Seetha Rama: ರಾಮ್ ನಿಮ್ಗೆ ಆಕ್ಸಿಡೆಂಟ್ ಆಗಿದ್ದು ಮರೆತೋಯ್ತಾ? ಡ್ಯಾನ್ಸ್ ನೋಡಿ ಫ್ಯಾನ್ಸ್ ಕಾಳಜಿ

By ಎಸ್ ಸುಮಂತ್

ಸೀತಾರಾಮ ಧಾರಾವಾಹಿ ಪ್ರೇಕ್ಷಕರ ಆಲ್ ಟೈಮ್ ಫೇವರಿಟ್. ಸೀತಾಳ ಗುಣಕ್ಕೆ ಜನ ಮಾರು ಹೋಗಿದ್ದಾರೆ. ರಾಮನ ಒಳ್ಳೆಯತನಕ್ಕೆ ಶಬ್ಬಾಶ್ ಅಂತಿದ್ದಾರೆ. ಜನಮೆಚ್ಚಿದ ಜೋಡಿಯಾಗಿರುವ ಇಬ್ಬರು ಪ್ರೀತಿ ಬೇರೆ ಮಾಡುತ್ತಿದ್ದಾರೆ. ಆದರೆ ಒಬ್ಬರಿಗೊಬ್ಬರು ಹೇಳಿಕೊಳ್ಳುವುದಕ್ಕೆ ಹೆಣಗಾಡುತ್ತಿದ್ದಾರೆ. ಆದಷ್ಟು ಬೇಗ ಪ್ರೀತಿ ಹೇಳಿಕೊಳ್ಳಿ ಅಂತಿದ್ದಾರೆ ಅಭಿಮಾನಿಗಳು. ಅದರ ಜೊತೆಗೆ ರಾಮ್ ಬಗ್ಗೆ ಕಾಳಜಿ ಮಾಡುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸೀತಾ-ರಾಮ ಜೋಡಿಯ ಫ್ಯಾನ್ ಪೇಜ್‌ಗಳು ಹುಟ್ಟಿಕೊಂಡಿವೆ. ಈ ಮೂಲಕ ಕ್ಯೂಟ್ ಜೋಡಿಯ ವಿಡಿಯೋಗಳನ್ನು ಹಾಕುತ್ತಾ, ಫೋಟೋಗಳನ್ನು ಹಾಕುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಈಗ ಸೀತಾ ಅಲಿಯಾಸ್ ವೈಷ್ಣವಿ ಕೂಡ ರಾಮನ ಜೊತೆಗೆ ಡ್ಯಾನ್ಸ್ ಮಾಡಿರುವ ವಿಡಿಯೋ ಹಂಚಿಕೊಂಡಿದ್ದಾರೆ.

Seetharama serial fame Gagan Chinnappa Vaisshnavi dance video goes viral

ಡ್ಯಾನ್ಸ್ ಮಾಡಿದ ಸೀತಾ-ರಾಮ

ಈಗಂತೂ ಸೋಷಿಯಲ್ ಮೀಡಿಯಾ ಜಮಾನ ಅಲ್ವಾ. ಅದರಲ್ಲೂ ರೀಲ್ಸ್ ಹಾವಳಿ. ಕಲಾವಿದರು ಕೂಡ ಶೂಟಿಂಗ್ ಟೈಮ್‌ನಲ್ಲಿ ಗ್ಯಾಪ್ ಸಿಕ್ಕಿದಾಗ ವಿಡಿಯೋಗಳನ್ನ ಮಾಡುತ್ತಾ ಇರುತ್ತಾರೆ. ಸಹ ಕಲಾವಿದರ ಜೊತೆಗೊಂದು ರೀಲ್ಸ್ ಮಾಡಿ, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಾರೆ. ಜೊತೆಗೆ ತಮ್ಮ ಪರ್ಸ‌ನಲ್ ಪ್ರೊಫೈಲ್ ಬಿಲ್ಡ್ ಮಾಡಿಕೊಳ್ಳಲು ಸಹ ವಿಡಿಯೋಗಳನ್ನು ಅಪ್ಲೋಡ್ ಮಾಡ್ತಾನೆ ಇರುತ್ತಾರೆ. ಇದೀಗ ಸೀತಾ-ರಾಮನ ಜೊತೆಗೆ ಡ್ಯಾನ್ಸ್ ಮಾಡಿದ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

ಜೋಡಿ ಒಂದಾಗಲಿ ಎಂದ ಫ್ಯಾನ್ಸ್

ಸೀತಾ-ರಾಮ ಎಂದರೆ ಫ್ಯಾನ್ಸ್‌ಗೆ ಇನ್ನಿಲ್ಲದ ಖುಷಿ. ಆದಷ್ಟು ಬೇಹ ಅವರಿಬ್ಬರು ಒಂದಾಗ್ಲಿ ಅಂತಾನೇ ಫ್ಯಾನ್ಸ್ ಬೇಡುತ್ತಾರೆ. ಅವರಿಬ್ಬರ ಎಪಿಸೋಡ್ ಬಂತು ಅಂದ್ರೆ ಖುಷಿ ಖುಷಿಯಾಗಿ ನೋಡುತ್ತಾರೆ. ಈಗ ಚಾಂದಿನಿ ಬೇರೆ ಬಂದಿದ್ದಾಳೆ. ಸೀತಾ-ರಾಮನನ್ನು ದೂರ ಮಾಡಬಹುದು ಎಂಬ ಭಯ ಬೇರೆ. ಸೀತಾ ಹಂಚಿಕೊಂಡಿರುವ ಡ್ಯಾನ್ಸ್ ವಿಡಿಯೋಗೆ ಹಾರ್ಟ್‌ಗಳ ಸುರಿಮಳೆಯೇ ಸುರಿದಿದೆ. ಹಾರ್ಟ್ ನೀಡುವ ಮೂಲಕ ಈ ಜೋಡಿಯನ್ನು ಸಪೋರ್ಟ್ ಮಾಡುತ್ತಿದ್ದಾರೆ.

ರಾಮನ ಬಗ್ಗೆ ಅದೆಷ್ಟು ಕಾಳಜಿ

ಸೀತಾ-ರಾಮ ಡ್ಯಾನ್ಸ್ ಮಾಡಿರುವ ವಿಡಿಯೋ ಸಿಂಪಲ್ ಸ್ಟೆಪ್ಸ್ ಇರುವಂತದ್ದು. ಪಾಪ ಡ್ಯಾನ್ಸ್ ಮಾಡುವಾಗ ರಾಮ ತಪ್ಪಿದ್ದಾರೆ. ಕೊನೆ ಕೊನೆಯಲ್ಲಿ ಸ್ಟೆಪ್ಸ್ ಮಿಸ್ಸಾದರೂ ಸೀತಾ ಅದನ್ನು ಸಂಭಾಳಿಸಿ, ನೋಡುಗರ ಮುಖದಲ್ಲಿ ನಗು ಬರುವಂತೆ ಮಾಡಿದ್ದಾರೆ. ಆದರೆ ರಾಮನಿಗೆ ಅಭಿಮಾನಿಗಳು ಕಾಳಜಿ ಮಾಡಿದ್ದಾರೆ. ಇತ್ತಿಚೆಗೆ ರಾಮನಿಗೆ ಆಕ್ಸಿಡೆಂಟ್ ಆಗಿತ್ತು. ಹೀಗಾಗಿ ರಾಮ್ ಸ್ವಲ್ಪ ನಿಧಾನ. ಆಕ್ಸಿಡೆಂಟ್ ಆಗಿರೋದನ್ನೇ ಮರೆತು ಹೋಗಿದ್ದೀರಾ ಅನ್ಸುತ್ತೆ ಅಂತ ಪ್ರೀತಿಯ ಕಮೆಂಟ್ ಹಾಕಿದ್ದಾರೆ.

Seetharama serial fame Gagan Chinnappa Vaisshnavi dance video goes viral

ರಾಮ್ ಸೀತಾ ಒಂದಾದ ವಿಡಿಯೋ ವೈರಲ್

ಸೀತಾರಾಮ ಒಂದಾಗಲೆಂದು ಹಾರೈಸುತ್ತಿರುವ ಮನಸ್ಸುಗಳು ಕಡಿಮೆ ಏನು ಅಲ್ಲ. ಜೀ ಕನ್ನಡ ಆ ಬಗ್ಗೆ ಪ್ರೋಮೋ ಬಿಡದೇ ಹೋದರೂ ಮುಂದಿನ ಭಾರೀ ಕುತೂಹಲಘಟ್ಟದ ಪ್ರೋಮೋ ಸೋಷಿಯಲ್ ಮೀಡಿಯಾದಲ್ಲೆಲ್ಲಾ ಓಡಾಡುತ್ತಿದೆ. 'ಸೀತಾಳ ಮುಂದೆ ರಾಮ ಕೋಪಮಾಡಿಕೊಂಡು ಹೋಗುತ್ತಾನೆ. ಆಫೀಸಿಗೆ ಬಂದ ಸೀತಾ, ಅಶೋಕ್ ಹಾಗೂ ಪ್ರಿಯಾ ಬಳಿ ಕೇಳುತ್ತಾಳೆ. ಅವರಿಬ್ಬರು ಕೊಟ್ಟ ಉತ್ತರಕ್ಕೆ ಸೀತಾ, ರಾಮನನ್ನು ಹುಡುಕಿ ಹೋಗುತ್ತಾಳೆ. ರಾಮ ಒಂದು ಕಲ್ಲು ಬಂಡೆಯ ಮೇಲೆ ಹೋಗಿ ನಿಲ್ಲುತ್ತಾನೆ. ಆಗ ಸೀತಾ ಓಡಿ ಹೋಗಿ, ನಿನಗಿಂತಲೂ ಹೆಚ್ಚು ಇಷ್ಟಪಡುತ್ತಿನಿ ಎನ್ನುತ್ತಾಳೆ' ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

More from Filmibeat

English summary
Zee kannada serial Seetharama Written Update on Vaishnavi social Media. Here is the details about Seetha -Rama dance video;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X