವರಿಂದ ಅಶೋಕನಿಗೆ ನೋವಾದರೂ ಬೇಗ ಅರ್ಥ ಮಾಡಿಕೊಂಡು ಸರಿ ಮಾಡುತ್ತಾನೆ. ರಾಮ್ ಪ್ರೀತಿಗಾಗಿ ಅಶೋಕ ಸದಾ ಕಾವಾಲಾಗಿದ್ದರೆ, ಅಶೋಕನ ಪ್ರೀತಿಗಾಗಿ ರಾಮ ಬೆಂಗಾವಲಾಗಿ ನಿಂತಿದ್ದ. ಅಷ್ಟೊಳ್ಳೆ ಫ್ರೆಂಡ್ಶಿಪ್ ಇಬ್ಬರದ್ದು.
ಫನ್ನಿ ವಿಡಿಯೋ ಹಂಚಿಕೊಂಡ ಅಶೋಕ್
ಇವರಿಬ್ಬರ ಫ್ರೆಂಡ್ಶಿಪ್ ರಿಯಲ್ ಆಗಿ ಹೇಗಿದೆ ಎಂಬುದನ್ನು ಅಶೋಕ್ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ತೋರಿಸಿದ್ದಾರೆ. ಇಬ್ಬರು ಕಿತ್ತಾಡಿಕೊಂಡು ಇರುತ್ತಾರೆ. ಅಶೋಕ್ ಹಂಚಿಕೊಂಡ ವಿಡಿಯೋ ನೋಡಿದರೇನೆ ಗೊತ್ತಾಗುತ್ತೆ ಇಬ್ಬರ ನಡುವೆ ಅದೆಷ್ಟು ಸಲಿಗೆ ಇದೆ ಎಂಬುದು. ಒಬ್ಬರ ಮೇಲೊಬ್ಬರು ಬಿದ್ದು ಒದ್ದಾಡಿದ್ದಾರೆ. ಚಿಕ್ಕ ಮಕ್ಕಳಂತೆ ಅಶೋಕನ ಬಟ್ಟೆ ಕಿತ್ತು ಬಿಸಾಕುವ ತನಕ ರಾಮ್‌ಗೆ ಸಮಾಧಾನವೇ ಆಗಿಲ್ಲ.

ಸೆಕೆಗೆ ಬಟ್ಟೆ ಬಿಚ್ಚಿದ ರಾಮ್
ಅದು ಶೂಟಿಂಗ್ ಸೆಟ್ ಮೊದಲೇ ಹೆವಿ ಬಿಸಿಲು, ಸೆಕೆ ಜಾಸ್ತಿ. ರಾಮ್ ಶಾರ್ಟ್ಟ್‌ನಲ್ಲಿ ಇದ್ದಾನೆ. ಗ್ರೌಂಡ್‌ನಲ್ಲೇ ಸ್ಮಿಮ್ಮಿಂಗ್ ಪೂಲ್ ಕೂಡ ಇದೆ. ಹೀಗಾಗಿ ಬಿಸಿಲಿಗೆ ಸ್ವಿಮ್ಮಿಂಗ್ ಮಾಡುವ ಪ್ಲ್ಯಾನ್‌ನಲ್ಲಿದ್ದರು ಅನ್ಸುತ್ತೆ. ಆದರೆ ಅಶೋಕ್ ಮಾತ್ರ ಟಿಪ್ ಟಾಪ್ ಆಗಿ ಡ್ರೆಸ್‌ನಲ್ಲಿಯೇ ಅಲ್ಲಿಗೆ ಬಂದಿದ್ದಾರೆ. ಇದನ್ನು ಕಂಡ ರಾಮ್ ಸುಮ್ಮನೆ ಇರಬೇಕಲ್ಲ. ಅಶೋಕ್‌ನನ್ನು ಓಡಾಡಿಸಿಕೊಂಡು ತಾವೇ ಡ್ರೆಸ್ ಕಿತ್ತು ಬಿಸಾಕಿದ್ದಾರೆ. ಅಶೋಕ್ ಅಲ್ಲಿಂದ ತಪ್ಪಿಸಿಕೊಂಡು ಓಡಿದರು ಬಿಟ್ಟಿಲ್ಲ. ಹಿಂದೆಯೇ ಓಡಿ, ಅವನ ಸಾಕ್ಸ್, ಪ್ಯಾಂಟ್, ಶರ್ಟ್ ಬಿಚ್ಚಿದ್ದಾರೆ ರಾಮ್.
ವಿಡಿಯೋ ನೋಡಿದವರು ಏನಂದ್ರು..?
ಈ ವಿಡಿಯೋ ನೋಡಿದ ರಾಮ್ ಅಂಡ್ ಅಶೋಕ್ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಇದನ್ನ ನೋಡುವುದಕ್ಕೇನೆ ಖುಷಿಯಾಗುತ್ತೆ, ಈ ಫ್ರೆಂಡ್ಶಿಪ್ ಸದಾ ಹೀಗೆ ಇರಲಿ ಎಂದು ಹಾರೈಸುತ್ತಿದ್ದಾರೆ. ಇನ್ನು ಹಲವರು ನಿಮ್ಮನ್ನು ನೋಡುತ್ತಾ ಇದ್ದರೆ ಸ್ವಂತ ಅಣ್ಣತಮ್ಮಂದಿರ ರೀತಿಯೇ ಕಾಣಿಸುತ್ತೀರಿ ಎಂದು ಕಮೆಂಟ್ ಹಾಕಿದ್ದಾರೆ. ಇಬ್ಬರಿಗೂ ಯಾರ ದೃಷ್ಟಿ ಬೀಳದೆ ಇರಲಿ ಎಂದು ಬಯಸಿದ್ದಾರೆ. ಧಾರಾವಾಹಿಯಲ್ಲಿ ರಾಮ್ ಹೀರೋನೆ ಆದ್ರೂ ಅಶೋಕ್ ಕೂಡ ಫ್ಯಾನ್ಸ್ ಹೊಂದಿದ್ದಾರೆ.


Click it and Unblock the Notifications











