Seetharama Serial: ರಾಮ್ ಜೊತೆ ಸಿಹಿಯಾಗಿ ಬರಲು ಒಪ್ಪಿದ ಸುಬ್ಬಿ; ಆದರೆ ಷರತ್ತುಗಳು ಒಂದೆರಡಲ್ಲ
'ಸೀತಾರಾಮ' ಧಾರಾವಾಹಿಯಲ್ಲಿ ರಾಮ್‌ಗೆ ಸುಬ್ಬಲಕ್ಷ್ಮೀ ಸಿಕ್ಕಾಗಿದೆ. ಥೇಟ್ ತನ್ನ ಮಗಳಂತೆ ಇರುವ ಸುಬ್ಬಿಯನ್ನು ಮನೆಗೆ ಕರೆದುಕೊಂಡು ಹೋಗಲು ತೀರ್ಮಾನಿಸಿದ್ದಾನೆ.
ಆದರೆ, ಸುಬ್ಬಿ ಹಾಗೂ ಅವರ ಮನೆಯವರು ರಾಮ್ ಮನೆಗೆ ಸುಬ್ಬಿಯನ್ನು ಕಳಿಸಲು ತಯಾರಿಲ್ಲ. ಇದರಿಂದ ಕಂಗಾಲಾದ ರಾಮ್, ಮುಂದೇನು ಮಾಡುವುದು ಎಂದು ಯೋಚಿಸುತ್ತಿದ್ದಾನೆ.

ಇದೇ ವೇಳೆಗೆ ಅಶೋಕ್ ಪ್ಲಾನ್ ಮಾಡಿ ಸುಬ್ಬಿ ತಾತನನ್ನು ಬ್ಲ್ಯಾಕ್ ಮೇಲ್ ಮಾಡುತ್ತಾನೆ. ಆಗ ಸುಬ್ಬಿಯನ್ನು ಒಪ್ಪಿಸಿ ರಾಮ್ ಮನೆಗೆ ಕಳಿಸಲು ಒಪ್ಪಿಕೊಳ್ಳುತ್ತಾರೆ.
ಷರತ್ತು ಹಾಕಿದ ಸುಬ್ಬಿ
ಸುಬ್ಬಿಗೆ ರಾಮ್ ಜೊತೆಗೆ ಹೋಗಲು ಕೊಂಚವೂ ಇಷ್ಟವಿರುವುದಿಲ್ಲ. ಆದರೆ, ತನ್ನ ಮನೆಯವರೆಲ್ಲಾ ಹೋಗುವಂತೆ ಬಲವಂತ ಮಾಡಿದ್ದಕ್ಕೆ ಒಂದಷ್ಟು ಕಂಡೀಷನ್‌ಗಳನ್ನು ಹಾಕಿದ್ದಾಳೆ. ರಾಮ್ ಕೂಡ ಎಲ್ಲಾ ಷರತ್ತುಗಳನ್ನು ಒಪ್ಪಲು ಮುಂದಾಗಿದ್ದು, ಸುಬ್ಬಿಯ ಆಸೆಯಂತೆ ಮನೆಯವರಿಗೆಲ್ಲಾ ಪಿಜ್ಜಾ, ಬರ್ಗರ್, ಪಾಸ್ತಾ, ಐಸ್ ಕ್ರೀಮ್ ಅನ್ನು ತರಿಸಿಕೊಟ್ಟಿದ್ದಾನೆ. ಇದೆಲ್ಲವನ್ನು ಸವಿದು ತೃಪ್ತಿಗೊಂಡ ಸುಬ್ಬಿ, ತನ್ನ ತಾತ ಕೇಳಿದಷ್ಟು ಹಣ ಕೊಡಬೇಕು, ಜಾಕಿ ಅಣ್ಣನಿಗೆ ಗ್ಯಾರೇಜ್ ಹಾಕಿಸಿಕೊಡಬೇಕು. ಪುಟ್ಲಿಂಗು ಅನ್ನು ಶಾಲೆಗೆ ಸೇರಿಸಬೇಕು ಎಂದೆಲ್ಲಾ ಕಂಡೀಷನ್ ಹಾಕಿದ್ದಾಳೆ. ಅಲ್ಲದೇ, ತನ್ನನ್ನು ಪ್ರತಿ ವಾರವೂ ಈ ಮನೆಗೆ ಕರೆದುಕೊಂಡು ಬರಬೇಕು ಎಂದು ಕೂಡ ಹೇಳಿದ್ದಾಳೆ. ಇದಕ್ಕೆಲ್ಲಾ ಅಶೋಕ್ ಮತ್ತು ರಾಮ್ ಒಪ್ಪಿಕೊಂಡಿದ್ದಾರೆ.
ಸೀತಮ್ಮನ ಜೊತೆಗಿರಲು ಒಪ್ಪಿದ ಸುಬ್ಬಿ
ಎಲ್ಲಾ ಕಂಡೀಷನ್‌ಗಳಿಗೂ ಒಪ್ಪಿದ ಸುಬ್ಬಿ ಸೀತಮ್ಮನ ಜೊತೆಗೆ ಇರಲು, ರಾಮ್ ಮನೆಗೆ ಬರಲು ಒಪ್ಪಿಗೆ ಸೂಚಿಸಿದ್ದಾಳೆ. ರಾಮ್ ಈಗ ಸುಬ್ಬಿಯನ್ನು ಸಿಹಿಯಂತೆ ತಯಾರಿ ನಡೆಸಲು ಮುಂದಾಗಿದ್ದಾನೆ. ಸಿಹಿ ಹೇಗೆ ಮಾತನಾಡುತ್ತಿದ್ದಳು. ಏನೆಲ್ಲಾ ಮಾಡುತ್ತಿದ್ದಳು ಎಂಬುದನ್ನು ವೀಡಿಯೋ ತೋರಿಸಿದ್ದಾನೆ. ಸುಬ್ಬಿ ಇದನ್ನೆಲ್ಲಾ ಒಂದೇ ದಿನ ಕಲಿಯೋದಕ್ಕೆ ಆಗುವುದಿಲ್ಲ ಎಂದು ಹಠ ಮಾಡಿದ್ದಾಳೆ. ಅಲ್ಲದೇ, ರಾಮ್‌ಗೆ ಟೀ ಮಾಡಿ ಕೊಡಿ ಎಂದು ಕೇಳಿದ್ದಾಳೆ. ಸುಬ್ಬಿಯ ಎಲ್ಲಾ ಮಾತುಗಳಿಗೂ ಓಕೆ ಎನ್ನುತ್ತಿರುವ ರಾಮ್, ಅವರ ತಾತನಿಗೆ ಹಣ ಕೊಟ್ಟಿದ್ದು, ಈಗ ಸ್ಟವ್ ಹಚ್ಚಿ ಟೀ ಮಾಡಿಕೊಟ್ಟಿದ್ದಾನೆ.

ಸೀತಾಳ ಮೇಲೆ ಗೂಬೆ ಕೂರಿಸಿದ ಭಾರ್ಗವಿ
ಇತ್ತ ಭಾರ್ಗವಿ ಸೀತಾಳ ಹುಚ್ಚು ಹೆಚ್ಚಾಗಬೇಕು ಎಂದು ಏನೇನೋ ಪ್ಲಾನ್ ಮಾಡುತ್ತಿದ್ದಾಳೆ. ಸೀತಾ ಬಳಿ ಆಕ್ಸಿಡೆಂಟ್ ವಿಚಾರವನ್ನು ಪದೇ ಪದೇ ತೆಗೆಯುತ್ತಿದ್ದಾಳೆ. ಸೀತಾಳ ಸುಪ್ತ ಮನಸ್ಸಿಗೆ ಎಲ್ಲಾ ಸತ್ಯ ಗೊತ್ತಿದ್ದರೂ ಒಪ್ಪಿಕೊಳ್ಳಲಾಗದ ಕಾರಣ ಭಾರ್ಗವಿ ಮೇಲೆ ಕೂಗಾಡುತ್ತಾಳೆ. ನನ್ನ ಮಗಳು ಸಿಹಿಗೆ ಏನೂ ಆಗೇ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾಳೆ. ಇನ್ನು ಸೀತಾ ಅಡುಗೆ ಮಾಡುವಾಗ ಬೇಕಂತಲೇ ಅವಳನ್ನು ಡೈವರ್ಟ್ ಮಾಡುತ್ತಾಳೆ. ಕುಕ್ಕರ್ ಅನ್ನು ತೆಗೆದು ಉರಿಯುತ್ತಿರುವ ಸ್ಟವ್ ಮೇಲೆ ಬಟ್ಟೆ ಹಾಕುತ್ತಾಳೆ. ಬಟ್ಟೆಗೆ ಬೆಂಕಿ ಹತ್ತಿಕೊಂಡಾಗ ಸೀತಾ ಆರಿಸಲು ಯತ್ನಿಸುತ್ತಾಳೆ. ಆಗ ಭಾರ್ಗವಿ ಕಿರುಚಾಡಿ ಸೂರಿ ಅಲ್ಲಿಗೆ ಬರುವಂತೆ ಮಾಡಿದ ಭಾರ್ಗವಿ, ನೋಡಿ ಮಾವ ಸೀತಾ ಏನೆಲ್ಲಾ ಮಾಡುತ್ತಿದ್ದಾಳೆ ಎಂದು ತೋರಿಸುತ್ತಾಳೆ. ಸೂರಿ ಕೂಡ ಹುಷಾರಿಲ್ಲದ ನೀನು ಕೆಲಸ ಮಾಡಬೇಡ ಎಂದು ಬುದ್ಧಿ ಹೇಳುತ್ತಾನೆ. ಇದರಿಂದ ಸೀತಾ ಗೊಂದಲಕ್ಕೊಳಗಾಗುತ್ತಾಳೆ.
ಅಶೋಕ್ ಮೇಲೆ ಭಾರ್ಗವಿ ಆರೋಪ
ಭಾರ್ಗವಿ ರಾಮ್‌ಗೆ ಫೋನ್ ಮಾಡಿ ಸೀತಾಳಿಗೆ ಸಮಸ್ಯೆ ಆಗಿದೆ ಬೇಗ ಬಾ ರಾಮ್ ಎಂದು ಕರೆದಾಗ ಅಶೋಕ್ ಫೋನ್ ರಿಸೀವ್ ಮಾಡಿ ಕೆಲಸ ಮುಗಿದ ಬಳಿಕ ಬರುತ್ತೇವೆ ಎಂದು ಅಸಡ್ಡೆಯಾಗಿ ಉತ್ತರಿಸುತ್ತಾನೆ. ಈ ವಿಚಾರವನ್ನು ಅಶೋಕ್, ರಾಮ್‌ಗೆ ಹೇಳುವುದಿಲ್ಲ. ಮನೆಗೆ ಬಂದ ರಾಮ್‌ಗೆ ಭಾರ್ಗವಿ ನಡೆದ ಘಟನೆಯನ್ನು ತಿಳಿಸಿದ್ದಾಳೆ. ಅಶೋಕ್ ಈ ವಿಚಾರವನ್ನು ರಾಮ್‌ಗೆ ತಿಳಿಸದೇ ಹೋದ ಕಾರಣ ಈಗ ಅವನ ತಪ್ಪನ್ನು ಎತ್ತಿ ತೋರಿಸಿದ್ದು, ರಾಮ್ ಅಶೋಕ್ ಮೇಲೆ ಕೋಪ ಮಾಡಿಕೊಂಡಿದ್ದಾನೆ.


Click it and Unblock the Notifications











