SeethaRaama: ಸೀತಾರಾಮ ಧಾರಾವಾಹಿಯ ಪುಟಾಣಿ ಸಿಹಿ ಅಲಿಯಾಸ್ ರಿತೂ ಸಿಂಗ್ ಹುಟ್ಟುಹಬ್ಬ

By ಪ್ರಿಯಾ ದೊರೆ

ವೀಕ್ಷಕರ ಮುದ್ದು ಹುಡುಗಿ ಸಿಹಿ ಮುದ್ದು ಹುಟ್ಟುಹಬ್ಬ. ಸೀತಾರಾಮ ಧಾರಾವಾಹಿಯ ಸಿಹಿ ಅಲಿಯಾಸ್ ರಿತೂ ಸಿಂಗ್ ಬರ್ತಡೇ ಸೆಲಬ್ರೇಷನ್ ಮೂಡ್‌ನಲ್ಲಿ ಇದ್ದಾಳೆ.

ರಿತೂ ಸಿಂಗ್ ಹುಟ್ಟುಹಬ್ಬ ಹಿನ್ನೆಲೆ ಅವಳ ವೀಡಿಯೋವನ್ನು ಹಂಚಿಕೊಂಡಿರುವ ಜೀ ಕನ್ನಡ ವಾಹಿನಿ ಸಿಹಿ ಪುಟ್ಟನಿಗೆ ವಿಶ್ ಮಾಡಿ ಶುಭ ಹಾರೈಸಲಾಗಿದೆ.

'ಡ್ರಾಮಾ ಜೂನಿಯರ್ಸ್' ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ರಿತೂ ಈಗ ಎಲ್ಲರ ಮೆಚ್ಚಿನ ಸಿಹಿಯಾಗಿ ಸೀತಾರಾಮ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.

Seetharama serial fame Sihi aliyas Ritu singh celebrating her birthday

ಡ್ರಾಮಾ ಜ್ಯೂನಿಯರ್ಸ್ ಮೂಲಕ ಎಂಟ್ರಿ

ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ 'ಸೀತಾ ರಾಮ' ಧಾರಾವಾಹಿಯಲ್ಲಿ ಬಾಲ ನಟಿ ರಿತೂ ಸಿಂಗ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ರಿತೂ ಸಿಂಗ್ ಮೂಲತಃ ನೇಪಾಳಿಯವರಾಗಿದ್ದಾರೆ. ತಾಯಿಯೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದು, ಇನ್ನೂ ತೊದಲು ನುಡಿಯುತ್ತಲೇ ಡ್ರಾಮಾ ಜ್ಯೂನಿಯರ್ಸ್‌ನಲ್ಲಿ ಫೇಮಸ್ ಆಗಿದ್ದರು. ಇನ್ನು ಡ್ರಾಮಾ ಜ್ಯೂನಿಯರ್ಸ್‌ನಲ್ಲಿ ರಿತೂ ಎಂದರೆ ಕ್ರೇಜಿಸ್ಟಾರ್ ರವಿಚಂದ್ರನ್‌ಗೆ ಬಹಳ ಇಷ್ಟ. ಹಾಗಾಗಿ ರಿತೂ ಅನ್ನು ರವಿಚಂದ್ರನ್ ಅವರು ಪ್ರೀತಿಯಿಂದ ಮಾತನಾಡಿಸುತ್ತಾ ಸದಾ ತಮ್ಮ ಜೊತೆಗೆ ಇರುವಂತೆ ನೋಡಿಕೊಳ್ಳುತ್ತಿದ್ದರು. ಇನ್ನು ರಿತೂಗೂ ರವಿಚಂದ್ರನ್ ಎಂದರೆ ಇಷ್ಟ, ಆಗಾಗ ರವಿಚಂದ್ರನ್ ಅವರ ಸಿನಿಮಾಗಳ ಡೈಲಾಗ್ ಕಲಿತು ಹೇಳುವುದು, ಅವರ ಸಿನಿಮಾದ ಹಾಡುಗಳಿಗೆ ಹೆಜ್ಜೆ ಹಾಕಲು ಯತ್ನಿಸುತ್ತಿದ್ದಳು. 'ಡ್ರಾಮಾ ಜ್ಯೂನಿಯರ್ಸ್' ಸೀಸನ್- 4 ರ ಮೂಲಕ ರಿತೂ ಚಿರಪರಿಚಿತರಾಗಿದ್ದರು.

ಸೀತಾರಾಮದಲ್ಲಿ ಸಿಹಿ ಪಾತ್ರ

ಇನ್ನು ಸೀತಾರಾಮ ಧಾರಾವಾಹಿಯಲ್ಲಿ ನಟಿ ವೈಷ್ಣವಿ ಗೌಡ ಜೋಡಿಯಾಗಿ ನಟ ಗಗನ್ ಚಿನ್ನಪ್ಪ ನಟಿಸುತ್ತಿದ್ದು, ಸೀತಾಳ ಮಗಳ ಪಾತ್ರದಲ್ಲಿ ರಿತೂ ಅಭಿನಯಿಸುತ್ತಿದ್ದಾರೆ. ಸೀತಾ ಹಾಗೂ ರಾಮನ ಪ್ರೇಮ ಕಥೆಯಾಗಿದ್ದು, ಇದಕ್ಕೆ ಸಿಹಿ ಪಾತ್ರದ ರಿತೂ ಸಿಂಗ್ ಸೇತುವೆಯಾಗಿದ್ದಾಳೆ. ರಿತೂ, ಸಿಹಿ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದು, ಸಿಹಿಯ ಮುದ್ದಾದ ಮಾತುಗಳನ್ನು ಕೇಳುವುದೇ ಒಂದು ಚೆಂದ. ಅಮ್ಮ ಹೇಳಿದಂತೆಯೇ ಕೇಳುವ ಸಿಹಿಗೆ ತಪ್ಪು ಸರಿಗಳ ನಡುವಿನ ಅಂತರವನ್ನು ತಿಳಿದುಕೊಳ್ಳುತ್ತಿದ್ದಾಳೆ. ಈಗ ಸಿಹಿಯೇ ರಾಮ ಮತ್ತು ಸೀತೆಯನ್ನು ಒಂದುಗೂಡಿಸಬೇಕಿದೆ. ಸಿಹಿಗೆ ತಾಯಿ ಸೀತಾ ಎಂದರೆ ಎಷ್ಟು ಪ್ರೀತಿ ಇದೆಯೋ ಅಷ್ಟೇ ಇಷ್ಟ ಫ್ರೆಂಡ್ ರಾಮ್ ಎಂದರೆ.

Seetharama serial fame Sihi aliyas Ritu singh celebrating her birthday

ಫ್ರೆಂಡ್‌ಗಾಗಿ ಹಂಬಲಿಸುತ್ತಿರುವ ಸಿಹಿ

ಸದ್ಯ ರಾಮ್ ಮತ್ತು ಸೀತಾ ಮಾತನಾಡುತ್ತಿಲ್ಲ. ರಾಮ್ ತನ್ನ ಅಸ್ತಿತ್ವದ ಬಗ್ಗೆ ಸುಳ್ಳು ಹೇಳಿದ್ದಕ್ಕೆ ಸೀತಾ ಕೋಪ ಮಾಡಿಕೊಂಡಿದ್ದಾಳೆ. ಆದರೆ, ಸಿಹಿಗೆ ರಾಮ್‌ನನ್ನು ಬಿಟ್ಟಿರಲು ಸಾಧ್ಯವಾಗುತ್ತಿಲ್ಲ. ರಾಮ್‌ಗೂ ಕೂಡ ಸಿಹಿ ಜೊತೆ ಮಾತನಾಡದೇ ಇರುವುದಕ್ಕೆ ಬೇಸರವಿದೆ. ಆದರೆ, ಈಗ ಸೀತಾ ಮನಸ್ಸು ಮಾಡುವವರೆಗೂ ಸಿಹಿ ಮತ್ತು ಇಬ್ಬರೂ ದೂರವೇ ಇರಬೇಕಾಗಿದೆ. ಸಿಹಿ ತನ್ನ ಫ್ರೆಂಡ್ ರಾಮ್ ಜೊತೆಗೆ ಮಾತನಾಡಲು ಪತ್ರವನ್ನು ಬಳಸಿದ್ದಾಳೆ. ಆದಷ್ಟು ಬೇಗನೇ ರಾಮ್ ಮತ್ತು ಸೀತಾ ಒಂದಾಗಲಿ, ಸಿಹಿಗೆ ರಾಮ್ ತಂದೆ ಹಾಗೂ ಫ್ರೆಂಡ್ ಆಗಿ ಜೊತೆಗಿರಲಿ ಎಂದು ಬಯಸಿದ್ದಾರೆ.

ಹುಟ್ಟುಹಬ್ಬದ ಶುಭಾಷಯಗಳು ರಿತೂ

ರಿತೂ ಸಿಂಗ್ ಡ್ರಾಮಾ ಜ್ಯೂನಿಯರ್ಸ್ ಹಾಗೂ ಧಾರಾವಾಹಿ ಅಲ್ಲದೇ, ಜಾಹೀರಾತಿನಲ್ಲೂ ನಟಿಸಿದ್ದಾರೆ. ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ನಟನೆಯ ಪಂಕಜ ಕಸ್ತೂರಿ ಜಾಹೀರಾತಿನಲ್ಲಿ ರಿತೂ ನಟಿಸಿದ್ದಾರೆ. ಇನ್ನು ಇಂದು ಸಿಹಿ ಅಲಿಯಾಸ್ ರಿತೂ ಸಿಂಗ್ ಹುಟ್ಟುಹಬ್ಬವಿದೆ. ರಿತೂ ಸಿಂಗ್‌ಗೆ ತನ್ನ ಕುಟುಂಬದವರು, ಸೀತಾರಾಮ ತಂಡದ ಕಲಾವಿದರು ಎಲ್ಲರೂ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಪುಟಾಣಿ ರಿತೂಗೆ ನಮ್ಮ ಕಡೆಯಿಂದಲೂ ಹುಟ್ಟುಹಬ್ಬದ ಶುಭಾಷಯಗಳು.

More from Filmibeat

English summary
child actor Ritu singh journey and personal life;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X