Seetharama: ರಾಮ್ ಕೊಟ್ಟ ಚೆಕ್‌ಗಳೆಲ್ಲ ಪೀಸ್ ಪೀಸ್.. ಭಾರ್ಗವಿ ಲೆಕ್ಕಾಚಾರವನ್ನು ತಲೆ ಕೆಳಗೆ ಮಾಡಿದ ಸತ್ಯ
'ಸೀತಾ ರಾಮ' ಧಾರಾವಾಹಿಯಲ್ಲಿ ರಾಮ ಸೀತಾಳಿಗೆ ಪ್ರಪೋಸ್ ಮಾಡಿ ಮದುವೆಯಾಗಲು ಅಶೋಕ ಸಹಾಯ ಮಾಡುತ್ತಾನೆ. ರಾಮ್ ಈ ವಿಚಾರವನ್ನು ಸೀತಾ ಬಳಿ ಹೇಳಲೆಂದು ಹೊರಟಾಗ ಅಜ್ಜಿ ತಡೆಯುತ್ತಾರೆ.
ಅಜ್ಜಿ ಲಾಯರ್ ಜೊತೆಗೆ ಸೀತಾಳಿಗೆ ಮದುವೆ ಮಾಡಿಸಬೇಕು. ನೀನು ಅವಳ ಬಳಿ ಮಾತನಾಡಿ ಒಪ್ಪಿಸು ಎಂದು ಹೇಳಿರುತ್ತಾರೆ. ಇದರಿಂದ ರಾಮ ತನ್ನ ಮನದ ಮಾತನ್ನು ಬಚ್ಚಿಟ್ಟುಕೊಳ್ಳುತ್ತಾನೆ.
ಅಶೋಕ ಬೈಯುತ್ತಾನೆ. ಹೀಗೆ ನೀನು ಏನೂ ಮಾತನಾಡದೇ ಇದ್ದರೆ, ನಿನಗೇ ನಷ್ಟ ಎಂದು ಎಷ್ಟು ಬುದ್ಧಿ ಹೇಳಿದರೂ ರಾಮ, ಅಶೋಕನ ಮಾತನ್ನು ಕೇಳುತ್ತಿಲ್ಲ.

ಸೀತಾಳನ್ನು ಬಿಟ್ಟುಕೊಟ್ಟ ರಾಮ್
ಸೀತಾಳ ಬಳಿ ಲಾಯರ್ ಬಗ್ಗೆ ಮಾತನಾಡಿ, ಅವಳನ್ನು ಮದುವೆಗೆ ಒಪ್ಪಿಸಬೇಕು ಎಂದು ತೀರ್ಮಾನ ಮಾಡಿದ್ದಾನೆ. ನಾನು ಹೀಗೆ ಇದ್ದು ಬಿಡುತ್ತೇನೆ ಎಂದು ಹೇಳಿದ್ದಾನೆ. ಇದೇ ಸಂದರ್ಭದಲ್ಲಿ ಸೀತಾ ಮನೆಯಲ್ಲಿನ ಕಷ್ಟ ನೀಗಿಸಲು ಪಾರ್ಟ್ ಟೈಂ ಕೆಲಸವನ್ನು ಹುಡುಕುತ್ತಿದ್ದಾಳೆ. ಇದನ್ನು ತಿಳಿದ ಲಾಯರ್ ತನ್ನ ಆಫೀಸಿನಲ್ಲೇ ಕೆಲಸವನ್ನೂ ಕೊಟ್ಟಿದ್ದಾನೆ. ಸೀತಾ ಇನ್ಮುಂದೆ ಲಾಯರ್ ಬಳಿ ನಿತ್ಯ ಕೆಲಸ ಮಾಡುವುದು ಪಕ್ಕಾ ಆಗಿದೆ. ಇದರಿಂದ ಲಾಯರ್‌ಗಂತೂ ಖುಷಿಯಾಗಿದ್ದು, ಆದಷ್ಟು ಬೇಗ ಸೀತಾಳನ್ನು ತನ್ನ ಕೈವಶ ಮಾಡಿಕೊಳ್ಳಬೇಕು ಎಂದು ಆಲೋಚಿಸಿದ್ದಾನೆ. ಆದರೆ, ರಾಮ್, ಸೀತಾಳನ್ನು ಮದುವೆಯಾಗಲು ಇನ್ನು ಸಾಕಷ್ಟು ಕಷ್ಟವನ್ನು ಎದುರಿಸಬೇಕು.
ಬಿಸಿನೆಸ್‌ಗೆಂದು ಚೆಕ್ ಪಡೆದ ಭಾರ್ಗವಿ
ಇನ್ನು ಭಾರ್ಗವಿ ವಿಶ್ವನನ್ನು ಮುಂದೆ ಇಟ್ಟುಕೊಂಡು ಬಿಸಿನೆಸ್ ಒಂದನ್ನು ಪ್ರಾರಂಭಿಸಲು ಐದು ಕೋಟಿ ಹಣವನ್ನು ರಾಮ್‌ನಿಂದ ಪೀಕಲು ಯತ್ನಿಸಿದ್ದಾಳೆ. 4 ಖಾಲಿ ಚೆಕ್‌ಗಳಿಗೆ ಸಹಿ ಹಾಕಿ ರಾಮ್ ಕೊಟ್ಟಿರುತ್ತಾನೆ. ಅಶೋಕ ಖಾಲಿ ಚೆಕ್ ಕೊಡಬೇಡವೋ ಎಂದು ಹೇಳಿದರೂ ರಾಮ್ ಕೇಳುವುದಿಲ್ಲ. ಅವರು ನಮ್ಮ ಮನೆಯವರು ಎಷ್ಟಾದರೂ ಹಣ ತೆಗೆದುಕೊಳ್ಳಲಿ ಎಂದು ಹೇಳುತ್ತಾನೆ. ಆದರೆ, ಭಾರ್ಗವಿ ಬುದ್ಧಿ ಅಶೋಕನಿಗೆ ಮಾತ್ರವೇ ಗೊತ್ತಿದೆ. ಚೆಕ್‌ಗಳನ್ನು ಭಾರ್ಗವಿ ತನ್ನ ರೂಮ್‌ನಲ್ಲಿ ಇಟ್ಟುಕೊಂಡಿರುತ್ತಾಳೆ.

ಚೆಕ್ ಹಾಳು ಮಾಡಿದ ಸತ್ಯ
ಭಾರ್ಗವಿ ಚೆಕ್ ಪಡೆದ ಬಗ್ಗೆ ಸತ್ಯನಿಗೆ ಗೊತ್ತಾಗುತ್ತದೆ. ರಾಮ್‌ನನ್ನು ಕಾಪಾಡಲು ತಾನು ಈ ಮನೆಯಲ್ಲಿ ಇರಬೇಕು ಎಂದು ಭಾವಿಸುವ ಸತ್ಯನಿಗೆ ಭಾರ್ಗವಿ ಮಾಡಿರುವ ಎಲ್ಲಾ ತಪ್ಪುಗಳು ಗೊತ್ತಿದೆ. ರಾಮ್ ತಂದೆ-ತಾಯಿ ಸಾವನ್ನಪ್ಪಲೂ ಕೂಡ ಭಾರ್ಗವಿನೇ ಕಾರಣ ಎಂಬುದು ಗೊತ್ತಿದೆ. ಆದರೆ, ಎಲ್ಲರ ಮುಂದೆ ಸತ್ಯ ಹೇಳಲಾಗದೇ ನಿತ್ಯ ಕುಡಿಯುತ್ತಿರುತ್ತಾನೆ. ಈಗ ತನ್ನ ಪತ್ನಿ ಸಾಧನಾಳಿಗೆ ಹೇಳಿ ಆ ಖಾಲಿ ಚೆಕ್‌ಗಳನ್ನು ತರಿಸಿಕೊಂಡು ಹರಿದು ಹಾಕುತ್ತಾನೆ. ಮತ್ತೆ ಅದನ್ನು ಅಲ್ಲೇ ಇಡಲು ಹೇಳುತ್ತಾನೆ. ಸತ್ಯಗೆ ರಾಮ್‌ನಿಂದ ಭಾರ್ಗವಿ ಹಣ ದೋಚುವುದು ಇಷ್ಟವಿಲ್ಲ.
ಭಾರ್ಗವಿಗೆ ನಿರಾಸೆ ಮಾಡಿದ ಚೆಕ್
ಚೆಕ್ ಲೀಫ್‌ಗಳನ್ನು ಬ್ಯಾಂಕ್‌ಗೆ ಹಾಕು ಎಂದು ಭಾರ್ಗವಿ ವಿಶ್ವನಿಗೆ ಹೇಳುತ್ತಾಳೆ. ವಿಶ್ವನಿಗೆ ತನ್ನ ಹೆಸರಲ್ಲಿ ಭಾರ್ಗವಿ ಹಣ ಪಡೆಯುತ್ತಿರುವುದು ಇಷ್ಟವಿರುವುದಿಲ್ಲ. ಆದರೆ, ವಿಶ್ವನಿಗೆ ಬೇರೆ ದಾರಿಯೂ ಇರುವುದಿಲ್ಲ. ಹಾಗಾಗಿ ಚೆಕ್‌ಗಳನ್ನು ಬ್ಯಾಂಕ್‌ಗೆ ತೆಗೆದುಕೊಂಡು ಹೋಗಲು ಕಬೋರ್ಡ್ ತೆರೆಯುತ್ತಾನೆ. ಚೆಕ್ ಹಾಳೆಗಳೆಲ್ಲವೂ ಹರಿದಿರುವುದನ್ನು ನೋಡಿದ ವಿಶ್ವನಿಗೆ ಒಂದು ರೀತಿ ಖುಷಿಯಾಗುತ್ತದೆ. ಆದರೆ, ಭಾರ್ಗವಿಗೆ ಸಿಕ್ಕಾಪಟ್ಟೆ ಕೋಪ ಬರುತ್ತದೆ. ಈಗ ಭಾರ್ಗವಿ ಏನು ಮಾಡುತ್ತಾಳೋ ಕಾದು ನೋಡಬೇಕಿದೆ.


Click it and Unblock the Notifications











