Seetharama ; ಸಿಹಿ ಜನ್ಮರಹಸ್ಯದ ಬಗ್ಗೆ ಹೆಚ್ಚಿದ ಕುತೂಹಲ : ಮರಾಠಿಯಲ್ಲಿರುವ ಉತ್ತರ ಏನು..?
ಜೀ ಕನ್ನಡದಲ್ಲಿ ಸೀತಾರಾಮ ಧಾರಾವಾಹಿ ಈಗ ಎಲ್ಲರ ಅಚ್ಚುಮೆಚ್ಚಿನ ಸೀರಿಯಲ್ ಎಂದರೆ ತಪ್ಪಾಗುವುದಿಲ್ಲ. ಯಾಕಂದರೆ ಆ ಧಾರಾವಾಹಿಯಲ್ಲಿ ನಟನೆ ಮಾಡಿರುವ ಮಗುವೇ ಹೆಚ್ಚು ಹೈಲೈಟ್. ಜೊತೆಗೆ ಧಾರಾವಾಹಿಯ ಕಥೆಯೇ ಎಲ್ಲರನ್ನು ಸೆಳೆಯುತ್ತಿದೆ. ವಠಾರದ ಜೀವನದಲ್ಲೂ ಆ ಅಮ್ಮ ಮಗು ನೆಮ್ಮದಿಯಾಗಿದ್ದಾರೆ. ಆದರೆ ಅರಮನೆಯಲ್ಲಿದ್ದರು ರಾಮ ಖುಷಿಯಾಗಿಲ್ಲ. ರಾಮನಿಗೆ ನೆಮ್ಮದಿ, ಸಂತೋಷ ಸಿಕ್ಕಿರುವುದು ಇದೇ ವಠಾರದ ಸಿಹಿಯಿಂದ. ಸೀತಾರಾಮ ಧಾರಾವಾಹಿಯನ್ನು ಜೀ ಕನ್ನಡವೇ ನಿರ್ಮಾಣ ಮಾಡುತ್ತಿದೆ. ಟಿಆರ್‌ಪಿ ವಿಚಾರದಲ್ಲೂ ಸೀತಾರಾಮ ಧಾರಾವಾಹಿ ಎಂದಿಗೂ ಹಿಂದೆ ಬಿದ್ದಿಲ್ಲ.
ರಾಮ್-ಸಿಹಿ ಗೆಳೆತನ
ಸೀತಾರಾಮ ಧಾರಾವಾಹಿಯಲ್ಲಿ ಯಾವಾಗ ಸೀತಾ-ರಾಮ ಒಂದಾಗುತ್ತಾರೋ ಎಂದು ಎಲ್ಲರು ಕಾಯುತ್ತಿದ್ದಾರೆ. ಈಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸಪ್ತಪದಿ ತುಳಿಯಲು ಇಬ್ಬರೂ ತುದಿ ಗಾಲಿನಲ್ಲಿ ನಿಂತಿದ್ದಾರೆ. ಸಿಹಿ ಮಾತಿಗಿಂತ ರಾಮ ಗೆ ಯಾರ ಅಭಿಪ್ರಾಯವೂ ಬೇಕಾಗಿಲ್ಲ. ಸಿಹಿ ಮತ್ತು ರಾಮನ ಗೆಳೆತನ ನೋಡಿದರೆ ಎಲ್ಲರಿಗೂ ಖುಷಿಯಾಗುವಂತಿದೆ. ಸಿಹಿಯ ಕೋಪ, ಪ್ರೀತಿ, ಪ್ರಶ್ನೆಗಳು, ಅವಳ ಆಸೆಗಳು ಎಲ್ಲವೂ ಮುದ್ದಾಗಿದೆ. ಸೀತಾರಾಮ ಧಾರಾವಾಹಿ ನೋಡಿದವರು ಕಥೆಯನ್ನು ಚೆನ್ನಾಗಿಯೇ ಎಣೆಯಲಾಗಿದೆ. ಎಲ್ಲರ ಮನಸ್ಸು ಮುಟ್ಟುವಂತಿದೆ. ಸೀತಾರಾಮ ಧಾರಾವಾಹಿ ಮರಾಠಿ ಮೂಲದ ಧಾರಾವಾಹಿಯಾಗಿದೆ. ಕನ್ನಡದಲ್ಲಿ ಸೀತಾರಾಮ ಶುರುವಾದ ಮೇಲೆ ಈಗ ಜೀ ಹಿಂದಿಯಲ್ಲೂ ಇದರ ಪ್ರೋಮೋ ಹರಿ ಬಿಡಲಾಗಿದೆ. ಅಷ್ಟರಮಟ್ಟಕ್ಕೆ ಸೀತಾರಾಮ ಧಾರಾವಾಹಿ ಹಿಟ್ ಆಗಿದೆ.

ಸಿಹಿ ಪಾತ್ರ ಮೆಚ್ಚಿಕೊಂಡ ವೀಕ್ಷಕರು
ಜೀ ಮರಾಠಿಯಲ್ಲಿ ಮಾಶಿ ತುಜಿ ರೇಶಿಮಗತ್ ಹೆಸರಲ್ಲಿ ಧಾರಾವಾಹಿ ಪ್ರಸಾರವಾಗಿತ್ತು. ಆದರೆ ಮರಾಠಿಯ ಈ ಧಾರಾವಾಹಿಗಿಂತ ಕನ್ನಡವೇ ಬೆಸ್ಟ್ ಎನಿಸುತ್ತಿದೆ. ಯಾಕಂದರೆ ಸೀತಾರಾಮ ಧಾರಾವಾಹಿಯಲ್ಲಿ ಮಾಡಿರುವ ಒಂದೊಂದು ಪಾತ್ರಗಳು ಎಲ್ಲರನ್ನು ಭಾವನಾತ್ಮಕವಾಗಿ ಕನೆಕ್ಟ್ ಆಗುತ್ತದೆ. ಅದರಲ್ಲೂ ಸಿಹಿ ಪಾತ್ರವಂತೂ ಯಾರೂ ಮೀರಿಸಲು ಸಾಧ್ಯವೇ ಇಲ್ಲ. ಮರಾಠಿಯಲ್ಲಿ ಮೈರಾ ಎಂಬ ಪುಟಾಣಿ ಈ ಪಾತ್ರವನ್ನು ಮಾಡಿದ್ದಾಳೆ. ಆದರೆ ಮೈರಾ ನಮ್ಮ ಸಿಹಿಯಷ್ಟು ಸ್ಟ್ರಾಂಗ್ ಅನ್ನಿಸಲ್ಲ. ಸಿಹಿ ಪಾತ್ರದಲ್ಲಿ ರಿತೂ ಮೊದಲ ಸ್ಥಾನದಲ್ಲಿ ನಿಂತಿದ್ದಾಳೆ. ಆದರೆ ಮೈರಾ ಸಿಕ್ಕಾಪಟ್ಟೆ ಇನ್ನೊಸೆಂಟ್ ಫೀಲ್ ಕೊಡುತ್ತಾಳೆ. ಸೀತಾರಾಮ ಧಾರಾವಾಹಿ ನಿರೀಕ್ಷೆ ಮೀರಿ ಎಲ್ಲರನ್ನು ತಲುಪುತ್ತಿದೆ. ಎಲ್ಲರ ಬಾಯಲ್ಲೂ ಸಿಹಿ ಹಾಗೂ ರಾಮ್ ಬಗ್ಗೆಯೇ ಮಾತುಗಳು ಕೇಳಿ ಬರುತ್ತಿವೆ.
ಸಿಹಿ ಜನ್ಮ ರಹಸ್ಯ ಬಯಲು
ಇನ್ನು ಈಗಾಗಲೇ ಸಿಹಿ ಹುಟ್ಟಿನ ರಹಸ್ಯದ ಬಗ್ಗೆ ವೀಕ್ಷಕರಿಗೂ ಸಾಕಷ್ಟು ಪ್ರಶ್ನೆಗಳು ಮೂಡಿದ್ದು, ಧಾರಾವಾಹಿಯಲ್ಲಿ ರಹಸ್ಯ ಹೇಳುವ ಸಂದರ್ಭದಲ್ಲೇ ಅಡಚಣೆಗಳು ಬಂದಿವೆ. ಸಿಹಿ ತಂದೆಗಾಗಿ ಭಾರ್ಗವಿ ಹುಡುಕಾಡಿದರೂ ಪ್ರಯೋಜನವಾಗಿಲ್ಲ. ಇನ್ನು ಸೀತಾ ಕೂಡ ಒಂದೆರಡು ಬಾರಿ ರಾಮನ ಬಳಿ ಸಿಹಿ ಬಗ್ಗೆ ಸತ್ಯ ಹೇಳಲು ಯತ್ನಿಸಿದ್ದು, ರಾಮ ಆಸಕ್ತಿ ತೋರಿಸಲಿಲ್ಲ. ಹೀಗಾಗಿ ಸೀತಾ ಸುಮ್ಮನಾಗಿದ್ದಾಳೆ. ಆದರೆ, ವೀಕ್ಷಕರಿಗಂತೂ ಸಿಹಿ ಬಗ್ಗೆ ಕುತೂಹಲವಿದೆ. ಸೀತಾ ಮದುವೆಯಾಗಿದ್ದಳಾ..? ಅಥವಾ ಪ್ರೀತಿಸಿ ಮೋಸ ಹೋದಳಾ..? ಇಲ್ಲ ಸಿಹಿ ತನ್ನ ಮಗು ಎಂಬುದೇ ಸುಳ್ಳಾ..? ರಾಮನ ಕುಟುಂಬಕ್ಕೆ ಸೇರಿದವಳಾ ಸಿಹಿ ಎಂಬೆಲ್ಲಾ ಪ್ರಶ್ನೆಗಳೂ ಮೂಡಿವೆ.

ಸೀತಾಳ ಮಗಳಾ ಸಿಹಿ..?
ಮರಾಠಿಯಲ್ಲಿ ಪ್ರಸಾರವಾದ ಧಾರಾವಾಹಿ ಪ್ರಕಾರ ಸಿಹಿ ಸೀತಾಳ ಮಗಳೇ ಆದರೆ, ಈಗಿರುವ ಸೀತಾ ನಿಜವಾದ ಸೀತಾ ಅಲ್ಲ. ಈಗಿನ ಸೀತಾ ಮತ್ತು ಸಿಹಿ ತಾಯಿ ಇಬ್ಬರೂ ಅವಳಿ ಜವಳಿಗಳು. ಅವಳಿಗೆ ಹುಟ್ಟಿದ ಈ ಮಗುವನ್ನು ಅನಿವಾರ್ಯವಾಗಿ ಸೀತಾ ಸಾಕುವಂತಾಗಿದೆ. ಸಿಹಿಗೆ ಅನ್ಯಾಯವಾಗಬಾರದು ಎಂಬ ಕಾರಣಕ್ಕೆ ತನ್ನೆಲ್ಲಾ ಆಸೆಗಳನ್ನು ಮುಡಿಪಾಗಿಟ್ಟು ಅವಳ ಜೊತೆಗೆ ಜೀವಿಸುತ್ತಿದ್ದಾಳೆ. ಆದರೆ, ಕನ್ನಡ ಧಾರಾವಾಹಿಯಲ್ಲಿ ಸಿಹಿ ರಹಸ್ಯೆ ಬೇರೆಯೇ ಇದೆಯಾ ಇಲ್ಲ ಮರಾಠಿ ಸೀರಿಯಲ್ ಕಥೆಯೇ ಮುಂದುವರೆಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











