Seetha Rama: ಸೀತಾಗೆ ಪ್ರಪೋಸ್ ಮಾಡಲು ರಾಮ ಪಟ್ಟ ಕಷ್ಟ ಅಷ್ಟಿಷ್ಟಲ್ಲ: 'ಸೀತಾರಾಮ' ಮೇಕಿಂಗ್ ವಿಡಿಯೋ
ಕೆಲವೊಂದು ಸಲ ಜೋಡಿಗಳು ಹಿಟ್ ಆಗುವುದು ಕಷ್ಟ. ಇನ್ನು ಕೆಲವೊಂದು ಸಲ ಹೇಳಿ ಮಾಡಿಸಿದಂತ ಜೋಡಿಗಳು ಸಿಕ್ಕಿಬಿಡುತ್ತವೆ. ಆಗ ಫ್ಯಾನ್ ಫಾಲೋವರ್ಸ್ ಅಂತೂ ದಿನೇ ದಿನೇ ಹೆಚ್ಚುತ್ತದೆ. ಈ ಜೋಡಿ ನಿಜ ಜೀವನದಲ್ಲೂ ಒಂದಾಗಲಪ್ಪ ಅಂತ ಹಾರೈಸುತ್ತಾರೆ. ಜನರ ಪ್ರೀತಿ ಎಷ್ಟರ ಮಟ್ಟಿಗೆ ಇರುತ್ತದೆ ಎಂದರೆ ಅವರ ಹೆಸರಲ್ಲಿ ಪೇಜ್‌ಗಳನ್ನು ಸೃಷ್ಟಿ ಮಾಡಿ, ಆ ಜೋಡಿಯನ್ನು ಟ್ರೆಂಡಿಂಗ್ ಮಾಡಿ ಬಿಡುತ್ತಾರೆ.
ಇಷ್ಟೆಲ್ಲಾ ಹೇಳುವುದಕ್ಕೆ ಕಾರಣ 'ಸೀತಾರಾಮ' ಧಾರಾವಾಹಿ. ಜೀ ಕನ್ನಡದ ಕೆಲವೊಂದು ಧಾರಾವಾಹಿಗಳಲ್ಲೂ ಅದಾಗಲೇ ಪ್ರೇಕ್ಷಕರ ಫೇವರಿಟ್ ಆಗಿರುವ ಜೋಡಿಗಳು ಕಾಣಿಸಿಕೊಂಡಿವೆ. ಅದರ ಸಾಲಿಗೆ 'ಸೀತಾ ಹಾಗೂ ರಾಮ' ಜೋಡಿ ಕೂಡ ಒಂದು. ಅದರಲ್ಲೂ ರಾಮ್‌ಗೆ ಮಹಿಳಾ ಅಭಿಮಾನಿಗಳು ಕಡಿಮೆ ಏನು ಇಲ್ಲ. ಅಭಿಮಾನ ಇದ್ದರು ಸೀತಾ-ರಾಮ ಒಂದಾಗಲಿ ಎಂದೇ ಹಲವರು ಬಯಸುತ್ತಾರೆ.

ಸೀತಾಗೆ ಪ್ರಪೋಸ್ ಮಾಡಲು ಪ್ಲ್ಯಾನ್
ಇದ್ದರೆ ಅಶೋಕನಂತಹ ಒಬ್ಬ ಸ್ನೇಹಿತನಿರಬೇಕು. ರಾಮನ ಎಲ್ಲಾ ಕಷ್ಟಗಳಲ್ಲಿ ಜೊತೆಗೆ ನಿಂತಿದ್ದಾನೆ. ಹಳೆ ಪ್ರೀತಿ ಚಾಂದಿನಿಯಿಂದ ನೋವು ಅನುಭವಿಸಿದಾಗಲೂ, ಆ ನೋವಿನಿಂದ ಹೊರತರುವ ಪ್ರಯತ್ನ ಮಾಡಿದ್ದಾನೆ. ಈಗ ಸೀತಾಳ ಮೇಲೆ ಹುಟ್ಟಿದ ಪ್ರೀತಿಗೂ ಅಶೋಕನ ಮಾತುಗಳೇ ಸ್ಪೂರ್ತಿಯಾಗಿವೆ. ರಾಮ ಒಟ್ನಲ್ಲಿ ಪ್ರೀತಿಯಲ್ಲಿ ಬಿದ್ದಿದ್ದಾನೆ. ತನ್ನ ಪ್ರೀತಿಯನ್ನು ಹೇಳಿಕೊಳ್ಳಲು ಒದ್ದಾಡುತ್ತಿದ್ದಾನೆ. ಅದಕ್ಕಾಗಿ ವಿಶೇಷ ಪ್ಲ್ಯಾನ್ ಮಾಡಿದ್ದಾನೆ.
ಮೇಕಿಂಗ್ ವಿಡಿಯೋ ರಿಲೀಸ್
ತೆರೆಮೇಲೆ ನಾವೂ ನೋಡುವ ಅರ್ಧ ಗಂಟೆ ಧಾರಾವಾಹಿಯನ್ನ ಡೈರೆಕ್ಟರ್ ದಿನವಿಡೀ ಶೂಟ್ ಮಾಡಿರುತ್ತಾರೆ. ಅದೆಷ್ಟೋ ರಿಟೇಕ್‌ಗಳು ಆಗಿರುತ್ತವೆ. ಹೊರಾಂಗಣದ ಶೂಟಿಂಗ್ ಆದರಂತೂ ಮುಗಿದೇ ಹೋಯ್ತು. ಪರಿಸ್ಥಿತಿಗಳನ್ನು ನೋಡಿಕೊಂಡು, ಮಳೆ, ಬಿಸಿಲು, ಧೂಳು ಎಲ್ಲವನ್ನು ದೂರ ಮಾಡಿ, ಶೂಟಿಂಗ್ ಮಾಡಬೇಕು. ತೆರೆ ಮೇಲೆ ನೋಡುವ ಅದ್ಭುತ ವಿಷ್ಯೂವಲ್ ಗಾಗಿ ಹತ್ತಾರು ಜನ ತಾಂತ್ರಿಕ ವರ್ಗದಲ್ಲಿ ಕಷ್ಟಪಟ್ಟಿರುತ್ತಾರೆ. ಆ ಶ್ರಮ ಮೇಕಿಂಗ್ ವಿಡಿಯೋದಲ್ಲಿ ಕಾಣಿಸುತ್ತಿದೆ.
ಬೀಚ್‌ನಲ್ಲಿ, ದೇವಸ್ಥಾನದಲ್ಲಿ ಶೂಟಿಂಗ್
ರಾಮ್, ಸೀತಾಗೆ ಪ್ರಪೋಸ್ ಮಾಡಲು ಬೇರೆ ಸ್ಥಳವನ್ನೇ ಆಯ್ಕೆ ಮಾಡಿಕೊಂಡಿದ್ದಾನೆ. ಬೀಚ್ ಕಡೆ ಹೋಗಿದ್ದು, ಸ್ಪೆಷಲ್ ಅರೆಂಜ್ಮೆಂಟ್ ಮಾಡಲಾಗಿದೆ. ಲೈಟಿಂಗ್‌ನಲ್ಲಿ ಡೆಕೊರೇಟ್ ಮಾಡಲಾಗಿದೆ. ಪ್ರಪೋಸ್‌ಗೂ ರಾಮ್, ಸೀತಾ ಹಾಗೂ ಸಿಹಿ ಜೊತೆಗೆ ಒಂದಷ್ಟು ಅಮೌಲ್ಯವಾದ ಕ್ಷಣವನ್ನು ಕಳೆದಿದ್ದಾನೆ. ದೇವಸ್ಥಾನಗಳಿಗೆ ಹೋಗಿದ್ದಾನೆ. ಪಾರ್ಕ್ ಸುತ್ತಿದ್ದಾನೆ. ಇದರ ನಡುವೆ ಅಷ್ಟು ಪುಟ್ಟ ಸಿಹಿ ಕೂಡ ಧಾರಾವಾಹಿಯಲ್ಲಿ ತನ್ನ ಪಾತ್ರಕ್ಕೆ ಅಷ್ಟೇ ಮಹತ್ವ ಕೊಟ್ಟಿದ್ದಾಳೆ. ಖುಷಿ ಖುಷಿಯಾಗಿ ಅಭಿನಯಿಸಿದ್ದಾಳೆ.
ಎಪಿಸೋಡ್‌ಗಾಗಿ ಜನ ವೈಟಿಂಗ್
'ಸೀತಾರಾಮ' ಧಾರಾವಾಹಿ ಎಲ್ಲರಿಗೂ ಅಚ್ಚುಮೆಚ್ಚಾಗಿದೆ. ಅದರಲ್ಲೂ ರಾಮ್-ಸೀತಾ ಒಂದಾಗುತ್ತಾರೆ ಎಂದರೆ ಅದಕ್ಕಿಂತ ಖುಷಿಯ ವಿಚಾರ ಮತ್ತೊಂದು ಯಾವುದಿದೆ. ಈಗ ಬೇರೆ ಪ್ರಪೋಸ್ ಮಾಡುವುದಕ್ಕೇನೆ ಸ್ಪಷಲ್ ಆಗಿ ಪ್ಲ್ಯಾನ್ ಮಾಡಲಾಗಿದೆ. ಈ ತುಣುಕುಗಳು ಈ ಹಿಂದೆಯೇ ಹರಿದಾಡಿದೆಯಾದರೂ ಈ ಸ್ಪೆಷಲ್ ವಿಡಿಯೋ ಜನರಿಗೆ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಮೊದಲೇ ಸೀತಾ ಪ್ರೀತಿ-ಗೀತಿ ಅಂತ ಗಮನ ಕೊಡುತ್ತಿಲ್ಲ. ಮನಸ್ಸಲ್ಲಿ ಪ್ರೀತಿ ಇದ್ದರು ಅದು ಪ್ರೀತಿ ಎಂದು ಸ್ಪಷ್ಟ ಪಡಿಸುವಂತ ಫ್ರೆಂಡ್ಸ್ ಕೂಡ ಜೊತೆಗೆ ಇಲ್ಲ. ಹೀಗಾಗಿ ಮನಸ್ಸಿನ ಪ್ರೀತಿ ಅರ್ಥವಾಗುತ್ತಿಲ್ಲ. ಇದು ನೋಡುಗರಿಗೆ ಕುತೂಹಲವಾಗಿದೆ. ಸೀತಾ, ರಾಮನನ್ನು ಒಪ್ಪಿಕೊಳ್ಳುವ ಆ ಗಳಿಗೆಗೆ ಕಾಯುತ್ತಿದ್ದಾರೆ.


Click it and Unblock the Notifications











