Seetha Rama: 'ಸೀತಾರಾಮ' ಗಂಡು ಮಕ್ಕಳು ನೋಡೋ ಏಕೈಕ ಧಾರಾವಾಹಿಯಂತೆ ಹೌದಾ?

By ಎಸ್ ಸುಮಂತ್

ಜೀ ಕನ್ನಡ 'ಸೀತಾರಾಮ' ಧಾರಾವಾಹಿ ಸಿಕ್ಕಾಪಟ್ಟೆ ಇಷ್ಟವಾಗುತ್ತಾ ಇದೆ. ಸೀತಾ-ರಾಮ ಇಬ್ಬರ ಬಾಂಡಿಂಗ್ ಪ್ರೇಕ್ಷಕರಿಗೆ ಖುಷಿ ಕೊಡುತ್ತಿದೆ. ಅದರಲ್ಲೂ ಸಿಹಿ ಮಾತನ್ನು ಯಾರೂ ಮಿಸ್ ಮಾಡಿಕೊಳ್ಳುವುದಕ್ಕೆ ಇಷ್ಟ ಪಡುವುದಿಲ್ಲ. ಸಿಹಿ ಅಷ್ಟು ಕ್ಯೂಟ್ ಡಾಲ್. ಇಡೀ ಧಾರಾವಾಹಿಯಲ್ಲಿ ಮನಸ್ಸಿಗೆ ಖುಷಿ ಕೊಡುವುದು ಸಿಹಿ. ಎಲ್ಲರ ಮನೆಯ ಮಗಳೇ ಆಗಿ ಹೋಗಿದ್ದಾಳೆ.

ಮಕ್ಕಳು ಟೆನ್ಶನ್ ಬೂಸ್ಟರ್ ಅಂತಾರೆ. ಏನೇ ಹೊರಗಿನ ಟೆನ್ಶನ್ ಇದ್ದರು ಕೂಡ ಮಕ್ಕಳ ಜೊತೆಗೆ ಕೊಂಚ ಮಾತನಾಡಿದರು ಟೆನ್ಶನ್ ಕೂಡ ಇರಲ್ಲ. ಸಿಹಿ ಕೂಡ ಹಾಗೆ. ಸಿಹಿಯ ಆಕ್ಟಿಂಗ್, ಸಿಹಿಯ ಮಾತು ಕೇಳಿದರೆ ಎಂಥವರಿಗೂ ಮುಖದಲ್ಲಿ ನಗು, ಮನಸ್ಸಿಗೆ ಸಮಾಧಾನವಾಗದೇ ಇರುವುದಿಲ್ಲ. ಸಿಹಿ ಅಷ್ಟು ಕ್ಯೂಟ್ ಮಗುವಾಗಿ ಎಲ್ಲರನ್ನು ಸೆಳೆಯುತ್ತಾಳೆ. ಈಗ ರಾಮ-ಸೀತೆಗೆ ಸೇತುವೆಯಾಗುವುದಕ್ಕೂ ಸಿಹಿಯೇ ಬೇಕಾಗಿದ್ದಾಳೆ.

Seetharama serial Written Update on January 10th episode

ರಾಮನ ಬಗ್ಗೆ ಕೋಪಿಸಿಕೊಂಡ ಸೀತಾ

ರಾಮ-ಸೀತಾ ಆಫೀಸಲ್ಲಿಯೇ ಬೆಸ್ಟ್ ಫ್ರೆಂಡ್ಸ್ ಆಗಿದ್ದರು. ಸಾಮಾನ್ಯ ಎಂಪ್ಲಾಯ್ ಆಗಿದ್ದ ಕಾರಣ ಸೀತಾ- ರಾಮ್ ಜೊತೆಗೆ ಫ್ರೆಂಡ್ ಆಗಿದ್ದಳು. ಜೊತೆಗೆ ಸಿಹಿ ಇವರಿಬ್ಬರ ಫ್ರೆಂಡ್ಶಿಪ್ ಎಂಬ ಸೇತುವೆ ಗಟ್ಟಿಯಾಗಲೂ ಕಾರಣವಾಗಿದ್ದಳು. ಆದರೆ, ಈಗ ಮುಚ್ಚಿಟ್ಟ ದೊಡ್ಡ ಸತ್ಯ ಬಟಾಬಯಲಾಗಿದೆ. ಸೀತಾಗೆ ಅರಗಿಸಿಕೊಳ್ಳುವುದಕ್ಕೆ ಆಗದಷ್ಟು ಆಘಾತವಾಗಿದೆ. ಮತ್ತೆ ಮನಸ್ಸನ್ನು ಸರಿ ಮಾಡಿಕೊಳ್ಳುವ ಮನಸ್ಸು ಮಾಡುವಂತೆ ಕಾಣುತ್ತಿಲ್ಲ.

ಫ್ರೆಂಡ್ ಜೊತೆಗೆ ಮಾತನಾಡದೆ ಇರುತ್ತಾಳಾ ಸಿಹಿ?

ಸಿಹಿಗೆ ರಾಮ ಬೆಸ್ಟ್ ಫ್ರೆಂಡ್. ರಾಮ ತನ್ನ ಜೊತೆ ಹೇಗಿದ್ದಾನೆ ಎಂಬುವುದನ್ನಷ್ಟೇ ಸಿಹಿ ನೋಡಿವುದು‌. ತಾನೂ ಕಷ್ಟದಲ್ಲಿದ್ದಾಗೆಲ್ಲ ಕಾಪಾಡಿದ್ದಾನೆ ಎಂಬುದಷ್ಟೇ ಮುಖ್ಯ. ಅವನ ಶ್ರೀಮಂತಿಕೆ, ಸೀತಮ್ಮನ ಬಾಸ್ ಎಂಬುದೆಲ್ಲ ಅವಳಿಗೆ ಅರ್ಥವೂ ಆಗಿಲ್ಲ. ಅರ್ಥವಾದರೂ ಅದು ಬೇಕಾಗಿಲ್ಲ. ಹೀಗಾಗಿ ರಾಮ್ ಜೊತೆಗೆ ಮಾತನಾಡಬೇಕೆಂಬ ಹಠ ಮಾಡುತ್ತಿದ್ದಾಳೆ. ಆದರೆ, ಸೀತಾ ಅದಕ್ಕೆ ಕಡಿವಾಣ ಹಾಕುತ್ತಿದ್ದಾಳೆ.

ರಾಮನ ಪರವಾಗಿ ನಿಂತ ಫ್ಯಾನ್ಸ್

ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ 'ಸೀತಾರಾಮ' ಧಾರಾವಾಹಿಯ ಪ್ರೋಮೋ ಬಿಡಲಾಗುತ್ತಿದೆ. ಆ ವಿಡಿಯೋಗಳಲ್ಲಿ ಸೀತಾ-ರಾಮನನ್ನು ನೆಗ್ಲೆಕ್ಟ್ ಮಾಡುತ್ತಿರುವುದು ಕಾಣಿಸುತ್ತಿದೆ. ಇದು ಫ್ಯಾನ್ಸ್‌ಗೆ ಬೇಸರವನ್ನೇ ತರಿಸಿದೆ. "ರಾಮ್‌ದು ಯಾವುದೇ ತಪ್ಪಿಲ್ಲ. ರಾಮ್ ಬೇಕು ಅಂತ ಏನು ತಪ್ಪು ಮಾಡಿಲ್ಲ. ಸೀತಾ ಅದನ್ನು ಅರ್ಥ ಮಾಡಿಕೊಳ್ಳಬೇಕು. ರಾಮ್ ಮತ್ತು ಸೀತಾ ಮತ್ತೆ ಹೊಂದಾಗಬೇಕು" ಎಂದೇ ಬೇಡಿಕೆ ಇಡುತ್ತಿದ್ದಾರೆ.

Seetharama serial Written Update on January 10th episode

ಸೀತಾರಾಮಗೆ ಗಂಡು‌ ಮಕ್ಕಳು ಅಭಿಮಾನಿಗಳಾ..?

ಧಾರಾವಾಹಿ ಎಂದರೆ ಬರೀ ಹೆಣ್ಣು ಮಕ್ಕಳೇ ನೋಡುವಂತದ್ದು ಎಂಬ ಮಾತಿದೆ. ಅದಕ್ಕಾಗಿಯೇ ಮನೆಯಲ್ಲಿ ರಿಮೋಟ್‌ಗಾಗಿಯೇ ಕಿತ್ತಾಟ ನಡೆಯುತ್ತೆ ಎನ್ನುತ್ತಾರೆ. ಆದರೆ, ಈಗ ಕಾಲ ಬದಲಾಗಿದೆ. ಗಂಡು ಮಕ್ಕಳು ಕೂಡ ಧಾರಾವಾಹಿ ನೋಡುತ್ತಾರೆ. ಅದರಲ್ಲೂ ಸೀತಾರಾಮ ಧಾರಾವಾಹಿಯನ್ನು ಗಂಡು ಮಕ್ಕಳು ಮಿಸ್ ಮಾಡದೆ ನೋಡುತ್ತಿದ್ದಾರಂತೆ. ಅದನ್ನು ಜೀ ಕನ್ನಡದ ಸೋಷಿಯಲ್ ಮೀಡಿಯಾದ ಪೋಸ್ಟ್ ಗಳಿಗೆ ಕಮೆಂಟ್ ಮಾಡಿದ್ದಾರೆ. 'ನಾವೂ ನೋಡುತ್ತಾ ಇರುವುದೇ ಇದೊಂದು ಧಾರಾವಾಹಿ. ಇದರಲ್ಲೂ ನೀವೂ ಈ ರೀತಿ ಮಾಡಿದರೆ ಹೇಗೆ' ಎಂದೇ ಪ್ರಶ್ನೆ ಕೇಳಿದ್ದಾರೆ.

More from Filmibeat

English summary
Seetharama serial Written Update on January 10th episode. Here is the details about Fans support to Ram
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X